BenQ ಸಂಸ್ಥೆಯಿಂದ ಹೊಸ ಫೋರ್ಟಬಲ್ ಪ್ರೊಜೆಕ್ಟರ್ ಲಾಂಚ್! ಇದರ ಲಾಭ ಕೇಳಿದ್ರೆ ದಂಗಾಗ್ತಿರಾ!
ಜನಪ್ರಿಯ ಪ್ರೊಜೆಕ್ಟರ್ ತಯಾರಕ ಕಂಪೆನಿ BenQ ಭಾರತದಲ್ಲಿ ಮತ್ತೊಂದು ಹೊಸ ಪ್ರೊಜೆಕ್ಟರ್ ಬಿಡುಗಡೆ ಮಾಡಿದೆ. ಇದು ಪೋರ್ಟಬಲ್ ಪ್ರೊಜೆಕ್ಟರ್ ಆಗಿದ್ದು, ಫುಲ್ HD ರೆಸಲ್ಯೂಶನ್‌ನಲ್ಲಿ 100″ ವರೆಗೆ ಪ್ರೊಜೆಕ್ಟ್ ಮಾಡಬಹುದು. ಇದಲ್ಲದೆ 135 ಡಿಗ್ರಿ ಪ್ರೊಜೆಕ್ಷನ್ ವ್ಯೂ ನೀಡುವ ತಿರುಗುವ ಲೆನ್ಸ್ ಅನ್ನು ಹೊಂದಿದೆ.
ಹೌದು, BenQ ಕಂಪೆನಿ ಭಾರತದಲ್ಲಿ ಹೊಸದಾಗಿ BenQ GV31 ಪೋರ್ಟಬಲ್ ಪ್ರೊಜೆಕ್ಟರ್ ಅನ್ನು ಪರಿಚಯಿಸಿದೆ. ಈ ಪ್ರೊಜೆಕ್ಟರ್ ತಿರುಗುವ ಪ್ರೊಜೆಕ್ಟರ್ ಆಗಿದ್ದು ಉತ್ತಮ ಅನುಭವವನ್ನು ನೀಡಲಿದೆ. ಜೊತೆಗೆ ಡ್ಯುಯಲ್ 4W ಮಿಡ್‌ರೇಂಜ್ ಟ್ವೀಟರ್‌ಗಳು ಮತ್ತು 8W ವೂಫರ್‌ನೊಂದಿಗೆ ಸಂಯೋಜಿತ 2.1-ಚಾನೆಲ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಹಾಗಾದ್ರೆ ಈ ಹೊಸ ಪ್ರೊಜೆಕ್ಟರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

BenQ GV31 ಫೋರ್ಟಬಲ್ ಪ್ರೊಜೆಕ್ಟರ್ 100 ಇಂಚಿನ 1080p ಪ್ರೊಜೆಕ್ಷನ್ ಆಗಿದೆ. ಇದು 1920 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಪ್ರೊಜೆಕ್ಷನ್ 100,000:1 ಕಾಂಟ್ರಾಸ್ಟ್ ಅನುಪಾತವನ್ನು ಪಡೆದಿದ್ದು, 300 ANSI ಲ್ಯುಮೆನ್ಸ್ ಬ್ರೈಟ್‌ನೆಸ್ನಲ್ಲಿದೆ. ಇದಲ್ಲದೆ ಫ್ರೀ ಆಂಗಲ್ ಪ್ರೊಜೆಕ್ಷನ್ 135 ಡಿಗ್ರಿ ನಮ್ಯತೆಯನ್ನು ಅನುಮತಿಸಲಿದೆ. ಈ ಪ್ರೊಜೆಕ್ಟರ್ ವೀಡಿಯೊ ಪ್ಲೇಬ್ಯಾಕ್‌ಗಾಗಿ 3 ಗಂಟೆಗಳವರೆಗೆ ಅಥವಾ ಮ್ಯೂಸಿಕ್‌ಗಾಗಿ 6 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.
BenQ GV31 ಪ್ರೊಜೆಕ್ಟರ್ ಡ್ಯುಯಲ್ 4W ಮಿಡ್‌ರೇಂಜ್ ಟ್ವೀಟರ್‌ಗಳನ್ನು ಹೊಂದಿದೆ. ಇದು 8W ವೂಫರ್‌ನೊಂದಿಗೆ ಸಂಯೋಜಿತ 2.1-ಚಾನೆಲ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಈ ಪ್ರೊಜೆಕ್ಟರ್ ತಲ್ಲೀನಗೊಳಿಸುವ ಸೌಂಡ್ ಸಿಸ್ಟಂ ನೀಡಲಿದ್ದು, ಬ್ಲೂಟೂತ್ ಸ್ಪೀಕರ್ ಆಗಿ ಕೂಡ ಕಾರ್ಯನಿರ್ವಹಿಸಲಿದೆ. ಇದು Android TVಯಿಂದ ರನ್ ಆಗಲಿದ್ದು, ಇನ್‌ಬಿಲ್ಟ್ ಕ್ರೋಮಾಕಾಸ್ಟ್, ಏರ್‌ಪ್ಲೇ ಮತ್ತು ಗೂಗಲ್ ಅಸಿಸ್ಟೆಂಟ್ ಅನ್ನು ಹೊಂದಿದೆ.

ಈ ಪ್ರೊಜೆಕ್ಟರ್ 135 ಡಿಗ್ರಿ ಪ್ರೊಜೆಕ್ಷನ್ ವ್ಯೂ ನೀಡುವ ತಿರುಗುವ ಲೆನ್ಸ್ ಅನ್ನು ಹೊಂದಿದೆ. ಫುಲ್ HD ರೆಸಲ್ಯೂಶನ್‌ನಲ್ಲಿ 100″ ವರೆಗೆ ಪ್ರೊಜೆಕ್ಟ್ ಮಾಡಬಹುದು. ಇದಲ್ಲದೆ 180 ನಿಮಿಷಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಅನ್ನು ನೀಡಬಲ್ಲದು. ಹಾಗೆಯೇ ಡೇಟಾ ಪ್ರಸರಣ, ಡಿಸ್ಪ್ಲೇಪೋರ್ಟ್ ಔಟ್‌ಪುಟ್ ಮತ್ತು ಪವರ್ ಡೆಲಿವರಿಯನ್ನು ಬೆಂಬಲಿಸುವ USB-C ಪೋರ್ಟ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ
BenQ GV31 ಪೋರ್ಟಬಲ್ ಪ್ರೊಜೆಕ್ಟರ್ ಭಾರತದಲ್ಲಿ 79,990ರೂ ಬೆಲೆಯಲ್ಲಿ ಬಿಡುಗಡೆ ಆಗಿದೆ. ಪ್ರಸ್ತುತ Amazon.in ನಲ್ಲಿ ಕೇವಲ 57,990ರೂ ಬೆಲೆಗೆ ಲಭ್ಯವಾಗುತ್ತಿದೆ. ಇದನ್ನು BenQ ಇ-ಸ್ಟೋರ್ ಮತ್ತು ಇತರ ಪ್ರಮುಖ ಗ್ಯಾಜೆಟ್ ಮತ್ತು IT ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.
ಇದಲ್ಲದೆ BenQ ಕಂಪೆನಿ ಕಳೆದ ವರ್ಷ ತನ್ನ ಮುಂದಿನ-ಪೀಳಿಗೆಯ ಸ್ಮಾರ್ಟ್‌ಬೋರ್ಡ್‌ಗಳನ್ನು (Infocomm India 2023 ನಲ್ಲಿ) ಬಿಡುಗಡೆ ಮಾಡಿತ್ತು. ಇನ್ನು ಈ ಸ್ಮಾರ್ಟ್‌ಬೋಡ್‌ಗಳು Google ಮೊಬೈಲ್ ಸರ್ವಿಸ್‌ನೊಂದಿಗೆ ಬರುವ ಸ್ಮಾರ್ಟ್‌ಬೋಡ್‌ಗಳಾಗಿವೆ. ಇವುಗಳು ಕಾರ್ಪೊರೇಟ್ ಮತ್ತು ಶೈಕ್ಷಣಿಕ ಬಳಕೆದಾರರಿಗೆ Google ನ ಅಪ್ಲಿಕೇಶನ್‌ಗಳು ಮತ್ತು API ಗಳ ಸೂಟ್ ಅನ್ನು ಪ್ರವೇಶಿಸಲು ಅನುಮತಿಸುತ್ತದೆ.
ಕಂಪೆನಿ ಹೇಳಿರುವಂತೆ BenQ ಬೋರ್ಡ್ ಪ್ರೊ RP04 ಮತ್ತು BenQ ಬೋರ್ಡ್ ಮಾಸ್ಟರ್ RM04 ಸ್ಮಾರ್ಟ್‌ಬೋರ್ಡ್‌ಗಳು ಗೂಗಲ್ ಮೊಬೈಲ್ ಸೇವೆ(GMS)ಗಳೊಂದಿಗೆ ಬರುತ್ತವೆ. ಈ ರೀತಿಯ ಸಂಪೂರ್ಣ ಸಂಯೋಜನೆ ಪಡೆದ ಭಾರತದ ಮೊದಲ ಸ್ಮಾರ್ಟ್‌ಬೋರ್ಡ್‌ಗಳಾಗಿವೆ. ಗೂಗಲ್ ಎಂಟರ್‌ಪ್ರೈಸ್ ಡಿವೈಸ್‌ಗಳ ಲೈಸೆನ್ಸ್ ಅಗ್ರಿಮೆಂಟ್ ಅಡಿಯಲ್ಲಿ ಅಧಿಕೃತ ಪ್ರಮಾಣೀಕರಣವನ್ನು ಪಡೆದಿವೆ. ಇದರಿಂದ ವ್ಯಾಪಾರ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಭವಗಳನ್ನು ಹೆಚ್ಚಿಸುವ ಕೆಲಸವನ್ನು ಈ ಸ್ಮಾರ್ಟ್‌ಬೋರ್ಡ್‌ಗಳು ಮಾಡಲಿವೆ. ಇನ್ನು ಸ್ಮಾರ್ಟ್‌ಬೋಡ್‌ಗಳು GMS ಬೆಂಬಲ, Google ಡ್ರೈವ್, ನಕ್ಷೆಗಳು, ಮೀಟ್ ಮತ್ತು ಯೂಟ್ಯೂಬ್ ಅನ್ನು ಕೂಡ ಬಳಸುವುದಕ್ಕೆ ಸಾದ್ಯವಾಗಲಿದೆ.


Click it and Unblock the Notifications








