ಬೆಂಗಳೂರಿನ ಹುಡುಗಿ ಹೆಸರನ್ನು ಒಂದು ಗ್ರಹಕ್ಕೆ ಇಡಲು ಕಾರಣ ಇದೆ!!
'ಸಾಹಿತಿ ಪಿಂಗಾಲಿ' ಎಂಬ ಬೆಂಗಳೂರಿನ ಬಾಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದಾರೆ.!!
ಕೇವಲ 16 ನೇ ವಯಸ್ಸಿನಲ್ಲಿಯೇ ಬೆಂಗಳೂರಿನ ವಿದ್ಯಾರ್ಥಿನಿಯೊರ್ವರು ಹೊಸ ತಂತ್ರಜ್ಞಾನವನ್ನು ಒಳಗೊಂಡಿರುವ ಪರಿಸರ ಪೂರಕ ಮೊಬೈಲ್ ಆಪ್ ಕಂಡುಹಿಡಿದು ಇಡೀ ವಿಶ್ವದಲ್ಲಿಯೇ ಪ್ರಶಂಸೆಗೆ ಪಾತ್ರರಾಗಿದ್ದಾರೆ.!! ಆ ಪ್ರಶಂಸೆ ಅಂತಿಂಥದಲ್ಲ ಬದಲಾಗಿ ಒಂದು ಗ್ರಹ ಒಂದಕ್ಕೆ ಆ ಹುಡುಗಿಯ ಹೆಸರನ್ನು ಇಡಲು ತೀರ್ಮಾನಿಸಿರುವುದು.!!
ಹೌದು, ನದಿಗಳು, ಕೆರೆಗಳು, ಸರೋವರಗಳು ಎಷ್ಟೆಲ್ಲಾ ಕಲುಷಿತಗೊಳ್ಳುತ್ತಿವೆ. ಆ ಕೆರೆಗಳನ್ನು ಮತ್ತೆ ಪುನಶ್ಚೇತಗೊಳಿಸುವುದು ಹೇಗೆ ಎಂಬ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು ಹೊಸ ತಂತ್ರಜ್ಞಾನವನ್ನು ಬಳಸಿ ಮೊಬೈಲ್ ಆಪ್ (app on lake pollution) ಕಂಡುಹಿಡಿದಿರುವ 'ಸಾಹಿತಿ ಪಿಂಗಾಲಿ' ಎಂಬ ಬೆಂಗಳೂರಿನ ಬಾಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದಾರೆ.!!

ಇವರು ಕೆರೆಗಳು, ನದಿಗಳು, ಸರೋವರಗಳಲ್ಲಿನ ಕಸವನ್ನು ಗುರುತಿಸುವುದು ಮತ್ತು ನೀರಿನ ಸ್ಥಿತಿಯನ್ನು ಆಗಿಂದ್ದಾಗೆ ತಿಳಿಸುವ ಆಪ್ ಕಂಡುಹಿಡಿದಿದ್ದು, ಈ ಆಪ್‌ನಲ್ಲಿಯೇ ಆಯಾ ಪ್ರದೇಶಗಳಲ್ಲಿ ಮಾಲಿನ್ಯ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಸುಲಭವಾಗಿ ತಿಳಿದು ಅವುಗಳ ಸ್ವಚ್ಛತೆ ಕಾರ್ಯ ಕೈಗೊಳ್ಳಬಹುದಾಗಿದೆ.!!

ಇನ್‌ವೆಂಚರ್ ಅಕಾಡೆಮಿ ಎಂಬ ಕಾಲೇಜಿನಲ್ಲಿ ದ್ವಿತಿಯ ಪಿಯುಸಿ ಓದುತ್ತಿರುವ 'ಸಾಹಿತಿ ಪಿಂಗಾಲಿ' ಅವರು ಈ ಸಾಧನೆಗಾಗಿ ಅಮೆರಿಕಾದ ವಾಷಿಂಗ್ಟನ್ ಡಿಸಿ ನಗರದಲ್ಲಿ ನಡೆದ Intel International Science and Engineering Fair (ISEF) ಎಗ್ಜಿಬಿಷನ್‌ನಲ್ಲಿ 3 ವಿಧದ ಪ್ರಶಸ್ತಿಗಳನ್ನು ಪಡೆದಿದ್ದು, MIT Lincoln Laboratory and Society for Science and the Public ಸೊಸೈಟಿಯಿಂದ ಗ್ರಹ ಒಂದಕ್ಕೆ ಇವರ ಹೆಸರನ್ನಿಡಲು ಮುಂದಾಗಿದ್ದಾರೆ.!!


Click it and Unblock the Notifications