ಇನ್ಮುಂದೆ ಬೆಂಗಳೂರಿನೆಲ್ಲೆಡೆ ಉಚಿತ ವೈ-ಫೈ, ಸಿಸಿಟಿವಿ ಮತ್ತು ಡ್ರೋಣ್ ರಕ್ಷಣೆ!!

ಬೆಂಗೂರಿನಾಧ್ಯಂತ ಹಲವು ಡಿಜಿಟಲ್ ಸೇವೆಗಳನ್ನು ತರಲು ಬಿಬಿಎಂಪಿ ಮುಂದಾಗಿದ್ದು, ಅವುಗಳು ಯಾವುವು ಎಂಬುದನ್ನು ನೋಡಿ.!!

|

ಬೆಂಗಳೂರು ಎಷ್ಟು ವೇಗವಾಗಿ ಡಿಜಿಟಲೀಕರಣವಾಗುತ್ತಿದೆ ಎಂದರೆ ಇನ್ನೈದು ವರ್ಷಗಳಲ್ಲಿ ಬೆಂಗಳೂರು ವಿಶ್ವದ ಟಾಪ್ ಐದು ನಗರಗಳಲ್ಲಿ ಸ್ಥಾನ ಪಡೆಯುವುದು ಖಂಡಿತ ಎನ್ನುತ್ತವೆ ಹಲವು ವರದಿಗಳು. ಇದಕ್ಕೆ ಪೂರಕ ಎಂಬಂತೆ ಐಟಿ ಹಬ್ ಬೆಂಗಳೂರು ಸಹ ಅಭಿವೃದ್ದಿಯಾಗುತ್ತಿರುವುದು ಸಹ ನಮ್ಮ ಕಣ್ಣಮುಂದಿದೆ.!!

ಬೆಂಗಳೂರು ಇಷ್ಟೆಲ್ಲಾ ಬೆಳವಣಿಗೆಯಾಗುತ್ತಿರುವ ಸಂದರ್ಭದಲ್ಲಿ ಬಿಬಿಎಂಪಿ ಇದೀಗ ಎಚ್ಚೆತ್ತಿದ್ದು ಬೆಂಗಳೂರಿನಾಧ್ಯಂತ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲು ಮುಂದಾಗಿದೆ.!! ಹೌದು, ಬೆಂಗೂರಿನಾಧ್ಯಂತ ಹಲವು ಡಿಜಿಟಲ್ ಸೇವೆಗಳನ್ನು ತರಲು ಬಿಬಿಎಂಪಿ ಮುಂದಾಗಿದ್ದು, ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.!!

ಬೆಂಗಳೂರಿನೆಲ್ಲೆಡೆ ಉಚಿತ ವೈ-ಫೈ.!!

ಬೆಂಗಳೂರಿನೆಲ್ಲೆಡೆ ಉಚಿತ ವೈ-ಫೈ.!!

ಐಟಿ ರಾಜಧಾನಿ ಎನಿಸಿರುವ ಬೆಂಗಳೂರಿನಲ್ಲಿಯೇ ವೈಫೈ ಸೌಲಭ್ಯ ಕಲ್ಪಿಸಿಲ್ಲ. ಪಾಲಿಕೆ ಕೇಂದ್ರ ಕಚೇರಿಯಲ್ಲಿ ವೈಫೈ ಇಲ್ಲ ಎನ್ನುವ ದೂರಿಗೆ ಬಿಬಿಎಂಪಿ ಇ-ಆಡಳಿತ ಇಲಾಖೆಯೊಂದಿಗೆ ಚರ್ಚಿಸಿದೆ. ಬೆಂಗಳೂರು ನಗರದ ಎಲ್ಲ ಬಸ್‌ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.

ಎಲ್ಲೆಡೆ ಸಿಸಿಟಿವಿ ಅಳವಡಿಕೆ!!

ಎಲ್ಲೆಡೆ ಸಿಸಿಟಿವಿ ಅಳವಡಿಕೆ!!

ನಗರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ, ಹೆಚ್ಚು ಜನಸಂದಣಿ ಇರುವ ಎಂ.ಜಿ.ರಸ್ತೆ, ಬ್ರಿಗೇಡರ್‌ ರಸ್ತೆಗಳು ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಅಲ್ಲದೇ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ಇಡಲು ದೊಡ್ಡ ಎಲ್‌ಇಡಿ ಪರದೆಗಳನ್ನು ಹಾಕುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.!!

ಡ್ರೋನ್ ಕ್ಯಾಮೆರಾ ಭದ್ರತೆ!!

ಡ್ರೋನ್ ಕ್ಯಾಮೆರಾ ಭದ್ರತೆ!!

ಮುಂದುವರೆಯುತ್ತಿರುವ ತಂತ್ರಜ್ಞಾನ ಬಳಸಿಕೊಂಡು ಡ್ರೋನ್ ಕ್ಯಾಮೆರಾಗಳನ್ನು ಬಳಸಿಕೊಂಡು ಭದ್ರತೆಗೆ ಹೆಚ್ಚಿನ ಒತ್ತು ಕೊಡಬೇಕು. ಜತೆಗೆ ಸಹಾಯವಾಣಿ ಕೇಂದ್ರಗಳನ್ನು ತೆರೆದು ಅಹಿತಕರ ಘಟನೆಗಳು ಮರುಕಳಿಸದಂತೆ ಪೊಲೀಸರ ಜತೆಗೂಡಿ ಎಚ್ಚರಿಕೆ ವಹಿಸಬೇಕು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.!!

ಪ್ರತಿ ಮನೆಗೆ ಡಿಜಿಟಲ್ ಸಂಖ್ಯೆ!!

ಪ್ರತಿ ಮನೆಗೆ ಡಿಜಿಟಲ್ ಸಂಖ್ಯೆ!!

ಬಿಬಿಎಂಪಿಯು 800 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಪ್ರತಿ 100 ಚ.ಕಿ.ಮೀ ಗೆ ಗ್ರಿಡ್‌ ಮಾಡಿ, ನಕ್ಷೆ ರೂಪಿಸಲಾಗುತ್ತಿದೆ. ಇದಕ್ಕಾಗಿ ‘ಬಿಬಿಎಂಪಿ ಡಿಜಿ ಆಪ್‌' ಕೂಡ ಸಿದ್ಧಪಡಿಸಲಾಗುತ್ತಿದ್ದು, ಡಿಜಿಟಲ್ ಸಂಖ್ಯೆ ಮೂಲಕ ನಗರದ ಪ್ರತಿ ಮನೆಗಳ ಮಾಹಿತಿಯನ್ನು ಬಿಬಿಎಂಪಿ ಪಡೆಯಲಿದೆ.!!

ಎಲ್ಲಾ ಅಂಗಡಿಗಳಲ್ಲಿಯೂ ಸಿಸಿಟಿವಿ!!

ಎಲ್ಲಾ ಅಂಗಡಿಗಳಲ್ಲಿಯೂ ಸಿಸಿಟಿವಿ!!

ನಗರದಲ್ಲಿ ರಕ್ಷಣೆ ದೃಷ್ಟಿಯಿಂದ ನಗರದಲ್ಲಿರುವ ಪ್ರತಿಯೊಮದು ವಾಣಿಜ್ಯ ಮಳಿಗೆಗಳು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಸಂಬಂಧದ ವಿಧೇಯಕಕ್ಕೆ ರಾಜ್ಯ ವಿಧಾನಮಂಡಲ ಅನುಮೋದನೆ ನೀಡಿದೆ. 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹ ಸಾಮರ್ಥ್ಯ‌ ಹೊಂದಿರುವ ಸಿಸಿಟಿವಿ ಕ್ಯಾಮೆರಾ ಇನ್ನು ಪ್ರತಿ ಅಂಗಡಿಗಳಲ್ಲಿಯೂ ಇರಬೇಕಿದೆ.!!

ಗೂಗಲ್ ಮ್ಯಾಪಿಗೂ ಶಾಕ್ ನೀಡಲಿದೆ ಬೆಂಗಳೂರು 'ಬಿಬಿಎಂಪಿ'!!ಗೂಗಲ್ ಮ್ಯಾಪಿಗೂ ಶಾಕ್ ನೀಡಲಿದೆ ಬೆಂಗಳೂರು 'ಬಿಬಿಎಂಪಿ'!!

Best Mobiles in India

English summary
Public Wi-Fi will enable you to access the internet on your mobile devices even when you are on the road. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X