Home
ಸುದ್ದಿಜಾಲ

ಬೆಂಗಳೂರಿನಲ್ಲಿ ನಡೆದ ಈ ರೀತಿಯ ಆನ್‌ಲೈನ್ ವಂಚನೆಯನ್ನು ನೀವು ಎಂದೂ ಕೇಳಿಲ್ಲ!

ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತಿದೆ. ಆದರೆ, ಈ ಒಂದು ವಂಚನೆ ಘಟನೆಯಲ್ಲಿ ಮೋಸಹೋಗದೇ ಇರುವವನು ಕೂಡ ಮೋಸಹೋಗಬಹುದಾದ ಸಾಧ್ಯತೆಯೇ ಹೆಚ್ಚಿದೆ. ಏಕೆಂದರೆ, ಹಳೇ ವಸ್ತುಗಳ ಮಾರಾಟ ಜಾಲತಾಣಗಳಿಗೆ ಯಾರದ್ದೋ ಕಾರು, ಬೈಕ್​ಗಳ ಫೋಟೋ ಅಪ್​ಲೋಡ್ ಮಾಡಿ ವಂಚಿಸುವ ಮೋಸಗಾರರ ಬಗ್ಗೆ ಕೇಳಿರುತ್ತೀರಿ.. ಆದರೆ, ಇಲ್ಲೊರ್ವ ವಂಚಕ ಮನೆಗಳನ್ನೇ ಭೋಗ್ಯಕ್ಕೆ ನೀಡಿ ವಂಚಿಸಿದ್ದಾನೆ.

ಹೌದು, ಒಎಲ್‌ಎಕ್ಸ್, ಕ್ವಿಕ್ಕರ್ ಮತ್ತು ಫೇಸ್‌ಬುಕ್ ಸೇರಿದಂತೆ ಹಲವು ಜಾಲತಾಣಗಳಲ್ಲಿ ಬೇರೆಯವರ ಫ್ಲ್ಯಾಟ್, ಮನೆಗಳ ಫೋಟೋವನ್ನು ಜಾಲತಾಣಕ್ಕೆ ಅಪ್​ಲೋಡ್ ಮಾಡಿ ಅವುಗಳನ್ನು ಬಾಡಿಗೆಗೆ ಅಥವಾ ಭೋಗ್ಯಕ್ಕೆ ಕೊಟ್ಟು ಕಟ್ಟಡ ಮಾಲೀಕರಿಗೆ ವಂಚಿಸುತ್ತಿದ್ದ ಖತರ್ನಾಕ್ ವಂಚಕ ಇದೀಗ ಸಿಕ್ಕಿಬಿದ್ದಿದ್ದಾನೆ. ಮನೆ, ಫ್ಲ್ಯಾಟ್​ಗಳ ಫೋಟೋಗಳನ್ನು ಜಾಲತಾಣಗಳಲ್ಲಿ ಹಾಕಿ ಬಾಡಿಗೆಗೆ ದೊರೆಯುತ್ತದೆ ಎಂದು ಜಾಹೀರಾತು ನೀಡುತ್ತಿದ್ದ ಆತ ಎಂತಹ ಬುದ್ದಿವಂತರೂರನ್ನೂ ಕೂಡ ಗುಂಡಿಗೆ ಬೀಳಿಸಿದ್ದಾನೆ.

ಬೆಂಗಳೂರಿನಲ್ಲಿ ನಡೆದ ಈ ರೀತಿಯ ಆನ್‌ಲೈನ್ ವಂಚನೆಯನ್ನು ನೀವು ಎಂದೂ ಕೇಳಿಲ್ಲ!

ಬಿಟಿಎಂ ಲೇಔಟ್ 2ನೇ ಹಂತದ ನಿವಾಸಿ ಮೊಹಮ್ಮದ್ ಅಬ್ದುಲ್ ರಹೀಂ (47) ಬಂಧಿತ ವಂಚಕನಾಗಿದ್ದು, ಮಾರತ್​ಹಳ್ಳಿ ಠಾಣೆ ವ್ಯಾಪ್ತಿಯಲ್ಲೇ ಇದೇ 8 ಕಡೆಗಳಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಕೊಟ್ಟಿದ್ದ ಮೊಬೈಲ್ ನಂಬರ್ ಮತ್ತು ಮುಖ ಚಹರೆ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ. ಹಾಗಾದರೆ, ಈತ ಆನ್‌ಲೈನಿನಿನಲ್ಲಿ ಹೇಗೆ ವಂಚಿಸುತ್ತಿದ್ದ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಇವನು ಖತರ್​ನಾಕ್ ವಂಚಕ

ಇವನು ಖತರ್​ನಾಕ್ ವಂಚಕ

ಹಿಂದಿ, ಇಂಗ್ಲಿಷ್ ಮತ್ತು ಕನ್ನಡವನ್ನು ನಿರರ್ಗಳವಾಗಿ ಮಾತನಾಡುವ ಮೊಹಮ್ಮದ್ ಅಬ್ದುಲ್ ರಹೀಂ ಎಂಬವ ಖತರ್​ನಾಕ್ ವಂಚಕ. ಮಾರತ್​ಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಫ್ಲ್ಯಾಟ್ ಅಥವಾ ಮನೆಗಳು ಬಾಡಿಗೆಗೆ ಲಭ್ಯ ಎಂದು ಬೋರ್ಡ್ ಹಾಕಿರುವುದನ್ನು ಗಮನಿಸುತ್ತಿದ್ದ ಈತ, ವಂಚನೆ ಮಾಡುವ ಸಲುವಾಗಿಯೇ ಸಾವಿರಾರು ರೂ.ಹಣವನ್ನು ಹೂಡಿಕೆ ಮಾಡುತ್ತಿದ್ದ.

2 ತಿಂಗಳ ಮುಂಗಡ ಬಾಡಿಗೆ

2 ತಿಂಗಳ ಮುಂಗಡ ಬಾಡಿಗೆ

ಸುತ್ತಮುತ್ತಲ ಪ್ರದೇಶದಲ್ಲಿ ಫ್ಲ್ಯಾಟ್ ಅಥವಾ ಮನೆಗಳು ಬಾಡಿಗೆಗೆ ಲಭ್ಯ ಎಂದು ಬೋರ್ಡ್ ಹಾಕಿರುವುದನ್ನು ಗಮನಿಸಿ ಆ ಕಟ್ಟಡ ಮಾಲೀಕರನ್ನು ಭೇಟಿ ಮಾಡುತ್ತಿದ್ದ. ನಂತರ ಖಾಲಿ ಇರುವ ಮನೆಗಳನ್ನು ಬಾಡಿಗೆ ಪಡೆಯುವುದಾಗಿ ಹೇಳಿ 2 ತಿಂಗಳ ಮುಂಗಡ ಬಾಡಿಗೆ ಹಣ ಕೊಟ್ಟು ಕೀ ಪಡೆಯುತ್ತಿದ್ದ. ಕರಾರು ಪತ್ರವನ್ನು ಬಳಿಕ ಮಾಡಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದ.

ಜಾಲತಾಣಗಳಲ್ಲಿ ಜಾಹಿರಾತು

ಜಾಲತಾಣಗಳಲ್ಲಿ ಜಾಹಿರಾತು

2 ತಿಂಗಳ ಮುಂಗಡ ಬಾಡಿಗೆ ಹಣ ಕೊಟ್ಟು ಕೀ ಪಡೆಯುತ್ತಿದ್ದ ವಂಚಕ ನಂತರ ಆ ಮನೆಯ ಫೋಟೋಗಳನ್ನು ಜಾಲತಾಣಗಳಲ್ಲಿ ಹಾಕಿ ಬಾಡಿಗೆಗೆ ದೊರೆಯುತ್ತದೆ ಎಂದು ಜಾಹೀರಾತು ನೀಡುತ್ತಿದ್ದ. ನಂತರ ಆನ್‌ಲೈನಿನಲ್ಲಿ ಜಾಹೀರಾತು ನೋಡಿದವರಿಗೆ ಆ ಮನೆಯನ್ನು ತೊರಿಸಿ, ನಕಲಿ ಕರಾರು ಪತ್ರ 10 ಲಕ್ಷ ರೂ. ವರೆಗೂ ಹಣ ಪಡೆದು ನಾಪತ್ತೆ ಆಗುತ್ತಿದ್ದ.

ಇಂಗುತಿಂದ ಮಂಗರಾದರು ಇಬ್ಬರು!

ಇಂಗುತಿಂದ ಮಂಗರಾದರು ಇಬ್ಬರು!

ನಂತರ, ಕರಾರು ಪತ್ರವನ್ನು ಮಾಡಿಕೊಳ್ಳಲು ಕರೆ ಮಾಡಿದವರಿಗೆ ಸಬೂಬು ಹೇಳುತ್ತಿದ್ದ ವಂಚಕ ಎರಡು ತಿಂಗಳು ದೂಡುವಂತೆ ಮಾಡುತ್ತಿದ್ದ. ಆರೋಪಿ ಕೊಟ್ಟಿದ್ದ ಮುಂಗಡ ಹಣ 2 ಅಥವಾ 3 ತಿಂಗಳಿಗೆ ಮುಗಿದ ಬಳಿಕ ಕಟ್ಟಡದ ಬಳಿಗೆ ಮಾಲಿಕನು ವಿಚಾರಿಸಲು ಬಂದಾಗ ಆತನಿಗೆ ಗೊತ್ತಿಲ್ಲದಂತೆ ಅನ್ಯರು ಬಾಡಿಗೆಗೆ ಇಲ್ಲವೇ ಭೋಗ್ಯಕ್ಕೆ ಬಂದಿರುವ ವಿಷಯ ಬೆಳಕಿಗೆ ಬರುತ್ತಿತ್ತು.

ಹಲವು ಹೆಸರುಗಳಿಂದ ವಂಚನೆ

ಹಲವು ಹೆಸರುಗಳಿಂದ ವಂಚನೆ

ಆರೋಪಿ ಮೊಹಮ್ಮದ್ ಅಬ್ದುಲ್ ರಹೀಂ ತನ್ನ ಹೆಸರನ್ನು ರಾಹುಲ್, ರಾಹಿಲ್, ಎಂ.ಎ.ಆರ್. ನೌಮಾನ್, ಸಲ್ಮಾನ್, ಸಾರೀಕ್, ರಾಕೀಬ್, ಫೈಜೀ, ಯಾಸಿರ್ ಎನ್ನುವ ಹೆಸರುಗಳಲ್ಲಿ ಜಾಹೀರಾತು ನೀಡುತ್ತಿದ್ದನ್ನು ಪೊಲೀಸರು ತಿಳಿಸಿದ್ದಾರೆ. ಪ್ರತಿ ಹೆಸರಿಗೂ ಒಂದೊಂದು ಹೊಸ ಮೊಬೈಲ್ ನಂಬರ್ ಕೊಡುತ್ತಿದ್ದ ಆತ, ವಂಚನೆಯು ಸುಲಭವಾಗುವಂತೆ ಮಾಡಿಕೊಳ್ಳುತ್ತಿದ್ದ.

ವಂಚನೆಗೆ ಒಳಗಾಗಿದ್ದರೆ ದೂರು ನೀಡಿ

ವಂಚನೆಗೆ ಒಳಗಾಗಿದ್ದರೆ ದೂರು ನೀಡಿ

ಆನ್‌ಲೈನಿನಲ್ಲಿ ಜಾಹೀರಾತು ನೋಡಿ ಹೀಗೆ ನಿವು ಮೋಸಹೋಗಿದ್ದರೆ ದೂರು ನೀಡಿ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಹೈಟೆಕ್ ವಂಚನೆಗೆ ಜನರು ಬಿದ್ದಿರುವುದು ಆಶ್ಚರ್ಯವೇನಲ್ಲ. ಏಕೆಂದರೆ, ಆರೋಪಿ ಅಂತಹ ಖತರ್ನಾನ್ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇನ್ಮುಂದೆ ಇಂತಹ ಘಟನೆಗಳಿಂದ ಎಲ್ಲರೂ ಎಚ್ಚರವಾಗಿರಬೇಕು ಎಂದು ಸಲಹೆ ನಿಡಿದ್ದಾರೆ.

Best Mobiles in India

English summary
Bengaluru: man arrested for online fraud. online fraud in rent home selling scam in Bangalore. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+