ಬೆಂಗಳೂರಿನಲ್ಲಿ ಆಪಲ್ ಸ್ಟೋರ್: ಓಪನಿಂಗ್ ಡೇಟ್, ಆಫರ್ಸ್ ಮತ್ತು ಪುಲ್ ಡೀಟೈಲ್ಸ್!
ಟೆಕ್ ದೈತ್ಯ ಆಪಲ್ ಕಂಪನಿಯು ಭಾರತದಲ್ಲಿ ತನ್ನ ಚಿಲ್ಲರೆ ವಿಸ್ತರಣೆಯ ಭಾಗವಾಗಿ ನಮ್ಮ ಬೆಂಗಳೂರಿನಲ್ಲಿ ತನ್ನ ಮೂರನೇ ಅಧಿಕೃತ ರೀಟೇಲ್ ಸ್ಟೋರ್ ತೆರೆಯಲು ಸಜ್ಜಾಗಿದೆ. ಈ ಹೊಸ ಸ್ಟೋರ್‌ಗೆ ಆಪಲ್ ಹೆಬ್ಬಾಳ ಎಂದು ಹೆಸರಿಡಲಾಗಿದ್ದು, ಇದು ಸೆಪ್ಟೆಂಬರ್ 2, ಮಂಗಳವಾರದಂದು ಮಧ್ಯಾಹ್ನ 1 ಗಂಟೆಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಬೆಂಗಳೂರಿನ ಫೀನಿಕ್ಸ್ ಮಾಲ್‌ನಲ್ಲಿ ಈ ಸ್ಟೋರ್ ಸ್ಥಾಪನೆಯಾಗುತ್ತಿದೆ. ಬೆಂಗಳೂರಿನಲ್ಲಿ ಆಪಲ್‌ನ ಹೊಸ ರೀಟೇಲ್ ಸ್ಟೋರ್ ಕುರಿತು ತಿಳಿಯಬೇಕಾದ ಎಲ್ಲಾ ಮಾಹಿತಿಯು ಇಲ್ಲಿದೆ.
ಭಾರತದಲ್ಲಿ ಆಪಲ್‌ನ ಮೂರನೇ ರೀಟೇಲ್ ಸ್ಟೋರ್
ಭಾರತದಲ್ಲಿ ಆಪಲ್ ತನ್ನ ಮೊದಲ ಅಧಿಕೃತ ಸ್ಟೋರ್ ಅನ್ನು ಏಪ್ರಿಲ್ 2023 ರಲ್ಲಿ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (Apple BKC) ತೆರೆಯಿತು. ನಂತರ, ಎರಡನೇ ಸ್ಟೋರ್ ದೆಹಲಿಯ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿ (Apple Saket) ಪ್ರಾರಂಭವಾಯಿತು. ಈಗ ಬೆಂಗಳೂರಿನ ಫೀನಿಕ್ಸ್ ಮಾಲ್‌ನಲ್ಲಿ ಮೂರನೇ ಸ್ಟೋರ್ (Apple Hebbal) ಆರಂಭವಾಗುತ್ತಿದೆ. ಬೆಂಗಳೂರಿನ ಸ್ಟೋರ್ ವಿಶೇಷವೆಂದರೆ, ಆಪಲ್ ಹೆಬ್ಬಾಳದ ಉದ್ಘಾಟನೆಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನಿಂದ ಸ್ಫೂರ್ತಿ ಪಡೆದ ರೋಮಾಂಚಕ ಕಲಾಕೃತಿಯ ಮೂಲಕ ಆಪಲ್ ಆಚರಿಸುತ್ತಿದೆ.

ಸ್ಟೋರ್‌ನಲ್ಲಿ ಗ್ರಾಹಕರಿಗೆ ಸಿಗುವ ಸೌಲಭ್ಯಗಳು
ಆಪಲ್ ಹೆಬ್ಬಾಳ ಸ್ಟೋರ್ ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇಲ್ಲಿ ಆಪಲ್‌ನ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ಅನ್ವೇಷಿಸಲು, ಹೊಸ ವೈಶಿಷ್ಟ್ಯಗಳನ್ನು ಅನುಭವಿಸಲು ಮತ್ತು ತಜ್ಞರ ಬೆಂಬಲವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂದರೆ, ನೀವು ಐಫೋನ್‌ಗಳು, ಮ್ಯಾಕ್‌ಗಳು, ಆಪಲ್ ವಾಚ್‌ಗಳು ಮತ್ತು ಇತರ ಎಲ್ಲ ಆಪಲ್ ಉತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ಒಂದೇ ಸೂರಿನಡಿ ನೋಡಬಹುದು ಮತ್ತು ಅನುಭವಿಸಬಹುದು. ಇದು ಖರೀದಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಉತ್ಪನ್ನಗಳನ್ನು ಪರಿಶೀಲಿಸಲು ಮತ್ತು ಅವುಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ.

ಈ ಸ್ಟೋರ್‌ನಲ್ಲಿ ಉತ್ಪನ್ನಗಳ ಮಾರಾಟ ಮಾತ್ರವಲ್ಲದೆ, ತಾಂತ್ರಿಕ ಬೆಂಬಲ, ಹಳೆಯ ಸಾಧನಗಳ ವಿನಿಮಯ ಮತ್ತು ಹೊಸ ಸಾಧನಗಳನ್ನು ಸೆಟಪ್ ಮಾಡಲು ಸಹಾಯದಂತಹ ಸೇವೆಗಳೂ ಲಭ್ಯವಿರುತ್ತವೆ. ಇದೇ ಸ್ಟೋರ್‌ನಲ್ಲಿ "ಟುಡೇ ಅಟ್ ಆಪಲ್" ಎಂಬ ಜನಪ್ರಿಯ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಆಪಲ್ ತಜ್ಞರು ಗ್ರಾಹಕರೊಂದಿಗೆ ನೇರವಾಗಿ ಸಂವಹನ ನಡೆಸುತ್ತಾರೆ. ಇಲ್ಲಿ ಉತ್ಪಾದಕತೆ, ಮತ್ತು ಕೋಡಿಂಗ್‌ನಂತಹ ವಿವಿಧ ವಿಷಯಗಳ ಬಗ್ಗೆ ಉಚಿತ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ, ಇದರಿಂದ ಗ್ರಾಹಕರು ತಮ್ಮ ಆಪಲ್ ಸಾಧನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಕಲಿಯಬಹುದು ಎಂದು ಆಪಲ್ ತಿಳಿಸಿದೆ.
ಇನ್ನು ಉದ್ಘಾಟನಾ ದಿನದ ಮೊದಲು, ಗ್ರಾಹಕರು ವಿಶೇಷ ಆಪಲ್ ಹೆಬ್ಬಲ್ ವಾಲ್‌ಪೇಪರ್‌ಗಳನ್ನು ಡೌನ್‌ಲೋಡ್ ಮಾಡಲು, ಬೆಂಗಳೂರಿನ ಶಬ್ದಗಳಿಂದ ಪ್ರೇರಿತವಾದ ಕ್ಯುರೇಟೆಡ್ ಆಪಲ್ ಮ್ಯೂಸಿಕ್ ಪ್ಲೇಪಟ್ಟಿಯನ್ನು ಕೇಳಲು ಮತ್ತು https://www.apple.com/in/retail/hebbal/ ನಲ್ಲಿ ಮುಂಬರುವ ಅಂಗಡಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ ಆಪಲ್‌ನ ಕಚೇರಿ ಬಾಡಿಗೆ ಎಷ್ಟು?
ರೀಟೇಲ್ ಸ್ಟೋರ್ ಜೊತೆಗೆ, ಆಪಲ್ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕಚೇರಿ ಕಾರ್ಯಾಚರಣೆಗಳನ್ನು ಸಹ ವಿಸ್ತರಿಸುತ್ತಿದೆ. ಕಂಪನಿಯು ಎಂಬಸಿ ಗ್ರೂಪ್‌ನಿಂದ ಸುಮಾರು 2.7 ಲಕ್ಷ ಚದರ ಅಡಿ ಕಚೇರಿ ಜಾಗವನ್ನು 10 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದಿದೆ ಎನ್ನಲಾಗಿದೆ. ಈ ಒಪ್ಪಂದದ ಪ್ರಕಾರ, ಆಪಲ್ ಸುಮಾರು ₹1,000 ಕೋಟಿಗೂ ಹೆಚ್ಚು ಬಾಡಿಗೆ ಮತ್ತು ನಿರ್ವಹಣಾ ಶುಲ್ಕವನ್ನು ಪಾವತಿಸುವ ನಿರೀಕ್ಷೆಯಿದೆ. ಎಂಬಸಿ ಜೆನಿತ್ ಕಟ್ಟಡದಲ್ಲಿ ಒಂಬತ್ತು ಮಹಡಿಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎನ್ನಲಾಗಿದೆ. ಆದರೆ, ಆಪಲ್ ಈ ಕುರಿತು ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.
ಈ ಹೊಸ ರೀಟೇಲ್ ಸ್ಟೋರ್ ಮತ್ತು ಕಚೇರಿ ವಿಸ್ತರಣೆಯು ಬೆಂಗಳೂರನ್ನು ಆಪಲ್‌ನ ಪ್ರಮುಖ ಕೇಂದ್ರವನ್ನಾಗಿ ಮಾಡಲಿದೆ. ನೀವು ಹೊಸ ಆಪಲ್ ಸ್ಟೋರ್ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಬಯಸಿದರೆ, ಆಪಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಸ್ಟೋರ್‌ಗೆ ಸಂಬಂಧಿಸಿದ ವಿಶೇಷ ವಾಲ್‌ಪೇಪರ್‌ಗಳು ಮತ್ತು ಮ್ಯೂಸಿಕ್ ಪ್ಲೇಲಿಸ್ಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


Click it and Unblock the Notifications








