ವಿಂಡೋಸ್ ಪೋನ್ ಡಿವೈಸ್‌ಗಳಿಗೂ ಬರಲಿದೆ ಬಿಬಿಎಂ ಅಪ್ಲಿಕೇಶನ್

Written By:

ಬ್ಲಾಕ್‌ಬೆರ್ರಿ ಅಲೈವ್ ಮಾರುಕಟ್ಟೆಯಲ್ಲಿ ತನ್ನ ತ್ವರಿತ ಇನ್‌ಸ್ಟಾಂಟ್ ಮೆಸೇಜಿಂಗ್ ಅಪ್ಲಿಕೇಶನ್‌ನಿಂದ ಭಾರೀ ಸಂಕಷ್ಟಕ್ಕೊಳಗಾಯಿತು. ಬ್ಲಾಕ್‌ಬೆರ್ರಿಯ Z10 ಮತ್ತು Q10 ಕಳೆದ ವರ್ಷವಷ್ಟೇ ಲಾಂಚ್ ಆಯಿದ್ದು ಹಾಗೂ ಭಾರೀ ಸೋಲನ್ನೇ ಅನುಭವಿಸಿತು. ಇದೇ ಸಮಯದಲ್ಲಿ ಬ್ಲಾಕ್‌ಬೆರ್ರಿ ತನ್ನ ಬಿಬಿಎಂ ಅಪ್ಲಿಕೇಶನ್ ಅನ್ನು ಇತರ ಪ್ಲಾಟ್‌ಫಾರ್ಮ್‌ಗಳಿಗೂ ರಚಿಸಲು ಪ್ರಾರಂಭಿಸಿತ್ತು.

ಆದರೆ ಈ ಸೌಲಭ್ಯ ವಿಂಡೋಸ್ ಫೋನ್‌ಗಳಿಗೆ ಮಾತ್ರ ಲಭ್ಯವಾಗಿರಲಿಲ್ಲ. ಆದರೆ ಇದೀಗ ಈ ಕೆನಾಡಿಯನ್ ಸಂಸ್ಥೆ ಬ್ಲಾಕ್‌ಬೆರ್ರಿ ವಿಂಡೋಸ್ ಫೋನ್‌ಗೂ ತನ್ನ ಬಿಬಿಎಂ ಅಪ್ಲಿಕೇಶನ್ ಅನ್ನು ಸ್ಥಾಪಿಸುವ ನಿಟ್ಟಿನಲ್ಲಿದೆ. ಕಳೆದ ವರ್ಷವಷ್ಟೇ ಬ್ಲಾಕ್‌ಬೆರ್ರಿ ಮೆಸೆಂಜರ್ ಅನ್ನು ಗೂಗಲ್ ಆಂಡ್ರಾಯ್ಡ್ ಹಾಗೂ ಆಪಲ್ ಐಒಎಸ್‌ಗಳಲ್ಲಿ ಲಭ್ಯವಾಗುವಂತೆ ಮಾಡಿತ್ತು.

ವಿಂಡೋಸ್ ಪೋನ್ ಡಿವೈಸ್‌ಗಳಿಗೂ ಬರಲಿದೆ ಬಿಬಿಎಂ ಅಪ್ಲಿಕೇಶನ್

ವಾಟ್ಸಾಪ್, ಮೆಸೆಂಜರ್, ಲೈನ್‌ಗಳೊಡನೆ ಸ್ಪರ್ಧಿಸುತ್ತಿರುವ ಈ ಚಾಟ್ ಆಪ್ 85 ಮಿಲಿಯನ್ ಬಳಕೆದಾರರನ್ನು ಒಂದು ತಿಂಗಳಿನಲ್ಲಿ ಪಡೆಯುತ್ತಿದ್ದು ವಿಶ್ವದಾದ್ಯಂತ 113 ಮಿಲಿಯನ್ ಜನರು ಇದನ್ನು ನೋಂದಾಯಿಸಿಕೊಂಡಿದ್ದಾರೆ. ಇದು ಬಳಸಲು ಸುಲಭವಾಗಿರುವ ಅಪ್ಲಿಕೇಶನ್ ಆಗಿದ್ದು ಫ್ಲೆಕ್ಸಿಬಲ್ ಆಗಿದೆ ಎಂಬುದು ಬಳಕೆದಾರರ ಮಾತಾಗಿದೆ.

ವಿಂಡೋಸ್ ಫೋನ್‌ಗಳಿಗೆ ಹಾಗೂ ನೋಕಿಯಾ ಎಕ್ಸ್‌ ಪ್ಲಾಟ್‌ಫಾರ್ಮ್‌ಗಳಿಗೆ ಬಿಬಿಎಂ ಮುಂದಿನ ತಿಂಗಳುಗಳಲ್ಲಿ ಬರಲಿದೆ ಎಂದು ಫೆಬ್ರವರಿ 2014 ರಲ್ಲಿ ಬ್ಲಾಕ್‌ಬೆರ್ರಿಯ ವಾಟರ್ಲೂ ಹೆಡ್‌ಕ್ವಾಟರ್ ಫರ್ಮ್ ಘೋಷಿಸಿತ್ತು. ತಮ್ಮ ಬಿಇಎಸ್ 10 ಹಾಗೂ ಬಿಬಿಎಂ ಪ್ಲಾಟ್‌ಫಾರ್ಮ್ ಅನ್ನು ಐಒಎಸ್ ಹಾಗೂ ಆಂಡ್ರಾಯ್ಡ್ ಒಳಗೊಂಡಂತೆ ಈ ವರ್ಷದಲ್ಲಿ ನಾವು ವಿಸ್ತರಿಸಿದ್ದು ಇದನ್ನು ವಿಂಡೋಸ್ ಫೋನ್‌ಗಳಿಗೂ ಮುಂದುವರಿಸಲದ್ದೇವೆ ಎಂದು ಬ್ಲಾಕ್‌ಬೆರ್ರಿ ಅಧ್ಯಕ್ಷ ಜಾನ್ ಸಿಮ್ಸ್ ಹೇಳಿರುವಂತೆ ತಿಳಿಸಿದ್ದಾರೆ.

ನಮ್ಮ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಬೆಳವಣಿಗೆಯನ್ನು ನಾವು ಮಾಡುತ್ತಿದ್ದು ಇದರಿಂದ ನಮ್ಮ ಈ ಪ್ರಯತ್ನಕ್ಕೆ ಯಶಸ್ಸು ಖಂಡಿತ ದೊರೆಯಲಿದೆ ಎಂದವರು ತಿಳಿಸಿದ್ದಾರೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot