Home
ಸುದ್ದಿಜಾಲ

BenQ ಸಂಸ್ಥೆಯಿಂದ ಎರಡು ಹೊಸ ಮಾನಿಟರ್‌ಗಳ ಅನಾವರಣ: ಭಾರತದಲ್ಲಿ ಬೆಲೆ ಎಷ್ಟು?

BenQ ಕಂಪೆನಿಯ ಸ್ಮಾರ್ಟ್‌ ಮಾನಿಟರ್‌ಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ. ತನ್ನ ವಿಭಿನ್ನ ಕಾರ್ಯಶೈಲಿಯ ಸ್ಮಾರ್ಟ್‌ ಮಾನಿಟರ್‌ಗಳ ಮೂಲಕ ಗಮನಸೆಳೆದಿದೆ. ಇದೀಗ ಭಾರತದಲ್ಲಿ ಹೊಸ GW2490 ಮತ್ತು GW2790 ಮಾನಿಟರ್‌ಗಳನ್ನು ಪರಿಚಯಿಸಿದೆ. ಈ ಮಾನಿಟರ್‌ಗಳು 99% sRGB ವ್ಯಾಪ್ತಿಯನ್ನು ಹೊಂದಿದ್ದು, ರೋಮಾಂಚಕ ಮತ್ತು ನಿಖರವಾದ ಬಣ್ಣಗಳನ್ನು ಖಾತ್ರಿಪಡಿಸುತ್ತದೆ.

ಹೌದು, ಬೆನ್‌ಕ್ಯೂ ಕಂಪೆನಿಯ GW2490 ಮತ್ತು GW2790 ಮಾನಿಟರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎರಡೂ ಮಾನಿಟರ್‌ಗಳು ಕೆಲಸ ಮತ್ತು ಮನರಂಜನೆ ಎರಡಕ್ಕೂ ಸೂಕ್ತವಾದ ವಿನ್ಯಾಸವನ್ನು ಪಡೆದಿವೆ. ಜೊತೆಗೆ ಎಡ್ಜ್‌ ಟು ಎಡ್ಜ್‌ ಸ್ಲಿಮ್‌ ಬೆಜೆಲ್‌ ವಿನ್ಯಾಸವನ್ನು ಹೊಂದಿದೆ. ಹಾಗಾದ್ರೆ ಬೆನ್‌ಕ್ಯೂ ಕಂಪೆನಿ ಹೊಸದಾಗಿ ಪರಿಚಯಿಸಿರುವ ಮಾನಿಟರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

BenQ ಸಂಸ್ಥೆಯಿಂದ ಎರಡು ಹೊಸ ಮಾನಿಟರ್‌ಗಳ ಅನಾವರಣ: ಭಾರತದಲ್ಲಿ ಬೆಲೆ ಎಷ್ಟು?

ಬೆನ್‌ಕ್ಯೂ ಕಂಪೆನಿಯ GW2490 ಮತ್ತು GW2790 ಮಾನಿಟರ್‌ಗಳು ಪರಿಚಯಿಸಿದೆ. ಇದರಲ್ಲಿ ಬೆನ್‌ಕ್ಯೂ GW2490 ಮಾನಿಟರ್‌ 24 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಬೆನ್‌ಕ್ಯೂ GW2790 ಮಾನಿಟರ್‌ 27 ಇಂಚಿನ ಫುಲ್‌ ಹೆಚ್‌ಡಿ IPS ಡಿಸ್‌ಪ್ಲೇಯನ್ನು ಪಡೆದಿದೆ. ಇನ್ನು ಈ ಡಿಸ್‌ಪ್ಲೇ 100Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದ್ದು, ಕೆಲಸ ಮತ್ತು ಮನರಂಜನೆ ಎರಡಕ್ಕೂ ಸೂಕ್ತವಾದ ಮೃದುವಾದ ದೃಶ್ಯಗಳನ್ನು ನೀಡುತ್ತದೆ.

ಇನ್ನು ಈ ಮಾನಿಟರ್‌ಗಳು 99% sRGB ವ್ಯಾಪ್ತಿಯನ್ನು ಹೊಂದಿದ್ದು, ನಿಖರವಾದ ಬಣ್ಣಗಳನ್ನು ಖಾತ್ರಿಪಡಿಸುತ್ತದೆ. ಇವುಗಳು TÜV ರೈನ್‌ಲ್ಯಾಂಡ್ ಮತ್ತು RPF 35 ಐ-ಸೇಫ್ 2.0 ಕಂಪ್ಲೈಂಟ್‌ನಿಂದ ಪ್ರಮಾಣೀಕರಿಸಲ್ಪಟ್ಟಿವೆ. ಅಲ್ಲದೆ ಮಾನಿಟರ್‌ಗಳು ಲೋ ಬ್ಲೂ ಲೈಟ್‌ ಮತ್ತು ಫ್ಲಿಕರ್-ಮುಕ್ತ ತಂತ್ರಜ್ಞಾನದಂತಹ ಫೀಚರ್ಸ್‌ಗಳನ್ನು ಹೊಂದಿದ್ದು, ಕಣ್ಣಿನ ಸೌಕರ್ಯಕ್ಕೆ ಆದ್ಯತೆ ನೀಡುತ್ತವೆ.

ಇದಲ್ಲದೆ ಬ್ರೈಟ್‌ನೆಸ್ ಇಂಟೆಲಿಜೆನ್ಸ್ ಜನ್ 2, ಲೋ ಬ್ಲೂ ಲೈಟ್ ಪ್ಲಸ್, ಫ್ಲಿಕರ್-ಫ್ರೀ ತಂತ್ರಜ್ಞಾನ, ಆರಾಮದಾಯಕ ಓದುವಿಕೆಗಾಗಿ ಇ-ಪೇಪರ್ ಮೋಡ್, ಪಠ್ಯ ಸ್ಪಷ್ಟತೆಗಾಗಿ ಕೋಡಿಂಗ್ ಮೋಡ್ ಮತ್ತು ಬಣ್ಣ ದೃಷ್ಟಿ ಕೊರತೆಯಿರುವ ಬಳಕೆದಾರರಿಗೆ ಅನುಗುಣವಾಗಿ ಕಲರ್‌ ವೀಕ್‌ನೆಸ್‌ ಮೋಡ್ ಅನ್ನು ಒಳಗೊಂಡಿದೆ. ಇದರೊಂದಿಗೆ ಕೇರ್ ಮೋಡ್, ಸಿನಿಮಾ, ಕೋಡಿಂಗ್, ಇಪೇಪರ್, ಗೇಮ್, ಎಂ-ಬುಕ್, ಸ್ಟ್ಯಾಂಡರ್ಡ್, ಯೂಸರ್ ಮೋಡ್‌ಗಳನ್ನು ಸಹ ಹೊಂದಿದೆ.

ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಮಾನಿಟರ್‌ಗಳು ಡ್ಯುಯಲ್ HDMI 1.4 ಮತ್ತು ಡಿಸ್ಪ್ಲೇಪೋರ್ಟ್ 1.2 ಪೋರ್ಟ್‌ಗಳನ್ನು ಬೆಂಬಲಿಸಲಿವೆ. ಬೆನ್‌ಕ್ಯೂ ಕಂಪೆನಿಯ GW2490 ಮತ್ತು GW2790 ಮಾನಿಟರ್‌ಗಳು ವಿವಿಧ ಡಿವೈಸ್‌ಗಳೊಂದಿಗೆ ಹೊಂದಿಕೊಳ್ಳುವ ಏಕೀಕರಣವನ್ನು ಅನುಮತಿಸಲಿದೆ. 5 ವೇ ಹೊಂದಾಣಿಕೆ ಇನ್‌ಪುಟ್ ಹಾಟ್‌ಕೀಯು ಬಳಕೆದಾರರಿಗೆ ಡಿಸ್ಪ್ಲೇ ಸೆಟ್ಟಿಂಗ್‌ಗಳನ್ನು ತ್ವರಿತವಾಗಿ ಕಸ್ಟಮೈಸ್ ಮಾಡಲು ಅನುವು ಮಾಡಿಕೊಡಲಿದೆ. ಆದರೆ VESA-ಪ್ರಮಾಣೀಕೃತ ಮೀಡಿಯಾ ಸಿಂಕ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೊಂದಾಣಿಕೆಯನ್ನು ಖಚಿತಪಡಿಸುತ್ತದೆ.

BenQ ಸಂಸ್ಥೆಯಿಂದ ಎರಡು ಹೊಸ ಮಾನಿಟರ್‌ಗಳ ಅನಾವರಣ: ಭಾರತದಲ್ಲಿ ಬೆಲೆ ಎಷ್ಟು?

ಬೆಲೆ ಮತ್ತು ಲಭ್ಯತೆ
BenQ GW2490 ಮಾನಿಟರ್‌ ಭಾರತದಲ್ಲಿ 8,698ರೂ ಬೆಲೆಯನ್ನು ಹೊಂದಿದೆ. ಇದಲ್ಲದೆ GW2790 ಮಾನಿಟರ್‌ 11,498ರೂ ಬೆಲೆಯನ್ನು ಪಡೆದಿದೆ. ಈ ಎರಡೂ ಮಾನಿಟರ್‌ಗಳನ್ನು BenQ ನ ಇ-ಸ್ಟೋರ್, Amazon.in ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಮತ್ತು ಪ್ರಮುಖ IT ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಸಬಹುದಾಗಿದೆ.

ಇದಲ್ಲದೆ ಬೆನ್‌ಕ್ಯೂ ಕಂಪೆನಿ ಇತ್ತೀಚಿಗೆ BenQ GV31 ಫೋರ್ಟಬಲ್‌ ಪ್ರೊಜೆಕ್ಟರ್‌ ಅನ್ನು ಪರಿಚಯಿಸಿದೆ. ಇದು 100 ಇಂಚಿನ 1080p ಪ್ರೊಜೆಕ್ಷನ್ ಆಗಿದೆ. ಇದು 1920 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಪ್ರೊಜೆಕ್ಷನ್‌ 100,000:1 ಕಾಂಟ್ರಾಸ್ಟ್ ಅನುಪಾತವನ್ನು ಪಡೆದಿದ್ದು, 300 ANSI ಲ್ಯುಮೆನ್ಸ್ ಬ್ರೈಟ್‌ನೆಸ್ನಲ್ಲಿದೆ. ಇದಲ್ಲದೆ ಫ್ರೀ ಆಂಗಲ್ ಪ್ರೊಜೆಕ್ಷನ್ 135 ಡಿಗ್ರಿ ನಮ್ಯತೆಯನ್ನು ಅನುಮತಿಸಲಿದೆ. ಈ ಪ್ರೊಜೆಕ್ಟರ್‌ ವೀಡಿಯೊ ಪ್ಲೇಬ್ಯಾಕ್‌ಗಾಗಿ 3 ಗಂಟೆಗಳವರೆಗೆ ಅಥವಾ ಮ್ಯೂಸಿಕ್‌ಗಾಗಿ 6 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.

Best Mobiles in India

English summary
BenQ GW2490 and GW2790 monitors launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+