ಐ.ಟಿ ಉದ್ಯೋಗಗಳ ಸೃಷ್ಟಿಯಲ್ಲಿ ನಮ್ಮ ಬೆಂಗಳೂರಿಗೆ ದೇಶದಲ್ಲಿಯೇ ಅಗ್ರ ಸ್ಥಾನ!!

  ಭಾರತದ ಐಟಿ ಹೆಬ್ಬಾಗಿಲು ಎಂದೇ ಹೆಸರಾಗಿರುವ ನಮ್ಮ ಬೆಂಗಳೂರು ನಗರತಂತ್ರಜ್ಞಾನ ವಲಯದ ಉದ್ಯೋಗಗಳ ಸೃಷ್ಟಿಯಲ್ಲಿ ಬೆಂಗಳೂರು ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿದೆ. ಸ್ಟಾರ್ಟ್‌ಅಪ್‌ಗಳ ರಾಜಧಾನಿಯು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸುವುದರಲ್ಲಿಯೂ ಮುಂಚೂಣಿಯಲ್ಲಿ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

  ಐ.ಟಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳ ಹುಡುಕಾಟದಲ್ಲಿ ಇರುವವರಿಗೆ ಬೆಂಗಳೂರು ನಗರವು ದೇಶದ ಇತರ ಎಲ್ಲಾ ನಗರಗಳಿಗಿಂತ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತಿದೆ. 'ಇಂಡೀಡ್‌' ಅಂತರ್ಜಾಲ ತಾಣ ನೀಡಿರುವ ಮಾಹಿತಿ ಪ್ರಕಾರ, ಐ.ಟಿ ಕ್ಷೇತ್ರದಲ್ಲಿನ ಉದ್ಯೋಗ ಅವಕಾಶಗಳ ಪೈಕಿ, ಶೇ 22ರಷ್ಟು ಬೆಂಗಳೂರಿನಲ್ಲಿ ಲಭ್ಯ ಇವೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.

  ಐ.ಟಿ ಉದ್ಯೋಗಗಳ ಸೃಷ್ಟಿಯಲ್ಲಿ ನಮ್ಮ ಬೆಂಗಳೂರಿಗೆ ದೇಶದಲ್ಲಿಯೇ ಅಗ್ರ ಸ್ಥಾನ!!

  ಭಾರತದ 'ಸಿಲಿಕಾನ್‌ ಕಣಿವೆ' ಖ್ಯಾತಿಯ ನಗರವು, ತಂತ್ರಜ್ಞಾನ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸುತ್ತಿದೆ. ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯಲ್ಲಿಯೂ ಬೆಂಗಳೂರು ನಗರವು ದೇಶದ ಗಮನ ಸೆಳೆದಿದೆ ಎಂದು 'ಇಂಡೀಡ್' ಅಂತರ್ಜಾಲ ತಾಣ ಹೇಳಿದ್ದು, ದೇಶದ ಐ.ಟಿ ಕ್ಷೇತ್ರದ ಬಗ್ಗೆ ಮತ್ತಷ್ಟು ಕತೋಹಲಕಾರಿ ಅಂಶಗಳನ್ನು ಸಹ ಸಮೀಕ್ಷೆಯಲ್ಲಿ ನೀಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬೆಂಗಳೂರು ಫಸ್ಟ್!!

  ಮೊದಲೇ ಹೇಳಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸೃಷ್ಟಿಯಾಗುವ ಶೇ.22ರಷ್ಟು ಉದ್ಯೋಗಗಳು ಬೆಂಗಳೂರಿನ ಪಾಲಾಗುತ್ತಿದೆ. ದಿಲ್ಲಿ ಶೇ.11 ಮತ್ತು ಪುಣೆ ಶೇ.10 ಪಾಲನ್ನು ಹೊಂದಿದೆ.ತಂತ್ರಜ್ಞಾನ ವಲಯದ ಉದ್ಯೋಗ ನೀಡುವ ಇತರ ನಗರಗಳಲ್ಲಿ ಹೈದರಾಬಾದ್‌ ಶೇ.9, ಮುಂಬಯಿ ಶೇ.8, ಚೆನ್ನೈ ಶೇ.7, ಮೊಹಾಲಿ ಶೇ.4, ಅಹಮದಾಬಾದ್‌ ಶೇ.3ರಷ್ಟು ಪಾಲನ್ನು ಹೊಂದಿವೆ.

  ಐಟಿ ಉದ್ಯೋಗದ ಒಲವು!

  ಉದ್ಯೋಗಗಳ ಅವಕಾಶಗಳನ್ನು ಎದುರು ನೋಡುವವವರು 20 ರಿಂದ 29 ವರ್ಷದ ಒಳಗಿನವರಾಗಿದ್ದಾರೆ. ಹೆಚ್ಚಿನ ಜನ ಐಟಿ ಉದ್ಯೋಗಗಳನ್ನು ಪಡೆಯಲು ಹೆಚ್ಚು ಇಷ್ಟಪಡುತ್ತಾರೆ.55 ವರ್ಷ ಮೀರಿದವರೂ ಈ ಕ್ಷೇತ್ರದ ಬಗ್ಗೆ ಆಸಕ್ತಿ ತಳೆದಿದ್ದಾರೆ. ಆದರೆ, 40 ರಿಂದ 49 ವರ್ಷದವರು ಮಾತ್ರ ಈ ಕ್ಷೇತ್ರದ ಬಗ್ಗೆ ಕಡಿಮೆ ಒಲವು ತೋರಿದ್ದಾರೆ ಎಂಬುದು ಅಧ್ಯಯನದಲ್ಲಿ ತಿಳಿದು ಬಂದಿದೆ.

  ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
  ಹೊಸ ಉದ್ಯೋಗಗಳ ಸೃಷ್ಟಿ!

  ಹೊಸ ಉದ್ಯೋಗಗಳ ಸೃಷ್ಟಿ!

  ದೇಶದಾದ್ಯಂತ 2015ರ ಮೇ ತಿಂಗಳಿನಿಂದ 2018ರ ಮೇ ತಿಂಗಳ ಅವಧಿಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ಮಾಹಿತಿ ತಂತ್ರಜ್ಞಾನ ಬದಲಾವಣೆಯ ಅಳವಡಿಕೆಯಿಂದ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಸಮೀಕ್ಷೆ ಹೇಳಿದೆ. ಇತರೆ ಕ್ಷೇತ್ರಗಳಿಗಿಂತ ಈಗಲೂ ಕೂಡ ಮಾಹಿತಿ ತಂತ್ರಜ್ಞಾನ ಕ್ಷೇತ್ರವೇ ಅಧಿಪತ್ಯ ಸಾಧಿಸಿದೆ.

  ಸ್ಟಾರ್ಟ್‌ಅಪ್‌ ರಾಜಧಾನಿ!

  ತಂತ್ರಜ್ಞಾನ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗಗಳನ್ನು ಒದಗಿಸುತ್ತಿರುವ ಬೆಂಗಳೂರು ಸ್ಟಾರ್ಟ್‌ಅಪ್‌ಗಳ ಸ್ಥಾಪನೆಯಲ್ಲಿಯೂ ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ ಎಂದು ‘ಇಂಡೀಡ್' ಅಂತರ್ಜಾಲ ತಾಣ ತಿಳಿಸಿದೆ.

  ಬೆಂಗಳೂರು ಫಸ್ಟ್ ಏಕೆ?

  2020 ರ ವೇಳೆಗೆ 20,000 ಟೆಕ್ ಉದ್ಯಮಗಳ ಬೆಳವಣಿಗೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರ ಉದ್ಯಮಶೀಲತೆಗೆ ಅನುಕೂಲವಾಗುವಂತೆ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯದಲ್ಲೇ ಅತ್ಯಂತ ನವೀನ ಉದ್ಯಮಗಳನ್ನು ಗುರುತಿಸಿ ಬೆಂಬಲಿಸುವ ಗುರಿಯನ್ನು ಹೊಂದಿರುವ ಎಲಿವೇಟ್ 100 ಯೋಜನೆ ನಗರದಲ್ಲಿ ಯಶಸ್ವಿಯಾರುವುದು ಇದಕ್ಕೆ ಕಾರಣ ಕೂಡ ಹೌದು.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  According to Indeed, 22% of all job postings in the country originate from Bengaluru.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more