2010ಕ್ಕೂ ಮುನ್ನ ತಯಾರಿಸಿದ ಮೊಬೈಲ್‌ಗಳಿಗೆ ಎದುರಾಯ್ತು ವಿಚಿತ್ರ ಸಮಸ್ಯೆ!!

|

ಇದೇ ಏಪ್ರಿಲ್ 6ನೇ ತಾರೀಖು ಅಥವಾ ಆನಂತರದಂದು 2010ಕ್ಕೂ ಹಿಂದೆ ತಯಾರಾದ ಮೊಬೈಲ್‌ಗಳಲ್ಲಿ ಮಾತ್ರ ವಿಚಿತ್ರ ತೊಂದರೆಯೊಂದು ಕಾಣಿಸಿಕೊಳ್ಳುತ್ತಿದೆ. 2010ಕ್ಕೂ ಮುನ್ನ ತಯಾರಿಸಿದ ಮೊಬೈಲ್‌ಗಳಲ್ಲಿ ಸ್ಥಳೀಯ ಭೌಗೋಳಿಕ ಮಾಹಿತಿಯನ್ನು ಕ್ಷಣಾರ್ಧದಲ್ಲಿ ನೀಡುವ ಜಿಪಿಎಸ್ ತಂತ್ರಜ್ಞಾನದ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಹೌದು, 2010ಕ್ಕೂ ಮುನ್ನ ತಯಾರಿಸಿದ ಮೊಬೈಲ್‌ಗಳಲ್ಲಿ ಏಪ್ರಿಲ್ ತಿಂಗಳಿನಿಂದ ಜಿಪಿಎಸ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹೇಳಲಾಗಿದ್ದು, ಬದಲಾದ ಈ ಸಮಯದಲ್ಲಿ ಹಳೆಯ ಮೊಬೈಲ್‌ಗಳಲ್ಲಿ ರೀ-ಸೆಟ್‌ ಆಗಲಿರುವ ಕ್ಲಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಾಫ್ಟ್ ವೇರ್‌ ಅಪ್‌ಡೇಟ್‌ಗಳು ಇಲ್ಲದ ಕಾರಣ ಇಂತಹ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.

2010ಕ್ಕೂ ಮುನ್ನ ತಯಾರಿಸಿದ ಮೊಬೈಲ್‌ಗಳಿಗೆ ಎದುರಾಯ್ತು ವಿಚಿತ್ರ ಸಮಸ್ಯೆ!!

ಜಿಪಿಎಸ್ ವ್ಯವಸ್ಥೆಯು, ಬೈನರಿ ಸಂಖ್ಯೆ ಆಧಾರಿತ ಕ್ಲಾಕಿಂಗ್ ವ್ಯವಸ್ಥೆಯಾಗಿದ್ದು, 1999ರ ಆ. 21ರಂದು ಇದನ್ನು ಶುರು ಮಾಡಲಾಗಿದೆ. ಇದರ ಗಣನೆಯ ಅವಧಿಯು ಅಂದಿನ ಕಾಲಕ್ಕೆ 1,024 ವಾರಗಳಿಗೆ ನಿಗದಿಯಾಗಿದ್ದರಿಂದ ಇದೇ ಏಪ್ರಿಲ್.6ರಂದು ಈ ಕ್ಲಾಕ್‌ ತಾನೇ ತಾನಾಗಿ ರೀಸೆಟ್ ಆಗಲಿದೆ. ಆದರೆ, 2010ಕ್ಕೂ ಮೊದಲು ತಯಾರಾದ ಮೊಬೈಲ್‌ಗಳು ರೀಸೆಟ್ ಆಗುವುದಿಲ್ಲ.

ರೀಸೆಟ್‌ ಆಗಲಿರುವ ಕ್ಲಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಸಾಫ್ಟ್‌ವೇರ್‌ ಅಪ್‌ಡೇಟ್‌ ಹೊಸ ಮೊಬೈಲುಗಳಲ್ಲಿ ಇವೆ. ಆದರೆ, ಹಳೆಯ ಮೊಬೈಲುಗಳಲ್ಲಿ ಅದು ಇರುವುದಿಲ್ಲ. ಹಾಗಾಗಿ, ಆ ಫೋನುಗಳಲ್ಲಿ ಜಿಪಿಎಸ್ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸದು ಎಂದು ತಿಳಿದುಬಂದಿದೆ. ಇದರಿಂದಾಗಿ ಹಳೆಯ ಮೊಬೈಲ್ ಬಳಕೆದಾರರಿಗೆ ಮತ್ತೊಂದು ಸಮಸ್ಯೆ ಶುರುವಾಗಿದೆ.

2010ಕ್ಕೂ ಮುನ್ನ ತಯಾರಿಸಿದ ಮೊಬೈಲ್‌ಗಳಿಗೆ ಎದುರಾಯ್ತು ವಿಚಿತ್ರ ಸಮಸ್ಯೆ!!

ಆದರೆ, ಹಳೆಯ ಫೋನುಗಳ ತಯಾರಿಕಾ ಸಂಸ್ಥೆಗಳು ಆ ಫೋನುಗಳಿಗೆ ಸಾಫ್ಟ್ವೇರ್ ಪ್ಯಾಚ್‌ ಕಳಿಸಿದ್ದರೆ ಮಾತ್ರ ಆ ಮೊಬೈಲ್‌ಗ‌ಳು ಜಿಪಿಎಸ್ ಕ್ಲಾಕಿಂಗ್‌ಗೆ ಹೊಂದಿಕೊಳ್ಳಬಹುದು. ಹೊಸ ಜಿಪಿಎಸ್ ಕ್ಲಾಕಿಂಗ್ ವ್ಯವಸ್ಥೆಗೆ ಅನುಗುಣವಾದ ಸಾಫ್ಟ್ವೇರ್ ಬೇಕೇಬೇಕಿರುವುದರಿಂದ ಸಾಫ್ಟ್ವೇರ್ ಪ್ಯಾಚ್‌ ಇಲ್ಲದೇ 2010ರ ಫೋನುಗಳು ಜಿಪಿಎಸ್ ಕ್ಲಾಕಿಂಗ್‌ಗೆ ಒಗ್ಗುವುದು ಅನುಮಾನ.

Best Mobiles in India

English summary
before 2009 phones will gets Lack of GPS. GPS system 'close to breakdown'. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X