Home
ಸುದ್ದಿಜಾಲ

ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಕರೆದ ಕೇವಲ 48 ಗಂಟೆಗಳಲ್ಲಿ 3000 ಅರ್ಜಿ ಸ್ವಿಕಾರ! ಯಾವುದು ಆ ಪೋಸ್ಟ್‌!

ಬೆಂಗಳೂರಿನಲ್ಲಿ ಹೊಸ ಸ್ಟಾರ್ಟ್‌ ಅಪ್‌ ಕಂಪೆನಿ ತನ್ನ ಕಂಪೆನಿಯಲ್ಲಿ ಉದ್ಯೋಗ ಖಾಲಿಯಿದೆ ಅಂತಾ ಹೇಳಿದ ಕೇವಲ 48 ಗಂಟೆಗಳಲ್ಲಿ 3000 ರೆಸ್ಯೂಮ್‌ಗಳನ್ನು ಸ್ವೀಕರಿಸಿದೆ. ಈ ಮೂಲಕ ಸ್ವತಃ ಸ್ಟಾರ್ಟ್‌ ಅಪ್‌ ಸಂಸ್ಥಾಪಕರು ಕೂಡ ನಿಬ್ಬೆರಗಾಗುವಂತೆ ಮಾಡಿದೆ. ಬೆಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಟೆಕ್ಕಿಗಳ ಉದ್ಯೋಗ ಅರಸಿ ರೆಸ್ಯೂಮ್‌ ಕಳುಹಿಸಿರುವುದು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಹೌದು, ಆನ್‌ಲೈನ್‌ನಲ್ಲಿ ಉದ್ಯೋಗದ ಬಗ್ಗೆ ಪೋಸ್ಟ್‌ ಮಾಡಿ 48 ಗಂಟೆಗಳ ಅವಧಿಯಲ್ಲಿ 3000 ಅರ್ಜಿಗಳು ಬಂದಿವೆ. ಇದನ್ನು ನೋಡಿ ಸ್ವತಃ ಸ್ಪ್ರಿಂಗ್‌ವರ್ಕ್‌ನ ಸಿಇಒ ಅಶ್ಚರ್ಯ ವ್ಯಕ್ತಪಡಿಸಿದಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಟೆಕ್ಕಿಗಳ ಪ್ರಮಾಣದ ಬಗ್ಗೆ ಆತಂಕ ಕೂಡ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅರ್ಜಿಯನ್ನು ಕರೆದಿದ್ದ ಸ್ಟಾರ್ಟ್‌ ಆಪ್‌ನ ಕೆಲಸವೇನು? ಇದಕ್ಕೆ ಈ ಪರಿಯಲ್ಲಿ ಅರ್ಜಿ ಸಲ್ಲಿಸಲು ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಕರೆದ 48 ಗಂಟೆಗಳಲ್ಲಿ 3000 ಅರ್ಜಿ ಸ್ವಿಕಾರ

ಬೆಂಗಳೂರಿನಲ್ಲಿ ಟೆಕ್ನಾಲಜಿ ಸ್ಟಾರ್ಟ್‌ ಅಪ್‌ಗಳಿಗೇನು ಕಡಿಮೆಯಿಲ್ಲ. ಅದರಂತೆ ಇಲ್ಲಿ ಒಂದು ಟೆಕ್ನಾಲಜಿ ಸ್ಟಾರ್ಟ್‌ ಅಪ್‌ ಉದ್ಯೋಗ ಖಾಲಿಯಿದೆ ಅಂತಾ ಪೋಸ್ಟ್‌ ಹಾಕಿದ ನಂತರ ನಡೆದಿರುವ ಘಟನೆ ಭಾರಿ ಟ್ರೆಂಡ್‌ ಆಗಿದೆ. ಅಷ್ಟಕ್ಕೂ ಇಲ್ಲಿ ನಡೆದಿರುವುದು ಏನೆಂದರೆ ಸ್ಪ್ರಿಂಗ್‌ವರ್ಕ್ಸ್‌ ಎನ್ನುವ ಸ್ಟಾರ್ಟ್‌ಅಪ್‌ ತಾನು ಅರ್ಜಿ ಕರೆದ ಕೇವಲ 48 ಗಂಟೆಗಳ ಅವಧಿಯಲ್ಲಿ 3,000ಕ್ಕೂ ಹೆಚ್ಚಿನ ರೆಸ್ಯೂಮ್‌ಗಳನ್ನು ಸ್ವೀಕಾರ ಮಾಡಿದೆ. ಅಷ್ಟೇ ಅಲ್ಲ ಇಲ್ಲಿಯ ತನಕ 13,000ದ ವರೆಗೆ ಅರ್ಜಿ ಸ್ವೀಕಾರ ಮಾಡಿರುವುದಾಗಿ ಹೇಳಿದೆ. ಇದರೊಂದಿಗೆ ಇದರ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾದ್ಯತೆಯಿದೆ ಎಂದು ಕೂಡ ಹೇಳಿದೆ.

ಈ ಪರಿಯ ಅರ್ಜಿ ಸಲ್ಲಿಕೆ ಕಾರಣ ಏನು?
ಸ್ಟಾರ್ಟ್‌ ಅಪ್‌ ಉದ್ಯೋಗದ ಬಗ್ಗೆ ಪೋಸ್ಟ್‌ ಮಾಡಿದ ತಕ್ಷಣವೇ ಈ ಪರಿಯ ರೆಸ್ಪಾನ್ಸ್‌ ದೊರೆಯುವುದಕ್ಕೆ ಒಂದು ಇಂಟ್ರೆಸ್ಟಿಂಗ್‌ ವಿಚಾರ ಕಾರಣವಾಗಿದೆ. ಸ್ಪ್ರಿಂಗ್‌ವರ್ಕ್ಸ್‌ನ ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್ ಮಂಡವಿಲ್ಲೆ ಹೇಳಿರುವಂತೆ ತಾವು ಉದ್ಯೋಗ ಜಾಹಿರಾತುವಿನಲ್ಲಿ ಪರ್ಮನೆಂಟ್‌ ವರ್ಕ್‌ ಫ್ರಮ್‌ ಹೋಮ್‌ ಎಂಬ ಆಯ್ಕೆ ನೀಡಿರುವುದೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದ್ದಾರೆ. ಅಂದರೆ "permanent remote" ಎಂದು ಜಾಹಿರಾತು ಪೋಸ್ಟ್‌ನಲ್ಲಿ ಹಾಕಿರುವುದು ಇಷ್ಟೊಂದು ರೆಸ್ಪಾನ್ಸ್‌ಗೆ ಕಾರಣ ಎಂದು ಹೇಳಲಾಗಿದೆ.

ಇನ್ನು ಸ್ಪ್ರಿಂಗ್‌ವರ್ಕ್ಸ್ ಸ್ಟಾರ್ಟ್‌ಅಪ್‌ ಸೇಲ್ಸ್‌, ಮಾರ್ಕೆಟಿಂಗ್, ಕಾರ್ಯಾಚರಣೆಗಳು, ಪ್ರಾಡಕ್ಟ್‌ ಮತ್ತು ಟೆಕ್ನಾಲಜಿಯಲ್ಲಿನ ಎಲ್ಲಾ ಪೋಸ್ಟ್‌ಗಳನ್ನು "permanent remote" ನಲ್ಲಿ ನೇಮಕ ಮಾಡಿಕೊಳ್ಳುತ್ತಿದೆ. ಅದರಂತೆ ಮನೆಯಿಂದಲೇ ಕಾರ್ಯನಿರ್ವಹಿಸಲು ಬಯಸುವ ಟೆಕ್ಕಿಗಳು ಈ ಪೋಸ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ಸ್ಪ್ರಿಂಗ್‌ವರ್ಕ್ಸ್‌ ಸ್ಟಾರ್ಟ್‌ ಆಪ್‌ ಉತ್ತಮ ಕೆಲಸ-ಜೀವನ ಸಮತೋಲನಕ್ಕಾಗಿ ರಿಮೋಟ್-ಫಸ್ಟ್ ವಿಧಾನವನ್ನು ಅಳವಡಿಸಿಕೊಂಡಿದೆ. ಅದರಂತೆ ಪ್ರಸ್ತುತ ಸುಮಾರು 200 ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದು, ರಿಮೋಟ್ ಕೆಲಸದ ಮಾದರಿಗೆ ಬದ್ಧವಾಗಿದೆ. ಈ ಒಂದು ಕಾರಣಕ್ಕೆ ಅರ್ಜಿ ಸಲ್ಲಿಕೆಯ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳವಾಗುವಂತೆ ಮಾಡಿದರೂ ಅಚ್ಚರಿಯಿಲ್ಲ.

ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಕರೆದ 48 ಗಂಟೆಗಳಲ್ಲಿ 3000 ಅರ್ಜಿ ಸ್ವಿಕಾರ

ಸದ್ಯ ಈ ಪೋಸ್ಟ್‌ ಟ್ವಿಟರ್‌ನಲ್ಲಿ ವೈರಲ್‌ ಆಗ್ತಿದ್ದ ಹಾಗೇ ಹಲವಾರು ಟ್ವಿಟ್ಟರ್ ಬಳಕೆದಾರರು ಸಹ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಉದ್ಯೋಗ ಮಾರುಕಟ್ಟೆಯಲ್ಲಿ ಐಟಿ ವಲಯ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಶೇರ್‌ ಮಾಡಿದ್ದಾರೆ. ಅದರಲ್ಲೂ ಒಬ್ಬ ಟ್ವಿಟರ್‌ ಬಳಕೆದಾರ ದೆಹಲಿಯಲ್ಲಿ ಐಟಿ ಕಂಪನಿಯು 20 ಪೋಸ್ಟ್‌ಗಳಿಗೆ ನಡೆಸಿದ ವಾಕ್-ಇನ್ ಸಂದರ್ಶನದಲ್ಲಿ ಸುಮಾರು 700 ಜನರು ಭಾಗವಹಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಪ್ರಸ್ತುತ ದಿನಗಳಲ್ಲಿ ಉದ್ಯೋಗಕ್ಕಾಗಿ ಎಷ್ಟು ಸವಾಲುಗಳಿವೆ ಅನ್ನೊದನ್ನ ಸೂಚಿಸುತ್ತದೆ.

Best Mobiles in India

English summary
Technology start-up Springworks received over 12,500 applications within a month of posting job openings
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+