ಬೆಂಗಳೂರಿನ ಟೆಕ್ಕಿಯಿಂದ ಪ್ರಥಮ ಚಾಲಕರಹಿತ ಕಾರು

By Shwetha
|

ತಾವು ಬರುತ್ತಿದ್ದ ಕಾರು ಚಾಲಕನ ಕಣ್ತಪ್ಪಿ ಅಘಾತಕ್ಕೆ ಗುರಿಯಾಗುತ್ತಿದ್ದುದನ್ನು ನೋಡಿ ಮುಂದೆ ತಾವು ಕಾರು ತಯಾರಿಸಬೇಕೆಂಬ ಆಸೆ ಉದ್ಭವವಾಗುವುದನ್ನು ನೀವು ಎಲ್ಲಿಯಾದರೂ ಕೇಳಿದ್ದೀರಾ? ಆದರೆ ಬೆಂಗಳೂರು ಮೂಲದ ಟೆಕ್ಕಿ ರೋಶಿ ಜಾನ್ ತಮ್ಮದೇ ಸ್ವತಃ ಕಾರಿನ ನಿರ್ಮಾಣಕ್ಕೆ ತಯಾರಾದವರು. ತಮ್ಮ ಸ್ನೇಹಿತರೊಂದಿಗೆ ಸೇರಿ ಭಾರತದ ಪ್ರಥಮ ಚಾಲಕ ರಹಿತ ಕಾರು ಟಾಟಾ ನ್ಯಾನೊ ಅಟೊನೊಮಸ್ ಅನ್ನು ಅವರು ಸಿದ್ಧಪಡಿಸಿದ್ದಾರೆ.

ಟಿಸಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಾನ್ ಮತ್ತು ಅವರ 29 ಸದಸ್ಯರು ತಮ್ಮ ಬಿಡುವಿನ ವೇಳೆಯಲ್ಲಿ ಕಾರಿನ ಸಾಫ್ಟ್‌ವೇರ್ ಮತ್ತು ಅಂಕಿಅಂಶಗಳ ಯೋಜನೆಯನ್ನು ಸಿದ್ಧಪಡಿಸಿ ಕಾರನ್ನು ತಯಾರಿಸಿದ್ದಾರೆ. ಕಾರನ್ನು ರಸ್ತೆಯಲ್ಲಿ ಪರೀಕ್ಷಿಸಲು ಇನ್ನು ಆರಂಭಿಸಿಲ್ಲವಾದರೂ ಅದರ 3ಡಿ ಮಾಡೆಲ್ ಸಿದ್ಧವಾಗಿದೆ.

#1

#1

ಟ್ರಾಫಿಕ್ ಪೋಲೀಸರ್ ಆಜ್ಞೆಗಾಗಿ ಕಾರು ಕಾಯುತ್ತಿದ್ದು ಆದೇಶ ದೊರಕಿದೊಡನೆ ಇದು ರಸ್ತೆಗಿಳಿಯುವುದು ನಿಶ್ಚಿತವಾಗಿದೆ.

#2

#2

2011 ರಲ್ಲಿ ಜಾನ್ ಸಾಫ್ಟ್‌ವೇರ್ ಪರೀಕ್ಷೆಗಾಗಿ ನ್ಯಾನೊವನ್ನು ಖರೀದಿಸಿದ್ದರು. ಭಾರತದಲ್ಲಿ ಹೊಂದುವ ತಂತ್ರಜ್ಞಾನಕ್ಕೆ ಅನುಗುಣವಾಗಿ ನ್ಯಾನೊ ಕಾರನ್ನು ತಯಾರಿಸಲಾಗಿದೆ.

#3

#3

ವಿಶ್ವದಾದ್ಯಂತ ಡೈಮ್ಲರ್, ನಿಸಾನ್, ಜನರಲ್ ಮೋಟಾರ್ಸ್, ಬಿಎಮ್‌ಡಬ್ಲ್ಯೂ ಹಾಗೂ ಗೂಗಲ್ ಚಾಲಕ ರಹಿತ ಕಾರಿನ ತಯಾರಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದೆ.

#4

#4

ಜಾನ್ ಅತಿ ಕಡಿಮೆ ಖರ್ಚಿನಲ್ಲಿ ಈ ಕಾರನ್ನು ಸಿದ್ಧಪಡಿಸಿದ್ದಾರೆ. ದೈನಂದಿನ ಕಾರುಗಳಲ್ಲಿ ಬಳಸುವ ಫೀಚರ್ ಅನ್ನೇ ಈ ಕಾರಿನಲ್ಲಿ ಅಳವಡಿಸಲಾಗಿದೆ. ಎಂಜಿನ್ ಮಾನಿಟರ್ ಮಾಡಲು ಸ್ಕ್ಯಾನರ್ ಅನ್ನು ಬಳಸಲಾಗಿದೆ.

#5

#5

ಕಾರನ್ನು ನಿಯಂತ್ರಿಸುವುದಕ್ಕಾಗಿ ಅಲ್ಗಾರಿದಮ್ ಅನ್ನು ಜಾನ್ ಸಿದ್ಧಪಡಿಸಿದ್ದು ಎಂಜಿನ್‌ನ ಎಲ್ಲಾ ಪ್ಯಾರಮೀಟರ್ ಅನ್ನು ಅರಿತುಕೊಳ್ಳಲು ಜಾನ್ ಮತ್ತು ಅವರ ಗೆಳೆಯರಿಗೆ ಸಾಧ್ಯವಾಗುತ್ತದೆ.

#6

#6

ಎಚ್‌ಡಿಆರ್ ಕ್ಯಾಮೆರಾ ಮತ್ತು ಜಿಪಿಎಸ್ ಅನ್ನು ಕಾರಿಗೆ ಅಳವಡಿಸಲಾಗಿದ್ದು ಸಾಫ್ಟ್‌ವೇರ್ ಮೂಲಕ ಡೇಟಾವನ್ನು ಪ್ರಕ್ರಿಯಿಸಿ ಕಾರನ್ನು ಮಾನವ ಚಲಾಯಿಸುತ್ತಿರುವಂತೆಯೇ ಮಾಡಲಿದೆ.

#7

#7

ಎಕ್ಸಲೇಟರ್‌ಗೆ ಪೆಡಾಲ್ ರೊಬೋಟ್‌ಗಳನ್ನು ಇವರು ಅಳವಡಿಸಿದ್ದು ಬ್ರೇಕ್ ಮತ್ತು ಕ್ಲಚ್ ಅನ್ನು ಸಾಫ್ಟ್‌ವೇರ್‌ಗೆ ಸಂಪರ್ಕಪಡಿಸಲಾಗಿದೆ. ಮೇ 2012 ರಂದು ಜಾನ್ ಅವರ ಅಟೊನೊಮಸ್ ಕಾರು ಬೆಂಗಳೂರಿನ ರಸ್ತೆಗಳಲ್ಲಿ ಚಲಿಸಿತ್ತು.

#8

#8

ಜಾನ್ ಅವರ ಈ ಪ್ರಥಮ ರಸ್ತೆ ಸವಾರಿ ಅಷ್ಟೊಂದು ಸುಲಭವಾಗಿರಲಿಲ್ಲ ಪೋಲೀಸರ ತನಿಖೆಗೆ ಇವರು ಒಳಗಾಗಿದ್ದರು. ಕ್ಯಾಮೆರಾಗಳು ಮತ್ತು ಕಾರಿಗೆ ಅಳವಡಿಸಲಾದ ಹಲವಾರು ಕ್ಯಾಮೆರಾಗಳನ್ನು ಕುರಿತು ಅವರು ಸಂದೇಹ ವ್ಯಕ್ತಪಡಿಸಿದ್ದರು. ಕಮೀಷನರ್‌ಗೆ ಮೂರು ಪುಟಗಳ ಪ್ರಬಂಧವನ್ನು ಜಾನ್ ಮಂಡಿಸಬೇಕಾಗಿತ್ತು.

#9

#9

ಜಾನ್ ಸಂಶೋಧನೆಗಾಗಿ ರೂ 1 ಕೋಟಿಯನ್ನು ಖರ್ಚುಮಾಡಿದ್ದಾರೆ ಇನ್ನು ಈ ತಂತ್ರಜ್ಞಾನವನ್ನು ಅವರು ಇತರ ಕಾರುಗಳಲ್ಲಿ ಕೂಡ ಪರಿಶೀಲಿಸುತ್ತಿದ್ದಾರೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಇಂತಹ ಸೆಲ್ಫಿಗಳನ್ನು ನೀವು ಖಂಡಿತ ಪ್ರಯತ್ನಿಸಬೇಡಿ!!!</a><br /><a href=ಕಂಪ್ಯೂಟರ್‌ ವೇಗಗೊಳಿಸಲು ಕೇವಲ 6 ವಿಧಾನಗಳು ಸಾಕು
ಬ್ಲಾಕ್ ಮಾಡಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?
ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!" title="ಇಂತಹ ಸೆಲ್ಫಿಗಳನ್ನು ನೀವು ಖಂಡಿತ ಪ್ರಯತ್ನಿಸಬೇಡಿ!!!
ಕಂಪ್ಯೂಟರ್‌ ವೇಗಗೊಳಿಸಲು ಕೇವಲ 6 ವಿಧಾನಗಳು ಸಾಕು
ಬ್ಲಾಕ್ ಮಾಡಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?
ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!" />ಇಂತಹ ಸೆಲ್ಫಿಗಳನ್ನು ನೀವು ಖಂಡಿತ ಪ್ರಯತ್ನಿಸಬೇಡಿ!!!
ಕಂಪ್ಯೂಟರ್‌ ವೇಗಗೊಳಿಸಲು ಕೇವಲ 6 ವಿಧಾನಗಳು ಸಾಕು
ಬ್ಲಾಕ್ ಮಾಡಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?
ಫೇಸ್‌ಬುಕ್‌ನಲ್ಲಿ ಬದುಕಿರುವವರಿಗಿಂತ ಮೃತರ ಪ್ರೊಫೈಲ್‌ಗಳೇ ಹೆಚ್ಚಂತೆ!!!

Best Mobiles in India

English summary
John, who is practice head, robotics and cognitive systems at TCS, and his 29-member team worked on the software and algorithms in their free time and created a 3D model to test it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X