ಟೆಕ್‌ ಕಂಪನಿಗಳಿಗೆ ಏಷ್ಯಾದಲ್ಲಿ ಬೆಂಗಳೂರೇ ಬೆಸ್ಟ್‌..! ಕೊಲಿಯರ್ಸ್ ವರದಿಯಲ್ಲಿ ಏನೀದೆ..?

|

ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಐಟಿ ಲೋಕದಲ್ಲಿ ಮತ್ತೊಂದು ಹೆಮ್ಮೆ ಸಿಕ್ಕಿದ್ದು, ತಂತ್ರಜ್ಞಾನ ಕಾರ್ಯಚಟುವಟಿಕೆಗಳನ್ನು ಪ್ರಾರಂಬಿಸಲು ಅಥವಾ ವಿಸ್ತರಿಸಲು ಬೆಂಗಳೂರು ಏಷ್ಯಾದಲ್ಲಿಯೇ ಉತ್ತಮ ಎಂದು ವರದಿಯೊಂದು ಹೇಳಿದೆ. ವರದಿಯನ್ವಯ ಹೈದ್ರಾಬಾದ್‌, ಮುಂಬೈ, ದೆಹಲಿ ಮತ್ತೀತರ ನಗರಗಳನ್ನು ಹಿಂದಿಕ್ಕಿರುವ ಗಾರ್ಡನ್‌ ಸಿಟಿ ಬೆಸ್ಟ್‌ ಆಗಿ ಹೊರ ಹೊಮ್ಮಿದೆ.

ಟೆಕ್‌ ಕಂಪನಿಗಳಿಗೆ ಏಷ್ಯಾದಲ್ಲಿ ಬೆಂಗಳೂರೇ ಬೆಸ್ಟ್‌..! ಕೊಲಿಯರ್ಸ್ ವರದಿ..!

ಹೌದು, ಪ್ರಾಪರ್ಟಿ ಕನ್ಸ್‌ಲ್ಟಂಟ್ ಆಗಿರುವ Colliers International ನಡೆಸಿರುವ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. 'Top Locations in Asia: Technology Sector' ಎಂಬ ವರದಿಯಲ್ಲಿ ಏಷ್ಯಾದ ಪ್ರಮುಖ 16 ನಗರಗಳನ್ನು ಪರಿಶೀಲಿಸಿ ಬೆಂಗಳೂರು ಬೆಸ್ಟ್‌ ಆಯ್ಕೆ ಎಂದು Colliers ಹೇಳಿದ್ದು, ಬೆಂಗಳೂರಿಗೆ ಮತ್ತೊಂದು ಗರಿ ಬಂದಂತಾಗಿದೆ.

ಆಯ್ಕೆ ಹೇಗೆ ..?

ಆಯ್ಕೆ ಹೇಗೆ ..?

Colliers International ನಡೆಸಿದ ಅಧ್ಯಯನಕ್ಕೆ 16 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ನಗರಗಳು ಏಷ್ಯಾದ ಮಾರುಕಟ್ಟೆಯಲ್ಲಿ ತಮ್ಮದೇ ಪ್ರಭಾವ ಹೊಂದಿವೆ. 50 ವಿವಿಧ ಮಾನದಂಡಗಳಲ್ಲಿ ಈ ನಗರಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸಾಮಾಜಿಕ ಮತ್ತು ಆರ್ಥಿಕ ವಲಯ, ಆಸ್ತಿ, ಟೆಕ್‌ ಹಬ್‌ ಆಗಿ ಕಾರ್ಯನಿರ್ವಹಿಸಲು ಇರುವ ಮಾನವ ಸಾಧ್ಯತೆಗಳು ಹಾಗೂ ವಾತಾವರಣವನ್ನು ಇಲ್ಲಿ ಹೊರೆಗೆ ಅಚ್ಚಲಾಗಿದ್ದು, ಬೆಂಗಳೂರು ನಂ.1 ಆಗಿದೆ.

ಸಿಂಗಾಪೂರ್‌ ಸೆಕೆಂಡ್‌, ರಾಜಧಾನಿ ಬೆಸ್ಟ್‌

ಸಿಂಗಾಪೂರ್‌ ಸೆಕೆಂಡ್‌, ರಾಜಧಾನಿ ಬೆಸ್ಟ್‌

ಬೆಂಗಳೂರಿನ ಜತೆಗೆ ಸಿಂಗಾಫೂರ್ ದ್ವಿತೀಯ ಹಾಗೂ ‍ಷೆಂಜಾನ್‌ ಮೂರನೇ ಸ್ಥಾನ ಪಡೆದಿದ್ದು, ಟೆಕ್‌ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಲು, ವಿಸ್ತರಿಸಲು ಪ್ರಶಸ್ತವಾದ ತಾಣಗಳಾಗಿವೆ ಎಂದು ವರದಿ ಹೇಳಿದೆ. ಭಾರತದ ಸಿಲಿಕಾನ್‌ ಸಿಟಿ ಎಂದೇ ಜನಪ್ರಿಯತೆ ಗಳಿಸಿರುವ ಬೆಂಗಳೂರು ಟೆಕ್‌ ಕಂಪನಿಗಳಿಗೆ ನಂ.1 ಆಯ್ಕೆಯಾಗಿದೆ.

7ನೇ ಸ್ಥಾನಕ್ಕೆ ತೃಪ್ತಿಪಟ್ಟ ಹೈದರಾಬಾದ್‌

7ನೇ ಸ್ಥಾನಕ್ಕೆ ತೃಪ್ತಿಪಟ್ಟ ಹೈದರಾಬಾದ್‌

ಭಾರತದ ಇತರ ನಗರಗಳ ಕಾರ್ಯನಿರ್ವಹಣೆಯೇನು ಈ ವರದಿಯಲ್ಲಿ ಉತ್ತಮವಾಗಿಲ್ಲ. 16 ನಗರಗಳಲ್ಲಿ ಬೆಂಗಳೂರಿನ ನಂತರ ಹೈದರಾಬಾದ್ 7ನೇ ಸ್ಥಾನ ಪಡೆದಿದೆ. ಇನ್ನು ವಾಣಿಜ್ಯ ನಗರಿ ಮುಂಬೈ 10ನೇ ಸ್ಥಾನ ಪಡೆದರೆ, ರಾಷ್ಟ್ರ ರಾಜಧಾನಿ ದೆಹಲಿ 11ನೇ ಸ್ಥಾನವನ್ನು ಪಡೆದಿವೆ.

ಬೆಂಗಳೂರಿಗಿದೆ ಸಾಮಾಜಿಕ, ಆರ್ಥಿಕ ಬಲ

ಬೆಂಗಳೂರಿಗಿದೆ ಸಾಮಾಜಿಕ, ಆರ್ಥಿಕ ಬಲ

ಬೆಂಗಳೂರಿಗೆ ಸಾಮಾಜಿಕ ಹಾಗೂ ಆರ್ಥಿಕ ಬಲವಿದ್ದು, 2022ರವರೆಗೂ ಸರಾಸರಿ ವಾರ್ಷಿಕ GDP ಬೆಳವಣಿಗೆಯು ಶೇ.9.6ರಷ್ಟಿರುತ್ತದೆ. ಅದಲ್ಲದೇ ಏಷ್ಯಾದಲ್ಲಿ ವೇಗವಾಗಿ ಬೆಂಗಳೂರು ಬೆಳೆಯುತ್ತಿದೆ. ಇದು ವಿಶಾಲ ಮತ್ತು ಅನುಭವಿ ಪ್ರತಿಭೆಗಳಿಂದ ನೈಸರ್ಗಿಕ ಪ್ರಯೋಜನ ಪಡೆಯುತ್ತಿದೆ ಎಂದು ಕೊಲಿಯರ್ಸ್ ಹೇಳಿದೆ.

ಶಿಕ್ಷಣಕ್ಕೆ ಹೆಚ್ಚು ಒತ್ತು

ಶಿಕ್ಷಣಕ್ಕೆ ಹೆಚ್ಚು ಒತ್ತು

ಬೆಂಗಳೂರು ಐಟಿ ಹಬ್‌ ಜತೆಗೆ ಶಿಕ್ಷಣದ ಹಬ್‌ ಆಗಿದೆ ಎಂದು ವರದಿ ಹೇಳಿದೆ. ಭಾರತದಲ್ಲಿಯೇ ಹೆಚ್ಚಿನ ಸಂಖ್ಯೆಯ ಉನ್ನತ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನಲ್ಲಿವೆ. ಬೆಂಗಳೂರಿನ ಒಟ್ಟು ಉದ್ಯೋಗ ಪಾಲುದಾರಿಕೆಯಲ್ಲಿ ಐಟಿ ಕ್ಷೇತ್ರವು ಶೇ.24ರಷ್ಟು ಪಾಲನ್ನು ಆಕ್ರಮಿಸಿಕೊಂಡಿದೆ.

ಟೆಕ್ ಸ್ಟಾರ್ಟ್‌ಅಪ್‌ ಹಬ್‌

ಟೆಕ್ ಸ್ಟಾರ್ಟ್‌ಅಪ್‌ ಹಬ್‌

ಬೆಂಗಳೂರು ಸಾಮಾನ್ಯವಾಗಿ ಟೆಕ್ ಸ್ಟಾರ್ಟ್‌ಅಪ್‌ ಹಬ್‌ ಆಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸ್ಟಾರ್ಟ್‌ಅಪ್‌ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಬೆಂಗಳೂರಿಗೆ ಹರಿದು ಬಂದಿದೆ. ವಾರ್ಷಿಕ 4 ಬಿಲಿಯನ್‌ ಯುಎಸ್‌ ಡಾಲರ್‌ ಬಂಡವಾಳ ಬೆಂಗಳೂರಿನಲ್ಲಿ ಹೂಡಿಕೆಯಾಗಿದೆ ಎಂದು ಕೊಲಿಯರ್ಸ್ ಇಂಟರ್‌ನ್ಯಾಷ್‌ನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಜೋಯ್‌ ವರ್ಗೀಸ್‌ ಹೇಳಿದ್ದಾರೆ.

ಗ್ರೇಡ್‌ ಎ ಆಫೀಸ್‌ ಸ್ಪೇಸ್‌

ಗ್ರೇಡ್‌ ಎ ಆಫೀಸ್‌ ಸ್ಪೇಸ್‌

ಏಷ್ಯಾದಲ್ಲಿ ಟೊಕಿಯೋ ನಂತರ ಗ್ರೇಡ್‌ ಎ ಆಫೀಸ್‌ ಸ್ಪೇಸ್‌ ಹೆಚ್ಚಿರುವುದು ಬೆಂಗಳೂರಿನಲ್ಲಿ ಮಾತ್ರವಂತೆ. ಅದಲ್ಲದೇ ಕಡಿಮೆ ವೆಚ್ಚದಾಯಕ ನಗರವಾಗಿಯೂ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಕಡಿಮೆ ಸಂಬಳದ ಉದ್ಯೋಗಿಗಳು ಗೌರವಯುತ ಜೀವನ ವೆಚ್ಚದಲ್ಲಿ ದಿನ ದೂಡಬಹುದು ಎಂದು ಹೇಳಿದ್ದಾರೆ. ಅದಲ್ಲದೇ ದೇಶದಲ್ಲಿಯೇ ದೊಡ್ಡ ಆಫೀಸ್‌ ಮಾರುಕಟ್ಟೆಯನ್ನು ಬೆಂಗಳೂರು ಹೊಂದಿದ್ದು, ಗ್ರೇಡ್‌ ಎ ಸ್ಟಾಕ್‌ ಮಾರುಕಟ್ಟೆ 141 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ಬಹಳಷ್ಟು ಮೈಕ್ರೊ ಮಾರುಕಟ್ಟೆಗಳು ವಿಸ್ತರಿತವಾಗಿವೆ. ಇದರ ಆಧಾರದಲ್ಲಿ ಟೋಕಿಯೋದ ನಂತರ ಏಷ್ಯಾದಲ್ಲಿ ದೊಡ್ಡ ಅರ್ಬನ್ ಆಫೀಸ್ ಮಾರುಕಟ್ಟೆಯಾಗಿದೆ.

ಸಾಕಷ್ಟು ಅವಕಾಶಗಳು

ಸಾಕಷ್ಟು ಅವಕಾಶಗಳು

ತಂತ್ರಜ್ಞಾನದ ಕಾರ್ಯಚಟುವಟಿಕೆಗಳನ್ನು ನಡೆಸಲು ಬೆಂಗಳೂರು ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ವಲಯವು ಭಾರತದಲ್ಲಿ ವಿಸ್ತರಿಸುತ್ತಿರುವ ಸ್ಥಳದಲ್ಲಿ ಶೇ.60-70ರಷ್ಟು ಪಾಲನ್ನು ಬೆಂಗಳೂರು ಹೊಂದಿದೆ ಎಂದು ವರದಿ ಹೇಳಿದೆ.

ಹೈದರಾಬಾದ್‌ಗಿಂತ ಬೆಂಗಳೂರು ಬೆಸ್ಟ್‌

ಹೈದರಾಬಾದ್‌ಗಿಂತ ಬೆಂಗಳೂರು ಬೆಸ್ಟ್‌

7ನೇ ಸ್ಥಾನ ಪಡೆದಿರುವ ಹೈದರಾಬಾದ್‌ ಶೇ.59ರಷ್ಟು ಅಂಕಗಳನ್ನು ಪಡೆದಿದೆ. ಭಾರತದ ಬೇರೆ ನಗರಗಳಂತೆ ವೇಗವಾಗಿ ಹೈದರಾಬಾದ್‌ ಕೂಡ ಅಭಿವೃದ್ಧಿಯಾಗುತ್ತಿದೆ. ಆದರೆ, ಸಾಮಾಜಿಕ ಹಾಗೂ ಆರ್ಥಿಕ ಅಂಶಗಳಲ್ಲಿ ಬೆಂಗಳೂರಿನಿಂದ ಬಹಳ ದೂರದಲ್ಲಿದ್ದು, ಪ್ರತಿಭೆಯನ್ನು ಸಹ ಹೋಲಿಸಲು ಆಗುವುದಿಲ್ಲ. ಏನೇ ಇದ್ದರೂ ತೆರಿಗೆ ದರಗಳು ಮತ್ತು ಕಡಿಮೆ ಜೀವನ ವೆಚ್ಚಗಳಿಂದ ಇತರೆ ಭಾರತೀಯ ನಗರಗಳಿಗಿಂತ ಹೈದರಾಬಾದ್‌ ಉತ್ತಮವಾಗಿದೆ ಎಂದು ಹೇಳಿದೆ.

ಬೆಂಗಳೂರಿಗೆ ಶೇ. 67.9 ಅಂಕ

ಬೆಂಗಳೂರಿಗೆ ಶೇ. 67.9 ಅಂಕ

ವರದಿಯ ಒಟ್ಟಾರೆ ಅಂಕ ಪಟ್ಟಿ ಶೇ. 67.9 ರಿಂದ ಶೇ. 53ರವರೆಗೆ ಇದ್ದು, ಬೆಂಗಳೂರು ಶೇ.67.9 ಅಂಕ ಪಡೆದು ಬೆಸ್ಟ್‌ ಆಗಿದೆ. ಸಾಮಾಜಿಕ ಆರ್ಥಿಕ ಅಂಶಗಳು, ಕಚೇರಿಗೆ ಜಾಗ, ಉದ್ಯಮಿಗಳ ವೆಚ್ಚ, ಕಡಿಮೆ ಜೀವನ ವೆಚ್ಚದಿಂದ ಬೆಂಗಳೂರು ನಂ.1 ಆಗಿದೆ ಎಂದು ಕೊಲಿಯರ್ಸ್ ವರದಿ ಹೇಳಿದೆ.

Best Mobiles in India

English summary
Bengaluru top location in Asia for starting tech ops: Colliers. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X