ಹೆಲ್ಮೆಟ್ ಹಾಕಿ ಡ್ಯಾನ್ಸ್ ಮಾಡಿ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ
ಹೆಲ್ಮೆಟ್ ಹಾಕ್ರಿ ಬಾಡಿ ಶೇಕ್ ಮಾಡ್ರಿ ಹೆಂಗ್ ಬೇಕಾದ್ರೂ ಕುಣೀರಿ.!
ಸ್ಟೆಪ್ಸ್ ನಿಮ್ದೆ ಸ್ಟೈಲ್ ನಿಮ್ದೆ.!
ಹೌದು ಇದೇ ಹರ್ಲಮ್ ಶೇಕ್ ಡ್ಯಾನ್ಸ್. ಸದ್ಯ ಯೂ ಟ್ಯೂಬ್‌ನಲ್ಲಿ ಅತೀ ಹೆಚ್ಚು ಅಪ್‌ಲೋಡ್ ಆಗುತ್ತಿರುವ ವೀಡಿಯೋಗಳಲ್ಲಿ ಈ ಡ್ಯಾನ್ಸ್ ಒಂದು.ಕೇವಲ ಮೂವತ್ತು ಸೆಕೆಂಡ್‌ನಲ್ಲಿ ಮಾಡುವಂತಹ ಗ್ರೂಪ್ ಡ್ಯಾನ್ಸ್ ಈಗ ವಿಶ್ವದ್ಯಾಂತ ಸುದ್ದಿ ಮಾಡುತ್ತಿದೆ.
ಈ ಹರ್ಲಮ್ ಶೇಕ್ ಮ್ಯೂಸಿಕ್‌ನ್ನು ತಯಾರಿ ಮಾಡಿದ್ದು ಅಮೆರಿಕದ ಬ್ಯಾರ್ (Baauer) ಸಂಗೀತಗಾರ.ಆದ್ರೆ ಈ ಸಂಗೀತಾ ಡ್ಯಾನ್ಸ್ ಹಿಟ್ ಆಗಿದ್ದು ಆಸ್ಟ್ರೇಲಿಯಾದಲ್ಲಿ. ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ 5 ಜನ ಯುವಕರು ಫೆಬ್ರವರಿ ಮೊದಲ ವಾರದಲ್ಲಿ ಈ ಹರ್ಲಮ್ ಶೇಕ್ ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದೇ ಮಾಡಿದ್ದು ಈಗ ವಿದೇಶದಲ್ಲಿ ಇದು ಸಖತ್ ಹಿಟ್ ಆಗುತ್ತಿದೆಯಂತೆ. ಇಷ್ಟೇ ಏಕೆ ಭಾರತದಲ್ಲೂ ಈ ಡ್ಯಾನ್ಸ್ ಯುವ ವಿದ್ಯಾರ್ಥಿಗಳಿಗೆ ಇಷ್ಟವಾಗಿದ್ದು ಈಗಾಗ್ಲೇ ಯೂಟ್ಯೂಬ್‌ನಲ್ಲಿ ನಗರಗಳ ಹೆಸರಿನಲ್ಲಿ ವೀಡಿಯೋಗಳು ಆಪ್‌ಲೋಡ್ ಆಗುತ್ತಿವೆ.

ತಲೆಗೆ ಹೆಲ್ಮೆಟ್,ಮಾಸ್ಕ್,ಟೋಪಿ ಹಾಕಿ ಡ್ಯಾನ್ಸ್ ಮಾಡುವುದು ಈ ಡ್ಯಾನ್ಸಿನ ವಿಶೇಷತೆ. ಜೊತೆಗೆ ಎಷ್ಟು ಹೊತ್ತು ಬೇಕಾದ್ರೂ ಕುಣಿಯಬಹುದು.ಆದ್ರೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುವ ವೀಡಿಯೋ ಮಾತ್ರ ಮೂವತ್ತರಿಂದ ಮೂವತ್ತಾರು ಸೆಕೆಂಡ್‌ಗಳ ಇರಬೇಕು. ಇದು ಈ ಡ್ಯಾನ್ಸ್‌ನ ಲಿಖಿತ ನಿಯಮ. ಹೀಗಾಗಿ ಅಪ್‌ಲೋಡ್ ಮಾಡುವ ಮೊದಲು ವೀಡಿಯೋಯವನ್ನು ಎಡಿಟಿಂಗ್ ಮಾಡಿ ಅಪ್‌ಲೋಡ್ ಮಾಡಬೇಕಾಗುತ್ತದೆ.
ಒಟ್ಟಿನಲ್ಲಿ 2010ರಲ್ಲಿ ಫ್ಲ್ಯಾಶ್ ಮಾಬ್, 2011 ಕೊಲವೆರೆಡಿ,2012 ಗಂಗ್ನಂ ಸ್ಟೈಲ್ ಭಾರೀ ಹಿಟ್ ಆಗಿತ್ತು. ಈ ವರ್ಷ ಹರ್ಲಮ್ ಶೇಕ್ ಡ್ಯಾನ್ಸ್ ಹಿಟ್ ಆಗುತ್ತಾ ಅನ್ನೊದೆ ಸದ್ಯದ ಕುತೂಹಲವಾಗಿದೆ.


Click it and Unblock the Notifications








