ಬೆಂಗಳೂರು ಪೊಲೀಸರಿಗೆ ತಲೆನೋವಾದ ವಂಚನೆ ಪ್ರಕರಣ!..ಬ್ಯಾಂಕ್‌ನಿಂದಲೇ ಮೋಸ?!

|

ಸೈಬರ್ ಕ್ರಿಮಿನಲ್‌ಗಳಿಂದ ಮೋಸ ಹೋದ ಹಲವು ಪ್ರಕರಣಗಳ ಬಗ್ಗೆ ನೀವು ಕೇಳಿರಬಹುದು. ಆದರೆ, ಬ್ಯಾಂಕ್ ಸಿಬ್ಬಂದಿಗಳಿಂದಲೇ ವ್ಯಕ್ತಿಯೋರ್ವರು 35 ಸಾವಿರ ರೂ.ಗಳನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಧಿಕೃತ ಬ್ಯಾಂಕ್ ಮೊಬೈಲ್‌ ಆಪ್‌ ಮೂಲಕ ಲೋಪ ಸರಿಪಡಿಸಲು ಕೋರಿದ್ದೇ ಅವರ ಹಣ ಗುಳಂ ಆಗಲು ಕಾರಣವಾಗಿದೆ.!

ಹೌದು, ಇದನ್ನು ನಂಬಲೇಬೇಕು. ಇಂತಹದೊಂದು ಪ್ರಕರಣ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದು, ಎಲ್ಲರಿಗೂ ಗಾಬರಿಹುಟ್ಟಿಸುತ್ತಿದೆ. ಹಣ ತಪ್ಪಾಗಿ ಇತರರಿಗೆ ವರ್ಗಾವಣೆಯಾಗಿದೆ ಎಂದು ಮೊಬೈಲ್ ಆಪ್‌ ಮೂಲಕ ಬ್ಯಾಂಕ್‌ಗೆ ದೂರು ದಾಖಲಿಸಿದ ನಂತರ, ಎಚ್‌ಎಎಲ್‌ನ ಎಂ.ಕೃಷ್ಣ ಎಂಬುವವರಿಗೆ 35 ಸಾವಿರ ರೂ.ಗಳನ್ನು ವಂಚಿಸಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಪೊಲೀಸರಿಗೆ ತಲೆನೋವಾದ ವಂಚನೆ ಪ್ರಕರಣ!..ಬ್ಯಾಂಕ್‌ನಿಂದಲೇ ಮೋಸ?!

ಪ್ರಕರಣದ ಹಿನ್ನಲೆಗೆ ಬರುವುದಾದರೆ, ಕೆಲ ದಿನಗಳ ಹಿಂದೆ ಕೃಷ್ಣ ಅವರು ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ಮತ್ತೊಂದು ಖಾತೆಗೆ 1,150 ರೂ. ಜಮಾ ಮಾಡಿದ್ದಾರೆ. ಆದರೆ, ಖಾತೆಯ ಕೊನೆಯ ಅಂಕಿ 256ರ ಬದಲು 259 ಎಂದು ನಮೂದಾಗಿ ಬೇರೆಯವರ ಖಾತೆಗೆ ಆ ಹಣ ವರ್ಗಾವಣೆಯಾಗಿದೆ. ಆಕಸ್ಮಿಕವಾಗಿ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿದ್ದ ಕಾರಣ ದೂರನ್ನು ನೀಡಿದ್ದಾರೆ.

ಇದಾದ ಕೆಲವು ದಿನಗಳ ನಂತರ, ನಿಮ್ಮ ಹಣ ಬೇರೆ ಖಾತೆಗೆ ಆಕಸ್ಮಿಕವಾಗಿ ವರ್ಗಾವಣೆಯಾಗಿದೆ ಎಂದು ನೀವು ಕೊಟ್ಟ ದೂರಿನಂತೆ ಹಣವನ್ನು ವಾಪಸ್‌ ಮಾಡುತ್ತೇವೆ ಎಂದು ಅಪರಿಚಿತರು ಕರೆ ಮಾಡಿ ತಿಳಿಸಿದ್ದಾರೆ. ಹಣ ವಾಪಸ್ ಮಾಡುವ ಸಲುವಾಗಿ ಪೋನ್‌ಗೆ ಬಂದಿರುವ ಒಟಿಪಿಯನ್ನು ತಿಳಿಸಿ ಎಂದು ಅವರು ಕೋರಿದಾಗ, ಅವರನ್ನು ನಂಬಿ ಎಂ.ಕೃಷ್ಣ ಒಟಿಪಿ ತಿಳಿಸಿದ್ದಾರೆ.

ಬೆಂಗಳೂರು ಪೊಲೀಸರಿಗೆ ತಲೆನೋವಾದ ವಂಚನೆ ಪ್ರಕರಣ!..ಬ್ಯಾಂಕ್‌ನಿಂದಲೇ ಮೋಸ?!

ಇದಾದ ಕೆಲವೇ ನಿಮಿಷಗಳಲ್ಲಿ ನನ್ನ ಖಾತೆಯಿಂದ 35 ಸಾವಿರ ರೂ. ವರ್ಗಾವಣೆ ಆಗಿದೆ ಎಂದು ದೂರಿನಲ್ಲಿ ಕೃಷ್ಣ ತಿಳಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿದೆ. ಮೊಬೈಲ್‌ ಆಪ್‌ ಮೂಲಕ ಕೃಷ್ಣ ಅವರು ಸಲ್ಲಿಸಿದ ದೂರು ಖದೀಮರಿಗೆ ಹೇಗೆ ಸಿಕ್ಕಿದೆ ಎಂದು ತನಿಖೆ ನಡೆಸುತ್ತಿದ್ದಾರೆ. ಇದರ ಸತ್ಯಾಸತ್ಯತೆ ಇನ್ನಷ್ಟೆ ಹೊರಬರಬೇಕಿದ್ದು, ಸೈಬರ್ ಕ್ರಿಮಿನಲ್‌ಗಳ ವಂಚನೆಯಿಂದ ಪಾರಾಗುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಸೈಬರ್ ಕ್ರಿಮಿನಲ್‌ಗಳ ವಂಚನೆಯಿಂದ ಪಾರಾಗುವುದು ಹೇಗೆ?

ಸೈಬರ್ ಕ್ರಿಮಿನಲ್‌ಗಳ ವಂಚನೆಯಿಂದ ಪಾರಾಗುವುದು ಹೇಗೆ?

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಇಂಟರ್‍ನೆಟ್ ಮೂಲಕ ಪ್ರತಿ ಗಂಟೆಗೆ ಅಮಾಯಕರಿಗೆ ಸುಮಾರು 2 ಲಕ್ಷ ರೂ.ಗಳನ್ನು ಸೈಬರ್ ಕ್ರಿಮಿನಲ್‌ಗಳು ವಂಚಿಸುತ್ತಿದ್ದಾರೆ ಎಂಬ ಶಾಕಿಂಗ್ ಸುದ್ದಿ ನಿಮಗೆ ಈಗಾಗಲೇ ತಿಳಿದಿರಬಹುದು. ಡಿಜಿಟಲ್ ವಹಿವಾಟಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕ ನಂತರ ಸೈಬರ್ ಅಪರಾಧಿಗಳಿಗೆ ಇದು ವರದಾನವಾಗಿದ್ದು, ಸಾಮಾನ್ಯ ಜನರನ್ನು ಬಹುಬೇಗ ಮೋಸಗೊಳಿಸುತ್ತಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ದಿನಕ್ಕೆ 48 ಲಕ್ಷ ರೂ.ಗಳನ್ನು ಹೀಗೆ ವಂಚಿಸಲಾಗುತ್ತಿದೆ ಎಂಬುದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದ್ದರೆ,ರಾಜ್ಯದಲ್ಲಿ ಕಳೆದ ವರ್ಷ 221 ಪ್ರಕರಣಗಳು ದಾಖಲಾಗಿದ್ದು, 9.16 ಕೋಟಿ ರೂ. ವಂಚನೆಯಾಗಿದೆ. ಇವುಗಳಲ್ಲಿ ಒಂದು ಲಕ್ಷ ರೂ.ಗಳಿಗೆ ಮೇಲ್ಪಟ್ಟ ಮೊತ್ತಗಳು ಮಾತ್ರ ಸೇರಿಕೊಂಡಿವೆ ಎನ್ನಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ, ದೇಶದಲ್ಲಿ ಸೈಬರ್ ಹಣಕಾಸು ಅಪರಾಧಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳು ಕನಿಷ್ಟ ಎಂದರೂ 250 ರಿಂದ 300 ಪ್ರಕರಣಗಳು ದಾಖಲಾಗುತ್ತಿವೆ. ಇನ್ನು ನಮ್ಮನ್ನು ಚೆನ್ನಾಗಿ ತಿಳಿದವರೇ ಹೆಚ್ಚು ವಂಚನೆ ಮಾಡುತ್ತಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಸೈಬರ್ ವಂಚಕರಿಂದ ಹಣಕಾಸು ಸಂಗತಿಗಳ ರಕ್ಷಣೆ ಹೇಗೆ ಎಂಬುದನ್ನು ನಾವು ತಿಳಿಯೋಣ.

  ಪರಿಚಿತ/ಅಪರಿಚಿತರಿಗೆ ಒಟಿಪಿಪಾಸ್ವರ್ಡ್ ಹೇಳಬೇಡಿ

ಪರಿಚಿತ/ಅಪರಿಚಿತರಿಗೆ ಒಟಿಪಿಪಾಸ್ವರ್ಡ್ ಹೇಳಬೇಡಿ

ಪ್ರಾಥಮಿಕ ಹಂತದಲ್ಲಿ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ಪಾಸ್ವರ್ಡ್ ಆಗಲಿ ಅಥವಾ ಒಟಿಪಿಯ ಮಾಹಿತಿಯನ್ನು ಕೊಡಬಾರದು. ನಾವು ವ್ಯಕ್ತಿಗಳ ದುರುದ್ದೇಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯ ಇರುವುದಿಲ್ಲ. ಕುಟುಂಬದ ವ್ಯಕ್ತಿಗಳು ಮತ್ತು ಕೆಲ ವಿಶ್ವಾಸಾರ್ಹ ಸ್ನೇಹಿತರನ್ನು ಹೊರತು ಪಡಿಸಿ ಹಣಕಾಸು ಸಂಗತಿಗಳನ್ನು ಇನ್ಯಾರೊಂದಿಗೂ ಹಂಚಿಕೊಳ್ಳಬಾರದು. ನಮಗೆ ಗೊತ್ತಿರುವಂತೆ ಹೆಚ್ಚಿನ ಹಣಕಾಸು ವಂಚನೆ/ಕಳ್ಳತನ ಪರಿಚಯದವರಿಂದಲೇ ಆಗುತ್ತದೆ.

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಫೋನಿನಲ್ಲಿ ವೈಯಕ್ತಿಕ ಮಾಹಿತಿ ನೀಡಬೇಡಿ

ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೆಡಿ. ಸೇವೆ ಒದಗಿಸುವವರಿಗೆ ಅನವಶ್ಯಕ ವಿಷಯಗಳಿಗಾಗಿ ತೊಂದರೆ ಕೊಡಬೇಡಿ("Do not disturb") ಎಂದು ನೋಂದಣಿ ಮಾಡಿಸಿಕೊಳ್ಳಿ. ಇದರಿಂದಾಗಿ ಅನವಶ್ಯಕ ಮತ್ತು ಫೇಕ್ ಕರೆಗಳಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ವಂಚಕರಿಂದಲೂ ಮುಕ್ತಿ ಪಡೆಯಬಹುದು.

ಇ-ಮೇಲ್ ಭದ್ರತೆ

ಇ-ಮೇಲ್ ಭದ್ರತೆ

ಬ್ಯಾಂಕಿನವರು ನೀಡುವ ಇ-ಮೇಲ್ ಐಡಿಗಳನ್ನು ಸಹ ಹೆಚ್ಚು ಬಳಸಬಾರದು. ಅದರಿಂದಾಗಿ ಹೆಚ್ಚೆಚ್ಚು ಮೋಸ ಹೋಗಬೇಕಾಗುತ್ತದೆ. ಇ-ಮೇಲೆ ಮುಖಾಂತರ ಯಾವುದೇ ಸ್ಟೇಟ್ಮೆಂಟ್ ಗಳನ್ನು ತೆರೆಯಬಾರದು ಇದರಿಂದ ಅಪಾಯವೇ ಹೆಚ್ಚು. ಇ-ಮೇಲ್ ಗಳ ಮೇಲೆ ಕ್ಲಿಕ್ ಮಾಡುವುದರಿಂದ ಅವು ಬೇರೆ ವೆಬ್ಸೈಟ್ ಗೆ ಲಿಂಕ್ ಆಗುತ್ತವೆ. ಇದರಿಂದಾಗಿ ನಮ್ಮ ಅಂಕಿಅಂಶ ಹಾಗೂ ಮಾಹಿತಿಯ ಸೋರಿಕೆ ಆಗುತ್ತದೆ. ಇದರ ಜತೆ ಪ್ರಚಾರದ ಇ-ಮೇಲ್ ಗಳು ಸಹ ಬರುತ್ತವೆ. ಆದರಿಂದಾಗಿ ತುಂಬಾ ಜಾಗೂರತೆಯಿಂದ ಇರಬೇಕಾಗುತ್ತದೆ.

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಬೇಕು

ಆಗಾಗ್ಗೆ ಪಾಸ್ವರ್ಡ್ ಗಳನ್ನು ಬದಲಾಯಿಸುತ್ತಿರಬೇಕು

ನಾವು ಹಣಕಾಸು ವ್ಯವಹಾರದ ಸಂದರ್ಭಗಳಲ್ಲಿ ಬಳಸುವ ಪಾಸ್ವರ್ಡ್ ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಅದರಲ್ಲೂ ಹಿರಿಯ ನಾಗರಿಕರು ಇದನ್ನು ಖಚಿತಪಡಿಸಿಕೊಳ್ಳುತ್ತಿರಬೇಕು. ಇದರಿಂದಾಗಿ ಇನ್ನೊಬ್ಬರೂ ನಿಮ್ಮ ಪಾಸ್ವರ್ಡ್ ಊಹಿಸಲು ಸಾಧ್ಯ ಇರುವುದಿಲ್ಲ. ಇದು ಬ್ಯಾಂಕ್ ಸಂಬಂಧಿ ವ್ಯವಹಾರಗಳಲ್ಲೂ ಪಾಲಿಸಬೇಕು.

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ಮಾಡುವ ವೆಬ್ಸೈಟ್ ಗಳನ್ನು ಪರಿಶೀಲಿಸುತ್ತಿರಿ

ಶಾಪಿಂಗ್ ವೆಬ್ಸೈಟ್ ಗಳನ್ನು ಬಳಸುವಾಗ ತುಂಬಾ ಜಾಗರೂಕತೆಯಿಂದ ವ್ಯವಹರಿಸಬೇಕಾಗುತ್ತದೆ. ಏಕೆಂದರೆ ವಂಚಕರು ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಕೆಲ ನಕಲಿ ವೆಬ್ಸೈಟ್ ಗಳಿದ್ದು ಅವುಗಳಲ್ಲಿ ಶಾಪಿಂಗ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿ ಎಲ್ಲವು ಅವರಿಗೆ ಲಭ್ಯವಾಗುತ್ತದೆ. ಇವೆಲ್ಲವೂ ವಂಚನೆಯ ಅನೆಕ ಮುಖಗಳಾಗಿದ್ದು ಇವುಗಳಿಂದ ತಪ್ಪಿಸಿಕೊಳ್ಳುವುದು ನಿಮ್ಮ ಕರ್ತವ್ಯ.

ಆಯಂಟಿ ವೈರಸ್(Anti Virus Software ) ಬಳಸಿ

ಆಯಂಟಿ ವೈರಸ್(Anti Virus Software ) ಬಳಸಿ

ಉತ್ತಮವಾದ ವೈರಸ್(Anti Virus Software ) ಸಾಪ್ಟವೇರ್ ಖರೀದಿಸಿ. ಇದೊಂದು ಸಮಗ್ರವಾದ ಉತ್ತಮ ತಂತ್ರಾಂಶವಾಗಿದ್ದು ಕೇವಲ ಅಂತರ್ಜಾಲ ವಿರೋಧಿ ತಂತ್ರಾಂಶ ಮಾತ್ರ ಅಲ್ಲ. ಬದಲಾಗಿ ಸಂಪೂರ್ಣವಾದ ಫೈರ್ ವಾಲ್ ರಕ್ಷಣೆಯನ್ನು ಹೊಂದಿರಬೆಕು.ಇದು ಎಲ್ಲ ಅಂಕಿಅಂಶಗಳನ್ನು ಸುರಕ್ಷಿತವಾಗಿಡಬೇಕು. ಜತೆಗೆ ವಂಚಕರು/ಕಳ್ಳರು ದುರುಪಯೋಗ ಮಾಡದಂತೆ ರಕ್ಷಿಸುವಂತಿರಬೇಕು.

Best Mobiles in India

English summary
In a case of cyber fraud, a man in India's Silicon Valley lost Rs 35,000. In disguise of a bank employee, a man made a call to.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X