Subscribe to Gizbot

ಬ್ಯಾಂಕಲ್ಲೂ ಬಂದಿದೆ ರೊಬೋಟ್ ತಂತ್ರ

Written By:

ಜಪಾನ್‌ನ ಬ್ಯಾಂಕೊಂದು ಸಿಬ್ಬಂದಿಗಳ ಬದಲಿಗೆ ರೊಬೋಟ್ ಅನ್ನು ಬಳಸಿ ಪ್ರಯೋಗಗಳನ್ನು ನಡೆಸುತ್ತಿದೆ. ಮಿಸ್ತುಬಿಶಿ ಯುಎಫ್‌ಜಿ ಫಿನಾನ್ಶಿಯಲ್ ಗ್ರೂಪ್ ತನ್ನ ಎರಡು ಶಾಖೆಗಳಲ್ಲಿ ರೊಬೋಟ್ ವ್ಯವಸ್ಥೆಗಳನ್ನು ಮಾಡಲಿದೆ.

ಆಂಡ್ರಾಯ್ಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಆಧರಿಸಿ ರೊಬೋಟ್‌ಗಳನ್ನು ಬ್ರ್ಯಾಂಚ್‌ಗಳಿಗೆ ಬಿಡುಗಡೆ ಮಾಡುತ್ತಿದ್ದು ಈ ವರ್ಷದ ನಂತರ ಈ ಕಾರ್ಯ ನಡೆಯಲಿದೆ.

ಬ್ಯಾಂಕಲ್ಲೂ ಬಂದಿದೆ ರೊಬೋಟ್ ತಂತ್ರ

ಮನುಷ್ಯರೂ ಮಾಡದೇ ಇರುವ ಕೆಲಸಗಳನ್ನು ಈ ರೊಬೋಟ್‌fಗಳು ಮಾಡಲಿದ್ದು 24 ಗಂಟೆಗಳ ಸೇವೆಯನ್ನು ಗ್ರಾಹಕರಿಗೆ ಒದಗಿಸುವುದು, ಬ್ಯಾಂಕಿನ ಎಲ್ಲಾ ಪ್ರಮುಖ ಕೆಲಸಗಳನ್ನು ಮಾಡುವುದು ಇವೇ ಮೊದಲಾದ ಕಾರ್ಯಗಳನ್ನು ಈ ರೊಬೋಟ್‌ಗಳು ನಡೆಸಲಿವೆ.

ಬ್ಯಾಂಕಲ್ಲೂ ಬಂದಿದೆ ರೊಬೋಟ್ ತಂತ್ರ

ಅತ್ಯಂತ ಸ್ನೇಹಿ ರೊಬೋಟ್‌ಗಳು ಇವುಗಳಾಗಿದ್ದು, ನಮ್ಮ ಗ್ರಾಹಕರು ಇವುಗಳ ಸೇವೆಯನ್ನು ಖಂಡಿತ ಇಷ್ಟಪಡುತ್ತಾರೆ ಎಂದು ಬ್ಯಾಂಕಿನ ಅಧಿಕಾರಿಗಳು ನುಡಿಯುತ್ತಿದ್ದಾರೆ.

ಮಾನವನನ್ನು ಬಳಸಿ ನಡೆಸುವಂತಹ ಕೆಲಸಗಳಲ್ಲಿ ರೊಬೋಟ್‌ಗಳು ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಸವಾಲಿನ ವಿಷಯವಾಗಿದ್ದು ಯೋಜನೆಗೆ ಉತ್ತಮ ತಯಾರಿಯನ್ನು ಸಿಬ್ಬಂದಿಗಳು ನಡೆಸುತ್ತಿದ್ದಾರೆ. ಟೋಕಿಯೋದ ಮೊಬೈಲ್ ಫೋನ್ ಸಂಸ್ಥೆಗಳಲ್ಲಿ ನವೋ ರೊಬೋಟ್‌ಗಳು ಕಾರ್ಯನಿರ್ವಹಿಸಿವೆ.

ಇವುಗಳಿಗೆ ಧ್ವನಿಯನ್ನು ಅಳವಡಿಸಲಿದ್ದು ಮನುಷ್ಯರೊಂದಿಗೆ ಉತ್ತಮ ಸಂವಹನವನ್ನು ಇವುಗಳು ನಡೆಸಲಿವೆ ಎಂದು ಸಂಸ್ಥೆ ತಿಳಿಸಿದೆ.

English summary
This article tells about Bank to employ two-foot robot cashier which speaks 19 languages.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot