Just In
Don't Miss
- Automobiles
ಭಾರತದಲ್ಲಿ ಟೊಯೊಟಾ ಹಿಲಕ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಹಿತಿ ಬಹಿರಂಗ
- News
ರಾಮ ಮಂದಿರ ನಿರ್ಮಾಣದಿಂದ ಬಡವರ ಹೊಟ್ಟೆ ತುಂಬುತ್ತಾ ಎನ್ನುವ ಪ್ರಶ್ನೆಗೆ RSS ಮುಖ್ಯಸ್ಥರು ಕೊಟ್ಟ ಉತ್ತರ
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Sports
ಐಎಸ್ಎಲ್: ಬೆಂಗಳೂರು ಎಫ್ಸಿ vs ಹೈದರಾಬಾದ್ ಎಫ್ಸಿ ಹಣಾಹಣಿ, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೈಬರ್ ಕ್ರೈಂ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ಹೋಗುವ ಮುನ್ನ ಇಲ್ಲಿ ನೋಡಿ!
ನೀವು ಸೈಬರ್ ಕ್ರೈಂ/ ಆನ್‌ಲೈನ್ ವಂಚನೆ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದರೆ ಪೊಲೀಸ್ ಸ್ಟೇಷನ್‌ಗೆ ದೂರು ನೀಡುವ ಮುನ್ನ ಒಮ್ಮೆ ಯೋಚಿಸಿ. ಏಕೆಂದರೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ದಾಖಲು ಮತ್ತು ತನಿಖೆಯ ಉದ್ದೇಶದಿಂದ ಸ್ಥಾಪಿಸಲಾಗಿದ್ದ ಏಕೈಕ ಸೈಬರ್ ಕ್ರೈಂ ಪೊಲೀಸ್ ಠಾಣೆಯು ದೂರುಗಳ ಪ್ರವಾಹದಿಂದ ತತ್ತರಿಸಿದ್ದು, ಇದೀಗ ಬಾಗಿಲು ಹಾಕಲಾಗಿದೆ. ಈ ತಂತ್ರಜ್ಞಾನ ಯುಗದಲ್ಲಿ ಸೈಬರ್ ಕಳ್ಳರಿಗೆ ಬ್ರೇಕ್ ಹಾಕಲು ಸಾಧ್ಯವಾಗದೇ ಪೊಲೀಸರೂ ಸಹ ಕೈಚೆಲ್ಲಿ ಕುಳಿತಿದ್ದಾರೆ.

ಹೌದು, ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿನ ಸೈಬರ್ ಠಾಣೆಗೆ ಬರುತ್ತಿರುವ ದೂರುದಾರರಿಗೆ ಠಾಣೆಗೆ ಬಾಗಿಲು ಹಾಕಿರುವ ಫಲಕವೊಂದು ಕಾಣಿಸುತ್ತಿದೆ. ಅದರಲ್ಲಿ ತಿಳಿಸಿರುವಂತೆ, ಹೆಚ್ಚೆಚ್ಚು ದೂರುಗಳನ್ನು ಸ್ವೀಕರಿಸಿ ಐಟಿ ಸೆಲ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಆಗುತ್ತಿಲ್ಲ. ಈ ಕಾರಣದಿಂದ ಸಮೀಪದ ಠಾಣೆಗೆ ದೂರು ನೀಡಿ ಅಥವಾ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ ಎಂದು ಫಲಕಗಳನ್ನು ಅಂಟಿಸಲಾಗಿದೆ. ಹೀಗಾಗಿ, ಸಾರ್ವಜನಿಕರು ಸೈಬರ್ ಕ್ರೈಂ ಠಾಣೆಗೆ ಬಂದು, ವಾಪಸ್ ಹೋಗುತ್ತಿದ್ದಾರೆ.

ಪ್ರತಿ ಪೊಲೀಸ್ ಠಾಣೆಯ ಎಫ್‌ಐಆರ್‌ಗಳ ಸಾಮರ್ಥ್ಯ 9,999 ಮಾತ್ರ ಇದೆ. 10,000 ಮೇಲ್ಪಟ್ಟು ಅಂಕಿಗಳನ್ನು ಐಟಿ ಸೆಲ್ ವೆಬ್‌ಸೈಟ್‌ನಲ್ಲಿ ಸ್ವೀಕರಿಸುವಂತಹ ವ್ಯವಸ್ಥೆ ಇಲ್ಲ. ಇತ್ತೀಚೆಗೆ 10 ಸಾವಿರ ಗಡಿಯನ್ನು ನಗರದ ಸೈಬರ್ ಕ್ರೈಂ ತಲುಪಿದೆ. ಇದರಿಂದಾಗಿ ಮತ್ತಷ್ಟು ದೂರುಗಳನ್ನು ಸ್ವೀಕರಿಸಿ ಐಟಿ ಸೆಲ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಆಗುತ್ತಿಲ್ಲ. ಈ ಕಾರಣದಿಂದ ಸಮೀಪದ ಠಾಣೆಗೆ ದೂರು ನೀಡಿ ಅಥವಾ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ ಎಂದು ಫಲಕಗಳನ್ನು ಅಂಟಿಸಲಾಗಿರುವುದನ್ನು ನಾವು ನೋಡಬಹುದಾಗಿದೆ.

ರಾಜ್ಯದ ಎಲ್ಲ ಠಾಣೆಗಳ ಅಪರಾಧ ಪ್ರಕರಣಗಳು (ಎಫ್‌ಐಆರ್) ಪೊಲೀಸ್ ಇಲಾಖೆಯ ಐಟಿ ಸೆಲ್‌ನ ವೆಬ್‌ಸೈಟ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ. ಹಾಗಾಗಿ, ಇನ್ನು ಮುಂದೆ ನಗರ ವ್ಯಾಪ್ತಿಯ ಸೈಬರ್ ಮತ್ತು ಆನ್‌ಲೈನ್ ದೂರುಗಳನ್ನು ಸಮೀಪದ ಪೊಲೀಸ್ ಠಾಣೆಗಳಲ್ಲಿ ದಾಖಲಿಸಬೇಕು. ಇಲ್ಲವೇ, ಸೈಬರ್ ಕ್ರೈಮ್ ವೆಬ್‌ಸೈಟ್‌ಗೆ ಭೇಟಿ ನೀಡಿ ದಾಖಲಿಸಬಹುದು ಎಂದು ಪೊಲೀಸರು ಸಲಹೆ ನೀಡಿದ್ದು, ನೀವು ಕೂಡ ಸೈಬರ್ ಕ್ರೈಂ/ ಆನ್‌ಲೈನ್ ವಂಚನೆ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದರೆ ಪೊಲೀಸ್ ಸ್ಟೇಷನ್‌ಗೆ ಹೋಗದೇ ಇರುವುದು ಒಳಿತು.

ಇನ್ನು ವಂಚಕರು ಬಲೆಗೆ ಬಿದ್ದು ನೊಂದವರು ತಕ್ಷಣವೇ ದೂರು ಸಲ್ಲಿಸುವಂತಾಗಲು ಸರ್ಕಾರ ಸೈಬರ್ ಅಪರಾಧಗಳಿಗೆ ಸೈಕಾರ್ಡ್ (cycord.gov.in) ಎಂಬ ಜಾಲತಾಣವನ್ನು ತೆರೆದಿದೆ. ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ತಾಣವನ್ನು ಎಲ್ಲಾ ಸೈಬರ್ ಅಪರಾಧ/ ಘಟನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತೆರೆಯಲಾಗಿದೆ. ಇಲ್ಲಿ ಸೈಬರ್ ಘಟನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿ ಲಾ ಎನ್ಫೋರ್ಸ್ಮೆಂಟ್ ಏಜೆನ್ಸಿಗಳು ಸಹಕರಿಸುತ್ತವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190