ಭಾರತದಲ್ಲಿ ಬೆನ್‌ಕ್ಯೂ ಐ-ಕೇರ್ ಎಂಟರ್‌ಟೈನ್‌ಮೆಂಟ್ ಸಿರೀಸ್ ಮಾನಿಟರ್ ಅನಾವರಣ!
ಇತ್ತೀಚಿನ ದಿನಗಳಲ್ಲಿ ಮಾನಿಟರ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಮಾನಿಟರ್‌ಗಳನ್ನು ಪರಿಚಯಿಸಿವೆ. ಸದ್ಯ ಇದೀಗ ಬೆನ್‌ಕ್ಯೂ ಸಂಸ್ಥೆ ಭಾರತದಲ್ಲಿ ಎರಡು ಹೊಸ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್‌ಗಳು ಐ-ಕೇರ್ ಎಂಟರ್‌ಟೈನ್‌ಮೆಂಟ್ ಮಾನಿಟರ್‌ಗಳಾಗಿವೆ. ಈ ಮಾನಿಟರ್‌ಗಳು 29,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ.

ಹೌದು, ತೈವಾನೀಸ್ ಮೂಲದ ಬೆನ್‌ಕ್ಯೂ ಸಂಸ್ಥೆ ಕಣ್ಣಿನ ಆರೈಕೆಯನ್ನು ನೀಡುವ ಜೊತೆಗೆ ಮನರಂಜನೆಯನ್ನು ಒದಗಿಸಬಲ್ಲ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಮಾನಿಟರ್‌ಗಳು ಎಂಟ್ರಿ ಲೆವೆಲ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಬಿಡುಗಡೆ ಆಗಿವೆ. ಇನ್ನು ಈ ಮಾನಿಟರ್‌ಗಳನ್ನ EW 3280 U 32 ಇಂಚಿನ ಮಾನಿಟರ್ ಮತ್ತು EW 2780 Q 27 ಹೆಸರಿಸಲಾಗಿದೆ. ಇದು ಎರಡೂ ವರ್ಧಿತ ಎಚ್‌ಡಿಆರ್ಐ ತಂತ್ರಜ್ಞಾನದೊಂದಿಗೆ ಬರುತ್ತವೆ, ಆಡಿಯೊಫೈಲ್ ತಜ್ಞರ ‘ಟ್ರೆವೊಲೊ' ತಂಡದಿಂದ ಕಸ್ಟಮೈಸ್ ಮಾಡಿದ ಸ್ಪೀಕರ್‌ಗಳನ್ನು ಹೊಂದಿವೆ. ಇನ್ನುಳಿದಂತೆ ಈ ಮಾನಿಟರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೆನ್ಕ್ಯೂ ಸಂಸ್ಥೆ ಪರಿಚಯಿಸಿರುವ ಹೊಸ ಮಾನಿಟರ್‌ಗಳು ‘ಬ್ರೈಟ್‌ನೆಸ್ ಇಂಟೆಲಿಜೆನ್ಸ್ ಪ್ಲಸ್' ಎಂಬ ಬ್ರೈಟ್‌ನೆಸ್ ಮತ್ತು ಕಲರ್ ಟೆಂಪರೇಚರ್-ಸೆನ್ಸಿಂಗ್ ಟೆಕ್ನಾಲಜಿ ಯನ್ನು ಹೊಂದಿವೆ. ಈ ಮಾನಿಟರ್‌ಗಳು ತನ್ನ ಮನರಂಜನಾ ಸರಣಿಯನ್ನು ಮನರಂಜನಾ ವಿಷಯವನ್ನು ಆನಂದಿಸಲು ಪರಿಪೂರ್ಣ ಒಡನಾಡಿಯನ್ನಾಗಿ ಮಾಡಲು ವಿಶಾಲ ಬಣ್ಣದ ಹರವು ಹೊಂದಿದೆ ಎಂದು ಕಂಪನಿ ಹೇಳಿದೆ. ಇದರಲ್ಲಿ ಅಸಾಧಾರಣ ಆಡಿಯೊ-ದೃಶ್ಯ ಇಮ್ಮರ್ಶನ್ ಅನ್ನು ಸಹ ನೀಡಿದೆ. ಜೊತೆಗೆ ತನ್ನ ಬಳಕೆದಾರರ ಕಣ್ಣಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕಣ್ಣಿನ ಆರೈಕೆ ಫೀಚರ್ಸ್ ಅನ್ನು ಸಹ ಪರಿಚಯಿಸಿದೆ.

ಇನ್ನು ಈ ಎರಡು ಮಾನಿಟರ್‌ಗಳಲ್ಲಿ EW 3280U ಮಾನಿಟರ್ 95% DCI-P3 ಮತ್ತು EW-2780 Q 99% SRGB (ಸ್ಟ್ಯಾಂಡರ್ಡ್ ರೆಡ್ ಗ್ರೀನ್ ಬ್ಲೂ) ಜೊತೆಗೆ, ಬಳಕೆದಾರರು ಕ್ರಮವಾಗಿ ಎಕ್ಸ್‌ಬಾಕ್ಸ್ / ಪ್ಲೇಸ್ಟೇಷನ್ ಮತ್ತು ಚಲನಚಿತ್ರಗಳು ಅಥವಾ ಸರಣಿಗಳಲ್ಲಿ ರಿಯಲ್ ಲೈಪ್ ಕಲರ್‌ಗಳೊಂದಿಗೆ ಕನ್ಸೋಲ್ ಗೇಮ್‌ನಲ್ಲಿ ಗ್ರಾಫಿಕ್ಸ್ ಅನ್ನು ಆನಂದಿಸಬಹುದಾಗಿದೆ. ಇದಲ್ಲದೆ ಹೊಸ ಬೆನ್‌ಕ್ಯೂ ಎಂಟರ್‌ಟೈನ್‌ಮೆಂಟ್ ಸೀರೀಸ್ ಮಾನಿಟರ್‌ಗಳು ರಿಮೋಟ್ ಕಂಟ್ರೋಲ್ ಅನ್ನು ಸಹ ನೀಡುತ್ತದೆ. ಅದು ಡಿಸ್‌ಪ್ಲೇನಲ್ಲಿ ಒನ್-ಟಚ್ ಫೈವ್-ಫಂಕ್ಷನ್ ನ್ಯಾವಿಗೇಟರ್ ಕಂಟ್ರೋಲ್ ಮತ್ತು ಅನುಕೂಲಕರ ವಾಲ್ಯೂಮ್ ವೀಲ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಎಂಟರ್‌ಟೈನ್ ಮೆಂಟ್ ಮತ್ತು ಗುಣಮಟ್ಟವನ್ನು ನೀಡುವ ಪ್ರಯತ್ನಕ್ಕೆ ಅನುಗುಣವಾಗಿ, ಈ ಹೊಸ ಮಾನಿಟರ್‌ಗಳನ್ನು ಹೊಸ ವಿನ್ಯಾಸದಲ್ಲಿ ಪರಿಚಯಿಸಲಾಗಿದೆ. ಇವು ಚಿತ್ರದ ಗುಣಮಟ್ಟ, ಸ್ಪಷ್ಟ ಧ್ವನಿ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಹೊಂದಿದೆ. ಬಳಕೆದಾರರು ಒಂದೇ ಡಿವೈಸ್‌ನಲ್ಲಿ ಈ ಎಲ್ಲಾ ರೀತಿಯ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಈ 'ಬೆನ್ಕ್ಯೂ ಮಾನಿಟರ್ಸ್' ಚಲನಚಿತ್ರಗಳು, ಮ್ಯೂಸಿಕ್ ವೀಡಿಯೊಗಳು ಮತ್ತು ಪರಿಣಾಮಕಾರಿಯಾದ ಧ್ವನಿ ಮತ್ತು ಚಿತ್ರದ ಗುಣಮಟ್ಟ ಅಗತ್ಯವಿರುವ ಯಾವುದೇ ವಿಷಯವನ್ನು ವೀಕ್ಷಿಸಲು ಉತ್ತಮ ಆಯ್ಕೆಯಾಗಿದೆ ಎಂದು ಬೆನ್‌ಕ್ಯೂ ಕಂಪೆನಿ ಹೇಳಿದೆ.


Click it and Unblock the Notifications



