ಆನ್‌ಲೈನ್‌ನಲ್ಲಿ ಹಣ ಕಳೆದುಕೊಂಡರೆ ಮುಂದೇನು?..ಆರ್‌ಬಿಐ ಹೇಳಿದ್ದು ಹೀಗೆ!!

|

ದೇಶದಲ್ಲಿ ಇತ್ತೀಚಿಗೆ ಹಣಕಾಸಿನ ವ್ಯವಹಾರ ಆನ್‌ಲೈನ್‌ನಲ್ಲಿ ಹೆಚ್ಚು ನಡೆಯುತ್ತಿರುವುದರಿಂದ ಆನ್‌ಲೈನ್ ಮೂಲಕ ಜನರ ಹಣಕ್ಕೆ ಕನ್ನ ಹಾಕುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ರೀತಿ ಕನ್ನ ಹಾಕುವ ಸೈಬರ್ ಕ್ರೈಮ್‌ಗೆ ತಡೆ ಹಾಕಲು ಸರ್ಕಾರ ಮತ್ತು ರಿಸರ್ವ್‌ಬ್ಯಾಂಕ್ ಭಾರೀ ಪ್ರಯತ್ನವನ್ನೇ ಮಾಡುತ್ತಿವೆ. ಆದರೂ ಸಹ ಕನ್ನ ಹಾಕುವವರು ಗ್ರಾಹಕರ ಹಣವನ್ನು ಕದಿಯಲು ಹೊಸ, ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರು ಯಶಸ್ವಿಯೂ ಆಗುತ್ತಿದ್ದಾರೆ.

ಹೌದು, ಇಲ್ಲಿ ಗ್ರಾಹಕರು ತಮ್ಮ ಸ್ವಯಂ ತಪ್ಪಿನಿಂದ ಸೈಬರ್ ಕ್ರಿಮಿನಲ್‌ಗಳ ಗಾಳಕ್ಕೆ ಬಿದ್ದರೆ, ಕೆಲವೊಮ್ಮೆ ಅವರಿಗೆ ಸೇವೆ ಒದಗಿಸುವ ಬ್ಯಾಂಕ್‌ಗಳ ಲೋಪದೋಷಗಳೂ ಸಹ ಕಾರಣವಾಗುತ್ತಿವೆ. ಇದಕ್ಕಿಂತ ಹೆಚ್ಚಾಗಿ ಸೇವೆ ಒದಗಿಸುವ ಬ್ಯಾಂಕ್‌ಗಳ ನಿರ್ಲಕ್ಷತನ ಕೂಡ ಗ್ರಾಹಕರು ಹಣ ಕಳೆದುಕೊಳ್ಳುವಂತೆ ಮಾಡುತ್ತಿದೆ. ಹಾಗಾಗಿ, ಸೈಬರ್ ವಂಚನೆಗೆ ಒಳಗಾದ ಬ್ಯಾಂಕ್ ಗ್ರಾಹಕರಿಗೆ ಸಿಹಿ ಮತ್ತು ಕಹಿಸುದ್ದಿಯನ್ನು ಇದೀಗ ರಿಸರ್ವ್‌ಬ್ಯಾಂಕ್ ನೀಡಿದೆ. ಇದು ಬ್ಯಾಂಕ್‌ಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ.

ಆನ್‌ಲೈನ್‌ನಲ್ಲಿ ಹಣ ಕಳೆದುಕೊಂಡರೆ ಮುಂದೇನು?..ಆರ್‌ಬಿಐ ಹೇಳಿದ್ದು ಹೀಗೆ!!

ಆನ್‌ಲೈನ್‌ ವಹಿವಾಟು ನಡೆಸುವುದಕ್ಕೆ ಅಗತ್ಯವಿರುವ ಮಾಹಿತಿಯನ್ನು ಯಾರ ಕೈಗೂ ಸಿಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳುವ ಹೊಣೆ ಗ್ರಾಹಕರ ಮೇಲಿದೆ. ಆದರೆ, ಬ್ಯಾಂಕ್‌ನವರ ನಿರ್ಲಕ್ಷ್ಯ ಅಥವಾ ಭದ್ರತಾ ಲೋಪದಿಂದ, ಗ್ರಾಹಕರ ಖಾತೆಯಲ್ಲಿನ ಹಣ ಕಳುವಾದರೆ ಅದಕ್ಕೆ ಬ್ಯಾಂಕ್‌ಗಳೇ ನೇರಹೊಣೆ ಎಂದು ರಿಸರ್ವ್‌ಬ್ಯಾಂಕ್ ತಿಳಿಸಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ಬ್ಯಾಂಕ್‌ಗಳು ಮತ್ತು ಸಾರ್ವಜನಿಕರಿಗೆ ರಿಸರ್ವ್‌ಬ್ಯಾಂಕ್ ನೀಡಿರುವ ಸಲಹೆ ಮತ್ತು ಎಚ್ಚರಿಕೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬ್ಯಾಂಕ್‌ಗಳೇ ನೇರ ಹೊಣೆ!

ಬ್ಯಾಂಕ್‌ಗಳೇ ನೇರ ಹೊಣೆ!

ಬ್ಯಾಂಕ್‌ನವರ ನಿರ್ಲಕ್ಷ್ಯ ಅಥವಾ ಭದ್ರತಾ ಲೋಪದಿಂದ, ಗ್ರಾಹಕರ ಖಾತೆಯಲ್ಲಿನ ಹಣ ಕಳುವಾದರೆ, ಗ್ರಾಹಕ ದೂರು ನೀಡಿದರೂ ನೀಡದಿದ್ದರೂ ಬ್ಯಾಂಕ್‌ನವರೇ ಹೊಣೆ ಹೊರಬೇಕು ಎಂದು ರಿಸರ್ವ್‌ಬ್ಯಾಂಕ್ ತಿಳಿಸಿದೆ. ವಂಚನೆಗೊಳಗಾದ ಗ್ರಾಹಕನಿಗೆ ಆ ಅಕ್ರಮ ವಹಿವಾಟಿಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯ ಪಡೆಯಲು ಅವಕಾಶವಿರುತ್ತದೆ. ಆದರೆ, ಇಂತಹ ವಹಿವಾಟುಗಳಲ್ಲಿ ಗ್ರಾಹಕರ ಲೋಪ ಇದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಈಗ ಬ್ಯಾಂಕ್‌ನವರು ತೆಗೆದುಕೊಳ್ಳಬೇಕಿದೆ.

ಗ್ರಾಹಕರೂ ಸಹ ಹೊಣೆಯಾಗುತ್ತಾರೆ!

ಗ್ರಾಹಕರೂ ಸಹ ಹೊಣೆಯಾಗುತ್ತಾರೆ!

ಒಂದೊಮ್ಮೆ ಗ್ರಾಹಕರ ನಿರ್ಲಕ್ಷ ಇಲ್ಲಿ ಇದ್ದರೆ, ಅವರೂ ಕೂಡ ಹಣೆಹೊರೆಬೇಕಾಗುತ್ತದೆ.ಗ್ರಾಹಕರು ಆನ್‌ಲೈನ್ ವಂಚನೆಗೊಳಗಾದ ಕೂಡಲೇ ದೂರು ನೀಡಬೇಕು. ದೂರು ನೀಡಿದ ನಂತರವೂ ಖಾತೆಯಿಂದ ಹಣ ಕಳುವಾದರೆ, ಅಂತಹ ವಹಿವಾಟುಗಳಿಗೆ ಬ್ಯಾಂಕ್‌ನವರು ಜವಾಬ್ದಾರರಾಗಿರುತ್ತಾರೆ. ಆದರೆ, ಗ್ರಾಹಕನ ನಿರ್ಲಕ್ಷ್ಯದಿಂದ ಮಾಹಿತಿ ಸೋರಿಕೆಯಾಗಿ, ಕನ್ನ ಹಾಕುವವರು ಖಾತೆಯಿಂದ ಹಣ ಎಗರಿಸಿದ್ದರೆ, ಅಂತಹ ನಷ್ಟವನ್ನು ಬ್ಯಾಂಕ್‌ಗಳು ಭರಿಸಬೇಕಿಲ್ಲ ಎಂದು ಹೇಳಲಾಗಿದೆ.

ಬ್ಯಾಂಕ್‌ಗಳಿಗೆ ರಿಸರ್ವ್ ಸೂಚನೆ!

ಬ್ಯಾಂಕ್‌ಗಳಿಗೆ ರಿಸರ್ವ್ ಸೂಚನೆ!

ಗ್ರಾಹಕರಿಗೆ ಆನ್‌ಲೈನ್ ಸೇವೆ ಒದಗಿಸುವ ಬ್ಯಾಂಕ್‌ಗಳು ಸಹ ಹಲವು ಮುನ್ನೆಚ್ಚರಿಕೆಗಳನ್ನು ನೀಡಬೇಕಿದ್ದು, ಆನ್‌ಲೈನ್ ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಗ್ರಾಹಕರ ಇ-ಮೇಲ್‌ಗೆ ತಲುಪಿಸುವ ಕೆಲಸವನ್ನು ಬ್ಯಾಂಕ್‌ನವರು ಮಾಡಬೇಕು. ಒಂದು ವೇಳೆ ಗ್ರಾಹಕರಿಗೆ ವಂಚನೆ ನಡೆದಾಗ ಸುಲಭವಾಗಿ ದೂರು ನೀಡಲು ಸಾಧ್ಯವಾಗುವಂತೆ ಸೇವಾ ವಿಭಾಗ
ವನ್ನು ಬ್ಯಾಂಕ್‌ನವರು ನಿರ್ವಹಿಸುತ್ತಿರಬೇಕು. ಆನ್‌ಲೈನ್‌ನಲ್ಲಿ ದೂರು ನೀಡಲು ಜಾಲತಾಣದಲ್ಲಿ ಲಿಂಕ್‌ ನಮೂದಿಸಿರಬೇಕು ಎಂದು ಸೂಚನೆ ನೀಡಿದೆ.

ಜಾಗೃತಿ ಮೂಡಿಸಬೇಕು!

ಜಾಗೃತಿ ಮೂಡಿಸಬೇಕು!

ಹೊಸ ಹೊಸ ಸೇವೆಗಳನ್ನು ಅಳವಡಿಸಿಕೊಳ್ಳುವ ಬ್ಯಾಂಕ್‌ಗಳು ಗ್ರಾಹಕರಿಗೆ ಆ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಖಾತೆ ನೀಡುವಾಗಲೇ ಅವರಿಗೆ ನೀಡಿರುವ ಸೇವೆಗಳು ಯಾವುವು?, ಅವುಗಳ ಬಳಕೆ ಹೇಗೆ?, ಸುರಕ್ಷತೆ ಹೇಗೆ ಎಂಬುದನ್ನು ಗ್ರಾಹಕರಿಗೆ ಹೇಳಿಕೊಡುವ ಕೆಲಸವನ್ನು ಬ್ಯಾಂಕ್‌ಗಳು ಮಾಡಬೇಕಿದೆ. ಗ್ರಾಹಕರಿಗೆ ಆನ್‌ಲೈನ್ ವ್ಯವಹಾರ ಮತ್ತು ವಂಚನೆಗಳ ಬಗ್ಗೆ ಗ್ರಾಹಕರಿಗೆ ತಿಳಿಯುವಂತೆ ಮಾಡಲು ಆರ್‌ಬಿಐ ತಿಳಿಸಿದೆ.

ಗ್ರಾಹಕರಿಗೆ ಎಚ್ಚರಿಕೆ ಇರಲಿ!

ಗ್ರಾಹಕರಿಗೆ ಎಚ್ಚರಿಕೆ ಇರಲಿ!

ಡಿಜಿಟಲ್ ವಹಿವಾಟು ಉತ್ತೇಜನಕ್ಕಾಗಿ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಇದರ ಅಳವಡಿಕೆಯಲ್ಲಿ ಸೈಬರ್ ವಂಚನೆಯಂತಹ ಮಿತಿಕೂಡ ಇದೆ. ಆನ್‌ಲೈನ್ ವ್ಯವಹಾರದಲ್ಲಿ ವಂಚನೆ ನಡೆಸುವುದು ಸುಲಭವಾಗಿರುವುದರಿಂದ ಕಳ್ಳರು ಅಮಾಯಕರನ್ನು ಮೋಸ ಮಾಡುತ್ತಿದ್ದಾರೆ. ಹಾಗಾಗಿ, ಸಾರ್ವಜನಿಕರು ಕೂಡ ಬ್ಯಾಂಕಿಂಗ್‌ ಸೇವೆಗಳ ಪಿನ್‌ ಸಂಖ್ಯೆಗಳನ್ನು ಆಗಾಗ್ಗೆ ಬದಲಿಸುವ, ಒಟಿಪಿಯನ್ನು ಯಾರಿಗೂ ನೀಡದಿರುವ, ಉಚಿತವಾಗಿ ವೈ-ಫೈ ಸಿಗುವ ಕಡೆ ವ್ಯವಹಾರ ನಡೆಸದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು.

Most Read Articles
Best Mobiles in India

English summary
With the increase in the digital way of life, especially when it comes to financial transactions, the risk of financial frauds cannot be ignored. A fraudulent online transaction in one's bank account, debit or credit card could be because of e-mail spoofing, phishing or it could have been an act committed by cloning on

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X