Home
ಸುದ್ದಿಜಾಲ

ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್‌ ನೋಡಿ ಮನೆ ದೋಚಿದರು ಕಳ್ಳರು!!

By Bhaskar N J

ನಿಮ್ಮ ಮನೆ ಮಂದಿಯೆಲ್ಲ ಪ್ರವಾಸಕ್ಕೆ ಹೊರಟಿದ್ದರೆ ಅದನ್ನು ಫೇಸ್‌ಬುಕ್‌ನಂತ ಜಾಲತಾಣಗಳಲ್ಲಿ ಪೋಸ್ಟ್ ಮಾಡಬೇಡಿ. ಮನೆ ಮಂದಿಯೆಲ್ಲ ಪ್ರವಾಸದಲ್ಲಿದ್ದೇವೆ ಎಂದು ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿದೆ ಅದು ಕಳ್ಳರಿಗೆ ಆಹ್ವಾನ ಕೊಟ್ಟ ಹಾಗೆ ಎಂಬ ಮುನ್ನೆಚ್ಚರಿಕೆ ನಡುವೆಯೂ, ಇಂತದ್ದೇ ಒಂದು ಘಟನೆ ಬೆಂಗಳೂರಿನ ಆರ್‌ ಟಿ ನಗರದಲ್ಲಿ ನಡೆದಿದೆ!

ಹೌದು, ನಗರದ ಆರ್‌ ಟಿ ನಗರ ವ್ಯಾಪ್ತಿಯಲ್ಲಿ ನಾರಾಯಣಪ್ಪ ಬ್ಲಾಕ್‌ನ ನಿವಾಸಿ ಲೋಹಿತ್ ಎಂಬುವರ ಮನೆಗೆ ಕನ್ನ ಹಾಕಿರುವ ಕಳ್ಳರು ಲಕ್ಷಾಂತಹ ರೂ. ಮೌಲ್ಯದ ಆಭರಣ ಮತ್ತು ಹಣವನ್ನು ದೋಚಿದ್ದಾರೆ. ಈ ಘಟನೆ ವರದಿಯಾದ ನಂತರ, ಫೇಸ್‌ಬುಕ್‌ನಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿಯೇ ಕಳ್ಳರು ಲೋಹಿತ್ ಅವರ ಮನೆಯನ್ನು ದೋಚಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್‌ ನೋಡಿ ಮನೆ ದೋಚಿದರು ಕಳ್ಳರು!!

ಕೌಟುಂಬಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ, ಲೋಹಿತ್ ಅವರು ಕುಟುಂಬ ಸಮೇತ ಜೂ.8ರಂದು ಸ್ವಂತ ಊರು ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂಗೆ ತೆರಳಿದ್ದಾರೆ. ಈ ವೇಳೆಯಲ್ಲಿ ಲೋಹಿತ್ ಅವರ ಸಹೋದರಿ ಪ್ರೇಮಲತಾ ಅವರು ಫೇಸ್‌ಬುಕ್‌ನಲ್ಲಿ 'ಆನ್‌ ದ ವೇ ಟು ಮೈ ನೇಟಿವ್‌ ಪ್ಲೇಸ್ ಗೋಬಿಚೆಟ್ಟಿಪಾಳ್ಯಂ' ಎಂದು ಸ್ಟೇಟಸ್ ಹಾಕಿದ್ದಾಗಿ ತಿಳಿದುಬಂದಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಲೋಹಿತ್ ಅವರು, ಊರಿಗೆ ಹೋಗುವ ವೇಳೆ ಸಹೋದರಿ ಪ್ರೇಮಲತಾ ಅವರು ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದರು. ಇದನ್ನು ನೋಡಿಕೊಂಡಯೇ ಮನೆಯಲ್ಲಿ ಯಾರು ಇರುವುದಿಲ್ಲ ಎಂದು ತಿಳಿದು ಖದೀಮರು ಕಳ್ಳತನ ಮಾಡಿರಬಹುದು ಎಂದು ಲೋಹಿತ್ ಅವರು ಕೂಡ ಶಂಕೆ ವ್ಯಕ್ತಪಡಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಹಾಕಿದ್ದ ಒಂದು ಪೋಸ್ಟ್‌ ನೋಡಿ ಮನೆ ದೋಚಿದರು ಕಳ್ಳರು!!

ಆದರೆ, ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಕಾರಣಕ್ಕೆ ಕಳ್ಳತನ ಆಗಿದೆ ಎಂದು ದೂರುದಾರರು ನಮಗೆ ಹೇಳಿಲ್ಲ. ಆ ಬಗ್ಗೆ ಹೇಳಿಕೆ ನೀಡಿದರೆ ಆ ಬಗ್ಗೆಯೂ ತನಿಖೆ ನಡೆಸುತ್ತೇವೆ. ಕಳ್ಳತನ ನಡೆದ ಬಳಿಕ ಪ್ರೇಮಲತಾ ಅವರು ಫೇಸ್‌ಬುಕ್‌ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ. ಅದರ ಸ್ಕ್ರೀನ್ ಶಾಟ್ ಲಭ್ಯವಾಗಿದೆ ಎಂದು ಆರ್‌.ಟಿ ನಗರ ಪೊಲೀಸರು ತಿಳಿಸಿದ್ದಾರೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಪ್ರವಾಸಕ್ಕೆ ಹೊರಟಿರುವ ಒಂದು ಪೋಸ್ಟ್‌ನಿಂದಾಗಿ ಅವರ ಮನೆಯನ್ನೇ ದೋಚಿದ್ದ ಒಂದು ಘಟನೆಯನ್ನು ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರು ಉದಾಹರಣೆ ಸಹಿತ ವಿವರಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೇ ಈ ವಿಡಿಯೊ ವೈರಲ್ ಆಗಿ ಹರಿದಾಡಿತ್ತು. ಆದರೂ. ಇಂತಹ ಘಟನೆಗಳು ಜರುಗುತ್ತಿರುವುದು ಜನರ ನಿರ್ಲಕ್ಷ ಕೂಡ ಹೌದು.!

ಓದಿರಿ: ಹಾಲಿವುಡ್ ಸಿನಿಮಾಗಳಲ್ಲಿನ ಈ ಭಯಾನಕ ದೃಶ್ಯಗಳ ಸೀಕ್ರೆಟ್ಸ್ ನೋಡಿದರೆ ಬೆಚ್ಚಿಬೀಳ್ತೀರಾ!!

Best Mobiles in India

English summary
A resident of RT Nagar, who had posted details of a trip she was taking out of the city on Facebook, returned to find her house ransacked with her jewelery, cash and a two-wheeler missing. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+