ದೇಶದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ರಸ್ತೆಗಳಲ್ಲಿ 'ಸ್ಮಾರ್ಟ್​ ಪಾರ್ಕಿಂಗ್'​ ಶುರು!!

ಪ್ರಯೋಗಾರ್ತವಾಗಿ ಸೈಂಟ್​ ಮಾರ್ಕ್​ ರಸ್ತೆಯಲ್ಲಿ ಸ್ಮಾರ್ಟ್​ ಪಾರ್ಕಿಂಗ್​ ವ್ಯವಸ್ಥೆ ಅಳವಡಿಸಲಾಗಿದ್ದು, ಸ್ಮಾರ್ಟ್​ ಪಾರ್ಕಿಂಗ್ ವ್ಯವಸ್ಥೆ ಎಲ್ಲರಿಗೂ ಆಕರ್ಷಕವಾಗಿ ಕಾಣುತ್ತಿದೆ.!!

|

ಇನ್ನು ಸಿಲಿಕಾನ್ ಸಿಟಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಲಾಗುವ ಸಾಧ್ಯತೆ ಇದೆ.!! ಹೌದು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ರಸ್ತೆಗಳಲ್ಲಿ ಸ್ಮಾರ್ಟ್​ ಪಾರ್ಕಿಂಗ್​ ವ್ಯವಸ್ಥೆ ಜಾರಿಯಾಗಿದೆ.! ಪ್ರಯೋಗಾರ್ತವಾಗಿ ಸೈಂಟ್​ ಮಾರ್ಕ್​ ರಸ್ತೆಯಲ್ಲಿ ಸ್ಮಾರ್ಟ್​ ಪಾರ್ಕಿಂಗ್​ ವ್ಯವಸ್ಥೆ ಅಳವಡಿಸಲಾಗಿದ್ದು, ಸ್ಮಾರ್ಟ್​ ಪಾರ್ಕಿಂಗ್ ವ್ಯವಸ್ಥೆ ಎಲ್ಲರಿಗೂ ಆಕರ್ಷಕವಾಗಿ ಕಾಣುತ್ತಿದೆ.!!

ಪಾರ್ಕಿಂಗ್​ ಡಿಸ್​ಪ್ಲೇಗಳು,​ ಶುಲ್ಕ ಪಾವತಿಸಲು ಪಾರ್ಕಿಂಗ್​ ಮೀಟರ್​, ಮತ್ತು ವಾಹನಗಳನ್ನು ಪಾರ್ಕ್​ ಮಾಡೋ ಸ್ಥಳದಲ್ಲಿ ಮ್ಯಾಗ್ನೆಟಿಕ್ ಐಆರ್ ಸೆನ್ಸಾರ್ನಂತಹ ಅತ್ಯಾಧುನಿಕ ವ್ಯವಸ್ಥೆ ಈಗ ರಸ್ತೆಗಳಿಗೆ ಇಳಿದಿದ್ದು, ಸ್ಮಾರ್ಟ್​ ಪಾರ್ಕಿಂಗ್ ತಂತ್ರಜ್ಞಾನದ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿ ಮಾಡಿರುವ ವಿಧಾನಗಳು ಈ ಕೆಳಕಂಡತಿವೆ.!!

ಸ್ಮಾರ್ಟ್​ ಪಾರ್ಕಿಂಗ್  ಹೇಗೆ?

ಸ್ಮಾರ್ಟ್​ ಪಾರ್ಕಿಂಗ್ ಹೇಗೆ?

ಬೆಂಗಳೂರಿನ ರಸ್ತೆಗಳಲ್ಲಿ ಪಾರ್ಕಿಂಗ್​ ಡಿಸ್​ಪ್ಲೇಗಳು ಮತ್ತು ಶುಲ್ಕ ಪಾವತಿಸಲು ಪಾರ್ಕಿಂಗ್​ ಮೀಟರ್ ಇರುತ್ತದೆ.! ಪಾರ್ಕಿಂಗ್​ ಮೀಟರ್ನಲ್ಲಿ ಶುಲ್ಕ ಪಾವತಿಸಿ ಕಾರುಗಳನ್ನು ಪಾರ್ಕ್ ಮಾಡಬಹುದಾಗಿದೆ.!! ವಾಹನಸವಾರರಿಗೆ ವ್ಯವಸ್ಥಿತ ನಿಲುಗಡೆ ವ್ಯವಸ್ಥೆ ಕಲ್ಪಿಸುವುದು ಬಿಬಿಎಂಪಿ ಉದ್ದೇಶವಾಗಿದ್ದು, ಇದರಿಂದ ಪಾರ್ಕಿಂಗ್ ದಟ್ಟಣೆ ಭಾರಿ ಕಡಿಮೆಯಾಗು ನಿರೀಕ್ಷೆ ಇದೆ.!!

ಐದು ನಿಮಿಷದೊಳಗೆ ನಿಮ್ಮ ವಾಹನ ಲಾಕ್​!!

ಐದು ನಿಮಿಷದೊಳಗೆ ನಿಮ್ಮ ವಾಹನ ಲಾಕ್​!!

ಒಂದು ವೇಳೆ ಪಾರ್ಕಿಂಗ್​ ಶುಲ್ಕ ಪಾವತಿಸದೆ ವಾಹನ ಪಾರ್ಕ್​ ಮಾಡಿದಲ್ಲಿ ಕೂಡಲೆ ಎನ್ಫೋರ್ಸ್​ಮೆಂಟ್​ ಸಿಸ್ಟಂಗೆ ಮಾಹಿತಿ ರವಾನೆಯಾಗಿ ಐದು ನಿಮಿಷದೊಳಗೆ ನಿಮ್ಮ ವಾಹನ ಲಾಕ್​ ಆಗಲಿದೆ. ನಂತರ ಟ್ರಾಫಿಕ್​ ಪೊಲೀಸರಿಗೆ ಈ ಮಾಹಿತಿ ರವಾನೆಯಾಗಿ ನಿಮ್ಮ ವಾಹನ ಸೀಝ್ ಆಗುತ್ತದೆ.!!

ಆಪ್​ ಮೂಲಕವೂ ಪಾರ್ಕಿಂಗ್ ಬುಕ್.!!

ಆಪ್​ ಮೂಲಕವೂ ಪಾರ್ಕಿಂಗ್ ಬುಕ್.!!

ಆಪ್​ ಮೂಲಕವೂ ಪಾರ್ಕಿಂಗ್​ ಸ್ಥಳದ ವಿವರ, ಅಥವಾ ಮೊದಲೇ ಶುಲ್ಕ ಪಾವತಿಸಿ ಜಾಗ ರಿಸರ್ವ್​ ಮಾಡಬಹುದಾಗಿದೆ.!! ಹಾಗಾಗಿ, ಪಾರ್ಕ್ ಮಾಡುವ ನಿಮ್ಮ ಹತ್ತಿರದ ಸ್ಥಳ ಖಾಲಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಆಪ್‌ ಮೂಲಕವೇ ತಿಳಿಯಬಹುದು.!!

ಮೂರು ವಿಧದಲ್ಲಿ ಪಾರ್ಕಿಂಗ್​ ಶುಲ್ಕ!!

ಮೂರು ವಿಧದಲ್ಲಿ ಪಾರ್ಕಿಂಗ್​ ಶುಲ್ಕ!!

ನಗರದ ಆಯ್ದ 85 ರಸ್ತೆಗಳಲ್ಲಿ ವ್ಯವಸ್ಥಿತ ಪಾರ್ಕಿಂಗ್ ಕಲ್ಪಿಸಲು ಪಾಲಿಕೆಮುಂದಾಗಿದ್ದು, ಪಾರ್ಕಿಂಗ್​ ಶುಲ್ಕವನ್ನು ಮೂರು ವಿಭಾಗದಲ್ಲಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಎ ವರ್ಗದಲ್ಲಿ 14, ಬಿವರ್ಗದಲ್ಲಿ 46 ಮತ್ತು ಸಿ ವರ್ಗದಲ್ಲಿ 25 ರಸ್ತೆಗಳಿವೆ.10 ರೂಪಾಯಿಯಿಂದ 100 ರೂಪಾಯಿಗಳವರೆಗೂ ದರ ವಿಧಿಸಲಾಗುತ್ತದೆ ಎನ್ನಲಾಗಿದೆ.!!

 2,500 ಕಾರು ಮತ್ತು 5 ಸಾವಿರ ಬೈಕ್!!

2,500 ಕಾರು ಮತ್ತು 5 ಸಾವಿರ ಬೈಕ್!!

ಸ್ಮಾರ್ಟ್​ ಪಾರ್ಕಿಂಗ್​ ವ್ಯವಸ್ಥೆ ಮೂಲಕ 2,500 ಕಾರು ಮತ್ತು 5 ಸಾವಿರ ಬೈಕ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಪಾರ್ಕಿಂಗ್​ ಮಾಫಿಯಾ ತಡೆದು, ಪಾಲಿಕೆ ಆದಾಯ ಹೆಚ್ಚಿಸುವ ಬಿಬಿಎಂಪಿಯ ಪ್ಲಾನ್ ಜನರಿಗೆ ಹೇಗೆ ಉಪಯೋಗವಾಗಲಿದೆ ಎಂದು ಕಾದು ನೋಡಬೇಕು.!!

<strong>ನುಬಿಯಾ ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!..ಖರೀದಿಸಲು ಇದು ಬೆಸ್ಟ್ ಟೈಮ್!!?</strong>ನುಬಿಯಾ ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್!!..ಖರೀದಿಸಲು ಇದು ಬೆಸ್ಟ್ ಟೈಮ್!!?

Best Mobiles in India

English summary
Two companies, Central Parking Services and Civic Smart have come forward to maintain the parking spots. We will decide on one soon." to know more visi tto kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X