Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ಕೊಡ್ತು ಹೊಸ ಮಾದರಿಯ ಸ್ಮಾರ್ಟ್‌ವಾಚ್‌! ಡಿಸೈನ್‌ ನೋಡಿದ್ರೆ ಸ್ಟನ್‌ ಆಗ್ತೀರಾ!

ಭಾರತದಲ್ಲಿ ಸ್ಮಾರ್ಟ್‌ಫೋನ್‌ ವಲಯಕ್ಕೆ ಸರಿಸಾಟಿಯಾಗಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆ ಕೂಡ ಪೈಪೋಟಿ ನೀಡುತ್ತಿದೆ. ಇದಕ್ಕೆ ತಕ್ಕಂತೆ ಹಲವು ಜನಪ್ರಿಯ ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದೀಗ ಚೀನಾ ಮೂಲದ ಎಲೆಕ್ಟ್ರಾನಿಕ್ಸ್‌ ಕಂಪೆನಿ ಬೀಟ್‌ಎಕ್ಸ್‌ಪಿ ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್‌ ಸರಣಿಯನ್ನು ಪರಿಚಯಿಸಿದೆ.

ಹೌದು, ಬೀಟ್‌ಎಕ್ಸ್‌ಪಿ ಕಂಪೆನಿ ಹೊಸದಾಗಿ ಬೀಟ್‌ಎಕ್ಸ್‌ಪಿ ಅನ್‌ಬೌಂಡ್ ಪ್ರೊ, ನ್ಯೂಕ್ ಮತ್ತು ಅನ್‌ಬೌಂಡ್ ಎರಾ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳು ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಒಳಗೊಂಡಿವೆ. ಇದರೊಂದಿಗೆ ವೈವಿಧ್ಯಮಯ ಫೀಚರ್ಸ್‌ಗಳ ಮೂಲಕ ಗಮನಸೆಳೆದಿವೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ಗಳ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ಕೊಡ್ತು ಹೊಸ ಸ್ಮಾರ್ಟ್‌ವಾಚ್‌! ಡಿಸೈನ್‌ಗೆ ಸ್ಟನ್‌ ಆಗ್ತೀರಾ!

ಬೀಟ್‌ಎಕ್ಸ್‌ಪಿ ಅನ್‌ಬೌಂಡ್ ಪ್ರೊ ಫೀಚರ್ಸ್‌ ಹೇಗಿದೆ?
ಬೀಟ್‌ಎಕ್ಸ್‌ಪಿ ಅನ್‌ಬೌಂಡ್ ಪ್ರೊ ಸ್ಮಾರ್ಟ್‌ವಾಚ್‌ 1.96 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 800 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದರಿಂದ ಸ್ಮಾರ್ಟ್‌ಫೋನ್‌ ಕರೆಗಳನ್ನು ವಾಚ್‌ ಮೂಲಕವೇ ನಿಯಂತ್ರಿಸಬಹುದಾಗಿದೆ. ಇದಲ್ಲದೆ ವಾಚ್‌ ಬಳಕೆದಾರ ಸ್ನೇಹಿ ನ್ಯಾವಿಗೇಷನ್‌ಗಾಗಿ ರೋಟರಿ ಕ್ರೌನ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 200ಕ್ಕೂ ಹೆಚ್ಚು ವಾಚ್ ಫೇಸ್ ಆಯ್ಕೆಗಳನ್ನು ನೀಡಲಿದೆ.

ಎಂದಿನಂತೆ ಈ ಸ್ಮಾರ್ಟ್‌ವಾಚ್‌ನಲ್ಲಿಯೂ ಸಹ ಬಳಕೆದಾರರಿಗೆ ಅನುಕೂಲಕರವಾಗುವ ಹೆಲ್ತ್‌ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದರಲ್ಲಿ ಹೃದಯ ಬಡಿತ, ನಿದ್ರೆಯ ಮಾದರಿಗಳು, ಹೆಜ್ಜೆ ಎಣಿಕೆ ಮತ್ತು SpO2 ಮಟ್ಟಗಳ ನಿರಂತರ ಟ್ರ್ಯಾಕಿಂಗ್ ಸೇರಿದಂತೆ ಸಮಗ್ರ ಆರೋಗ್ಯ ಮೇಲ್ವಿಚಾರಣೆಯನ್ನು ಒದಗಿಸುತ್ತದೆ. ಈ ಸ್ಮಾರ್ಟ್‌ವಾಚ್‌ IP67 ಜಲನಿರೋಧಕ ರೇಟಿಂಗ್‌ನೊಂದಿಗೆ, ವಿವಿಧ ಚಟುವಟಿಕೆಗಳಿಗೆ ಸೂಕ್ತವಾಗಿದೆ.ಇದಲ್ಲದೆ ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜಿಂಗ್‌ನಲ್ಲಿ 7 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ.

ಭಾರತಕ್ಕೆ ಎಂಟ್ರಿ ಕೊಡ್ತು ಹೊಸ ಸ್ಮಾರ್ಟ್‌ವಾಚ್‌! ಡಿಸೈನ್‌ಗೆ ಸ್ಟನ್‌ ಆಗ್ತೀರಾ!

ಬೀಟ್‌ಎಕ್ಸ್‌ಪಿ ನ್ಯೂಕ್‌ ಫೀಚರ್ಸ್‌ ಹೇಗಿದೆ?
ಬೀಟ್‌ಎಕ್ಸ್‌ಪಿ ನ್ಯೂಕ್‌ ಸ್ಮಾರ್ಟ್‌ವಾಚ್‌ 1.32 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 500 ನಿಟ್ಸ್‌ ಬ್ರೈಟ್‌ನೆಸ್‌ ನೀಡಲಿದ್ದು, 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದು ಸುಲಭ ಕಾರ್ಯಾಚರಣೆಗಾಗಿ ರೋಟರಿ ಕ್ರೌನ್ ಅನ್ನು ಒಳಗೊಂಡಿದೆ. ಜೊತೆಗೆ ಸ್ಮಾರ್ಟ್‌ವಾಚ್‌ 200+ ವಾಚ್ ಫೇಸ್‌ ಆಯ್ಕೆಗಳನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕಾಲಿಂಗ್‌ ಫೀಚರ್ಸ್‌ ಹೊಂದಿದೆ. ಇದರಲ್ಲಿ 24/7 ಹೃದಯ ಬಡಿತ, ನಿದ್ರೆ, ಹಂತಗಳು ಮತ್ತು SpO2 ಮಾನಿಟರಿಂಗ್ ಫೀಚರ್ಸ್‌ಗಳನ್ನು ನೀಡಲಾಗಿದೆ.

ಬೀಟ್‌ಎಕ್ಸ್‌ಪಿ ಅನ್‌ಬೌಂಡ್ ಎರಾ ಫೀಚರ್ಸ್‌ ಹೇಗಿದೆ?
ಬೀಟ್‌ಎಕ್ಸ್‌ಪಿ ಅನ್‌ಬೌಂಡ್ ಎರಾ ಸ್ಮಾರ್ಟ್‌ವಾಚ್‌ 2.01 ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1000 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇದು 200+ ವಾಚ್ ಫೇಸ್‌ಗಳ ವ್ಯಾಪಕ ಸಂಗ್ರಹಕ್ಕೆ ಪ್ರವೇಶವನ್ನು ಒದಗಿಸುತ್ತದೆ. ಇದರೊಂದಿಗೆ ಬ್ಲೂಟೂತ್ ಕಾಲಿಂಗ್‌, ಸುಧಾರಿತ ಆರೋಗ್ಯ ಮೇಲ್ವಿಚಾರಣೆಯನ್ನು ಸಹ ಬೆಂಬಲಿಸಲಿದೆ. ಈ ಸ್ಮಾರ್ಟ್‌ವಾಚ್‌ 7 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೀಟ್‌ಎಕ್ಸ್‌ಪಿ ಅನ್‌ಬೌಂಡ್ ಪ್ರೊ ಸ್ಮಾರ್ಟ್‌ವಾಚ್‌ ಭಾರತದಲ್ಲಿ 2,499ರೂ ಬೆಲೆಯನ್ನು ಹೊಂದಿದೆ. ಇದರ ಬೀಟ್‌ಎಕ್ಸ್‌ಪಿ ನ್ಯೂಕ್ ಅನ್ನು 1,499ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಬೀಟ್‌ಎಕ್ಸ್‌ಪಿ ಅನ್‌ಬೌಂಡ್ ಎರಾ ಸ್ಮಾರ್ಟ್‌ವಾಚ್‌ 2,499ರೂ ಬೆಲೆಗೆ ಲಭ್ಯವಾಗಲಿದೆ. ಇದನ್ನು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು beatxp.com ನಲ್ಲಿ ನವೆಂಬರ್ 10 ರಿಂದ ಖರೀದಿಸಬಹುದಾಗಿದೆ.

Best Mobiles in India

English summary
beatXP Nuke, Unbound Pro and Unbound Era smartwatches launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+