ಬ್ಯಾಂಕ್‌ಗಳಿಗೆ ಭಯ ಮೂಡಿಸಿದ 'ಸೈಬರ್ ಪ್ರಕರಣ'ವೊಂದರ 'ಕೋರ್ಟ್' ತೀರ್ಪು!!

|

ಬ್ಯಾಂಕಿಂಗ್ ವ್ಯವಹಾರದಲ್ಲಿ ವಂಚನೆ ನಡೆದರೆ ಏನಾದರೂ ಕಾರಣ ನೀಡಿ ನುಸುಳಿಕೊಳ್ಳುತ್ತಿದ್ದ ಬ್ಯಾಂಕ್‌ಗಳಿಗೆ ಇತ್ತೀಚಿನ ಒಂದು ಕೋರ್ಟ್ ತೀರ್ಪು ಎಚ್ಚರಿಕೆ ನೀಡಿದೆ. 'ಗ್ರಾಹಕರ ಖಾತೆಯಲ್ಲಿ ನಡೆದ ವ್ಯವಹಾರದ ಬಗ್ಗೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಎಸ್​ಎಂಎಸ್ ಸಂದೇಶದ ಮೂಲಕ ಮಾಹಿತಿ ನೀಡಿದರೂ, ಗ್ರಾಹಕರು ಇಂಥ ಮಾಹಿತಿಗೆ ತಕ್ಷಣ ಸ್ಪಂದಿಸದೆ ತಾವು ನಷ್ಟ ಅನುಭವಿಸಿದರೆ, ಇದಕ್ಕೆ ಬ್ಯಾಂಕುಗಳು ಹೊಣೆಯೇ ಹೊರತು ಗ್ರಾಹಕರಲ್ಲ ಎಂದು ಗ್ರಾಹಕ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೌದು, ಎಸ್​ಎಂಎಸ್ ಸೇವೆಯಿಂದಾಗಿ ಬ್ಯಾಂಕುಗಳಲ್ಲಿ ಅನಧಿಕೃತ ವ್ಯವಹಾರ ನಡೆದರೆ ಗ್ರಾಹಕರಿಗೆ ತಕ್ಷಣ ತಿಳಿಯುತ್ತದೆ. ಪ್ರತಿ ಬಾರಿ ಹಣ ತೆಗೆದಾಗಲೂ ಗ್ರಾಹಕರಿಗೆ ಎಸ್​ಎಂಎಸ್ ಮೂಲಕ ಮಾಹಿತಿ ಹೋಗುತ್ತದೆ. ಇಂತಗಹ ಸಮಯದಲ್ಲಿ ಗ್ರಾಹಕರು ನಿರ್ಲಕ್ಷ್ಯ ಮತ್ತು ಲೋಪ ಮಾಡಿದರೆ ನಾವು ಹೊಣೆಗಾರರಲ್ಲ ಎಂದು ಬ್ಯಾಂಕ್ ಒಂದು ಗ್ರಾಹಕರೋರ್ವರಿಗೆ ಹೇಳಿ ನುಣಿಚಿಕೊಳ್ಳಲು ಯತ್ನಿಸಿದೆ. ಇದಾದ ನಂತರ ಆ ಗ್ರಾಹಕನು ಕೋರ್ಟ್ ಮೆಟ್ಟಿಲೇರಿದ್ದು, ಗ್ರಾಹಕ ನ್ಯಾಯಾಲಯ ಇಂತಹ ತೀರ್ಪೊಂದನ್ನು ನೀಡಿದೆ.

ಬ್ಯಾಂಕ್‌ಗಳಿಗೆ ಭಯ ಮೂಡಿಸಿದ 'ಸೈಬರ್ ಪ್ರಕರಣ'ವೊಂದರ 'ಕೋರ್ಟ್' ತೀರ್ಪು!!

ಇತ್ತೀಚಗೆ ಗ್ರಾಹಕನೊಬ್ಬರ ಖಾತೆಯಿಂದ ಎಟಿಎಂ ಮೂಲಕ 2.40 ಲಕ್ಷ ರೂ.ಗಳನ್ನು ವಿದೇಶದಲ್ಲಿ ತೆಗೆಯಲಾಗಿತ್ತು. ನಾನು ಎಟಿಎಂ ಬಳಸಲಿಲ್ಲ. ಯಾರಿಗೂ ನನ್ನ ಪರವಾಗಿ ಹಣ ತೆಗೆಯಲು ಅಧಿಕಾರ ನೀಡಲಿಲ್ಲ. ಈ ಹಣವನ್ನು ವಿದೇಶದಲ್ಲಿ ತೆಗೆಯಲಾಗಿದೆ. ಇದು ನನ್ನ ಖಾತೆಯಿಂದ ಅನಧಿಕೃತ ವಿತ್​ ಡ್ರಾ ಆಗಿದ್ದು, ಈ ಹಣವನ್ನು ಮರಳಿ ಖಾತೆಗೆ ಜಮಾ ಮಾಡಬೇಕು ಎಂದು ಆ ಗ್ರಾಹಕ ಬ್ಯಾಂಕನ್ನು ಕೋರಿದ್ದರು. ಆದರೆ, ಇದು ನಿಮ್ಮ ನಿರ್ಲಕ್ಷ್ಯ ಮತ್ತು ಲೋಪ. ನೀವೇ ಇದಕ್ಕೆ ಹೊಣೆ ಎಂದು ಬ್ಯಾಂಕ್ ಹೇಳಿದೆ.

ಪ್ರಕರಣದ ಬಗ್ಗೆ ವಿಚಾರಣೆ ಮಾಡಿದ ನ್ಯಾಯಾಲಯ ಬ್ಯಾಂಕನ್ನೇ ಹೊಣೆಯಾಗಿಸಿ, ಗ್ರಾಹಕನ ಖಾತೆಗೆ ಹಣವನ್ನು ಮರಳಿ ಜಮಾ ಮಾಡುವಂತೆ ಆದೇಶಿಸಿದೆ. ಬ್ಯಾಂಕುಗಳು ತಾವು ಕಳಿಸಿದ ಎಸ್​ಎಂಎಸ್​ಗಳನ್ನು ಉಲ್ಲೇಖಿಸಿ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿರುವುದನ್ನು ಅಲ್ಲಗಳೆ ಕೋರ್ಟ್, ಗ್ರಾಹಕರು ಎಸ್​ಎಂಎಸ್ ಮಾಹಿತಿಗೆ ತಕ್ಷಣ ಸ್ಪಂದಿಸದೆ ನಷ್ಟ ಅನುಭವಿಸಿದರೆ ಅದಕ್ಕೆ ಬ್ಯಾಂಕುಗಳು ಹೊಣೆ. ಗ್ರಾಹಕರು ತಮಗೆ ಬರುವ ಎಸ್​ಎಂಎಸ್​ಗಳನ್ನು ನಿರಂತರವಾಗಿ ನೋಡುತ್ತಲೇ ಇರುತ್ತಾರೆಂದೇನೂ ಇಲ್ಲ ಎಂದು ಹೇಳಿದೆ.

ಬ್ಯಾಂಕ್‌ಗಳಿಗೆ ಭಯ ಮೂಡಿಸಿದ 'ಸೈಬರ್ ಪ್ರಕರಣ'ವೊಂದರ 'ಕೋರ್ಟ್' ತೀರ್ಪು!!

ನ್ಯಾಯಾಲಯದ ಈ ತೀರ್ಪು ಗ್ರಾಹಕರಿಗೆ ಹೆಚ್ಚಿನ ಬಲ ನೀಡಿದ್ದು, ಈ ತೀರ್ಪು ಬ್ಯಾಂಕಿಂಗ್ ಉದ್ಯಮದಲ್ಲಿ ಸಂಚಲನ ಮೂಡಿಸಿದೆ. ಎಸ್​ಎಂಎಸ್ ವಿಷಯದಲ್ಲಿ ಬ್ಯಾಂಕ್ ಮತ್ತು ಗ್ರಾಹಕನ ಮಧ್ಯೆ ಯಾವುದೇ ರೀತಿಯ ಕಾಂಟ್ರ್ಯಾಕ್ಟ್ ಕೂಡ ಇಲ್ಲ ಎಂದು ಹೇಳಿ ಇದಕ್ಕೆ ಬ್ಯಾಂಕುಗಳೇ ಹೊಣೆ ಹೊರಬೇಕೆಂದು ಹೇಳಿರುವುದು ಬ್ಯಾಂಕ್‌ಗಳಿಗೆ ಆಘಾತವಾಗಿದೆ. ಎಸ್​ಎಂಎಸ್ ಕಳುಹಿಸುವುದು ಗ್ರಾಹಕಸ್ನೇಹಿ ಸೇವೆಯೇ ಹೊರತು, ಇದರಲ್ಲಿ ಯಾವುದೇ ರೀತಿಯ ಹೊಣೆಗಾರಿಕೆ ಗ್ರಾಹಕರಿಗೆ ಇರುವುದಿಲ್ಲ ಎಂದು ತೀರ್ಪು ಹೇಳಿದೆ.

ಓದಿರಿ: ಏರ್‌ಟೆಲ್‌ಗೆ ಇತಿಹಾಸದಲ್ಲೇ ಬಿಗ್‌ಶಾಕ್!..ಇದನ್ನು ಆ ದೇವರೂ ಕೂಡ ಊಹಿಸಿರಲಿಲ್ಲವೇನೋ!!

ಪೊಲೀಸರಿಗೂ ಭಯ ಹುಟ್ಟಿಸಿರುವ 'ಸಿಮ್ ಸ್ವಾಪ್' ವಂಚನೆಯ ಬೆಚ್ಚಿಬೀಳಿಸುವ ಸಂಗತಿಗಳು!!

ಪೊಲೀಸರಿಗೂ ಭಯ ಹುಟ್ಟಿಸಿರುವ 'ಸಿಮ್ ಸ್ವಾಪ್' ವಂಚನೆಯ ಬೆಚ್ಚಿಬೀಳಿಸುವ ಸಂಗತಿಗಳು!!

ಈ ಮೊದಲು ಆಮಿಷಗಳನ್ನು ತೋರಿಸಿ ಜನರಿಗೆ ವಂಚಿಸುತ್ತಿದ್ದ ಸೈಬರ್ ಕ್ರಿಮಿನಲ್‌ಗಳು ಈಗ 'ಸಿಮ್ ಸ್ವ್ಯಾಪ್' ಎಂಬ ಹೊಸ ಮಾದರಿಯ ಅಪರಾಧ ದಾರಿಯನ್ನು ಕಂಡುಕೊಂಡಿದ್ದಾರೆ. ತಂತ್ರಜ್ಞಾನಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವವರನ್ನು ಸಹ ಸುಲಭವಾಗಿ ವಂಚಿಸಬಹುದಾದ ಈ 'ಸಿಮ್ ಸ್ವ್ಯಾಪ್‌ ವಂಚನೆ' ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತಕೇಳಿ ಬರುತ್ತಿದೆ.

ಹೌದು, ಈ ಸ್ಮಾರ್ಟ್‌ಫೋನ್‌, ಡಿಜಿಟಲ್‌ ವ್ಯವಹಾರದ ಬಗ್ಗೆ ಅಜ್ಞಾನ ಇದ್ದವರು ಮಾತ್ರ ಹಣ ಕಳೆದುಕೊಳ್ಳುತ್ತಾರೆ ಎನ್ನಲಾಗುತ್ತಿತ್ತು. ಆದರೆ, ಸಿಮ್ ಸ್ವ್ಯಾಪ್ ಹಗರಣದಲ್ಲಿ ನಗರದ ಪ್ರದೇಶದ ಯುವಕರೇ ಬಲೆಗೆ ಬಿದ್ದಿದ್ದಾರೆ. ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ, ಆನ್‌ಲೈನ್ ಬಗ್ಗೆ ತಿಳಿದಿರುವವರನ್ನು ಸಹ ಮೋಸ ಮಾಡಲು ಕ್ರಿಮಿನಲ್‌ಗಳು ಮುಂದಾಗಿದ್ದಾರೆ.

ಗ್ರಾಹಕರ ಸಿಮ್ ಅನ್ನೇ ನಕಲು ಮಾಡಿ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಿರುವ ಪ್ರಕರಣಗಳು ಇತ್ತೀಚಿಗೆ ಬಹಳಷ್ಟು ಹೆಚ್ಚಾಗುತ್ತಿರುವುದು ಸಹ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ, ಏನಿದು 'ಸಿಮ್ ಸ್ವ್ಯಾಪ್‌ ವಂಚನೆ'? ಈ ವಂಚನೆ ಪೊಲೀಸರಿಗೂ ತಲೆನೋವಾಗಿರುವುದೇಕೆ? ನಾವುಗಳು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಮುಂದೆ ತಿಳಿಯಿರಿ.

ಏನಿದು 'ಸಿಮ್ ಸ್ವ್ಯಾಪ್' '?

ಏನಿದು 'ಸಿಮ್ ಸ್ವ್ಯಾಪ್' '?

'ಸಿಮ್ ಸ್ವ್ಯಾಪ್' ಎಂದರೇ, 'ನಿಮ್ಮ ಬಳಿ ಈಗಾಗಲೇ ಇರುವ ಫೋನ್‌ ನಂಬರ್‌ ಅನ್ನು ಹೊಸ ಸಿಮ್ ಕಾರ್ಡ್‌ಗೆ ನೋಂದಣಿ ಮಾಡಿಸುವುದು' ಎಂದರ್ಥ. ಈ ಕೆಲಸವನ್ನು ನೀವೇ ಮಾಡಿದ್ದರೆ ಯಾವ ತೊಂದರೆಯಿಲ್ಲ. ಆದರೆ, ನಿಮ್ಮ ಮಾಹಿತಿಯನ್ನು ಕದ್ದಿರುವ ಅಪರಿಚಿತರು ಈ ಕೆಲಸ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣಾರ್ಧದಲ್ಲಿ ಖಾಲಿಯಾಗುವ ಹಗರಣ ಇದಾಗಿದೆ.!

ಏನಿದು ಸಿಮ್ ಸ್ವ್ಯಾಪ್ ಹಗರಣ ?

ಏನಿದು ಸಿಮ್ ಸ್ವ್ಯಾಪ್ ಹಗರಣ ?

ಸಿಮ್ ಬಳಸಿಕೊಂಡು ನಡೆಯುತ್ತಿರುವ ಮೊಬೈಲ್ ವಾಲೆಟ್ ಸೇವೆ ಹೆಚ್ಚು ಬಳಕೆಗೆ ಬಂದ ನಂತರ ಸೈಬರ್ ಕ್ರಿಮಿನಲ್‌ಗಳು ಈಗ ಸಿಮ್ ಅನ್ನು ಸಹ ನಕಲು ಮಾಡಹೊರಟಿದ್ದಾರೆ. ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಹೇಗಾದರೂ ಪಡೆದುಕೊಂಡಿರುವ ಅವರಿಗೆ ಬೇಕಾಗಿರುವುದು ಒಟಿಪಿ ಮಾತ್ರ. ಅದಕ್ಕಾಗಿಯೇ ನಡೆಯುತ್ತಿರುವುದು 'ಸಿಮ್ ಸ್ವ್ಯಾಪ್' ಹಗರಣ.

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು!

'ಸಿಮ್ ಸ್ವ್ಯಾಪ್'ನ ಹೆಜ್ಜೆಗಳು!

ನಿಮ್ಮ ಫೋನ್ ನಂಬರ್ ಅನ್ನು ಬ್ಲಾಕ್ ಮಾಡಿ, ಅದೇ ನಂಬರ್‌ನ ಹೊಸ ಸಿಮ್ ಖರೀದಿಸುವುದು ವಂಚಕರ ಮೊದಲ ಹೆಜ್ಜೆಯಾಗಿರುತ್ತದೆ. ಅದಕ್ಕಾಗಿ ಅವರು ನಿಮ್ಮ ದಾಖಲೆಗಳನ್ನು ಹುಡುಕಬಹುದು ಅಥವಾ ನಿಮ್ಮಿಂದಲೇ ಸಿಮ್ ಅನ್ನು ಅವರು ನಕಲಿಸಿಕೊಳ್ಳಬಹುದು. ಈ ಎರಡೂ ರೀತಿಯಿಂದಲೂ ಅವರು ನಿಮ್ಮನ್ನು ಕ್ಷಣಾರ್ಧದಲ್ಲಿ ಮೋಸಗೊಳಿಸಬಹುದು.

ವಿಶಿಷ್ಟ 20 ಡಿಜಿಟ್ ನಂಬರ್‌

ವಿಶಿಷ್ಟ 20 ಡಿಜಿಟ್ ನಂಬರ್‌

ಕಾಲ್‌ಡ್ರಾಫ್ಸ್ ಸೇರಿದಂತೆ ಕರೆ ಸೇವೆಯವನ್ನು ಮತ್ತಷ್ಟು ಸುಲಭಗೊಳಿಸುತ್ತೇವೆ ಎಂದು ನಿಮಗೊಂದು ಕರೆ ಬರುತ್ತದೆ. ಕಸ್ಟಮರ್ ಕೇರ್‌ ಸೂಗಿನಲ್ಲಿ ಕರೆ ಮಾಡುವ ಇವರು ಕರೆ ಮಾಡುವುದೇ ನಿಮ್ಮ ಸಿಮ್ ಹಿಂಬದಿಯ ನಂಬರ್‌ ಯಾವುದೆಂದು ತಿಳಿದುಕೊಳ್ಳಲು. ಒಮ್ಮೆ ನೀವು ಅವರ ಆದೇಶವನ್ನು ಚಾಚು ತಪ್ಪದೆ ಪಾಲಿಸಿದರೆ ನಿಮ್ಮ ಬ್ಯಾಂಕ್ ಅಂಕೌಂಟ್ ಖಾಲಿ ಖಾಲಿ.!

ಒಂದನ್ನು ಪ್ರೆಸ್‌ ಮಾಡಲು ಹೇಳುತ್ತಾರೆ!

ಒಂದನ್ನು ಪ್ರೆಸ್‌ ಮಾಡಲು ಹೇಳುತ್ತಾರೆ!

ನಿಮ್ಮ ಸಿಮ್‌ನ 20 ಡಿಜಿಟ್ ಸಂಖ್ಯೆ ಪಡೆದ ವಂಚಕ, ಅಧಿಕೃತವಾಗಿಹೊಸ ಸಿಮ್ ಪಡೆಯಲು ಮುಂದಾಗುತ್ತಾನೆ. ಆಗ, ನಿಮ್ಮ ಫೋನ್‌ಗೆ ಟೆಲಿಕಾಂ ಕಂಪೆನಿಯಿಂದ ಕನ್ಫರ್ಮೇಷನ್ ಎಸ್‌ಎಂಎಸ್‌ ಬರುತ್ತದೆ. ಆಗ ವಂಚಕ, ನಿಮಗೆ ಕರೆ ಮಾಡಿ ಒಂದನ್ನು ಪ್ರೆಸ್‌ ಮಾಡಲು ಸೂಚಿಸುತ್ತಾನೆ. ನೀವು ಒತ್ತಿದರೆ, ನಿಮ್ಮ ಸಿಮ್ ಬ್ಲಾಕ್ ಆಗಿ ಅವನ ಬಳಿ ನಿಮ್ಮ ಸಿಮ್ ಇರುತ್ತದೆ.

ಹಣ ಹೇಗೆ ಕಳೆದುಕೊಳ್ಳುತ್ತೀರಾ?

ಹಣ ಹೇಗೆ ಕಳೆದುಕೊಳ್ಳುತ್ತೀರಾ?

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಪಡೆದ ವಂಚಕರು ಎಟಿಎಂ ಕಾರ್ಡ್‌ನಲ್ಲಿರುವ "ಸಿವಿವಿ" ನಂಬರ್ ಮೂಲಕ ಆನ್‌ಲೈನ್ ವ್ಯವಹಾರ ಮಾಡುತ್ತಾರೆ. ಈಗ ಸಿವಿವಿ ನಂಬರ್ ಮತ್ತು ಮೊಬೈಲ್ ಒಟಿಪಿ ಇದ್ದರೆ ಆನ್‌ಲೈನಿನಲ್ಲಿ ಹಣ ವರ್ಗಾವಣೆ ಕ್ಷಣಾರ್ಧದಲ್ಲಿ ನಡೆಯುತ್ತದೆ. ಈ ಎರಡು ಮಾಹಿತಿಗಳನ್ನು ನಿಮ್ಮಿಂದ ಪಡೆದ ಅವರು ನಿಮ್ಮ ಹಣ ದೋಚುತ್ತಾರೆ.

ಎಟಿಎಂ ಕಾರ್ಡ್ ಮಾಹಿತಿ ಅವರಿಗೆ ಸಿಗುವುದು ಹೇಗೆ?

ಎಟಿಎಂ ಕಾರ್ಡ್ ಮಾಹಿತಿ ಅವರಿಗೆ ಸಿಗುವುದು ಹೇಗೆ?

ನಕಲಿ ವೆಬ್‌ಸೈಟ್‌ ಅನ್ನು ತೆರೆಯುವ ಕ್ರಿಮಿನಲ್‌ಗಳು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಲು ಪ್ರೇರೇಪಿಸುತ್ತಾರೆ. ಒಮ್ಮೆ ವ್ಯವಹಾರ ನಡೆದರೆ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿ ಪಡೆಯುತ್ತಾರೆ. ಅಥವಾ ಕರೆ ಮಾಡಿ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ, ತೆರೆಯಲು ಕಾರ್ಡ್ ಮಾಹಿತಿ ನೀಡಿ ಎಂದು ಹೇಳುತ್ತಾರೆ.

ಕರೆಗಳನ್ನು

ಕರೆಗಳನ್ನು

ವಂಚಕರು ಟೆಲಿಕಾಂ ಕಂಪನಿಯ ಪ್ರತಿನಿಧಿಗಳೆಂದು ಹೇಳಿಕೊಂಡು ನಿಮಗೆ ಕರೆ ಮಾಡುತ್ತಾರೆ. ಕಾಲ್‌ ಡ್ರಾಪ್‌ ಪ್ಲಾಬ್ಲೆಮ್ ಅಥವಾ ಸಿಗ್ನಲ್‌ ಪ್ರಾಬ್ಲೆಮ್ ಸರಿಪಡಿಸಲು ಕಾಲ್‌ ಮಾಡುತ್ತಿರುವುದಾಗಿ ಹೇಳುತ್ತಾರೆ. ಅಥವಾ 4ಜಿ ಸಿಮ್ ಕಾರ್ಡ್‌ಗೆ ಬದಲಾಗಲು ನಿಮ್ಮ ಸಿಮ್ ಸಂಖ್ಎ ನೀಡಲು ಕೇಳುತ್ತಾರೆ. ಇಂತಹ ಕರೆಗಳನ್ನು ನಂಬಬೇಡಿ.

ಸಿಮ್ ತೆಗೆದಿಟ್ಟುಕೊಳ್ಳಿ!

ಸಿಮ್ ತೆಗೆದಿಟ್ಟುಕೊಳ್ಳಿ!

ಕ್ರೆಡಿಟ್ ಕಾರ್ಡ್- ಡೆಬಿಟ್ ಕಾರ್ಡುಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವಂತೆ, ನಾವು ಬಳಸುವ ಸಿಮ್ ಬಗೆಗೂ ಅಷ್ಟೇ ಎಚ್ಚರಿಕೆ ವಹಿಸುವುದು ಒಳ್ಳೆಯದು. ಸಿಮ್ ಅನ್ನು ಮೊಬೈಲಿನಿಂದ ಹೊರತೆಗೆದಾಗ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವುದು ಮತ್ತು ಮೊಬೈಲ್ ಫೋನನ್ನು ರಿಪೇರಿಗೆಂದು ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಸಿಮ್ ತೆಗೆದಿಟ್ಟುಕೊಳ್ಳುವುದು ಅಪೇಕ್ಷಣೀಯ. ಈ ಮೂಲಕ ನಮ್ಮ ಸಿಮ್ ಮಾಹಿತಿಯನ್ನು ಬೇರೊಬ್ಬರು ನಕಲಿಸಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಬಹುದು.

ಪಾರಾಗುವುದು ಸಾಧ್ಯವಿದೆ!

ಪಾರಾಗುವುದು ಸಾಧ್ಯವಿದೆ!

ಮೊಬೈಲ್‌ನ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾವಹಿಸುವ ಮೂಲಕ ಇಂತಹ ಹಗರಣದಿಂದ ಪಾರಾಗುವುದು ಸಾಧ್ಯ. ಯಾವುದೇ ಸಂದರ್ಭದಲ್ಲಿ ನಮ್ಮ ಸಂಪರ್ಕ ಸ್ಥಗಿತವಾದರೆ, ಬಿಲ್‌ನಲ್ಲಿ ಅಪರಿಚಿತ ಚಟುವಟಿಕೆಗಳು ಕಾಣಿಸಿಕೊಂಡರೆ ತಕ್ಷಣವೇ ಮೊಬೈಲ್ ಟೆಲಿಕಾಂ ಕಂಪೆನಿ ಸಂಪರ್ಕಿಸಿ ಸಿಮ್ ಬ್ಲಾಕ್ ಮಾಡಿಸಿ. ಮತ್ತು ಎಟಿಎಂ ಅನ್ನು ಸಹ ಬ್ಲಾಕ್ ಮಾಡಿಬಿಡಿ.

ಸಿಮ್ ಸ್ವ್ಯಾಪ್ ಅನ್ನು ನೀವು ಮಾಡಿರುತ್ತೀರಿ!

ಸಿಮ್ ಸ್ವ್ಯಾಪ್ ಅನ್ನು ನೀವು ಮಾಡಿರುತ್ತೀರಿ!

ಹಾಗೆ ನೋಡಿದರೆ, ಮೇಲೆ ಹೇಳಿದ ಸಿಮ್ ಸ್ವ್ಯಾಪ್ ಎಂದರೆ ಹಗರಣ ಎಂದು ತಿಳಿಯುತ್ತಿರಲಿಲ್ಲ. ನೀವು 2ಜಿಯಿಂದ 3ಜಿ ಅಥವಾ 4ಜಿ ಸಿಮ್‌ ಬದಲಾಯಿಸಿಕೊಂಡಿದ್ದನ್ನು ಸಹ ಸಿಮ್ ಸ್ವ್ಯಾಪ್ ಎಂದು ಕರೆಯುತ್ತಾರೆ. ಆದರೆ, ಇಲ್ಲಿ ವಂಚಕರು ನಿಮ್ಮ ಸಿಮ್ ಅನ್ನು ಸ್ವ್ಯಾಪ್ ಮಾಡುತ್ತಿರುವುದಕ್ಕೆ ಇದು ಸಿಮ್ ಸ್ವ್ಯಾಪ್ ಹಗರಣ ಎಂದು ಬದಲಾಗಿದೆ.

Best Mobiles in India

English summary
The Kerala High Court has said banks cannot be absolved of liability for unauthorised withdrawals from their customers' accounts. Justice P B Suresh Kumar also made it clear that banksare liable for unauthorised withdrawals even if customers did not respond to SMS alerts. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X