3 ಗಂಟೆಯಲ್ಲೇ ಮೊಬೈಲ್ ಪತ್ತೆ!..ಬೆಂಗಳೂರು ಪೊಲೀಸರ ಕಾರ್ಯಕ್ಕೆ ಯುವತಿಯರ ಸಂಭ್ರಮ!!

|

ಅಪ್ಪಿತಪ್ಪಿ ಒಮ್ಮೆ ಮೊಬೈಲ್ ಅನ್ನು ಕಳೆದುಕೊಂಡರೆ ಅದನ್ನು ಆಗಲೇ ಮರೆತುಬಿಡುವುದು ಒಳ್ಳೆಯದು ಎಂದುಕೊಳ್ಳುವ ಸಮಯದಲ್ಲಿ, ನಗರದ ಪೊಲೀಸರು ಕೇವಲ ಮೂರು ಗಂಟೆಗಳಲ್ಲಿ ಕಳೆದುಹೋದ ಮೊಬೈಲ್ ಒಂದನ್ನು ಹುಡುಕಿಕೊಟ್ಟಿರುವ ವಿಶೇಷ ಸುದ್ದಿ ಲಭ್ಯವಾಗಿದೆ. ಠಾಣೆಯಲ್ಲಿ ದೂರು ದಾಖಲಾದ ಕೇವಲ ಮೂರು ಗಂಟೆಗಳಲ್ಲಿ ಮೊಬೈಲ್ ಮಾಲಿಕರ ಕೈಸೇರಿದೆ.

ಹೌದು. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಆಕಾಂಕ್ಷ ಹಾಗೂ ಶೃತಿ ಎಂಬ ಯುವತಿಯರೀರ್ವರು ದೂರು ನೀಡಿದ ಕೆಲವೇ ಗಂಟೆಗಳಲ್ಲಿ ತಮ್ಮ ಮೊಬೈಲ್ ಅನ್ನು ವಾಪಸ್ ಪಡೆದಿದ್ದಾರೆ. ಮನೆಗೆ ತೆರಳಲು ಸೆಪ್ಟೆಂಬರ್ 29 ರಂದು ಉಬರ್ ಕ್ಯಾಬ್ ಬುಕ್ ಮಾಡಿದ್ದ ಆಕಾಂಕ್ಷ ಹಾಗೂ ಶೃತಿ ಅವರು ಮೊಬೈಲ್ ಅನ್ನು ಕ್ಯಾಬಿನಲ್ಲೇ ಮರೆತು ಸ್ವಲ್ಪ ಮುಜುಗರವನ್ನು ಅನುಭವಿಸಿದ್ದಾರೆ.

3 ಗಂಟೆಯಲ್ಲೇ ಮೊಬೈಲ್ ಪತ್ತೆ!..ಬೆಂಗಳೂರು ಪೊಲೀಸರ ಕಾರ್ಯಕ್ಕೆ ಯುವತಿಯರ ಸಂಭ್ರಮ!!

ಆಕಾಂಕ್ಷ ಹಾಗೂ ಶೃತಿ ಕ್ಯಾಬ್‌ನಿಂದ ಇಳಿದು ಮನೆಗೆ ತೆರಳಿದ ನಂತರ ಅವರ ಮೊಬೈಲ್ ಇಲ್ಲದಿರುವುದನ್ನು ನೋಡಿದ್ದಾರೆ. ನಂತರ ಅವರು ಮೊಬೈಲ್ ಅನ್ನು ಬಿಟ್ಟಿರುವ ಅನುಮಾನ ಅವರಿಗೆ ದೃಢವಾಗಿದೆ. ಆದರೆ, ಮೊಬೈಲ್ ಬಿಟ್ಟಿರುವ ಬಗ್ಗೆ ಡ್ರೈವರ್ನನ್ನು ಕೇಳಿದರೆ ನಂತರ ಬುಕ್ ಮಾಡಿದ ಪ್ರಯಾಣಿಕರು ಮೊಬೈಲ್ ತೆಗೆದುಕೊಂಡು ಹೋಗಿರಬಹುದು ಎಂದು ಹೇಳಿದ್ದಾನೆ.

ಇನ್ನು ಕ್ಯಾಬ್ ಸಂಸ್ಥೆಗೂ ದೂರು ಸಲ್ಲಿಸಿ ಕ್ಯಾಬ್ ಸಂಸ್ಥೆಯಿಂದ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಕ್ಟೋಬರ್ 2 ರಂದು ಯುವತಿಯರಿಬ್ಬರು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಉಬರ್ ಕ್ಯಾಬ್ ಡ್ರೈವರ್‌ನನ್ನು ಠಾಣೆಗೆ ಕರೆಸಿ ಖುದ್ದು ಯುವತಿಯರ ಮುಂದೆಯೇ ಆತನನ್ನು ವಿಚಾರಣೆ ನಡೆಸಿದ್ದಾರೆ.

ಪೊಲೀಸರು ವಿಚಾರಣೆ ನಡೆಸಿದ ನಂತರ ಮೊಬೈಲ್ ತನ್ನ ಬಳಿಯೇ ಇದೆ ಎಂದು ಉಬರ್ ಡ್ರೈವರ್ ತಪ್ಪನ್ನು ಒಪ್ಪಿಕೊಂಡು ಮೊಬೈಲನ್ನು ಹಿಂದಿರುಗಿಸಿದ್ದಾನೆ. ನಡೆದ ಈ ಎಲ್ಲ ಘಟನೆಯನ್ನು ಅಶೋಕ್ ಎಂಬವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಇದೆ ರೀತಿಯಲ್ಲಿ'ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿಸಿದ ಆಪ್' ಬಗ್ಗೆ ತಿಳಿಯಲು ಮುಂದೆ ಓದಿ.

ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿಸಿತು ಈ ಆಪ್!!..ಹೇಗೆ ಗೊತ್ತಾ?

ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿಸಿತು ಈ ಆಪ್!!..ಹೇಗೆ ಗೊತ್ತಾ?

ಬೆಂಗಳೂರು ನಗರದಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದವರಿಗೆ ಈ ಆಪ್ ಒಂದು ಸಿಂಹಸ್ವಪ್ನವಾಗಿ ಕಾಡುತ್ತಿದೆ. ಯಾವುದೇ ದಾಖಲೆಗಳು ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡಿರುವುದರ ಬಗ್ಗೆ ದೂರು ಸಲ್ಲಿಸಲು ಇದ್ದ 'ಇ ಲಾಸ್ಟ್ ಅಂಡ್ ಫೌಂಡ್' ಎಂಬ ಆನ್‌ಲೈನ್ ಯೋಜನೆಯಿಂದ ಮೊಬೈಲ್ ಕಳೆದುಕೊಂಡಿದ್ದವರ ಮುಖದಲ್ಲಿ ನಗು ಮೂಡಿದೆ.

ಕಳೆದುಹೋದ/ಕಾಣೆಯಾದ ವಸ್ತುಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗದೆ ನೇರವಾಗಿ ಮೊಬೈಲ್ ಫೋನ್ ಮತ್ತು ವೆಬ್‌ಸೈಟ್ ಮುಖಾಂತರ ವರದಿಯನ್ನು ಸಲ್ಲಿಸಲು ಅವಕಾಶವರುವ ' ಇ ಲಾಸ್ಟ್ ಅಂಡ್ ಫೌಂಡ್' ಸೇವೆಯಿಂದ 300 ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಅಲ್ಪಕಾಲದಲ್ಲಿಯೇ ಕಳ್ಳರಿಂದ ಬಿಡಿಸಿ ಮಾಲಿಕರಿಗೆ ನೀಡಲಾಗಿದೆ.

ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಟ್ವಿಟ್ಟರ್ ಅಕೌಂಟ್‌ನಲ್ಲಿ ಚಿತ್ರ ಸಮೇತ ಪ್ರಕಟಿಸಿದ್ದು, ಮೊಬೈಲ್ ಬಳಸುವುದರಲ್ಲಿರುವ ಒಲವು, ಅದನ್ನು ಸುರಕ್ಷಿತವಾಗಿಟ್ಟುಕೊಳ್ಳುವುದರಲ್ಲಿಯೂ ಇರಲಿ! ಎಂದು ಸಲಹೆ ನೀಡಿದೆ. ಹಾಗಾದರೆ, 'ಇ ಲಾಸ್ಟ್ ಅಂಡ್ ಫೌಂಡ್ ಯೋಜನೆಯ ಕಾರ್ಯನಿರ್ವಹಣೆ ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!

ಇ-ಲಾಸ್ಟ್ ಅಂಡ್ ಫೌಂಡ್ ವೆಬ್‌ಸೈಟ್‌!!

ಇ-ಲಾಸ್ಟ್ ಅಂಡ್ ಫೌಂಡ್ ವೆಬ್‌ಸೈಟ್‌!!

ಆನ್‌ಲೈನ್ ಮುಖಾಂತರ ಕಳೆದುಕೊಂಡ ವಸ್ತುಗಳ ಬಗ್ಗೆ ಕರ್ನಾಟಕ ಪೊಲೀಸ್ ಇಲಾಖೆ 'ಇ-ಲಾಸ್ಟ್ ಅಂಡ್ ಫೌಂಡ್' (e-Lost & Found Report) ( ಆಪ್ ಲಿಂಕ್) ಎಂಬ ವೆಬ್‌ಸೈಟ್‌ ಮತ್ತು ಆಪ್ ಅನ್ನು ರಚಿಸಿದೆ.! ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳದೆ ಈ ವೆಬ್‌ಸೈಟ್ ಅಥವಾ ಆಪ್ ಮೂಲಕ ಕಳೆದುಹೋದ ವಸ್ತುಗಳ ಬಗ್ಗೆ ದೂರುದಾಖಲಿಸಬಹುದು.!!

ಇ-ಲಾಸ್ಟ್ ಅಂಡ್ ಫೌಂಡ್ ಕಾರ್ಯ ಹೇಗೆ?

ಇ-ಲಾಸ್ಟ್ ಅಂಡ್ ಫೌಂಡ್ ಕಾರ್ಯ ಹೇಗೆ?

ಪೊಲೀಸ್ ಇಲಾಖೆ ಅಳವಡಿಸಿಕೊಂಡಿರುವ ಲಾಸ್ಟ್ ಆಂಡ್‌ ಫೌಂಡ್' ವ್ಯವಸ್ಥೆಯ (eLost & Found Report) ವೆಬ್‌ಸೈಟ್‌ ತೆರೆದು ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌, ಪಾಸ್‌ಪೋರ್ಟ್‌, ಶೈಕ್ಷಣಿಕ ದಾಖಲೆ ದೂರುಗಳನ್ನು ಆನ್‌ಲೈನ್ ಮೂಲಕ ದಾಖಲಿಸಬಹುದು. ದೂರು ಸಲ್ಲಿಸಿರುವ ಬಗ್ಗೆ ಆನ್‌ಲೈನ್‌ನಲ್ಲಿಯೇ ನಿಮಗೆ ಸ್ವೀಕೃತಿ ಪತ್ರ ಕೂಡ ದೊರೆಯುತ್ತದೆ.!!

ದೂರು ನೀಡಿದ ನಂತರ ಏನಾಗುತ್ತದೆ ?

ದೂರು ನೀಡಿದ ನಂತರ ಏನಾಗುತ್ತದೆ ?

ದೂರು ಸಲ್ಲಿಸಿದ ನಂತರ ಕಳೆದುಹೋದ ವಸ್ತುಗಳ ಬಗ್ಗೆ ವರದಿ ಬಳಕೆದಾರರ ಮೊಬೈಲ್ ಪೋನ್ ಮತ್ತು ಇ-ಮೇಲ್ ಐಡಿಗೆ ರಾವನೆಯಾಗುತ್ತದೆ. ಕಳೆದುಹೋದ ದಾಖಲಾತಿ/ವಸ್ತುಗಳ ಬಗ್ಗೆ ದಾಖಲಾದ ವರದಿಗಳು ಎಸ್.ಸಿ.ಆರ್.ಬಿ ನಲ್ಲಿ ದಾಖಲಾಗುತ್ತವೆ. ಆದರೆ, ದಾಖಲಾದ ವರದಿಯ ಮೇಲೆ ಯಾವುದೇ ವಿಚಾರಣೆ/ ತನಿಖೆ ಕೈಗೊಳ್ಳಲಾಗುವುದಿಲ್ಲ.!!

ಯೋಜನೆಯಿಂದ ಗ್ರಾಹಕರಿಗೆ ಲಾಭವೇನು?

ಯೋಜನೆಯಿಂದ ಗ್ರಾಹಕರಿಗೆ ಲಾಭವೇನು?

ನೀವು ಕಳೆದುಕೊಂಡಿರುವ ವಸ್ತುಗಳೇನಾದರೂ ಪೊಲೀಸ್ ಇಲಾಖೆಗೆ ದೊರೆತರೆ ಅಂದರೆ, ನೀವು 'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ಆ ಬಗ್ಗೆ ದೂರು ದಾಖಲಿಸಿದ್ದರೆ ಪೊಲೀಸ್ ಇಲಾಖೆ ನಿಮ್ಮನ್ನು ಸಂಪರ್ಕಿಸುತ್ತದೆ. ನಂತರ ನೀವು ಸೂಕ್ತ ದಾಖಲೆಗಳನ್ನು ನೀಡಿ ನಿಮ್ಮ ವಸ್ತುಗಳನ್ನು ಇಲಾಖೆಯಿಂದ ವಾಪಸ್ ಪಡೆಯಬಹುದಾಗಿದೆ.!!

ವಿದ್ಯುನ್ಮಾನ ದಾಖಲೆಯಷ್ಟೆ!!

ವಿದ್ಯುನ್ಮಾನ ದಾಖಲೆಯಷ್ಟೆ!!

'ಇ ಲಾಸ್ಟ್ ಅಂಡ್ ಫೌಂಡ್' ನಲ್ಲಿ ದಾಖಲಿಸಿದ ದೂರು ಪೊಲೀಸರಿಗೆ ಕೇವಲ ಮಾಹಿತಿಯಾಗಿರುತ್ತದೆ. ಈ ಆಧಾರದ ಮೇಲೆ ಯಾವುದೇ ವಿಚಾರಣೆ/ತನಿಖೆಯನ್ನು ಕೈಗೊಳ್ಳುವುದಿಲ್ಲ. ಈ ವರದಿಯು ದೂರುದಾರರಿಗೆ ಮತ್ತು ಪೊಲೀಸ್ ಇಲಾಖೆ ಪರಿಶೀಲನೆಗಾಗಿ ಇರುವ ಕೇವಲ ವಿದ್ಯುನ್ಮಾನ ದಾಖಲೆಯಾಗಿರುತ್ತದೆ.!!

ಕಳೆದುಕೊಂಡರೆ ಮಾತ್ರ!!

ಕಳೆದುಕೊಂಡರೆ ಮಾತ್ರ!!

ನೀವು ನಿಮ್ಮಲ್ಲಿರುವ ಸಣ್ಣ ಮೌಲ್ಯಯುತ ವಸ್ತುಗಳನ್ನು ಕಳೆದುಕೊಂಡರೆ ಮಾತ್ರ ಈ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸುವುದು ಉತ್ತಮ.! ವಸ್ತುಗಳನ್ನು ಯಾರಾದರೂ ಕದ್ದಿದ್ದರೆ ಅಥವಾ ನಿಮ್ಮನ್ನು ಯಾರಾದರೂ ಬೆದರಿಸಿ ಕಿತ್ತುಕೊಂಡಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಎಚ್ಚರದಿಂದ ದೂರು ದಾಖಲಿಸುವುದನ್ನು ಮರೆಯದಿರಿ.!!

Best Mobiles in India

English summary
Bengaluru City police detecting mobile in 3 hours!.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X