ಮೈಕ್ರೋಸಾಫ್ಟ್ ವತಿಯಿಂದ ಬೆಂಗಳೂರಿನ 15 ಸಾವಿರ ವಿಧ್ಯಾರ್ಥಿಗಳಿಗೆ ಉಚಿತ ಟ್ಯಾಬ್!!

|

ಖಾಸಾಗಿ ಶಾಲೆ, ಕಾಲೇಜುಗಳಲ್ಲಿ ನೀಡುವ ಗುಣಮಟ್ಟದ ಶಿಕ್ಷಣವನ್ನು ಈಗ ಪಾಲಿಕೆ ಶಾಲೆ ವಿದ್ಯಾರ್ಥಿಗಳಿಗೂ ದೊರೆಯುವಂತೆ ಮಾಡುವ ಸಲುವಾಗಿ ಮೈಕ್ರೋಸಾಫ್ಟ್ ನೂತನ ಯೋಜನೆ ಕೈಗೆತ್ತಿಕೊಂಡಿದೆ. ಮೈಕ್ರೋಸಾಫ್ಟ್ ಹಾಗೂ ಟೆಕ್‌ ಅವಂತ್ ಗಾರ್ಡ್‌ ಸಂಸ್ಥೆಗಳು ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡು ಜಾರಿಗೊಳಿಸುತ್ತಿರುವ "ರೋಷಿಣಿ' ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್‌ ದೊರೆಯಲಿದೆ.

"ಎಲ್ಲಾದರೂ ಎಲ್ಲಿಂದಾದರೂ ಕಲಿ' ಎಂಬ ಘೋಷವಾಕ್ಯದಡಿ ಕಲಿಕಾ ವಿಧಾನವನ್ನು ಹೈಟೆಕ್‌ಗೊಳಿಸಲು ಯೋಜನೆ ರೂಪಿಸಲಾಗಿದ್ದು ಅದರಂತೆ ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿರುವ 1ರಿಂದ 12ನೇ ತರಗತಿವರೆಗಿನ 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್‌ ಸಿಗಲಿದೆ. ಈ ಮೂಲಕ ಮಕ್ಕಳ ಬೌದ್ಧಿಕ ಹಾಗೂ ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲು ಮೈಕ್ರೋಸಾಫ್ಟ್ ಮುಂದಾಗಿದೆ.

ಮೈಕ್ರೋಸಾಫ್ಟ್ ವತಿಯಿಂದ ಬೆಂಗಳೂರಿನ 15 ಸಾವಿರ ವಿಧ್ಯಾರ್ಥಿಗಳಿಗೆ ಉಚಿತ ಟ್ಯಾಬ್!!

ಮೈಕ್ರೋಸಾಫ್ಟ್ ಸಂಸ್ಥೆಯು 'ರೋಷಣಿ' ಯೋಜನೆಯಡಿ ಬೆಂಗಳೂರು ನಗರದ ಎಲ್ಲ ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ದತ್ತು ಪಡೆಯುತ್ತಿ ಈಗಾಗಲೇ ದೇಶದ 11 ರಾಜ್ಯಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲ ಬಾರಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯಿಂದ ಹದಿನೈದು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗಲಿದೆ. ಹಾಗಾದರೆ, ಮೈಕ್ರೋಸಾಫ್ಟ್ ತೆಗೆದುಕೊಂಡಿರುವ ರೋಷಿಣಿ ಯೋಜನೆ ಹೇಗಿರಲಿದೆ ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

156 ಶಾಲೆ, ಕಾಲೇಜುಗಳ ದತ್ತು!

156 ಶಾಲೆ, ಕಾಲೇಜುಗಳ ದತ್ತು!

ಬೆಂಗಳೂರು ಪಾಲಿಕೆ ಅಡಿಯಲ್ಲಿ ಬರುವ 156 ಶಾಲೆ ಮತ್ತು ಕಾಲೇಜುಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿ ಜತೆಗೆ, ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಸಿದ್ಧಪಡಿಸುವ ಉದ್ದೇಶವನ್ನು ಮೈಕ್ರೋಸಾಫ್ಟ್ ಹೊಂದಿದೆ. ಮೈಕ್ರೋಸಾಫ್ಟ್ ಅಂಗಸಂಸ್ಥೆ ಈ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

 ರೋಷಣಿ ಕಾರ್ಯಕ್ರಮದ ಉದ್ದೇಶವೇನು?

ರೋಷಣಿ ಕಾರ್ಯಕ್ರಮದ ಉದ್ದೇಶವೇನು?

ಖಾಸಗಿ ಶಾಲೆ, ಕಾಲೇಜುಗಳಲ್ಲಿ ನೀಡುವ ಗುಣಮಟ್ಟದ ಶಿಕ್ಷಣ, ಪಾಲಿಕೆ ಶಾಲೆ ವಿದ್ಯಾರ್ಥಿಗಳಿಗೂ ದೊರೆಯುವಂತೆ ಮಾಡುವುದು ಹಾಗೂ ಮಕ್ಕಳು ಶಿಕ್ಷಣದ ಜತೆ ಜತೆಗೆ ಕ್ರೀಡೆ, ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಕಂಪ್ಯೂಟರ್‌ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ರೋಷಣಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ವಿಶೇಷ ಮೊಬೈಲ್‌ ಆಪ್‌

ವಿಶೇಷ ಮೊಬೈಲ್‌ ಆಪ್‌

ನಗರದ ಶಾಲೆ, ಕಾಲೇಜುಗಳ, ಶಿಕ್ಷಕರ ಮೇಲ್ವಿಚಾರಣೆಗಾಗಿ ಮೈಕ್ರೋಸಾಫ್ಟ್ ವಿಶೇಷ ಸಾಫ್ಟ್ವೇರ್ ಒಂದನ್ನು ಪರಿಚಯಿಸಲಿದೆ. ಈ ಆಪ್‌ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಮಕ್ಕಳ ಪ್ರಗತಿ ವರದಿ ದೊರೆಯುವುದಲ್ಲದೇ, ಯಾವ ಶಾಲೆಯಲ್ಲಿ ಯಾವ ಶಿಕ್ಷಕರು ಪಾಠ ಮಾಡುತ್ತಿದ್ದಾರೆ ಎಂಬುದನ್ನು ಹಿರಿಯ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ತಿಳಿದುಕೊಳ್ಳಬಹುದಾಗಿದೆ.

ಗುಣಮಟ್ಟಕ್ಕಾಗಿ ರ್ಯಾಕಿಂಗ್!

ಗುಣಮಟ್ಟಕ್ಕಾಗಿ ರ್ಯಾಕಿಂಗ್!

ಬಿಬಿಎಂಪಿ ಶಾಲೆ, ಕಾಲೇಜುಗಳನ್ನು ದತ್ತು ಪಡೆಯುವ ಮೈಕ್ರೋಸಾಫ್ಟ್ ಅಂಗ ಸಂಸ್ಥೆ ಟ್ಯಾಗ್‌, ರೋಷಣಿ ಕಾರ್ಯಕ್ರಮ ಜಾರಿಗೊಳಿಸುತ್ತಿದೆ. ದತ್ತು ಪಡೆದಿರುವ ಎಲ್ಲಾ ಶಾಲೆಗಳ ಸಮೀಕ್ಷೆ ನಡೆಸಿ, ಪ್ರತಿ ಶಾಲೆಗೂ ರ್ಯಾಂಕಿಂಗ್ ನೀಡಲಾಗುತ್ತದೆ. ಇದರಿಂದ ಶಾಲೆಗಳ ನಡುವೆ ಸ್ಪರ್ಧೆ ಏರ್ಪಟ್ಟು ಶಿಕ್ಷಣದ ಗುಣಮಟ್ಟ ಸುಧಾರಿಸಲಿದೆ ಎಂದು ಹೇಳಿದೆ.

ಮೈಕ್ರೋಸಾಫ್ಟ್ ಒದಗಿಸುವ ಸೌಲಭ್ಯಗಳು

ಮೈಕ್ರೋಸಾಫ್ಟ್ ಒದಗಿಸುವ ಸೌಲಭ್ಯಗಳು

ರೋಷಣಿ ಕಾರ್ಯಕ್ರಮ ಯೋಜಯೆಯಡಿಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯು ಡಿಜಿಟಲ್‌ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್‌ ಲ್ಯಾಬ್, ಸೃಜನಶೀಲತೆ ಕೇಂದ್ರ, ಹೊಸ ಕೊಠಡಿ, ಶೌಚಾಲಯಗಳು, ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಸಮುದಾಯ ಸಂಪರ್ಕ ಕೇಂದ್ರಗಳಂತಹ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ರೋಷಣಿ ಯೋಜನೆ ಅನುಕೂಲವೇನು?

ರೋಷಣಿ ಯೋಜನೆ ಅನುಕೂಲವೇನು?

ವಿದ್ಯಾರ್ಥಿಗಳಿಗೆ ಡಿಜಿಟಲ್‌ ವಿಷಯಗಳ ಅರಿವು, ಸ್ಯಾಟಲೈಟ್ ಹಾಗೂ ಆನ್‌ಲೈನ್ ಶಿಕ್ಷಣ, ಶಿಕ್ಷಕರು, ವಿದ್ಯಾರ್ಥಿಗಳ ಮೌಲ್ಯಮಾಪನ ಹಾಗೂ ಶಿಕ್ಷಕರಲ್ಲಿ 21ನೇ ಶತಮಾನ ಶಿಕ್ಷಣ ಶೈಲಿಯನ್ನು ರೂಪಿಸಬಹುದಾದ ಅನುಕೂಲಗಳ ಜತೆಗೆ ಕ್ರೀಡೆ, ವ್ಯಕ್ತಿತ್ವ ವಿಕಸನ, ಕಂಪ್ಯೂಟರ್‌ ಕೌಶಲ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಮಕ್ಕಳನ್ನು ತೊಡಗಿಸುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

Best Mobiles in India

English summary
CEO of Tech Avant-Garde, Ali Sait said the firms will spend between Rs 500 and Rs 600 crore over a two-and-a-half year period for the project. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X