Subscribe to Gizbot

ಬೆಂಗಳೂರಿನಲ್ಲಿ ದೇಶದ ಮೊದಲ ‘ಹೆಲಿ ಟ್ಯಾಕ್ಸಿ ಸೇವೆ’ ಆರಂಭಕ್ಕೆ ಕ್ಷಣಗಣನೆ!!.ಬಡವರು ಸಹ ಬಳಸಬಹುದು!!

Written By:

ಭಾರತದಲ್ಲಿಯೇ ಮೊದಲಾದ 'ಹೆಲಿ ಟ್ಯಾಕ್ಸಿ ಸೇವೆ' ಬೆಂಗಳೂರಿನಲ್ಲಿ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ ಎನ್ನುವ ಸಿಹಿಸುದ್ದಿ ಸಿಕ್ಕಿದೆ.! ಎಲೆಕ್ಟ್ರಾನಿಕ್‌ ಸಿಟಿ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ 'ಹೆಲಿ ಟ್ಯಾಕ್ಸಿ ಸೇವೆ' ಮೊದಲು ಪ್ರಾರಂಭವಾಗಲಿದೆ ಎಂದು ಥುಂಬಿ ಏವಿಯೇಷನ್ ಸಂಸ್ಥೆ ತಿಳಿಸಿದೆ.!!

ಬೆಂಗಳೂರಿನಲ್ಲಿ ದೇಶದ ಮೊದಲ ‘ಹೆಲಿ ಟ್ಯಾಕ್ಸಿ ಸೇವೆ’ ಆರಂಭಕ್ಕೆ ಕ್ಷಣಗಣನೆ!!

'ಹೆಲಿ ಟ್ಯಾಕ್ಸಿ ಸೇವೆ' ಯನ್ನು ನೀಡುತ್ತಿರುವ ಥುಂಬಿ ಏವಿಯೇಷನ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಈಗಾಗಲೇ ಮೊಬೈಲ್ ಆಪ್ ಅನ್ನು ಅಭಿವೃದ್ದಿಗೊಳಿಸಿದ್ದು, ಟಿಕೆಟ್‌ ಮುಂಗಡ ಕಾಯ್ದಿರಿಸುವಿಕೆಗಾಗಿ ಮೊಬೈಲ್‌ ಆಪ್‌ ಮುಂದಿನ ವಾರದಿಂದ ಬಳಕೆಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದೆ.! ಹಾಗಾದರೆ, ಭಾರತದ ಮೊದಲ 'ಹೆಲಿ ಟ್ಯಾಕ್ಸಿ ಸೇವೆ' ಹೇಗಿರಲಿದೆ? ಪ್ರಯಾಣ ದರ ಎಷ್ಟು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭಾರತದಲ್ಲಿಯೇ ಮೊದಲು!!

ಭಾರತದಲ್ಲಿಯೇ ಮೊದಲು!!

ವಿಶ್ವದ ಐಟಿ ಹಬ್ ಆಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಭಾರತದಲ್ಲಿಯೇ ಮೊದಲ ‘ಹೆಲಿ ಟ್ಯಾಕ್ಸಿ ಸೇವೆ' ಆರಂಭವಾಗುತ್ತಿದೆ. ಬೆಂಗಳೂರು ನಗರದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿರುವವರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಸಮಯದ ದೃಷ್ಟಿಯಿಂದಲೇ ಈ ಹೆಲಿಟ್ಯಾಕ್ಸಿ ಸೇವೆ ಆರಂಭವಾಗಿದೆ ಎಂದು ಹೇಳಲಾಗಿದೆ.!!

ಹೇಗಿರಲಿದೆ ಹೆಲಿಟ್ಯಾಕ್ಸಿ ಸೇವೆ!!

ಹೇಗಿರಲಿದೆ ಹೆಲಿಟ್ಯಾಕ್ಸಿ ಸೇವೆ!!

ಇಬ್ಬರು ಪೈಲಟ್‌ಗಳು ಮತ್ತು 6 ರಿಂದ 13 ಪ್ರಯಾಣಿಕರು ಪ್ರಯಾಣಿಸಬಹುದಾದ ಬೆಲ್‌- 412 ಮಾದರಿ ಹೆಲಿಕಾಪ್ಟರ್ ಹಾಗೂ ಐವರು ಪ್ರಯಾಣಿಸುವ ಸಾಮರ್ಥ್ಯದ ಬೆಲ್‌ -405 ಮಾದರಿ ಹೆಲಿಕಾಪ್ಟರ್‌ಗಳನ್ನು ಈ ಸೇವೆಗಾಗಿ ಬಳಸಲಾಗುತ್ತದೆ.!!

15 ನಿಮಿಷದಲ್ಲಿ ಪ್ರಯಾಣ!!

15 ನಿಮಿಷದಲ್ಲಿ ಪ್ರಯಾಣ!!

ಎಲೆಕ್ಟ್ರಾನಿಕ್‌ ಸಿಟಿಯಿಂದ ವಿಮಾನ ನಿಲ್ದಾಣ ತಲುಪಲು ಸರಾಸರಿ ಎರಡೂವರೆ ಗಂಟೆ ಬೇಕಾಗುತ್ತಿದೆ. ಆದರೆ, ಇದೀಗ ‘ಹೆಲಿ ಟ್ಯಾಕ್ಸಿ ಸೇವೆ' ಸೇವೆಯಿಂದಾಗಿ ಕೇವಲ 15 ನಿಮಿಷಗಳಲ್ಲಿ ತಡೆರಹಿತವಾಗಿ ವಿಮಾನ ನಿಲ್ದಾಣ ತಲುಪಬಹುದು ಎಂದು ಥುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ ತಿಳೀಸಿದೆ.!!

ಕೈಗೆಟಕುವ ದರದಲ್ಲಿ ಸೇವೆ!!

ಕೈಗೆಟಕುವ ದರದಲ್ಲಿ ಸೇವೆ!!

ಉದ್ಯಮಿಗಳು, ಕಾರ್ಪೊರೇಟ್‌ ಪ್ರಯಾಣಿಕರು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರಿಗೆ ಹೆಲಿಟ್ಯಾಕ್ಸಿ ಪ್ರಯೋಜನಕಾರಿಯಾಗಿದ್ದು, ಕೈಗೆಟಕುವ ದರದಲ್ಲಿ ಹೆಲಿಟ್ಯಾಕ್ಸಿ ಸಿಗಲಿದೆ ಎನ್ನಲಾಗಿದೆ.! 2 ಸಾವಿರಿಂದ 3 ಸಾವಿರ ರೂಪಾಯಿಗಳಲ್ಲಿ ಹೆಲಿ ಟ್ಯಾಕ್ಸಿ ಸೇವೆ ಸಿಗಲಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ.!!

ವೈಟ್‌ ಫೀಲ್ಡ್‌ನಿಂದಲೂ ಸೇವೆ!!

ವೈಟ್‌ ಫೀಲ್ಡ್‌ನಿಂದಲೂ ಸೇವೆ!!

ಎಚ್‌ಎಎಲ್‌ ಮತ್ತು ವೈಟ್‌ ಫೀಲ್ಡ್‌ನಿಂದಲೂ ಸೇವೆ ಆರಂಭಿಸುವ ಉದ್ದೇಶವನ್ನು ಹೊಂದಿರುವುದಾಗಿ ಥುಂಬಿ ಏವಿಯೇಷನ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ತಿಳಿಸಿದೆ. ಇನ್ನು ಐಐಐಟಿ ಆವರಣದ ಬಳಿಯ ನೆಲದ ಮೇಲಿನ ಹೆಲಿಪ್ಯಾಡ್ ಆಯ್ಕೆ ಮಾಡಿದ್ದು, ಇದು ಬಸ್‌ ನಿಲ್ದಾಣದ ಸಮೀಪದಲ್ಲಿರುವ ಈ ತಾಣ ಭವಿಷ್ಯದಲ್ಲಿ ಮೆಟ್ರೊ ನಿಲ್ದಾಣಕ್ಕೂ ಹತ್ತಿರವಾಗುತ್ತದೆ ಎಂದು ಕಂಪನಿ ನಿರ್ದೇಶಕ ಕೆ.ಎನ್‌.ಜಿ. ನಾಯರ್‌ ತಿಳಿಸಿದ್ದಾರೆ.!!

ಓದಿರಿ:ಸ್ಮಾರ್ಟ್‌ಫೋನ್ ಹೆಚ್ಚು ಬಿಸಿಯಾಗದಂತೆ ತಡೆಯಲು 5 ಟಿಪ್ಸ್‌!!

ಬೆಂಗಳೂರಿನಲ್ಲಿ ನೂತನ 'ಕ್ಯಾಬ್' ಪ್ರಯಾಣದರ ನಿಗದಿ!..ಕಾರು ಹತ್ತುವ ಮೊದಲು ಇಲ್ಲಿ ನೋಡಿ!!

ಬೆಂಗಳೂರಿನಲ್ಲಿ ನೂತನ 'ಕ್ಯಾಬ್' ಪ್ರಯಾಣದರ ನಿಗದಿ!..ಕಾರು ಹತ್ತುವ ಮೊದಲು ಇಲ್ಲಿ ನೋಡಿ!!

ಸಣ್ಣ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ ಕನಿಷ್ಠ ದರ 44 ರುಪಾಯಿ ಹಾಗೂ ಐಷಾರಾಮಿ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ 80 ರುಪಾಯಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ದರ ಪಟ್ಟಿಯ ಪ್ರಕಾರ ಸಿಲಿಕಾನ್ ಸಿಟಿಯ ಕ್ಯಾಬ್ ಸೇವೆಯಲ್ಲಿ ಮತ್ತಷ್ಟು ಬದಲಾವಣೆ ಕಾಣಲಿದೆ ಎಂದು ಹೇಳಲಾಗಿದೆ.!! .
ಕಾರುಗಳ ಮಾರುಕಟ್ಟೆ ಬೆಲೆ ಆಧರಿಸಿ, ಕ್ಯಾಬ್ ಪ್ರಯಾಣ ದರವನ್ನು ಎ, ಬಿ, ಸಿ ಮತ್ತು ಡಿ ನಾಲ್ಕು ಮಾದರಿಯ ದರಗಳನ್ನು ನಿಗದಿಪಡಿಸಲಾಗಿದೆ. ಸಣ್ಣ ಕಾರುಗಳು ಡಿ ದರ್ಜೆಯಲ್ಲಿ ಬರುತ್ತಿದ್ದು, ಅವುಗಳಿಗೆ ಕನಿಷ್ಠ 44 ರುಪಾಯಿ ಹಾಗೂ 16 ಲಕ್ಷ ರುಪಾಯಿಗೂ ಹೆಚ್ಚಿನ ಬೆಲೆಯ ಕಾರುಗಳಿಗೆ ಎ ದರ್ಜೆ ನೀಡಲಾಗಿದ್ದು, ಅದಕ್ಕೆ ಕನಿಷ್ಠ 80 ರುಪಾಯಿ ನಿಗದಿಪಡಿಸಲಾಗಿದೆ.

ಟ್ಯಾಕ್ಸಿಗಳಿಗೆ ಕನಿಷ್ಠ ದರ ನಿಗದಿ ಪಡಿಸಿದ್ದರೂ ಕೂಡ ಟ್ಯಾಕ್ಸಿ ಕಂಪನಿಗಳು ಬಯಸಿದಷ್ಟು ಕಡಿಮೆ ದರ ವಿಧಿಸಬಹುದಾಗಿದೆ. ಆದರೆ ಕನಿಷ್ಠ ದರಕ್ಕಿಂತ ಹೆಚ್ಚು ಸಹ ವಿಧಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾದರೆ, ಕ್ಯಾಬ್ ಸೇವೆಯಲ್ಲಿ ಆಗಬಹುದಾದ ವ್ಯತ್ಯಯಗಳೇನು? ಗ್ರಾಹಕರ ಮೇಲೆ ಆಗಬಹುದಾದ ಪರಿಣಾಮಗಳೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
2013ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು!!

2013ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು!!

2013ರ ಜೂನ್‌ನಲ್ಲಿ ಕ್ಯಾಬ್ ದರಗಳ ಬಗ್ಗೆ ಕೊನೆಯದಾಗಿ ಪರಿಷ್ಕರಣೆ ಮಾಡಲಾಗಿತ್ತು. ಸಣ್ಣ ಮಾದರಿಯ ಕಾರುಗಳ ಗರಿಷ್ಠ ಪ್ರಯಾಣ ದರ 14.50 ರೂ. ಹಾಗೂ ಮಧ್ಯಮ ಮಾದರಿ ಕಾರುಗಳಿಗೆ 19.50 ರು.ಪ್ರಯಾಣ ದರ ನಿಗದಿಯಾಗಿತ್ತು.! ಈಗ ದರ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ದರ ಪರಿಷ್ಕರಣೆ ಮಾಡಿ, ಕನಿಷ್ಠ ದರ ನಿಗದಿಪಡಿಸಿದೆ.!!

ಕನಿಷ್ಠ ಪ್ರಯಾಣ ದರಕ್ಕೆ ಆಕ್ಷೇಪ!!

ಕನಿಷ್ಠ ಪ್ರಯಾಣ ದರಕ್ಕೆ ಆಕ್ಷೇಪ!!

4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಕನಿಷ್ಠ 44 ರೂ. ನಿಗದಿ ಮಾಡಿರುವುದರಿಂದ ಕ್ಯಾಬ್ ಮಾಲಿಕರ ವರಮಾನಕ್ಕೆ ಭಾರಿ ಹೊಡೆತ ಬೀಳಲಿದೆ.! ಈ ಮೊತ್ತದಲ್ಲಿ ಸೇವಾ ತೆರಿಗೆ ಹಾಗೂ ಆಪ್ ಕಂಪೆನಿಗಳ ಕಮಿಷನ್ ಕಡಿತವಾಗಿ ಉಳಿಯುವುದು ಸ್ವಲ್ಪಹಣ ಮಾತ್ರ.! ಹಾಗಾಗಿ, ಕನಿಷ್ಠ ದರವನ್ನು ಹೆಚ್ಚಿಸಬೇಕು ಎಂದು ಡ್ರೈವರ್‌ಗಳು ಹೇಳುತ್ತಿದ್ದಾರೆ.!!

ಪ್ರಯಾಣಿಕರಿಗೆ ಸ್ವಲ್ಪ ಲಾಭ?

ಪ್ರಯಾಣಿಕರಿಗೆ ಸ್ವಲ್ಪ ಲಾಭ?

ಇಂದಿನ ಪರಿಸ್ಥಿತಿಯಲ್ಲಿ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಕನಿಷ್ಠ 44 ದರ ನಿಗದಿ ಮಾಡಿದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಆದರೆ, ನಂತರದ ಪ್ರತಿ ಕಿಲೊಮೀಟರ್‌ಗೆ ಕನಿಷ್ಠ ಹಾಗೂ ಗರಿಷ್ಠ ದರವನ್ನು ಕಾರುಗಳ ಮೌಲ್ಯಕ್ಕೆ ಅನುಗುಣವಾಗಿ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಗ್ರಾಹಕರೋರ್ವರು ಅಭಿಪ್ರಾಯಪಟ್ಟಿದ್ದಾರೆ.!!

ಇನ್ನೂ ಪರಿಷ್ಕೃತ ದರ ಬಂದಿಲ್ಲ.!!

ಇನ್ನೂ ಪರಿಷ್ಕೃತ ದರ ಬಂದಿಲ್ಲ.!!

ಜನವರಿ 9ರಿಂದಲೇ ಪರಿಷ್ಕೃತ ದರ ಪಟ್ಟಿ ಆದೇಶ ಹೊರಬಿದ್ದ ಬಳಿಕವೂ ಉಬರ್ ಹಾಗೂ ಓಲಾ ಕಂಪನಿಗಳು 4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಈ ಹಿಂದಿನಂತೆಯೇ 80 ರೂ. ದರ ವಸೂಲಿ ಮಾಡುತ್ತಿವೆ. ಹೆಚ್ಚಿನ ಚಾಲಕರು ಪ್ರಯಾಣಿಕರಿಂದ ಈಗಲೂ ಹಿಂದಿನ ದರದ ಪ್ರಕಾರವೇ ಹಣ ಪಡೆಯುತ್ತಿದ್ದಾರೆ.!!

ಡ್ರೈವರ್‌ಗಳಿಗೆ ಲಾಭವಿಲ್ಲ.?

ಡ್ರೈವರ್‌ಗಳಿಗೆ ಲಾಭವಿಲ್ಲ.?

ದರ ಪರಿಷ್ಕರಣೆಯಿಂದ ಓಲಾ ಹಾಗೂ ಉಬರ್ ಕಂಪನಿಗಳಿಗಷ್ಟೆ ಲಾಭವಾಗಲಿದೆ. ಪ್ರತಿ ಕಿಲೊ ಮೀಟರ್‌ಗೆ ಇಂತಿಷ್ಟು ಹಣ ನೀಡುವ ಒಪ್ಪಂದ ಮಾಡಿಕೊಂಡಿರುವ ನಮಗೆ ಈ ದರ ಪರಿಷ್ಕರಣೆ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ ಡ್ರೈವರ್‌ಗಳು.!!

ಗ್ರಾಹಕರೇ ಟೋಲ್ ಕಟ್ಟಬೇಕು.!!

ಗ್ರಾಹಕರೇ ಟೋಲ್ ಕಟ್ಟಬೇಕು.!!

ಪ್ರಯಾಣಿಕರಿಂದ ಟೋಲ್ ವಸೂಲಿ ಮಾಡಲು ಅನುಮತಿ ನೀಡಿರುವುದು ಡ್ರೈವರ್‌ಗಳಿಗೆ ಸಂತಸದ ವಿಷಯವಾಗಿದೆ. ಆದರೆ, ಗ್ರಾಹಕರಿಗೆ ಪ್ರಯಾಣದ ಜೊತೆಗೆ ಟೋಲ್ ಕೂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದ್ದು, ಪರಿಷ್ಕೃತ ದರದ ಪ್ರಕಾರ ಹಣ ಪಡೆಯುವ ಬಗ್ಗೆ ಟ್ಯಾಕ್ಸಿ ಚಾಲಕರು ಮತ್ತು ಪ್ರಯಾಣಿಕರಲ್ಲಿಯೂ ಗೊಂದಲವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flying over traffic jams, travellers from Electronics City can reach airport in 15 minutes.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot