Home
ಸುದ್ದಿಜಾಲ

ಬ್ಲೂಟೂತ್ ಕಾಲಿಂಗ್‌ ಸೌಲಭ್ಯದ ಈ ವಾಚ್‌ ಬೆಲೆಯಲ್ಲಿ 82% ಡಿಸ್ಕೌಂಟ್‌!

ಮಾರುಕಟ್ಟೆಯಲ್ಲಿ ಬೀಟ್‌ಎಕ್ಸ್‌ಪಿ (beatXP) ಸಂಸ್ಥೆಯು ಸಹ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು ಈಗಾಗಲೇ ಹಲವು ಭಿನ್ನ ಮಾದರಿಯ ಸ್ಮಾರ್ಟ್‌ ವಾಚ್‌ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅವುಗಳಲ್ಲಿ ಇತ್ತೀಚಿಗೆ ಬಿಡುಗಡೆ ಮಾಡಿರುವ ನೂತನ ಬೀಟ್‌ಎಕ್ಸ್‌ಪಿ ವೆಗಾ ನಿಯೋ ವಾಚ್‌ ಈಗ ಭಾರೀ ಡಿಸ್ಕೌಂಟ್‌ ನಲ್ಲಿ ಖರೀದಿಗೆ ಸಿಗುತ್ತದೆ.

ಹೌದು, ಅಧಿಕೃತ ಬೀಟ್‌ಎಕ್ಸ್‌ಪಿ ವೆಬ್‌ಸೈಟ್‌ ತಾಣದಲ್ಲಿ ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ವಾಚ್‌ 82% ರಷ್ಟು ಭರ್ಜರಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಸ್ಮಾರ್ಟ್‌ ವಾಚ್‌ ಬೆಲೆ 10,999 ರೂ. ಆಗಿದ್ದು, ಇದೀಗ 1,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಹಾಗೆಯೇ ಫ್ಲಿಪ್‌ಕಾರ್ಟ್‌ ತಾಣದಲ್ಲಿಯೂ ಈ ಸ್ಮಾರ್ಟ್‌ ವಾಚ್ ಖರೀದಿಗೆ ಲಭ್ಯ.

ಬ್ಲೂಟೂತ್ ಕಾಲಿಂಗ್‌ ಸೌಲಭ್ಯದ ಈ ವಾಚ್‌ ಬೆಲೆಯಲ್ಲಿ 82% ಡಿಸ್ಕೌಂಟ್‌!

ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ ವಾಚ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, IP68 ರೇಟಿಂಗ್‌ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಇದರ ಬ್ಯಾಟರಿ ಸಹ ಅತ್ಯುತ್ತಮವಾಗಿದ್ದು, 7 ದಿನಗಳ ವರೆಗೂ ಬ್ಯಾಟರಿ ಬ್ಯಾಕಪ್‌ ಒದಗಿಸಬಲ್ಲ ಸಾಮರ್ಥ್ಯ ಸಹ ಹೊಂದಿರುವುದು ವಿಶೇಷ. ಹಾಗಾದರೆ ಬೀಟ್‌ಎಕ್ಸ್‌ಪಿ ವೆಗಾ ನಿಯೋ ವಾಚ್‌ನ ಇತರೆ ಫೀಚರ್ಸ್‌ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ವಾಚ್‌ ಪ್ರಮುಖ ಫೀಚರ್ಸ್‌ ಮಾಹಿತಿ : ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ವಾಚ್‌ 1.43 ಇಂಚಿನ ವೃತ್ತಾಕಾರದ ಫುಲ್‌ ಟಚ್ ಅಮೋಲೆಡ್‌ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಇದರ ಡಿಸ್‌ಪ್ಲೇಯು 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದ್ದು, ಹಾಗೆಯೇ ಇದು 466 X 466 ಸ್ಕ್ರೀನ್ ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರ ಜೊತೆಗೆ 60 HZ ರಿಫ್ರೆಶ್ ರೇಟ್‌ ಸೌಲಭ್ಯವನ್ನು ಸಹ ಒಳಗೊಂಡಿದೆ.

ಬೀಟ್‌ಎಕ್ಸ್‌ಪಿ ವೆಗಾ ನಿಯೋ ವಾಚ್‌ ಬ್ಯಾಟರಿ ಹಾಗೂ ಇತರೆ ಸೌಲಭ್ಯಗಳ ಮಾಹಿತಿ : ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ ವಾಚ್‌ ಕೆಲವು ಆಕರ್ಷಕ ಫೀಚರ್ಸ್‌ ಅನ್ನು ಹೊಂದಿದ್ದು, ಬ್ಲೂಟೂತ್ ಆವೃತ್ತಿ v5.3, ಕರೆ ಸೌಲಭ್ಯ, ತ್ವರಿತ ನೋಟಿಫೀಕೇಶನ್, 24×7 ಹೆಲ್ತ್ ಮಾನಿಟರಿಂಗ್, 100+ ಸ್ಪೋರ್ಟ್‌ ಮೋಡ್‌, ಎಐ ವಾಯ್ಸ್‌ ಅಸಿಸ್ಟೆಂಟ್ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್‌ ಪಡೆದುಕೊಂಡಿದೆ.

ಅದೇ ರೀತಿ ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ ವಾಚ್‌ ಡಿಸೈನ್‌ ಸಹ ಆಕರ್ಷಕ ಲುಕ್‌ನಲ್ಲಿದೆ. ಇದರ ಜೊತೆಗೆ ಈ ವಾಚ್‌ IP68 ರೇಟಿಂಗ್‌ ಹೊಂದಿದ್ದು, ಗ್ರಾಹಕರಿಗೆ ಆಕರ್ಷಕ ಎನಿಸಲಿದೆ. ಅಲ್ಲದೇ ಈ ವಾಚ್‌ 300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಆಯ್ಕೆ ಪಡೆದಿದ್ದು, ಸುಮಾರು 7 ದಿನಗಳ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಹೇಳಲಾಗಿದೆ.

ಬೀಟ್‌ಎಕ್ಸ್‌ಪಿ ವೆಗಾ ನಿಯೋ ವಾಚ್‌ ಬೆಲೆ ಹಾಗೂ ಲಭ್ಯತೆ ಮಾಹಿತಿ : ಬೀಟ್‌ಎಕ್ಸ್‌ಪಿ ವೆಗಾ ನಿಯೋ ಸ್ಮಾರ್ಟ್‌ವಾಚ್‌ ಬೆಲೆ 10,999 ರೂ. ಆಗಿದ್ದು, ಇದೀಗ 1,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ ವಾಚ್‌ ಬ್ಲೂಟೂತ್ ಕಾಲಿಂಗ್‌ ಸೌಲಭ್ಯ ಸಹ ಪಡೆದಿರುವುದು ಆಕರ್ಷಕ ಆಗಿದೆ.

ಅಂದಹಾಗೆ ಬೀಟ್‌ಎಕ್ಸ್‌ಪಿ ವೆಗಾ ನಿಯೋ ವಾಚ್‌ ಎರಡು ಕಲರ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ ಬ್ಲ್ಯಾಕ್‌ ಹಾಗೂ ಸಿಲ್ವರ್‌ ಆಗಿವೆ. ಗ್ರಾಹಕರು ಈ ಸ್ಮಾರ್ಟ್‌ ವಾಚ್‌ ಅನ್ನು ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಹಾಗೂ ಅಧಿಕೃತ ಬೀಟ್‌ಎಕ್ಸ್‌ಪಿ ವೆಬ್‌ಸೈಟ್‌ನಲ್ಲಿ ಖರೀದಿ ಮಾಡಬಹುದು.

Best Mobiles in India

English summary
beatXP Vega smartwatch price down on online. price, features and more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+