ಜಗತ್ತಿನ ಚಾಂಪಿಯನ್ ಆಗುವತ್ತ 'ಬೆಂಗಳೂರು'!..ಪ್ರತಿಭಾವಂತರಿಗೆ ಸಂದ ಗೌರವ!!

  |

  ಪ್ರತಿಭಾವಂತ ಮಾನವ ಸಂಪನ್ಮೂಲ ಮತ್ತು ಅತ್ಯುತ್ತಮ ಉದ್ಯಮಶೀಲ ಮಾರುಕಟ್ಟೆಯನ್ನು ಹೊಂದಿರುವ ಬೆಂಗಳೂರಿಗೆ ಅಮೆರಿಕದ ತಂತ್ರಜ್ಞಾನ ದಿಗ್ಗಜ ಸಂಸ್ಥೆ ಇಂಟೆಲ್‌ ಮತ್ತೊಂದು ಸಿಹಿಸುದ್ದಿ ನೀಡಿದೆ. ಬೆಂಗಳೂರಿನಲ್ಲಿ ತನ್ನ ಎರಡನೇ ಅತಿ ದೊಡ್ಡ ಚಿಪ್‌ ಡಿಸೈನ್‌ ಸೆಂಟರ್‌ ತೆರೆದಿರುವ ಇಂಟೆಲ್ ಕಂಪನಿ ನಗರದಲ್ಲಿ ತನ್ನ ಚಟುವಟಿಕೆಗಳನ್ನು ವ್ಯಾಪಕವಾಗಿ ವಿಸ್ತರಿಸಿದೆ.

  1988ರಲ್ಲಿ ಬೆಂಗಳೂರಿನಲ್ಲಿ ಸೇಲ್ಸ್ ಕಚೇರಿಯನ್ನು ತೆರೆದಿದ್ದ ಇಂಟೆಲ್, ಅದಾಗಿ 10 ವರ್ಷಗಳ ನಂತರ ಇಂಟೆಲ್‌ ಇಂಡಿಯಾ ಡೆವಲಪ್‌ಮೆಂಟ್‌ ಸೆಂಟರ್‌ (ಐಐಡಿಸಿ) ಆರಂಭಿಸಿತ್ತು. ನಂತರದ 20 ವರ್ಷಗಳಲ್ಲಿ ಕಂಪನಿ ತನ್ನ ಚಟುವಟಿಕೆಗಳನ್ನು ಇಲ್ಲಿ ವ್ಯಾಪಕವಾಗಿ ವಿಸ್ತರಿಸಿದ್ದು, ಇದೀಗ ಇಂಟೆಲ್‌ ಸಂಸ್ಥೆ ಉತ್ಪನ್ನಗಳ ವಿನ್ಯಾಸ, ಅಭಿವೃದ್ಧಿಗೆ ಬೆಂಗಳೂರಿನ ಘಟಕ ನಿರ್ಣಾಯಕವಾಗಿದೆ.

  ಜಗತ್ತಿನ ಚಾಂಪಿಯನ್ ಆಗುವತ್ತ 'ಬೆಂಗಳೂರು'!..ಪ್ರತಿಭಾವಂತರಿಗೆ ಸಂದ ಗೌರವ!!

  ಬೆಂಗಳೂರಿನಲ್ಲಿ ಇಂಟೆಲ್ ಕಂಪೆನಿಯ 2ನೇ ಅತಿ ದೊಡ್ಡ ಚಿಪ್‌ ಡಿಸೈನ್‌ ಸೆಂಟರ್‌ ಈಗ ತೆರೆದಿರುದರಿಂದ ಚಿಪ್‌ ಡಿಸೈನ್‌ ಚಾಂಪಿಯನ್ ಆಗುವತ್ತ ಬೆಂಗಳೂರು ಹೆಜ್ಜೆಹಾಕಿದೆ. ಇನ್ನು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ವೃದ್ಧಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾದರೆ, ಏನಿದು ವಿಶೇಷ ವರದಿ ಎಂಬುದನ್ನು ಮುಂದಿನ ಸ್ಲೈಡರ್‌ಗಲ್ಲಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬೆಂಗಳೂರು ಈಗ ಇಂಟೆಲ್‌ಮಯ!

  ಮೊದಲೇ ಹೇಳಿದಂತೆ, ಬೆಂಗಲೂರಿನಲ್ಲಿ ತನ್ನ ಎರಡನೇ ಅತಿ ದೊಡ್ಡ ಚಿಪ್‌ ಡಿಸೈನ್‌ ಸೆಂಟರ್‌ ತೆರೆದಿರುವ ಇಂಟೆಲ್ ತನ್ನ ಚಟುವಟಿಕೆಗಳನ್ನು ಇಲ್ಲಿ ವ್ಯಾಪಕವಾಗಿ ವಿಸ್ತರಿಸಿದೆ. ದಿನ ನಿತ್ಯ ಬಳಕೆಯ ಸಾಧನಗಳಲ್ಲಿ ನಿರ್ಣಾಯಕವಾಗಿರುವ ಸೆಮಿಕಂಡಕ್ಟರ್ ಚಿಪ್‌ಗಳ ವಿನ್ಯಾಸ ಮತ್ತು ಅಭಿವೃದ್ಧಿಯ ಚಟುವಟಿಕೆಗಳು ಬೆಂಗಳೂರಿಗೆ ಗಣನೀಯವಾಗಿ ಸ್ಥಳಾಂತರವಾಗಿವೆ

  ಬಡ್ತಿ ಪಡೆದ ಬೆಂಗಳೂರು!

  ಇದುವರೆಗೆ ಅಮೆರಿಕದ ನಂತರ ಇಸ್ರೇಲ್‌ನಲ್ಲಿ ಇಂಟೆಲ್ ಕಂಪನಿಯ ಚಿಪ್‌ ವಿನ್ಯಾಸ ಮತ್ತು ಅಭಿವೃದ್ಧಿ ಹೆಚ್ಚು ನಡೆಯುತ್ತಿತ್ತು. ಆದರೆ ಈಗ ಎರಡನೆಯ ಸ್ಥಾನಕ್ಕೆ ಬೆಂಗಳೂರಿನ ಕ್ಯಾಂಪಸ್ ಬಡ್ತಿ ಪಡೆದಿದೆ. ಸಿಪಿಯು, ಗ್ರಾಫಿಕ್ಸ್‌, ಎಸ್‌ಒಸಿ‌ ಸಾಫ್ಟ್‌ವೇರ್‌ ಇತ್ಯಾದಿ ವಿಭಾಗಗಳಲ್ಲಿ ಇಂಟೆಲ್‌ ಉತ್ಪನ್ನಗಳ ಎಂಜಿನಿಯರಿಂಗ್ ವಿನ್ಯಾಸ, ಅಭಿವೃದ್ಧಿಗೆ ಬೆಂಗಳೂರಿನ ಘಟಕ ನಿರ್ಣಾಯಕ.

  ಪ್ರತಿಭಾವಂತರಿಗೆ ಸಂದ ಗೌರವ

  ಬೆಂಗಳೂರಿನಲ್ಲಿ ಲಭ್ಯವಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲವು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಪ್ರಗತಿಗೆ ಕಾರಣ. ಈಗ ಇಂಟೆಲ್‌ ಬೆಂಗಳೂರಿನಲ್ಲಿ ಎರಡನೇ ಅತಿ ದೊಡ್ಡ ಕೇಂದ್ರ ಆರಂಭಿಸುತ್ತಿರುವುದು ಇಲ್ಲಿನ ಪ್ರತಿಭಾವಂತರಿಗೆ ಸಂದ ಗೌರವ ಎಂದು ಇಂಟೆಲ್‌ ಇಂಡಿಯಾದ ತಂತ್ರಜ್ಞಾನ ಸಲಹೆಗಾರರಾದ ಎಸ್‌.ಆರ್‌. ವಿಜಯಶಂಕರ ಅವರು ಹೇಳುತ್ತಾರೆ.

  ಬೆಳವಣಿಗೆಗೆ ಗಣನೀಯ ಪ್ರಭಾವ

  ಅಮೆರಿಕದ ಸಿಲಿಕಾನ್‌ ವ್ಯಾಲಿಯಿಂದ ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಕರೆಸಿಕೊಳ್ಳುತ್ತಿರುವ ಬೆಂಗಳೂರಿಗೆ ಇಂಟೆಲ್‌ ಘಟಕ ವಿಸ್ತರಣೆ ಮಾಡಿರುವುದರಿಂದ ಬೆಂಗಳೂರಿನ ತಂತ್ರಜ್ಞಾನ ಬೆಳವಣಿಗೆಗೆ ಗಣನೀಯ ಪ್ರಭಾವ ಬೀರಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಪ್‌ ಡಿಸೈನ್‌ ಚಾಂಪಿಯನ್ ಆಗಿ ಬೆಂಗಳೂರು ಪರಿವರ್ತನೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

  ಉದ್ಯೋಗವಕಾಶಕ್ಕೆ ಹೆಬ್ಬಾಗಿಲು!

  ಬೆಂಗಳೂರಿನಲಲ್ಲಿ ಇಂಟೆಲ್‌ ಘಟಕ ಆರಂಭವಾಗಿರುವುದರಿಂದ, ಬಿಡಿ ಭಾಗಗಳನ್ನು ಪೂರೈಸುವ, ಪೂರಕ ಸೇವೆಗಳನ್ನು ಒದಗಿಸುವ ಸ್ಟಾರ್ಟ್‌ಆಪ್‌ಗಳ ಬೆಳವಣಿಗೆಗಳಿಗೆ ಸಹಾಯವಾಗಲಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ವೃದ್ಧಿಸಿದರೆ, ಟ್ಯಾಕ್ಸಿ, ಹೌಸಿಂಗ್, ವ್ಯಾಪಾರ ಕ್ಷೇತ್ರಗಳಲ್ಲಿ ಗಣನೀಯವಾಗಿ ವ್ಯವಹಾರ ಹೆಚ್ಚುವ ಅಂದಾಜನ್ನು ಇಡಲಾಗಿದೆ.

  ಬೆಂಗಳೂರಿನಲ್ಲಿ ಸದಾ ರೆಡಿ

  ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಫ್ರಿಡ್ಜ್, ಕಾರು, ಬೈಕು, ಇಂಟರ್‌ನೆಟ್‌ ಆಫ್‌ ಥಿಂಗ್ಸ್, 5ಜಿ, ಏರ್‌ಕ್ರಾಫ್ಟ್‌ಗಳಿಂದ ಆರಂಭಿಸಿ, ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಸಾಧನಗಳ ತನಕ ಎಲ್ಲೆಡೆ ಚಿಪ್‌ಗಳು ಅನಿವಾರ್ಯವಾಗುತ್ತಾ ಬದಲಾಗುತ್ತಿವೆ. ಈ ಸಮಯದಲ್ಲಿ. ಇವುಗಳ ವಿನ್ಯಾಸ ಮಾಡಬಲ್ಲ ಪ್ರತಿಭಾವಂತ ಮಾನವ ಸಂಪನ್ಮೂಲ ಬೆಂಗಳೂರಿನಲ್ಲಿ ಸದಾ ರೆಡಿಯಾಗಿದೆ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Intel bengaluru centre: bangalore becomes chip design champion?.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more