ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ ಪ್ರೀ-ರಿಜಿಸ್ಟ್ರೇಷನ್ ಮಾಡುವುದು ಹೇಗೆ?

|

ಪಬ್‌ಜಿ ಗೇಮ್‌ ಈ ಗೇಮ್‌ ಸೃಷ್ಟಿಸಿದ್ದ ಕ್ರೇಜ್‌ ಅಷ್ಟಿಷ್ಟಲ್ಲ. ಭಾರತದ ಯುವ ಜನತೆಯ ನೆಚ್ಚಿನ ಗೇಮ್‌ ಆಗಿ ಪಬ್‌ಜಿ ಸಾಕಷ್ಟು ಸದ್ದು ಮಾಡಿತ್ತು. ದರೆ ಕಳೆ ವರ್ಷ ಭಾರತ ಸರ್ಕಾರ ಈ ಗೇಮ್‌ ಅನ್ನು ಬ್ಯಾನ್‌ ಮಾಡಿತ್ತು. ಸದ್ಯ ಇದೀಗ ಪಬ್‌ಜಿ ಗೇಮ್‌ ಸೃಷ್ಟಿಕರ್ತ ಕ್ರಾಫ್ಟನ್ ಸದ್ಯದಲ್ಲೇ ಭಾರತಕ್ಕಾಗಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೊಸ ಗೇಮ್‌ ಅನ್ನು ಪ್ರಾರಂಭಿಸುತ್ತಿದೆ. ಈ ಹೊಸ ಮೊಬೈಲ್ ಗೇಮ್ ಭಾರತದಲ್ಲಿ ನಿಷೇಧಿಸಲ್ಪಟ್ಟ ಪಬ್‌ಜಿ ಮೊಬೈಲ್‌ ಮಾದರಿಯನ್ನೇ ಹೊಂದಿದೆ. ಇನ್ನು ಕ್ರಾಫ್ಟನ್, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ಗೆ ಇಂದಿನಿದಲೇ (ಮೇ 18) ಪ್ರೀ ರಿಜಿಸ್ಟ್ರೇಷನ್ ಪ್ರಾರಂಭಿಸಿದೆ.

ಪಬ್‌ಜಿ

ಹೌದು, ಪಬ್‌ಜಿ ಗೇಮ್‌ ಕ್ರಿಯೆಟ್‌ ಮಾಡಿದ್ದ ಕ್ರಾಪ್ಟನ್‌ ಇಂದಿನಿಂದ ಭಾರತದಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾದ ಪ್ರೀ ರಿಜಿಸ್ಟ್ರೇಷನ್‌ ಪ್ರಾರಂಭಿಸಿದೆ. ಇದು ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಮಾತ್ರ ಅನ್ನೊದನ್ನ ಗಮನಿಸಬೇಕಾಗುತ್ತದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸಾಧನಗಳಿಗೆ ಬರಲಿದೆ. ಆದರೆ ಡೆವಲಪರ್ ಅದನ್ನು ಮೊದಲು ಆಂಡ್ರಾಯ್ಡ್‌ಗಾಗಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್‌ ಇಂಡಿಯಾ ಗೇಮ್‌ ಪ್ರೀ ರಿಜಿಸ್ಟ್ರೇಷನ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಬ್ಯಾಟಲ್‌ ಗ್ರೌಂಡ್ಸ್‌ ಮೊಬೈಲ್‌ ಇಂಡಿಯಾ ಗೇಮ್‌ ಇಂದಿನಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರೀ ರಿಜಿಸ್ಟ್ರೇಷನ್‌ಗೆ ಸಿದ್ಧವಾಗಿದೆ. ಬ್ಯಾಟಲ್‌ಗ್ರೌಂಡ್‌ ಮೊಬೈಲ್ ಇಂಡಿಯಾ ಗೇಮ್‌ ಪ್ಲೇಯರ್‌ಗಳಿಂದ ಪಡೆದ ಮಾಹಿತಿಯನ್ನು ಭಾರತ ಮತ್ತು ಸಿಂಗಾಪುರದ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುವುದು ಎಂದು ಕ್ರಾಫ್ಟನ್ ಈ ಬಾರಿ ಭರವಸೆ ನೀಡಿದ್ದಾರೆ. ಅಲ್ಲದೆ ಗೂಗಲ್‌ ಪ್ಲೇ ಸ್ಟೋರ್ ಮೂಲಕ ಗೇಮ್‌ ಅನ್ನು ಮೊದಲೇ ನೋಂದಾಯಿಸುವವರಿಗೆ ಡೆವಲಪರ್ ಕೆಲವು ರೋಚಕ ಬಹುಮಾನಗಳನ್ನು ನೀಡುವುದಾಗಿ ಸಹ ಘೋಷಿಸಲಾಗಿದೆ. ಇನ್ನು ನೀವು ನಿಮ್ಮ ಮೊಬೈಲ್‌ನಲ್ಲಿ ಹೊಸ ಬ್ಯಾಟಲ್‌ ಗ್ರೌಂಡ್ಸ್‌ ಮೊಬೈಲ್ ಇಂಡಿಯಾ ಗೇಮ್‌ ಅನ್ನು ಪ್ರೀ ರಿಜಿಸ್ಟ್ರೇಷನ್‌ ಮಾಡುವುದಕ್ಕೆ ಕೆಳಗಿನ ಹಂತಗಳನ್ನು ಅನುಸರಿಸಿ.

ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾ: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರೀ ರಿಜಿಸ್ಟ್ರೇಷನ್‌ ಮಾಡುವುದು ಹೇಗೆ?

ಬ್ಯಾಟಲ್‌ಗ್ರೌಂಡ್ಸ್‌ ಮೊಬೈಲ್ ಇಂಡಿಯಾ: ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಪ್ರೀ ರಿಜಿಸ್ಟ್ರೇಷನ್‌ ಮಾಡುವುದು ಹೇಗೆ?

ಹಂತ:1 ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು ಸರ್ಚ್‌ ಬಾರ್‌ನಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾವನ್ನು ನೋಡಿ.
ಹಂತ:2 ಒಮ್ಮೆ ನೀವು ಗೇಮ್‌ ಅನ್ನು ನೋಡಿದರೆ, ಅದರ ಕೆಳಗೆ ಪೂರ್ವ-ನೋಂದಣಿ ಆಯ್ಕೆ ಇರುತ್ತದೆ.
ಹಂತ:3 'ಪ್ರಿ-ರಿಜಿಸ್ಟರ್' ಗುಂಡಿಯನ್ನು ಟ್ಯಾಪ್ ಮಾಡಿ.
ಹಂತ:4 ಈ ಕೆಳಗಿನ 'ನೋಟಿಫೈ ಯು' ಟೈಲ್ ಎರಡು ಆಯ್ಕೆಗಳನ್ನು ತೋರಿಸುತ್ತದೆ 'Install when available' ಮತ್ತು 'OK' ಮೊದಲ ಆಯ್ಕೆಯನ್ನು ಒತ್ತುವ ಮೂಲಕ ಗೇಮ್‌ ಅನ್ನು ಸ್ವಯಂಚಾಲಿತವಾಗಿ ಇನ್‌ಸ್ಟಾಲ್‌ ಮಾಡಲಾಗುತ್ತದೆ. ಆದರೆ ಎರಡನೆಯದು ನಿಮಗೆ ಲಭ್ಯವಿರುವಾಗ ನೀವು ಕೈಯಾರೆ ಡೌನ್‌ಲೋಡ್ ಮಾಡುವ ಅಗತ್ಯವಿರುತ್ತದೆ.

ಗೂಗಲ್

ಇನ್ನು ಮೊದಲೇ ಹೇಳಿದಂತೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ತಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಆಟವನ್ನು ಮೊದಲೇ ನೋಂದಾಯಿಸುವವರಿಗೆ ಕ್ರಾಫ್ಟನ್ ಕೆಲವು ಬಹುಮಾನ ನೀಡುವ ಮಾತು ಹೇಳಿದೆ. ಇವುಗಳಲ್ಲಿ ರೆಕಾನ್ ಮಾಸ್ಕ್, ರೆಕಾನ್ ಔಟ್‌ಫಿಟ್, ಸೆಲೆಬ್ರೇಷನ್ ಎಕ್ಸ್‌ಪರ್ಟ್ ಟೈಟಲ್‌ ಮತ್ತು 300ಎಜಿ ಸೇರಿವೆ. ಇನ್ನು ಈ ಬಹುಮಾನವು ಪ್ರತಿ ಖಾತೆಗೆ ಒಂದು ಪೂರ್ವ-ನೋಂದಣಿಗೆ ಸೀಮಿತವಾಗಿರುತ್ತದೆ. ಥರ್ಡ್‌ ಪಾರ್ಟಿ ವೆಬ್‌ಸೈಟ್‌ಗಳ ಮೂಲಕ ಆಫರ್ ಮಾನ್ಯವಾಗಿಲ್ಲ ಎಂದು ಹೇಳಲಾಗಿದೆ.

ಮೊಬೈಲ್

ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ ಪಬ್‌ಜಿ ಮೊಬೈಲ್‌ನಂತೆಯೇ ಬ್ಯಾಟಲ್ ರಾಯಲ್ ಮೋಡ್ ಅನ್ನು ಹೊಂದಿರುತ್ತದೆ. ಆಟವು ಇದೇ ರೀತಿಯ ಯುದ್ಧ ರಾಯಲ್ ಪರಿಕಲ್ಪನೆಯೊಂದಿಗೆ ಆಟದ ಮೆಕ್ಯಾನಿಕ್ಸ್ ಮತ್ತು ಪಬ್‌ಜಿ ಮೊಬೈಲ್‌ಗೆ ತಂತ್ರಗಳನ್ನು ಹೊಂದಿರುತ್ತದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್ ಭಾರತಕ್ಕೆ ವಿಶೇಷ ಶೀರ್ಷಿಕೆಯಾಗಿದೆ ಎಂಬುದು ಬಹುಮಟ್ಟಿಗೆ ಸ್ಪಷ್ಟವಾಗಿದೆ. ಇದು ಪಬ್‌ಜಿ ಮೊಬೈಲ್‌ನಂತೆಯೇ ಉಚಿತವಾಗಿ ಆಡುವ ಆಟವಾಗಿರುತ್ತದೆ. ಗೌಪ್ಯತೆ ಕಾಳಜಿಗಳು ಪರಿಹರಿಸಲ್ಪಟ್ಟ ಕಾರಣ ಆಟವನ್ನು ಮರುಪ್ರಾರಂಭಿಸಲು ಅನುಮತಿಸಲಾಗಿದೆ. ಆಟದ ಬಗ್ಗೆ ಭಾರತ ಸರ್ಕಾರವು ಹೊಂದಿದ್ದ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯ ಬಗ್ಗೆ ಕ್ರಾಫ್ಟನ್ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Best Mobiles in India

English summary
Battlegrounds Mobile India, the PUBG Mobile replacement is finally up for pre-registration on Google Play Store.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X