ಪ್ರಪಂಚದಲ್ಲಿಯೇ ಬಹುಬೇಗ ಹೈ-ಟೆಕ್ ಸಿಟಿಯಾಗಿ ಬದಲಾದ ಮೊದಲ ನಗರ ಬೆಂಗಳೂರು!!

ಪ್ರಪಂಚದ ಹೈ ಟೆಕ್ ನಗರಗಳು ಯಾವುವು ಎಂಬುದನ್ನು ಬ್ಯುಸಿನೆಸ್ ಇನ್‌ಸೈಡರ್ ವಿಶ್ಲೇಷಿಸಿದೆ.!!

|

35 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ವಿಶ್ವದ ಜನಸಂಖ್ಯೆಯಲ್ಲಿ ಮೂರರಲ್ಲಿ ಎರಡು ಭಾಗದಷ್ಟು ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿದೆ.! ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ನಗರಗಳು ಉನ್ನತ ತಂತ್ರಜ್ಞಾನಗಳನ್ನು ಅವಲಂಬಿಸಿವೆ ಮತ್ತು ಹೊಸದನ್ನು ಅಭಿವೃದ್ಧಿಪಡಿಸಲು ಅವಕಾಶಗಳನ್ನು ಸೃಷ್ಟಿಸುತ್ತವೆ.!!

ಹಾಗಾಗಿಯೇ, ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿರುವ ಬ್ಯುಸಿನೆಸ್ ಇನ್‌ಸೈಡರ್ ಈ ಬಗ್ಗೆ ಸಮಾಲೋಚಿಸಿ ಮತ್ತು ರಿಸರ್ಚ್ ಮಾಡಿ 2ಧಿಂಕ್‌ನೆಸ್ ವರದಿಯನ್ನು ಪ್ರಕಟಿಸಿದ್ದು, ಪ್ರಪಂಚದ ಹೈ ಟೆಕ್ ನಗರಗಳು ಯಾವುವು ಎಂಬುದನ್ನು ಬ್ಯುಸಿನೆಸ್ ಇನ್‌ಸೈಡರ್ ವಿಶ್ಲೇಷಿಸಿದೆ.!!

ಈ ವಿಶ್ಲೇಷಣೆಯಲ್ಲಿ ಕೇವಲ ಒಂದು ವರ್ಷದಲ್ಲಿ ಪ್ರಪಂಚದಲ್ಲಿಯೇ ಹೆಚ್ಚು ಹೈ- ಟೆಕ್ ಸಿಟಿಯಾಗಿ ಬದಲಾವಣೆಯಾದ ನಂಬರ್ ಒನ್ ನಗರ ಎಂಬ ಖ್ಯಾತಿಗೆ ನಮ್ಮ ಬೆಂಗಳೂರು ಪಾತ್ರವಾಗಿದೆ.! ಹಾಗಾದರೆ, ಭಾರತದಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ? ಹೈಟೆಕ್ ಸಿಟಿ ಆಯ್ಕೆ ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಭಾರತದ ನಂಬರ್ ಒನ್ ಹೈ-ಟೆಕ್ ಸಿಟಿ

ಭಾರತದ ನಂಬರ್ ಒನ್ ಹೈ-ಟೆಕ್ ಸಿಟಿ

ಬ್ಯುಸಿನೆಸ್ ಇನ್‌ಸೈಡರ್ ಬಿಡುಗಡೆ ಮಾಡಿರುವ ಪ್ರಪಂಚದ ಹೈ-ಟೆಕ್ ನಗರಿಗಳ ಪಟ್ಟಿಯಲ್ಲಿ ಬೆಂಗಳೂರು 19 ನೇ ಸ್ಥಾನ ಪಡೆದಿದೆ.!! 19 ನೇ ಸ್ಥಾನದ ಒಳಗೆ ಭಾರತದ ಯಾವುದೇ ನಗರಗಳು ಸ್ಥಾನ ಪಡೆಯದೇ ಇರುವುದರಿಂದ ಭಾರತದ ನಂಬರ್ ಒನ್ ಹೈ-ಟೆಕ್ ಸ್ಥಾನವನ್ನು ಬೆಂಗಳೂರು ತನ್ನದಾಗಿಸಿಕೊಂಡಿದೆ.!!

ಬದಲಾವಣೆಯಲ್ಲಿ ನಂಬರ್ ಒನ್!!

ಬದಲಾವಣೆಯಲ್ಲಿ ನಂಬರ್ ಒನ್!!

ಕೇವಲ ಒಂದು ವರ್ಷದಲ್ಲಿ ಪ್ರಪಂಚದಲ್ಲಿಯೇ ಹೆಚ್ಚು ಹೈ-ಟೆಕ್ ಸಿಟಿಯಾಗಿ ಬದಲಾವಣೆಯಾದ ನಂಬರ್ ಒನ್ ನಗರ ಎಂಬ ಖ್ಯಾತಿಗೆ ನಮ್ಮ ಬೆಂಗಳೂರು ಪಾತ್ರವಾಗಿದೆ. ,2016 ರಲ್ಲಿ ಹೈ-ಟೆಕ್ ನಗರಿಗಳ ಪಟ್ಟಿಯಲ್ಲಿ 40 ನೇ ಸ್ಥಾನ ಪಡೆದುಕೊಂಡಿದ್ದ ಬೆಂಗಳೂರು ಇಂದು 19 ನೇ ಸ್ಥಾನಕ್ಕೇರಿ ಬದಲಾವಣೆಯಾದ ನಂಬರ್ ಒನ್ ನಗರ ಎಂಬ ಖ್ಯಾತಿ ಪಡೆದಿದೆ.!!.!!

ಹೈ-ಟೆಕ್ ಸಿಟಿ ಆಯ್ಕೆ ಹೇಗೆ?

ಹೈ-ಟೆಕ್ ಸಿಟಿ ಆಯ್ಕೆ ಹೇಗೆ?

ತಲಾದಾಯ, ಆರಂಭಿಕ ಉದ್ಯಮಗಳು, ಟೆಕ್ ಸಾಹಸೋದ್ಯಮ ಬಂಡವಾಳದಾರರು ಮತ್ತು ಇತರ ನಾವೀನ್ಯತೆ ಹಾಗೂ ಸ್ಮಾರ್ಟ್ಫೋನ್ ಬಳಕೆ ಪೇಟೆಂಟ್‌ಗಳ ಸಂಖ್ಯೆಯನ್ನು ಒಳಗೊಂಡಂತೆ, ತಾಂತ್ರಿಕ ಬೆಳವಣಿಗೆಗೆ ಸಂಬಂಧಿಸಿದ 10 ಅಂಶಗಳನ್ನು ಬ್ಯುಸಿನೆಸ್ ಇನ್‌ಸೈಡರ್ ಸಂಸ್ಥೆಯು ಆಯ್ಕೆ ಮಾಡಿ ಹೈ-ಟೆಕ್ ಸಿಟಿ ವರದಿ ತಯಾರಿಸಿದೆ.!!

85 ನಗರಗಳ ಪಟ್ಟಿ!!

85 ನಗರಗಳ ಪಟ್ಟಿ!!

ಬ್ಯುಸಿನೆಸ್ ಇನ್‌ಸೈಡರ್ ಪ್ರಪಂಚದ 85 ನಗರಗಳ ಪಟ್ಟಿ ಮಾಡಿ ಅವುಗಳಲ್ಲಿ ಹೈ-ಟೆಕ್ ನಗರಗಳು ಯಾವುವು ಎಂಬುದನ್ನು ಪಟ್ಟಿ ಮಾಡಿತ್ತು. ಈ ಪಟ್ಟಿಯಲ್ಲಿ ಬೆಂಗಳೂರು 19ನೇ ಸ್ಥಾನ ಪಡೆದುಕೊಂಡರೆ, ಮೊದಲ ಸ್ಥಾನ ಸ್ಯಾನ್‌ಫ್ರಾನ್ಸಿಸ್ಕೊ ಪಾಲಾಗಿದೆ. ಎರಡನೇ ಮತ್ತು ಮೂರನೇ ಸ್ಥಾನ ಕ್ರಮವಾಗಿ ನ್ಯೂಯಾರ್ಕ್ ಮತ್ತು ಲಂಡನ್ ಪಾಲಾಗಿದೆ.!!

<strong>ದರಸಮರ ಎಫೆಕ್ಟ್..ಆಫರ್‌ಗಳನ್ನು ಚೇಂಜ್ ಮಾಡಿದ ಜಿಯೋ!..ಇಲ್ಲಿದೆ ಡಿಟೇಲ್ಸ್!!</strong>ದರಸಮರ ಎಫೆಕ್ಟ್..ಆಫರ್‌ಗಳನ್ನು ಚೇಂಜ್ ಮಾಡಿದ ಜಿಯೋ!..ಇಲ್ಲಿದೆ ಡಿಟೇಲ್ಸ್!!

Best Mobiles in India

English summary
No other city in 2thinknow's ranking climbed as far compared to 2016's ranking as Bangalore, which moved from 49th place to 19th.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X