ಧ್ವನಿಯಾಧರಿತ ಬಯೋಮೆಟ್ರಿಕ್ಸ್‌ ಅಳವಡಿಸಲು ಬ್ಯಾಂಕ್‌‌ಗಳು ಚಿಂತನೆ

Posted By:

ಫೋನ್‌ ಬ್ಯಾಕಿಂಗ್‌ ವ್ಯವಹಾರದಲ್ಲಿ ಗ್ರಾಹಕರ ಪಿನ್‌ ಮತ್ತು ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಕದಿಯುತ್ತಿರುವ ಹಿನ್ನೆಲೆಯಲ್ಲಿ ಫೋನ್ ಬ್ಯಾಂಕಿಂಗ್ ದೃಢೀಕರಿಸಲು ಧ್ವನಿಯಾಧರಿತ ಬಯೋಮೆಟ್ರಿಕ್ಸ್‌‌(voice biometrics) ಪಾಸ್‌ವರ್ಡ್‌ ಅಳವಡಿಸಲು ಬ್ಯಾಂಕ್‌‌ಗಳು ಚಿಂತನೆ ನಡೆಸಿವೆ.

ಬೆರಳಚ್ಚು(fingerprint) ಅಥವಾ ಐರಿಸ್ ಗುರುತಿಸುವಿಕೆಗಿಂತಲೂ(iris recognition ) ಧ್ವನಿಯಾಧರಿತ ಬಯೋಮೆಟ್ರಿಕ್ಸ್‌ ಪಾಸ್‌ವರ್ಡ್‌ ಉತ್ತಮ ಎಂದು ನಿರ್ಧಾರಕ್ಕೆ ಬಂದಿರುವ ಬ್ಯಾಂಕ್‌ಗಳು ಈ ಸೇವೆಗಳನ್ನು ಅನುಷ್ಟಾನಗೊಳಿಸಲು ಅಮೆರಿಕದ ನುನಾಸ್ಸ್‌(Nuance) ಸಂಸ್ಢೆಯೊಂದಿಗೆ ಚರ್ಚಿಸಿವೆ.

ಧ್ವನಿಯಾಧರಿತ ಬಯೋಮೆಟ್ರಿಕ್ಸ್‌ ಅಳವಡಿಸಲು ಬ್ಯಾಂಕ್‌‌ಗಳು ಚಿಂತನೆ

ವಾಯ್ಸ್‌ ರೆಕಗ್ನಿಷನ್‌ ತಂತ್ರಜ್ಞಾನದಲ್ಲಿ ಹೆಸರುವಾಸಿಯಾಗಿರುವ Nuance ಸಿದ್ದಪಡಿಸಿರುವ ತಂತ್ರಜ್ಞಾನವನ್ನು ಈಗಾಗಲೇ ಆಪಲ್‌ ಮತ್ತು ಬ್ಲ್ಯಾಕ್‌ಬೆರಿ ಕಂಪೆನಿ ಬಳಸಿಕೊಳ್ಳುತ್ತಿದೆ. ಹೀಗಾಗಿ ಮೊಬೈಲ್‌ ಬ್ಯಾಕಿಂಗ್‌ನಲ್ಲಿ ಗ್ರಾಹಕರಿಗೆ ಮತ್ತಷ್ಟು ಸುರಕ್ಷತೆ ನೀಡಲು ಕೆಲವು ಬ್ಯಾಂಕ್‌ಗಳು Nuance ಜೊತೆ ಚರ್ಚಿಸಿದ್ದಾರೆ ಎಂದು Nuance ಹಿರಿಯ ಉತ್ಪಾದನಾ ವ್ಯವಸ್ಥಾಪಕ ಅದ್ವೈತ್ ದೇಶಪಾಂಡೆ ಮುಂಬೈಯಲ್ಲಿ ತಿಳಿಸಿದ್ದಾರೆ.

ಇ ಬ್ಯಾಂಕಿಂಗ್‌ ಸೇವೆ ಸುರಕ್ಷತೆಗೆ ಒತ್ತು ನೀಡಿರುವ ಆರ್‌ಬಿಐ, ಗ್ರಾಹಕರ ಮೊಬೈಲ್‌ ಬ್ಯಾಂಕಿಂಗ್ ದೃಢೀಕರಿಸಲು ಇನ್ನಷ್ಟು ಸುರಕ್ಷಾ ಕ್ರಮಗಳನ್ನು ಕೈಗಳ್ಳಲು ಸಾಧ್ಯವೇ ಎಂದು ಬ್ಯಾಂಕ್‌ಗಳನ್ನು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಈ ಧ್ವನಿಯಾಧರಿತ ಬಯೋಮೆಟ್ರಿಕ್ಸ್‌ ಪಾಸ್‌ವರ್ಡ್‌ ಅಳವಡಿಸಲು ಚಿಂತನೆ ನಡೆಸಿವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot