ಬೆಂಗಳೂರಿನ ರಿಕ್ಷಾ ಚಾಲಕನ ಪ್ರಮಾಣಿಕತೆಗೆ ಒಂದು ಸಲ್ಯೂಟ್

Written By:

ಪ್ರಾಮಾಣಿಕತೆಗೆ ಈಗ ಬೆಲೆಯೇ ಇಲ್ಲ. ಕಾಲ ಕೆಟ್ಟು ಹೋಗಿದೆ, ಜನರು ತಮ್ಮ ಲಾಭವನ್ನು ತಾವು ಬದುಕುವ ಬಗೆಯನ್ನು ಮಾತ್ರ ನೋಡುತ್ತಾರೆ ಎಂಬ ಅನಿಸಿಕೆ ನಿಮ್ಮಲ್ಲಿರಬಹುದು. ಈ ಅನಿಸಿಕೆಗಳು ಹುಟ್ಟಲು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವಾರು ದೃಶ್ಯಾವಳಿಗಳೇ ಕಾರಣಗಳಾಗಿವೆ. ನಿಮ್ಮನ್ನು ದೋಚುವ ಜನರನ್ನೇ ನೀವು ನೋಡುವುದರಿಂದ ಈ ರೀತಿಯ ಭಾವನೆ ನಿಮ್ಮಲ್ಲಿ ಸೃಷ್ಟಿಯಾಗಿದೆ ಎಂಬುದಂತೂ ನಿಜ.

ಆದರೆ ಪರೋಪಕಾರ ಮಾನವೀಯತೆ ಇನ್ನೂ ಸತ್ತಿಲ್ಲ ಬದುಕಿದೆ ಎಂಬುದಕ್ಕೆ ಸಾಕ್ಷಿಯಾಗಿರುವ ಘಟನೆಯೊಂದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಬೆಂಗಳೂರಿನ ಆಟೋ ರಿಕ್ಷಾ ಚಾಲಕರಾದ ಜಾವೇದ್ ಚಾಮರಾಜ ಪೇಟೆಯ ರಸ್ತೆಯಲ್ಲಿ ದೊರೆತ ಸ್ಯಾಮ್‌ಸಂಗ್ ಎಡ್ಜ್ ಮೊಬೈಲ್ ಅನ್ನು ಅದರ ಮಾಲೀಕರಿಗೆ ಹಿಂತಿರುಗಿಸಿದ ಘಟನೆಯನ್ನು ನಾವಿಲ್ಲಿ ವಿವರಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಸ್ತೆಯಲ್ಲಿ ಸ್ಯಾಮ್‌ಸಂಗ್ ಎಡ್ಜ್ ಮೊಬೈಲ್

ರಸ್ತೆಯಲ್ಲಿ ಸ್ಯಾಮ್‌ಸಂಗ್ ಎಡ್ಜ್ ಮೊಬೈಲ್

#1

ಬೆಂಗಳೂರಿನ ಆಟೋ ರಿಕ್ಷಾ ಚಾಲಕರಾದ ಜಾವೇದ್ ಚಾಮರಾಜ ಪೇಟೆಯ ರಸ್ತೆಯಲ್ಲಿ ಸ್ಯಾಮ್‌ಸಂಗ್ ಎಡ್ಜ್ ಮೊಬೈಲ್ ಅನ್ನು ಕಂಡಿದ್ದಾರೆ.

ಫೋನ್‌ನ ನಿಜವಾದ ಮಾಲೀಕ ಶ್ರೀನಿವಾಸುಲು

ಫೋನ್‌ನ ನಿಜವಾದ ಮಾಲೀಕ ಶ್ರೀನಿವಾಸುಲು

#2

ಫೋನ್ ಸಿಕ್ಕಿದೊಡನೇ ಏನು ಮಾಡುವುದು ಎಂಬುದು ತೋಚದೇ ತಮ್ಮ ಬಳಿ ಫೋನ್ ಅನ್ನು ಇರಿಸಿಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಫೋನ್‌ನ ನಿಜವಾದ ಮಾಲೀಕ ಶ್ರೀನಿವಾಸುಲುವನ್ನು ಪತ್ತೆಹಚ್ಚಿ ಅವರಿಗೆ ಡಿವೈಸ್ ಅನ್ನು ನೀಡುವ ನಿರ್ಧಾರ ಜಾವೇದ್ ಅವರದಾಗಿತ್ತು.

ಪ್ರಯಾಸ

ಪ್ರಯಾಸ

#3

ಹೇಗೋ ಪ್ರಯಾಸಪಟ್ಟು ಡಿವೈಸ್‌ನ ಮಾಲೀಕರಾದ ಶ್ರೀನಿವಾಸುಲು ಅವರನ್ನು ಸಂಪರ್ಕಿಸಿದ ಜಾವೇದ್ ಎಮ್‌ಟಿಆರ್ ರಸ್ತೆಗೆ ಬರಲು ತಿಳಿಸುತ್ತಾರೆ.

ಪೋಲೀಸರು ಶ್ಲಾಫಿಸಿದ್ದಾರೆ

ಪೋಲೀಸರು ಶ್ಲಾಫಿಸಿದ್ದಾರೆ

#4

ಫೋನ್ ಅನ್ನು ನಿಜವಾದ ಮಾಲೀಕರಿಗೆ ಹಿಂತಿರುಗಿಸಿದ ಜಾವೇದ್ ಅವರನ್ನು ಬೆಂಗಳೂರು ಪೋಲೀಸರು ಶ್ಲಾಫಿಸಿದ್ದಾರೆ.

ಅವರ ಪ್ರಾಮಾಣಿಕತೆ

ಅವರ ಪ್ರಾಮಾಣಿಕತೆ

#5

ಜಾವೇದ್ ಮನಸ್ಸು ಮಾಡುತ್ತಿದ್ದರೆ ಫೋನ್ ಅನ್ನು ತಮ್ಮ ಬಳಿ ಇರಿಸಿಕೊಳ್ಳುವುದೋ ಇಲ್ಲವೇ ಅದನ್ನು ಮಾರುವುದೋ ಮಾಡಬಹುದಾಗಿತ್ತು. ಆದರೆ ಅವರ ಪ್ರಾಮಾಣಿಕತೆ ಜಾವೇದ್ ಅವರನ್ನು ಹೀಗೆ ಮಾಡಲು ಬಿಡಲಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
In this article we are telling a story on Bengaluru Auto Driver Returned A Phone To Its Owner And He Deserves Every Bit Of Respect.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot