ಬೆಂಗಳೂರು ಮಹಿಳೆ ಆಪಲ್‌ ಜಾಹೀರಾತಿನಲ್ಲಿ ಮಿಂಚಿದ್ದಾದರೂ ಹೇಗೆ?

Written By:

ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಿದ ಮೇಲೆ ಎಲ್ಲವೂ ಸಿಂಪಲ್‌. ಇನ್ನು ಇಂಟರ್ನೆಟ್‌ ಬಳಸುವವರನ್ನು ಕೇಳಿದ್ರೆ ಅವರು ಎಲ್ಲವೂ ಡಬಲ್‌ ಸಿಂಪಲ್‌ ಅಂತಾರೆ. ಅಂದಹಾಗೆ ಕನ್ನಡದಲ್ಲಿ "ಸಿಂಪಲಾಗ್‌ ಒಂದ್ ಲವ್‌ ಸ್ಟೋರಿ" ಸಿನಿಮಾ ಬಂದಿತ್ತು. ಅದಾದ್‌ ಮೇಲೆ ಈಗ "ಸಿಂಪಲಾಗ್‌ ಇನ್ನೊಂದ್‌ ಲವ್‌ ಸ್ಟೋರಿ" ಅಂತಾನು ಸಿನಿಮಾ ಬರ್ತಿದೆ. ಇದನ್ನ ಟೆಕ್ನಾಲಜಿ ನ್ಯೂಸ್‌ನಲ್ಲಿ ಯಾಕ್‌ ಹೀಗೆ ಹೇಳ್ತಿದ್ದಾರೆ ಅಂತ ನಿಮಗೆ ಪ್ರಶ್ನೆಗಳು ಬರದೆ ಇರವು. ಕಾರಣ ಎಲ್ಲರೂ ಆಶ್ಚರ್ಯ ಪಡುವಂತಹದ್ದೇ.

ಕಳೆದ ದೀಪಾವಳಿ ಹಬ್ಬದ ದಿನದಂದು ನಮ್ಮ ಬೆಂಗಳೂರಿನ 'ಅಶಿಶ್‌ ಪಾರ್ಮರ್'‌ ಎಂಬ ವನ್ಯಜೀವಿ ಛಾಯಾಗ್ರಾಹಕರು ಅದ್ಧೂರಿಯಾಗಿ ಕುಟುಂಬದ ಜೊತೆ ದೀಪಾವಳಿ ಹಬ್ಬ ಆಚರಿಸಿದ್ರು. ಹಾಗೆ ಅವರ ಹೆಂಡತಿ ದೀಪವನ್ನ ಕೈಯಲ್ಲಿ ಹಿಡಿದು ಪೋಜ್ ಕೊಟ್ಟಾಗ ತಮ್ಮ ಐಫೋನ್‌ 6S ನಿಂದ ಫೋಟೋ ಕ್ಲಿಕ್‌ ಮಾಡಿದ್ರು. ಆ ಫೋಟೋನ ಸಾಮಾಜಿಕ ತಾಣ ಇನ್‌ಸ್ಟಗ್ರಾಂಗೆ ಅಪ್‌ಲೋಡ್‌ ಮಾಡಿದ್ರು, ಅದೇ ಫೋಟೋ ಇಂದು ಜಾಗತಿಕವಾಗಿ ಆಪಲ್‌ ಕಂಪನಿಯ ಜಾಹೀರಾತಿಗೆ ಬಳಕೆಯಾಗಿ ಪ್ರಪಂಚದಾದ್ಯಂತ ಪ್ರಖ್ಯಾತವಾಗಿದೆ. ಈ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ ಜಾಗತಿಕ ಜಾಹೀರಾತು

ಆಪಲ್‌ ಜಾಗತಿಕ ಜಾಹೀರಾತು

ಆಪಲ್‌ ಜಾಗತಿಕ ಜಾಹೀರಾತು

ಕಳೆದ ದೀಪಾವಳಿ ಹಬ್ಬದ ದಿನದಂದು ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕರಾದ 'ಅಶಿಶ್‌ ಪಾರ್ಮರ್‌' ಐಫೋನ್‌ನಲ್ಲಿ ತೆಗೆದ ತಮ್ಮ ಹೆಂಡತಿಯ ದೀಪ ಹಿಡಿದ ಫೋಟೋವನ್ನು ಇನ್‌ಸ್ಟಗ್ರಾಂ'ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಅಪ್‌ಲೋಡ್‌ ಮಾಡುವಾಗ ಹ್ಯಾಶ್‌ಟ್ಯಾಗ್‌ ಆಗಿ #ShotOniPhone6S ಬಳಸಿದ್ದರು.
ಫೋಟೋ ಕೃಪೆ: ಅಶಿಶ್‌ ಪಾರ್ಮರ್‌

 ಆಪಲ್‌ನಿಂದ ಕರೆ

ಆಪಲ್‌ನಿಂದ ಕರೆ

ಆಪಲ್‌ನಿಂದ ಕರೆ

2015ರ ಡಿಸೆಂಬರ್‌ನಲ್ಲಿ ಅಶಿಶ್‌ ಪಾರ್ಮರ್‌ಗೆ ಆಪಲ್‌ ಕಂಪನಿಯಿಂದ ಕರೆ ಬಂದು, ಕಂಪನಿಯವರು ತಾವು ಇನ್‌ಸ್ಟಗ್ರಾಂನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದ ಫೋಟೋವನ್ನು "Shot on iPhone" ಕ್ಯಾಂಪೇನ್‌ ಆಯ್ಕೆ ಮಾಡಿರುವ ಬಗ್ಗೆ ಹೇಳಿದ್ದರು.
ಫೋಟೋ ಕೃಪೆ: ಅಶಿಶ್‌ ಪಾರ್ಮರ್‌

ಪಾರ್ಮರ್‌ ಹೇಳೀದ್ದೇನು?

ಪಾರ್ಮರ್‌ ಹೇಳೀದ್ದೇನು?

ಪಾರ್ಮರ್‌ ಹೇಳೀದ್ದೇನು?

ಪಾರ್ಮರ್‌ ಅವರು ತಮ್ಮ ಫೊಟೋವನ್ನು ಆಪಲ್‌ ಕಂಪನಿ ಆಯ್ಕೆ ಮಾಡಿದ್ದಕ್ಕೆ ಸಂತೋಷ ಪಟ್ಟು, ಇದು ನನಗೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಸಂತೋಷವಾಗಿದೆ ಎಂದು ಹೇಳಿದ್ದರು.
ಫೋಟೋ ಕೃಪೆ: ಅಶಿಶ್‌ ಪಾರ್ಮರ್

ಜಾಗತಿಕ ಜಾಹೀರಾತು

ಜಾಗತಿಕ ಜಾಹೀರಾತು

ಜಾಗತಿಕ ಜಾಹೀರಾತು

ಅಶಿಶ್‌ ಪಾರ್ಮರ್‌ ರವರ ಹೆಂಡತಿ ರೈನಾ ನನೈಯಾ ಫೋಟೋ ಜಾಹೀರಾತಿನಲ್ಲಿರುವ ಚಿತ್ರ. ಇವರ ಈ ಫೋಟೋ ಆಪಲ್‌ ಕಂಪನಿಯ ಜಾಗತಿಕ ಜಾಹೀರಾತಿಗೆ ಬಳಕೆಯಾಗಿರುವುದು.
ಫೋಟೋ ಕೃಪೆ: ಅಶಿಶ್‌ ಪಾರ್ಮರ್‌

ವನ್ಯಜೀವಿ ಛಾಯಾಗ್ರಾಹಕರಾಗಿ ಪಾರ್ಮರ್‌

ವನ್ಯಜೀವಿ ಛಾಯಾಗ್ರಾಹಕರಾಗಿ ಪಾರ್ಮರ್‌

ವನ್ಯಜೀವಿ ಛಾಯಾಗ್ರಾಹಕರಾಗಿ ಪಾರ್ಮರ್‌

ವನ್ಯಜೀವಿ ಛಾಯಾಗ್ರಾಹಕರಾಗಿ ಪಾರ್ಮರ್‌ರವರ ಫೋಟೋ ಇದು. ಪಾರ್ಮರ್‌ರವರು ಫೋಟೋಗ್ರಫಿ ಕುರಿತಂತೆ ಮಾರ್ಗದರ್ಶನ ನೀಡುವ ಶಾಲೆ ನೆಡೆಸುತ್ತಿದ್ದಾರೆ.
ಫೋಟೋ ಕೃಪೆ: ಅಶಿಶ್‌ ಪಾರ್ಮರ್‌

ವನ್ಯಜೀವಿ ಛಾಯಾಗ್ರಾಹಕರಾಗಿ ಪಾರ್ಮರ್‌

ವನ್ಯಜೀವಿ ಛಾಯಾಗ್ರಾಹಕರಾಗಿ ಪಾರ್ಮರ್‌

ವನ್ಯಜೀವಿ ಛಾಯಾಗ್ರಾಹಕರಾಗಿ ಪಾರ್ಮರ್‌

ಅಶಿಶ್‌ ಪಾರ್ಮರ್‌ರವರು ಸೆರೆಹಿಡಿದಿರುವ ಚಿತ್ರ.
ಫೋಟೋ ಕೃಪೆ: ಅಶಿಶ್‌ ಪಾರ್ಮರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bangalore man’s frame of wife now Apple ad across globe. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot