Home
ಸುದ್ದಿಜಾಲ

ಟೆಕ್ನಾಲಜಿ ಜಮಾನ ಅನ್ನೋದು ಸುಮ್ನೇನಾ! ಈ ಸ್ಮಾರ್ಟ್‌ಬೋಡ್‌ ಏನೆಲ್ಲಾ ಕೆಲಸ ಮಾಡುತ್ತೆ ಗೊತ್ತಾ!

BenQ ಕಂಪೆನಿ ತನ್ನ ವಿಭಿನ್ನ ಶ್ರೇಣಿಯ ಸ್ಮಾರ್ಟ್‌ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಅದಕ್ಕೆ ತಕ್ಕಂತೆ ಇದೀಗ ಹೊಸದಾಗಿ ಮುಂದಿನ ಪೀಳಿಗೆಯ ಸ್ಮಾರ್ಟ್‌ಬೋಡ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು BBenQ ಬೋರ್ಡ್ ಪ್ರೊ RP04, ಬೋರ್ಡ್ ಮಾಸ್ಟರ್ RM04 ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಬೋಡ್‌ಗಳು ಹೊಸ ರೀತಿಯ ಅನುಭವ ನೀಡಲಿವೆ.

ಹೌದು, BenQ ಕಂಪೆನಿ ತನ್ನ ಮುಂದಿನ-ಪೀಳಿಗೆಯ ಸ್ಮಾರ್ಟ್‌ಬೋರ್ಡ್‌ಗಳನ್ನು Infocomm India 2023 ನಲ್ಲಿ ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಬೋಡ್‌ಗಳು Google ಮೊಬೈಲ್‌ ಸರ್ವಿಸ್‌ನೊಂದಿಗೆ ಬರುವ ಸ್ಮಾರ್ಟ್‌ಬೋಡ್‌ಗಳಾಗಿವೆ. ಇವುಗಳು ಕಾರ್ಪೊರೇಟ್ ಮತ್ತು ಶೈಕ್ಷಣಿಕ ಬಳಕೆದಾರರಿಗೆ Google ನ ಅಪ್ಲಿಕೇಶನ್‌ಗಳು ಮತ್ತು API ಗಳ ಸೂಟ್ ಅನ್ನು ಪ್ರವೇಶಿಸಲು ಅನುಮತಿಸುತ್ತದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಬೋರ್ಡ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಕ್ನಾಲಜಿ ಜಮಾನ ಅನ್ನೋದು ಸುಮ್ನೇನಾ!ಈ ಸ್ಮಾರ್ಟ್‌ಬೋಡ್‌ ಏನೆಲ್ಲಾ ಕೆಲಸ ಮಾಡುತ್ತೆ

BenQ ಬೋರ್ಡ್ ಪ್ರೊ RP04 ಮತ್ತು ಬೋರ್ಡ್ ಮಾಸ್ಟರ್ RM04 ಫೀಚರ್ಸ್‌ಗಳೇನು?
BenQ ಕಂಪೆನಿ ಹೊಸದಾಗಿ ಪರಿಚಯಿಸಿರುವ ಸ್ಮಾರ್ಟ್‌ಬೋಡ್‌ಗಳು ವಿಶೇಷ ಫೀಚರ್ಸ್‌ಗಳಿಂದ ಗಮನಸೆಳೆದಿವೆ. ಕಂಪೆನಿ ಹೇಳಿರುವಂತೆ BenQ ಬೋರ್ಡ್ ಪ್ರೊ RP04 ಮತ್ತು BenQ ಬೋರ್ಡ್ ಮಾಸ್ಟರ್ RM04 ಸ್ಮಾರ್ಟ್‌ಬೋರ್ಡ್‌ಗಳು ಗೂಗಲ್‌ ಮೊಬೈಲ್ ಸೇವೆ(GMS)ಗಳೊಂದಿಗೆ ಬರುತ್ತವೆ. ಈ ರೀತಿಯ ಸಂಪೂರ್ಣ ಸಂಯೋಜನೆ ಪಡೆದ ಭಾರತದ ಮೊದಲ ಸ್ಮಾರ್ಟ್‌ಬೋರ್ಡ್‌ಗಳಾಗಿವೆ.

ಗೂಗಲ್‌ ಎಂಟರ್‌ಪ್ರೈಸ್ ಡಿವೈಸ್‌ಗಳ ಲೈಸೆನ್ಸ್‌ ಅಗ್ರಿಮೆಂಟ್‌ ಅಡಿಯಲ್ಲಿ ಅಧಿಕೃತ ಪ್ರಮಾಣೀಕರಣವನ್ನು ಪಡೆದಿವೆ. ಇದರಿಂದ ವ್ಯಾಪಾರ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಭವಗಳನ್ನು ಹೆಚ್ಚಿಸುವ ಕೆಲಸವನ್ನು ಈ ಸ್ಮಾರ್ಟ್‌ಬೋರ್ಡ್‌ಗಳು ಮಾಡಲಿವೆ. ಇನ್ನು ಸ್ಮಾರ್ಟ್‌ಬೋಡ್‌ಗಳು GMS ಬೆಂಬಲ, Google ಡ್ರೈವ್, ನಕ್ಷೆಗಳು, ಮೀಟ್ ಮತ್ತು ಯೂಟ್ಯೂಬ್‌ ಅನ್ನು ಕೂಡ ಬಳಸುವುದಕ್ಕೆ ಸಾದ್ಯವಾಗಲಿದೆ. ಇದಲ್ಲದೆ ಬಳಕೆದಾರರು ಪ್ಲೇ ಸ್ಟೋರ್‌ ಮೂಲಕ ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳಂತಹ ಗೂಗಲ್‌ ವರ್ಕ್‌ಸ್ಪೇಸ್‌ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ.

ಟೆಕ್ನಾಲಜಿ ಜಮಾನ ಅನ್ನೋದು ಸುಮ್ನೇನಾ!ಈ ಸ್ಮಾರ್ಟ್‌ಬೋಡ್‌ ಏನೆಲ್ಲಾ ಕೆಲಸ ಮಾಡುತ್ತೆ

ಇನ್ನು GMS ಏಕೀಕರಣದ ಜೊತೆಗೆ, ಸ್ಮಾರ್ಟ್‌ಬೋರ್ಡ್‌ಗಳು EZWrite 6 ವೈಟ್‌ಬೋರ್ಡಿಂಗ್ ಸಾಫ್ಟ್‌ವೇರ್ ಅನ್ನು ಕೂಡ ಹೊಂದಿವೆ, ಇದಲ್ಲದೆ InstaShare 2 ವೈರ್‌ಲೆಸ್ ಸ್ಕ್ರೀನ್-ಶೇರ್‌ ಸಲ್ಯೂಶನ್‌ ಅನ್ನು ಹೊಂದಿದೆ. ಇದರಲ್ಲಿ EZWrite 6 ವಿಶೇಷ ಟೂಲ್‌ಗಳೊಂದಿಗೆ ತೊಡಗಿಸಿಕೊಳ್ಳುವ ಸೆಷನ್‌ಗಳನ್ನು ಸಕ್ರಿಯಗೊಳಿಸುತ್ತದೆ. ಆದರೆ InstaShare 2 ಒಂಬತ್ತು ಜನರು ತಮ್ಮ ಸ್ಕ್ರೀನ್‌ಗಳನ್ನು ಏಕಕಾಲದಲ್ಲಿ ಶೇರ್‌ ಮಾಡುವ ಹಾಗೂ ಕಂಟ್ರೋಲ್‌ ಮಾಡುವುದಕ್ಕೆ ಅವಕಾಶವನ್ನು ನೀಡಲಿವೆ.

ಇನ್ನು ಈ ಎರಡೂ ಸ್ಮಾರ್ಟ್‌ಬೋರ್ಡ್‌ಗಳು ಎನ್‌ಕ್ರಿಪ್ಟ್ ಮಾಡಿದ ನೆಟ್‌ವರ್ಕ್ ಕಮ್ಯೂನಿಕೇಶನ್‌ ಮತ್ತು ಪ್ರಾಕ್ಸಿ-ಲೆವೆಲ್‌ ಸೆಕ್ಯುರಿಟಿ ಆಯ್ಕೆಗಳನ್ನು ಬೆಂಬಲಿಸಲಿದೆ. ಇದರೊಂದಿಗೆ ಸುರಕ್ಷಿತ AWS ಕ್ಲೌಡ್ ಮೂಲಸೌಕರ್ಯದಲ್ಲಿ BenQ ತನ್ನ ಕ್ಲೌಡ್ ಸೇವೆಗಳನ್ನು ಸಹ ಹೋಸ್ಟ್ ಮಾಡಲಿದೆ. ಇನ್ನು ವೈವಿಧ್ಯಮಯ ಭಾಷಾ ಬೆಂಬಲಕ್ಕಾಗಿ ಬಹುಭಾಷಾ ಅನುವಾದ ಮತ್ತು ಚಿತ್ರಗಳು ಮತ್ತು ದಾಖಲೆಗಳನ್ನು ಎಡಿಟ್‌ ಮಾಡುವುದಕ್ಕೆ ಕೂಡ ಅವಕಾಶ ನೀಡಿದೆ.

ಟೆಕ್ನಾಲಜಿ ಜಮಾನ ಅನ್ನೋದು ಸುಮ್ನೇನಾ!ಈ ಸ್ಮಾರ್ಟ್‌ಬೋಡ್‌ ಏನೆಲ್ಲಾ ಕೆಲಸ ಮಾಡುತ್ತೆ

BenQ ಬೋರ್ಡ್ ಪ್ರೊ RP04, ಬೋರ್ಡ್ ಮಾಸ್ಟರ್ RM04 ಬೆಲೆ ಮತ್ತು ಲಭ್ಯತೆ
BenQ ಕಂಪೆನಿ ಪ್ರಸ್ತುತ ತನ್ನ ಸ್ಮಾರ್ಟ್‌ಬೋರ್ಡ್‌ಗಳನ್ನು ಅನಾವರಣಗೊಳಿಸಿದೆ ಅಷ್ಟೇ. ಇವುಗಳು ಖರೀದಿಗೆ ಜನವರಿ 2024 ರಿಂದ ಲಭ್ಯವಾಗುವುದರಿಂದ ಇದರ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ.

ಇನ್ನು ಬೆನ್‌ಕ್ಯೂ ಕಂಪೆನಿ ಇತ್ತೀಚಿಗೆ ಭಾರತದಲ್ಲಿ V5000i 4K RGB ಲೇಸರ್ ಟಿವಿ ಪ್ರೊಜೆಕ್ಟರ್ (BenQ V5000i 4K RGB Laser TV Projector) ಅನ್ನು ಲಾಂಚ್‌ ಮಾಡಿದೆ. ಇದು ಗೂಗಲ್-ಪ್ರಮಾಣೀಕೃತ ಆಂಡ್ರಾಯ್ಡ್ ಟಿವಿಯಾಗಿದ್ದು, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.

Best Mobiles in India

English summary
BenQ unveiled its next-generation smartboards in india: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+