Home
ಸುದ್ದಿಜಾಲ

ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಆಪ್ ಬಿಡುಗಡೆ!

ಅಂತರ್ಜಾಲದ ಸಹಾಯದಿಂದಾಗಿ ಈಗ ಕೃಷಿಕರು ಸಹ ಲಾಭ ಪಡೆಯುತ್ತಿದ್ದು, ಕೃಷಿ ಮತ್ತು ಕೃಷಿ ಇಲಾಖೆಗಳ ನಡುವಿನ ಸಂಭಂಧ ವೃದ್ದಿಪಡಿಸಲು ರಾಜ್ಯ ಇ-ಆಡಳಿತ ಇಲಾಖೆ ಪ್ರಯತ್ನಿಸುತ್ತಿದೆ. ಇದರ ಫಲವಾಗಿಯೇ, ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ರೈತರ ಅಂಗೈನಲ್ಲೇ ಇನ್ನು ಮುಂದೆ ಲಭ್ಯವಾಗಲಿದೆ.

ಹೌದು, ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ 'ಬೆಳೆ ದರ್ಶಕ್' ಆಪ್ ಅನ್ನು ಪರಿಚಯಿಸಿದ್ದು, ಈ 'ಬೆಳೆ ದರ್ಶಕ್' (Bele Darshak) ಆಪ್ ಮೂಲಕ ರೈತರು ತಮ್ಮ ಸ್ಮಾರ್ಟ್‌ಫೋನಿನಲ್ಲೇ ತಮ್ಮ ಹೊಲದ ಸಮೀಕ್ಷೆ ನಡೆದ ಸಚಿತ್ರ ವರದಿ ಅಥವಾ ಸಮೀಕ್ಷೆ ನಡೆದಿಲ್ಲವಾದರೆ ಸಮೀಕ್ಷೆ ನಡೆಸುವವರ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರ ಪಡೆಯಬಹುದಾಗಿದೆ.

ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಆಪ್ ಬಿಡುಗಡೆ!

ಈ ಆಪ್‌ನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಈವರೆಗೂ ಆರಂಭವಾಗದಿದ್ದರೆ ಕರೆ ಮಾಡಿ ಸಮೀಕ್ಷೆ ನಡೆಸುವವರನ್ನು ಸಂಪರ್ಕಿಸಬಹುದು. ಅಲ್ಲಿ ದಾಖಲಿಸಿರುವ ಮಾಹಿತಿ ಸರಿಯಾಗಿಲ್ಲದಿದ್ದರೆ ತಾಲ್ಲೂಕು ಕಚೇರಿಗೆ ದೂರನ್ನು ನೀಡಬಹುದಾಗಿದೆ. ಸರಳವಾದ ಎರಡು ಪರದೆಯುಳ್ಳ ಆಂಡ್ರಾಯ್ಡ್ ಅಪ್ಲಿಕೇಷನ್ ಇದಾಗಿದ್ದು, ಇದನ್ನು ಬಳಸುವ ವಿಧಾನ ಕೂಡ ಅತ್ಯಂತ ಸರಳವಾಗಿದೆ.

ಉಚಿತವಾಗಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಿ ತೆರೆದರೆ ಎರಡು ಪರದೆಗಗಳು ಕಾಣಿಸಿಕೊಳ್ಳುತ್ತವೆ. ತೆರೆಯುವ ಮೊದಲ ಪರದೆಯಲ್ಲಿ ಬೆಳೆ ಸಮೀಕ್ಷೆ ವರ್ಷ, ಋತುಮಾನ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರ್ ಹಾಕಿ ವಿವರ ಪಡೆಯಬಹುದು. ಹಾಗೂ ಮಾಲೀಕರ ವಿವರ ಪಡೆದು ಖಚಿತಪಡಿಸಿಕೊಳ್ಳಬಹುದು.

ಇದಾದ ನಂತರ ಗ್ರಾಮದ ಬೆಳೆ ಸಮೀಕ್ಷೆ ನಡೆಸುವವರ ವಿವರಕ್ಕೆ ಹಾಗೂ ದಾಖಲಿಸಿದ ಬೆಳೆ ವಿವರಕ್ಕೆ ಪ್ರತ್ಯೇಕ ಎರಡು ಆಯ್ಕೆಳಿವೆ. ಅಲ್ಲಿ ಸಮೀಕ್ಷೆದಾರರ ವಿವರ ಕ್ಲಿಕ್ಕಿಸಿದರೆ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಪರದೆ ಮೇಲೆ ಮೂಡಲಿದೆ. ದಾಖಲಿಸಿದ ಬೆಳೆ ವಿವರ ಕ್ಲಿಕ್ಕಿಸಿದರೆ ಬೆಳೆ ಹೆಸರು, ವಿಸ್ತೀರ್ಣ, ವರ್ಗ ಹಾಗೂ ಚಿತ್ರ ಸಿಗಲಿದೆ. ಇದು ರೈತರಿಗೆ ಸಹಾಯವಾಗಲಿದೆ.

ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಆಪ್ ಬಿಡುಗಡೆ!

ಪ್ಲೇ ಸ್ಟೋರ್‌ನಲ್ಲಿ ಈ ಆಂಡ್ರಾಯ್ಡ್ ಆಪ್ ಉಚಿತವಾಗಿ ಲಭ್ಯವಿದೆ. ಕೇವಲ 3.8 ಎಂಬಿ ಗಾತ್ರದ ಈ ಆಪ್‌ ಈಗಾಗಲೇ ಸಾವಿರಕ್ಕೂ ಅಧಿಕ ಡೌನ್‌ಲೋಡ್ ಆಗಿದ್ದು, 4.3 ರೇಟಿಂಗ್ ಹೊಂದಿರುವ ಈ ಆಪ್ ಕೃಷಿಕರಿಗೆ ಸಹಾಯವಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ, ಸುಲಭವಾಗಿ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಈ ಆಪ್ ಡೌನ್‌ಲೋಡ್ ಮಾಡಿ.

Best Mobiles in India

English summary
Govt app to help The crop survey.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+