ರಕ್ಷಣೆಗೆ ರೋಬೋಟ್, ದೃಷ್ಟಿಚೇತನರಿಗೆ ಸ್ಮಾರ್ಟ್‌ಸ್ಟಿಕ್ ಆವಿಷ್ಕಾರ..! ಬೆಂಗಳೂರು ವಿದ್ಯಾರ್ಥಿಗಳ ಸಾಧನೆ.!!

By Avinash
|

ತಂತ್ರಜ್ಞಾನ ಲೋಕದಲ್ಲಿ ದಿನಕ್ಕೊಂದು ಅಪ್‌ಡೇಟ್‌ ಆಗ್ತಾನೆ ಇದೆ. ನಿನ್ನೇ ತಾನೇ ಟೋಕಿಯೋ ವಿವಿಯಲ್ಲಿ ನಡೆದ ಡ್ರಾಗನ್ ಡ್ರೋಣ್ ಆವಿಷ್ಕಾರವನ್ನು ಇಲ್ಲಿಯೇ ಓದಿದ್ದಿರಿ. ಆದರೆ, ಭಾರತದಲ್ಲಿಯೂ ತಂತ್ರಜ್ಞಾನ ಅಭಿವೃದ್ಧಿಯಾಗ್ತಿದ್ದು, ಐಟಿ ಹಬ್ ಖ್ಯಾತಿಯ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳೇ ಸೇರಿ ರೊಬೋಟ್ ಆವಿಷ್ಕಾರ ಮಾಡಿ ಟೆಕ್ ಲೋಕದಲ್ಲಿ ಮತ್ತೊಂದು ಸಾಧ್ಯತೆಯನ್ನು ಹುಟ್ಟುಹಾಕಿದ್ದಾರೆ.

ರಕ್ಷಣೆಗೆ ರೋಬೋಟ್, ದೃಷ್ಟಿಚೇತನರಿಗೆ ಸ್ಮಾರ್ಟ್‌ಸ್ಟಿಕ್ ಆವಿಷ್ಕಾರ..!

ಹೌದು, ಬೆಂಗಳೂರಿನ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೆಕ್ಸಾಪೋಡ್ ಎಂಬ ಸಾಧನ ಆವಿಷ್ಕರಿಸಿದ್ದಾರೆ. ಹುಡುಕಾಟ ಮತ್ತು ರಕ್ಷಣಾ ಕಾರ್ಯದಲ್ಲಿ ಬಳಸಬಹುದಾದ ಜೇಡದ ರೀತಿಯಿರುವ 6 ಕಾಲಿನ ರೋಬೋಟ್ ಅಭಿವೃದ್ಧಿಪಡಿಸಿದ್ದಾರೆ. ಇದಲ್ಲದೇ ದೃಷ್ಟಿ ವಿಕಲಚೇತನರಿಗೆ ಸುಲಭವಾಗಿ ದಾರಿ ತೋರಿಸುವ ಸ್ಮಾರ್ಟ್ ಸ್ಟಿಕ್‌ನ್ನು ಅಭಿವೃದ್ಧಿ ಪಡಿಸಿದ್ದಾರೆ.

ಎಲ್ಲಿಂದಲಾದರೂ ನಿಯಂತ್ರಿಸಿ

ಎಲ್ಲಿಂದಲಾದರೂ ನಿಯಂತ್ರಿಸಿ

ಹೆಕ್ಸಾಪೋಡ್ ಸಾಧನವನ್ನು ವಿಶ್ವದ ಯಾವುದೇ ಸ್ಥಳದಿಂದ ಬೇಕಾದರೂ ನಿಯಂತ್ರಿಸಬಹುದಾಗಿದ್ದು, ಅಂತರ್ಜಾಲ ಸಂಪರ್ಕ ಹೊಂದಿದ ಮೊಬೈಲ್‌ನಿಂದ ನಿಯಂತ್ರಿಸಬಹುದಾಗಿದೆ. ಈ ವೈಶಿಷ್ಟ್ಯದಿಂದ ಹುಡುಕಾಟ ಮತ್ತು ರಕ್ಷಣಾ ಕಾರ್ಯಕ್ಕೆ ಬಹಳ ಅನುಕೂಲವಾಗುವದಂತೂ ಖಂಡಿತ.

ಲೈವ್ ಸ್ಟ್ರೀಮಿಂಗ್

ಲೈವ್ ಸ್ಟ್ರೀಮಿಂಗ್

ಹೆಕ್ಸಾಪೋಡ್‌ನಲ್ಲಿ ಲೈವ್‌ ಸ್ಟ್ರೀಮಿಂಗ್ ಫೀಚರ್‌ ಲಭ್ಯವಿದ್ದು, 360 ಡಿಗ್ರಿ ಚಲಿಸಬಹುದಾದ ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದ ಎಲ್ಲಿಯೋ ಕುಳಿತು ರೋಬೋಟ್ ಕಾರ್ಯಾಚರಣೆಯನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗುತ್ತದೆ. ತಾಪಮಾನ ಮತ್ತು ಆದ್ರತೆಯನ್ನು ಅಳೆಯುವುದಕ್ಕೆ ಉಷ್ಣಾಂಶದ ಸೆನ್ಸಾರ್ ಅಳವಡಿಸಲಾಗಿದೆ.

ಬಹಳ ಕಡಿಮೆ ದರದಲ್ಲಿ ತಯಾರು

ಬಹಳ ಕಡಿಮೆ ದರದಲ್ಲಿ ತಯಾರು

ಹೆಕ್ಸಾಪೋಡ್‌ ತಯಾರಿಕೆಗೆ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬಹಳ ಕಡಿಮೆ ಹಣವನ್ನು ವ್ಯಯಿಸಿದ್ದಾರೆ. ಈಗಿನ ಆವೃತ್ತಿಯ ಸಾಧನಕ್ಕೆ 25,000 ರೂ. ಬಳಸಿದ್ದು, ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಿದಾಗ ಉತ್ಪಾದನೆ ವೆಚ್ಚವನ್ನು ಬಹಳಷ್ಟು ಕಡಿಮೆ ಮಾಡಬಹುದು.

ಎಲ್ಲಾ ದಿಕ್ಕುಗಳಲ್ಲೂ ಚಲಿಸುತ್ತದೆ

ಎಲ್ಲಾ ದಿಕ್ಕುಗಳಲ್ಲೂ ಚಲಿಸುತ್ತದೆ

6 ಕಾಲಿನ ರೋಬೋಟ್ 2 ವಿಧದ ವೇಗದಲ್ಲಿ ಎಲ್ಲಾ ದಿಕ್ಕುಗಳಲ್ಲಿ ಚಲಿಸುತ್ತದೆ. ರಕ್ಷಣಾ ಕಾರ್ಯಗಳಲ್ಲಿ ಉಪಯೋಗವಾಗಲಿ ಎಂದು ಮೈಕ್ರೋಪೋನ್ ಬಳಸಲಾಗಿದ್ದು, ಆರ್ಡ್ಯುಯಿನೋ ಸೆನ್ಸಾರ್ ಮೂಲಕ ತಾನೇ ಅಡತಡೆಗಳನ್ನು ದಾಟುತ್ತದೆ ಎಂದು ಸಂಶೋಧಕರಲ್ಲಿ ಒಬ್ಬರಾದ ಅನುದೀಪ್ ಮೆಡಿಸೆಟ್ಟಿ ಹೇಳಿದ್ದಾರೆ.

ಅಣು ವಿದ್ಯುತ್ ಸ್ಥಾವರದಲ್ಲಿ ಬಳಸಬಹುದು

ಅಣು ವಿದ್ಯುತ್ ಸ್ಥಾವರದಲ್ಲಿ ಬಳಸಬಹುದು

ಬೆಂಗಳೂರಿನ ವಿದ್ಯಾರ್ಥಿಗಳು ಆವಿಷ್ಕರಿಸಿದ ಹೆಕ್ಸಾಪೋಡ್‌ನ್ನು ಅಣು ವಿದ್ಯುತ್ ಸ್ಥಾವರಗಳಲ್ಲಿ ತಾಪಮಾನ ಮಾಪನ ಮಾಡಲು ಬಳಸಬಹುದಾಗಿದೆ. ಮತ್ತು ಸೈನ್ಯದ ಗೂಡಾಚಾರಿ ಕಾರ್ಯಗಳಲ್ಲಿ ಬಳಸಲು ಹೇಳಿಮಾಡಿಸಿದಂತಿದೆ.

ಕೀಟಗಳ ಚಲನೆಯಿಂದ ಪ್ರೇರಿತ

ಕೀಟಗಳ ಚಲನೆಯಿಂದ ಪ್ರೇರಿತ

6 ಕಾಲಿನ ರೋಬೋಟ್ ಕೀಟಗಳ ಚಲನೆಯಿಂದ ಪ್ರೇರಣೆ ಪಡೆದು ಆವಿಷ್ಕರಿಸಲಾಗಿದೆ. ಈ ರೋಬೋಟ್‌ನ್ನು ಗಣಿಗಾರಿಕೆಯಲ್ಲಿಯೂ ಬಳಸಬಹುದಾಗಿದೆ. ಯಶಸ್ವಿಯಾಗಿ ದೊಡ್ಡ ಮಟ್ಟದಲ್ಲಿ ಈ ರೋಬೋಟ್ ಉತ್ಪಾದನೆ ನಡೆದರೆ ಗಣಿಕಾರಿಕೆಯಲ್ಲಿ ಮತ್ತೊಂದು ಕ್ರಾಂತಿ ಉಂಟಾಗುವ ಸಾಧ್ಯತೆಯಿದೆ ಎಂದು ವಿನ್ಯಾಸಕಾರರಾದ ಅರವಿಂದ್ ವಲ್ಸಲಾನ್, ಹರ್ಷ ಎಂ.ಎನ್, ಅನುದೀಪ್ ಮೆಡಿಸೆಟ್ಟಿ ಮತ್ತು ದೀಪಕ್ ಕುಮಾರ್ ಹೇಳಿದ್ದಾರೆ.

ದೃಷ್ಟಿ ವಿಕಲಚೇತನರಿಗೆ ಸ್ಮಾರ್ಟ್‌ಸ್ಟಿಕ್

ದೃಷ್ಟಿ ವಿಕಲಚೇತನರಿಗೆ ಸ್ಮಾರ್ಟ್‌ಸ್ಟಿಕ್

ದೃಷ್ಟಿ ವಿಕಲಚೇತನರು ಸ್ವಾವಲಂಭಿಗಳಾಗುವ ಉದ್ದೇಶದೊಂದಿಗೆ ಸಪ್ತಗಿರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ನೆರವಿನ ಸಾಧನವನ್ನು ಆವಿಷ್ಕಾರ ಮಾಡಿದ್ದಾರೆ. ಈ ಸ್ಮಾರ್ಟ್‌ಸ್ಟಿಕ್ ಕೇವಲ 500 ರೂ. ಬೆಲೆಯದ್ದಾಗಿದ್ದು, ಅಡೆತಡೆಗಳನ್ನು ಮತ್ತು ನೀರನ್ನು ಗುರುತಿಸುವ ಸ್ಮಾರ್ಟ್‌ಸ್ಟಿಕ್ ಸುಲಭವಾಗಿ ರಸ್ತೆಯಲ್ಲಿ ನಡೆಯುವಂತೆ ಮಾಡುತ್ತದೆ.

ಅಲ್ಟ್ರಾಸಾನಿಕ್ ಸೆನ್ಸಾರ್

ಅಲ್ಟ್ರಾಸಾನಿಕ್ ಸೆನ್ಸಾರ್

ಸ್ಮಾರ್ಟ್ ಸ್ಟಿಕ್ ನೀರಿನ ಸಂವೇದನೆ ಫೀಚರ್ ಹೊಂದಿರುವ ಅಲ್ಟ್ರಾಸಾನಿಕ್ ಸೆನ್ಸಾರ್ ಮತ್ತು ಅಲ್ಟ್ರಾಸಾನಿಕ್ ಟ್ರಾನ್ಸಿವರ್ ಮಾದರಿ ಹೊಂದಿದ್ದು ಮುಂದೆ ಬರುವ ವ್ಯಕ್ತಿಯ ಮೊಣಕಾಲಿನ ಕೆಳಗಿರುವ ಅಡೆತಡೆಗಳನ್ನು ಅಲ್ಟ್ರಾಸಾನಿಕ್ ಅಲೆಗಳ ಸಹಾಯದಿಂದ ಗುರುತಿಸುತ್ತದೆ.

ವೈವಿಧ್ಯಮಯ ಶಬ್ಧ ಮತ್ತು ರೇಡಿಯೋ ಫ್ರಿಕ್ವೆನ್ಸಿ ರಿಮೋಟ್

ವೈವಿಧ್ಯಮಯ ಶಬ್ಧ ಮತ್ತು ರೇಡಿಯೋ ಫ್ರಿಕ್ವೆನ್ಸಿ ರಿಮೋಟ್

ಸ್ಮಾರ್ಟ್‌ ಸ್ಟಿಕ್ ವಿಶೇಷವಾದ ಫೀಚರ್ ಹೊಂದಿದ್ದು, ನೀರು ಮತ್ತು ಬೇರೆ ಅಡೆತಡೆಗಳು ಬಂದಾಗ ಎರಡಕ್ಕೂ ಬೇರೆ ಬೇರೆ ರೀತಿಯಲ್ಲಿ ಶಬ್ಧವನ್ನು ಹೊರಹೊಮ್ಮಿಸಿ ವ್ಯಕ್ತಿಯನ್ನು ಎಚ್ಚರಿಸುತ್ತದೆ. ಅದಲ್ಲದೇ ರೇಡಿಯೋ ಫ್ರಿಕ್ವೆನ್ಸಿ ರಿಮೋಟ್ ಹೊಂದಿದ್ದು, ಸಾಧನ ಕಳೆದಾಗ ಗುರುತಿಸಲು ಅನುವು ಮಾಡಿಕೊಡುತ್ತಿದೆ.

ಶಬ್ಧವೇ ಪ್ರಮುಖ

ಶಬ್ಧವೇ ಪ್ರಮುಖ

ದೃಷ್ಟಿ ವಿಕಲಚೇತನರಿಗೆ ಶಬ್ಧವನ್ನು ಗ್ರಹಿಸುವ ಅದ್ಭುತ ಸಾಮರ್ಥ್ಯವಿರುತ್ತದೆ. ಆದ್ದರಿಂದ ಶಬ್ಧವನ್ನು ಕೇಂದ್ರವಾಗಿಟ್ಟುಕೊಂಡು ಈ ಸ್ಮಾರ್ಟ್‌ ಸ್ಟಿಕ್ ಅಭಿವೃದ್ಧಿ ಪಡಿಸಲಾಗಿದೆ. ಮೂಲ ಮಾದರಿಯನ್ನು ನವೀಕರಿಸಲು ಯೋಚಿಸುತ್ತಿದ್ದೇವೆ ಎಂದು ಸ್ಮಾರ್ಟ್‌ಸ್ಟಿಕ್ ಸಾಧನದ ವಿದ್ಯಾರ್ಥಿ ಸಂಶೋಧಕರಾದ ಪವನ್ ಕುಮಾರ್‌ ಹೆಚ್‌.ಡಿ, ಪಲ್ಲವಿ ಎಸ್, ಪೂರ್ವಾ ಹೆಚ್‌, ಶಿಲ್ಪಾ ಹೆಚ್.ಎಸ್ ಹೇಳಿದ್ದಾರೆ.

Best Mobiles in India

English summary
Bengaluru students innovate search-n-rescue robot, smart stick for visually challenged. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X