ಬೆಂಗಳೂರಿನಲ್ಲಿ ನೂತನ 'ಕ್ಯಾಬ್' ಪ್ರಯಾಣದರ ನಿಗದಿ!..ಕಾರು ಹತ್ತುವ ಮೊದಲು ಇಲ್ಲಿ ನೋಡಿ!!
ಸಣ್ಣ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ ಕನಿಷ್ಠ ದರ 44 ರುಪಾಯಿ ಹಾಗೂ ಐಷಾರಾಮಿ ಕಾರುಗಳಿಗೆ ಮೊದಲ ನಾಲ್ಕು ಕಿ.ಮೀ.ಗೆ 80 ರುಪಾಯಿ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ದರ ಪಟ್ಟಿಯ ಪ್ರಕಾರ ಸಿಲಿಕಾನ್ ಸಿಟಿಯ ಕ್ಯಾಬ್ ಸೇವೆಯಲ್ಲಿ ಮತ್ತಷ್ಟು ಬದಲಾವಣೆ ಕಾಣಲಿದೆ ಎಂದು ಹೇಳಲಾಗಿದೆ.!! .
ಕಾರುಗಳ ಮಾರುಕಟ್ಟೆ ಬೆಲೆ ಆಧರಿಸಿ, ಕ್ಯಾಬ್ ಪ್ರಯಾಣ ದರವನ್ನು ಎ, ಬಿ, ಸಿ ಮತ್ತು ಡಿ ನಾಲ್ಕು ಮಾದರಿಯ ದರಗಳನ್ನು ನಿಗದಿಪಡಿಸಲಾಗಿದೆ. ಸಣ್ಣ ಕಾರುಗಳು ಡಿ ದರ್ಜೆಯಲ್ಲಿ ಬರುತ್ತಿದ್ದು, ಅವುಗಳಿಗೆ ಕನಿಷ್ಠ 44 ರುಪಾಯಿ ಹಾಗೂ 16 ಲಕ್ಷ ರುಪಾಯಿಗೂ ಹೆಚ್ಚಿನ ಬೆಲೆಯ ಕಾರುಗಳಿಗೆ ಎ ದರ್ಜೆ ನೀಡಲಾಗಿದ್ದು, ಅದಕ್ಕೆ ಕನಿಷ್ಠ 80 ರುಪಾಯಿ ನಿಗದಿಪಡಿಸಲಾಗಿದೆ.

ಟ್ಯಾಕ್ಸಿಗಳಿಗೆ ಕನಿಷ್ಠ ದರ ನಿಗದಿ ಪಡಿಸಿದ್ದರೂ ಕೂಡ ಟ್ಯಾಕ್ಸಿ ಕಂಪನಿಗಳು ಬಯಸಿದಷ್ಟು ಕಡಿಮೆ ದರ ವಿಧಿಸಬಹುದಾಗಿದೆ. ಆದರೆ ಕನಿಷ್ಠ ದರಕ್ಕಿಂತ ಹೆಚ್ಚು ಸಹ ವಿಧಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾದರೆ, ಕ್ಯಾಬ್ ಸೇವೆಯಲ್ಲಿ ಆಗಬಹುದಾದ ವ್ಯತ್ಯಯಗಳೇನು? ಗ್ರಾಹಕರ ಮೇಲೆ ಆಗಬಹುದಾದ ಪರಿಣಾಮಗಳೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

2013ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು!!
2013ರ ಜೂನ್‌ನಲ್ಲಿ ಕ್ಯಾಬ್ ದರಗಳ ಬಗ್ಗೆ ಕೊನೆಯದಾಗಿ ಪರಿಷ್ಕರಣೆ ಮಾಡಲಾಗಿತ್ತು. ಸಣ್ಣ ಮಾದರಿಯ ಕಾರುಗಳ ಗರಿಷ್ಠ ಪ್ರಯಾಣ ದರ 14.50 ರೂ. ಹಾಗೂ ಮಧ್ಯಮ ಮಾದರಿ ಕಾರುಗಳಿಗೆ 19.50 ರು.ಪ್ರಯಾಣ ದರ ನಿಗದಿಯಾಗಿತ್ತು.! ಈಗ ದರ ಪರಿಷ್ಕರಣೆಗೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಈಗ ರಾಜ್ಯ ಸರ್ಕಾರ ದರ ಪರಿಷ್ಕರಣೆ ಮಾಡಿ, ಕನಿಷ್ಠ ದರ ನಿಗದಿಪಡಿಸಿದೆ.!!

ಕನಿಷ್ಠ ಪ್ರಯಾಣ ದರಕ್ಕೆ ಆಕ್ಷೇಪ!!
4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಕನಿಷ್ಠ 44 ರೂ. ನಿಗದಿ ಮಾಡಿರುವುದರಿಂದ ಕ್ಯಾಬ್ ಮಾಲಿಕರ ವರಮಾನಕ್ಕೆ ಭಾರಿ ಹೊಡೆತ ಬೀಳಲಿದೆ.! ಈ ಮೊತ್ತದಲ್ಲಿ ಸೇವಾ ತೆರಿಗೆ ಹಾಗೂ ಆಪ್ ಕಂಪೆನಿಗಳ ಕಮಿಷನ್ ಕಡಿತವಾಗಿ ಉಳಿಯುವುದು ಸ್ವಲ್ಪಹಣ ಮಾತ್ರ.! ಹಾಗಾಗಿ, ಕನಿಷ್ಠ ದರವನ್ನು ಹೆಚ್ಚಿಸಬೇಕು ಎಂದು ಡ್ರೈವರ್‌ಗಳು ಹೇಳುತ್ತಿದ್ದಾರೆ.!!

ಪ್ರಯಾಣಿಕರಿಗೆ ಸ್ವಲ್ಪ ಲಾಭ?
ಇಂದಿನ ಪರಿಸ್ಥಿತಿಯಲ್ಲಿ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಕನಿಷ್ಠ 44 ದರ ನಿಗದಿ ಮಾಡಿದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಆದರೆ, ನಂತರದ ಪ್ರತಿ ಕಿಲೊಮೀಟರ್‌ಗೆ ಕನಿಷ್ಠ ಹಾಗೂ ಗರಿಷ್ಠ ದರವನ್ನು ಕಾರುಗಳ ಮೌಲ್ಯಕ್ಕೆ ಅನುಗುಣವಾಗಿ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಗ್ರಾಹಕರೋರ್ವರು ಅಭಿಪ್ರಾಯಪಟ್ಟಿದ್ದಾರೆ.!!

ಇನ್ನೂ ಪರಿಷ್ಕೃತ ದರ ಬಂದಿಲ್ಲ.!!
ಜನವರಿ 9ರಿಂದಲೇ ಪರಿಷ್ಕೃತ ದರ ಪಟ್ಟಿ ಆದೇಶ ಹೊರಬಿದ್ದ ಬಳಿಕವೂ ಉಬರ್ ಹಾಗೂ ಓಲಾ ಕಂಪನಿಗಳು 4 ಕಿ.ಮೀ.ವರೆಗಿನ ಪ್ರಯಾಣಕ್ಕೆ ಈ ಹಿಂದಿನಂತೆಯೇ 80 ರೂ. ದರ ವಸೂಲಿ ಮಾಡುತ್ತಿವೆ. ಹೆಚ್ಚಿನ ಚಾಲಕರು ಪ್ರಯಾಣಿಕರಿಂದ ಈಗಲೂ ಹಿಂದಿನ ದರದ ಪ್ರಕಾರವೇ ಹಣ ಪಡೆಯುತ್ತಿದ್ದಾರೆ.!!

ಡ್ರೈವರ್‌ಗಳಿಗೆ ಲಾಭವಿಲ್ಲ.?
ದರ ಪರಿಷ್ಕರಣೆಯಿಂದ ಓಲಾ ಹಾಗೂ ಉಬರ್ ಕಂಪನಿಗಳಿಗಷ್ಟೆ ಲಾಭವಾಗಲಿದೆ. ಪ್ರತಿ ಕಿಲೊ ಮೀಟರ್‌ಗೆ ಇಂತಿಷ್ಟು ಹಣ ನೀಡುವ ಒಪ್ಪಂದ ಮಾಡಿಕೊಂಡಿರುವ ನಮಗೆ ಈ ದರ ಪರಿಷ್ಕರಣೆ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ ಡ್ರೈವರ್‌ಗಳು.!!


ಗ್ರಾಹಕರೇ ಟೋಲ್ ಕಟ್ಟಬೇಕು.!!
ಪ್ರಯಾಣಿಕರಿಂದ ಟೋಲ್ ವಸೂಲಿ ಮಾಡಲು ಅನುಮತಿ ನೀಡಿರುವುದು ಡ್ರೈವರ್‌ಗಳಿಗೆ ಸಂತಸದ ವಿಷಯವಾಗಿದೆ. ಆದರೆ, ಗ್ರಾಹಕರಿಗೆ ಪ್ರಯಾಣದ ಜೊತೆಗೆ ಟೋಲ್ ಕೂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದ್ದು, ಪರಿಷ್ಕೃತ ದರದ ಪ್ರಕಾರ ಹಣ ಪಡೆಯುವ ಬಗ್ಗೆ ಟ್ಯಾಕ್ಸಿ ಚಾಲಕರು ಮತ್ತು ಪ್ರಯಾಣಿಕರಲ್ಲಿಯೂ ಗೊಂದಲವಿದೆ.


Click it and Unblock the Notifications








