ಭಾರತದಲ್ಲಿ ಹೊಸ ಪ್ರೊಜೆಕ್ಟರ್ ಪರಿಚಯಿಸಿದ BenQ! ಬೆಲೆ ಎಷ್ಟು? ಏನಿದರ ವಿಶೇಷ!
ಜನಪ್ರಿಯ ಸ್ಮಾರ್ಟ್ ಪ್ರೊಜೆಕ್ಟರ್ ತಯಾರಕ ಕಂಪೆನಿ ಬೆನ್‌ಕ್ಯೂ (BenQ) ಹೊಸ ಪ್ರೊಜೆಕ್ಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು W4000i 4LED 4K ಹೋಮ್ ಸಿನಿಮಾ ಪ್ರೊಜೆಕ್ಟರ್ ಎಂದು ಹೆಸರಿಸಲಾಗಿದೆ. ಇದು ಹೆಸರೇ ಸೂಚಿಸುವಂತೆ ಸಿನಿಮಾಟಿಕ್ ಹಾಗೂ ಟೆಕ್ನಾಲಜಿಯಲ್ಲಿ ಸರಿಸಾಟಿಯಿಲ್ಲದ ಅನುಭವವನ್ನು ನೀಡಲಿದೆ.
ಹೌದು, ಬೆನ್‌ಕ್ಯೂ ಕಂಪೆನಿ ಭಾರತದಲ್ಲಿ ಹೊಸ ಬೆನ್‌ಕ್ಯೂ W4000i 4LED 4K ಹೋಮ್ ಸಿನಿಮಾ ಪ್ರೊಜೆಕ್ಟರ್ ಲಾಂಚ್ ಮಾಡಿದೆ. ಇದು ಅಡ್ವಾನ್ಸ್ 100% DCI-P3 ಸಿನಿಮಾಟಿಕ್ ಕಲರ್ ಮತ್ತು HDR-PRO ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ನಿಖರವಾದ HDR ಕಲರ್ ನಿಖರತೆಯೊಂದಿಗೆ ನಿಜವಾದ 4K ಇಮೇಜ್ ಗುಣಮಟ್ಟವನ್ನು ನೀಡುತ್ತದೆ. ಹಾಗಾದ್ರೆ ಹೊಸ W4000i 4LED 4K ಹೋಮ್ ಸಿನಿಮಾ ಪ್ರೊಜೆಕ್ಟರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೆನ್‌ಕ್ಯೂ W4000i 4LED 4K ಪ್ರೊಜೆಕ್ಟರ್ ವಿಶೇಷತೆ ಏನು?
ಬೆನ್‌ಕ್ಯೂ W4000i 4LED 4K ಹೋಮ್ ಸಿನಿಮಾ ಪ್ರೊಜೆಕ್ಟರ್ 3840×2160 ಸ್ಕ್ರೀನ್ ರೆಸಲ್ಯೂಶನ್ ಡಿಸ್‌ಪ್ಲೇ ಹೊಂದಿದೆ. ಇದರ ಡಿಸ್‌ಪ್ಲೇ 16:9 ರಚನೆಯ ಅನುಪಾತ ಹೊಂದಿದ್ದು, 4LED ಬೆಳಕಿನ ಮೂಲವನ್ನು ಹೊಂದಿದೆ. ಇನ್ನು ಈ ಪ್ರೊಜೆಕ್ಟರ್ 1.3x ಜೂಮ್ ಅನುಪಾತವನ್ನು ನೀಡಲಿದೆ. ಇದು 3D, ಬ್ರೈಟ್ ಸಿನಿಮಾ, ಸಿನಿಮಾ, ಫಿಲ್ಮ್ ಮೇಕರ್ ಮೋಡ್ ಅನ್ನು ಸಹ ಹೊಂದಿದೆ. ಇದಲ್ಲದೆ ಫಿಲ್ಮ್ ಮೇಕರ್ ಮೋಡ್ HDR, HDR10, HDR10+, HLG, ISF ಡೇ, ISF ನೈಟ್ ನಂತಹ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.
ಇನ್ನು ಈ ಪ್ರೊಜೆಕ್ಟರ್ ಗೂಗಲ್‌ನಿಂದ ಪ್ರಮಾಣೀಕರಿಸಲ್ಪಟ್ಟಿದೆ. ಆದರಿಂದ ಇದರಲ್ಲಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರಿ ಡೌನ್‌ಲೋಡ್ ಆಗಿವೆ. ಜೊತೆಗೆ ಈ ಪ್ರೊಜೆಕ್ಟರ್ ಸಿನಿಮ್ಯಾಟಿಕ್ ಕಲರ್ ಟೆಕ್ನಾಲಜಿಯೊಂದಿಗೆ ನಿಜವಾದ 4K HDR ಅನುಭವವನ್ನು ಸೃಷ್ಟಿಸಲಿದೆ. ಇದರೊಂದಿಗೆ 3200 ANSI ಲ್ಯೂಮೆನ್ಸ್ ಬ್ರೈಟ್‌ನೆಸ್ ಹೊಂದಿರುವ ರೋಮಾಂಚಕ ದೃಶ್ಯಗಳನ್ನು ಡಿಸ್‌ಪ್ಲೇ ಮಾಡಲಿದೆ. ಅಲ್ಲದೆ ಯಾವುದೇ ಬೆಳಕಿನ ಸ್ಥಿತಿಯಲ್ಲಿ ನಿಖರವಾದ ದೃಶ್ಯಗಳನ್ನು ಸಹ ನೀಡಲಿದೆ.
ಇದಲ್ಲದೆ ಈ ಪ್ರೊಜೆಕ್ಟರ್ ಸಮರ್ಥವಾದ 4LED ಬೆಳಕಿನ ಮೂಲವನ್ನು ಬಳಸಿಕೊಳ್ಳಲಿದೆ. ಇದಲ್ಲದೆ ಸ್ಮಾರ್ಟ್ ಇಕೋ ಮೋಡ್ ಬುದ್ಧಿವಂತಿಕೆಯಿಂದ ಪ್ರೊಜೆಕ್ಟರ್ ಬ್ರೈಟ್‌ನೆಸ್ ಅನ್ನು ಸೆಟ್ ಮಾಡಲಿದೆ. ಇದರಿಂದ ಪ್ರೊಜೆಕ್ಟರ್‌ನ ಪವರ್ ಸೇವ್ ಆಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನು ಎಲ್ಇಡಿ ಲೈಪ್‌ಟೈಂ ಅನ್ನು 30,000 ಗಂಟೆಗಳವರೆಗೆ ವಿಸ್ತರಿಸುತ್ತದೆ. ಜೊತೆಗೆ HDR10+ ಮತ್ತು HLG ಮೋಡ್‌ಗಳಲ್ಲಿ ವರ್ಧಿತ ಡೈನಾಮಿಕ್ ಕಾಂಟ್ರಾಸ್ಟ್‌ಗಾಗಿ ಲೋಕಲ್ ಕಾಂಟ್ರಾಸ್ಟ್ ಎನ್‌ಹಾನ್ಸರ್‌ನಂತಹ ಫೀಚರ್ಸ್‌ಗಳನ್ನು ಸಹ ಇದರಲ್ಲಿ ನೀಡಲಾಗಿದೆ.
ಇದು ಫಿಲ್ಮ್‌ಮೇಕರ್ ಮೋಡ್ ಮತ್ತು ಸಿನಿಮಾ ಮೋಡ್, ಕಲರ್ ಟೆಂಪರೇಚರ್ ಟ್ಯೂನಿಂಗ್, ಡಾಲ್ಬಿ ಡಿಜಿಟಲ್ ಪ್ಲಸ್ ಸೌಂಡ್, ಬಿಲ್ಟ್-ಇನ್ ಕ್ರೋಮ್‌ಕಾಸ್ಟ್ ಮತ್ತು ಯುನಿವರ್ಸಲ್ ಪೋರ್ಟ್‌ಗಳಂತಹ ಕಸ್ಟಮೈಸ್ ಮಾಡಬಹುದಾದ ಪಿಕ್ಚರ್ ಮೋಡ್‌ಗಳನ್ನು ಒಳಗೊಂಡಿದೆ. ಇದರಿಂದ ಬಳಕೆದಾರರಿಗೆ ಮನೆಯಲ್ಲಿ ಅತ್ಯುತ್ತಮ ಸಿನಿಮಾ ಫೀಲ್ ದೊರೆಯುವಂತೆ ಮಾಡಲಿದೆ. ಇದಲ್ಲದೆ ಈ ಪ್ರೊಜೆಕ್ಟರ್ BenQ ನ ಸುಧಾರಿತ 100% DCI-P3 ಸಿನಿಮಾಟಿಕ್ ಕಲರ್ ಅನ್ನು ಹೊಂದಿದೆ. ಇದು ಪ್ರಕಾಶಮಾನವಾದ ದೃಶ್ಯಗಳಾಗಿದ್ದರೂ ಸಹ 4K HDR ಆನಂದವನ್ನು ಒದಗಿಸಲಿದೆ.
ಇದು ಆಂಡ್ರಾಯ್ಡ್ ಟಿವಿ ಡಾಂಗಲ್, ರಿಮೋಟ್ ಕಂಟ್ರೋಲ್, 3D ಗ್ಲಾಸ್‌ಗಳು, ಯುನಿವರ್ಸಲ್ ಸೀಲಿಂಗ್ ಮೌಂಟ್ ನಂತಹ ಟೂಲ್ಸ್‌ಗಳನ್ನು ಹೊಂದಿದೆ. ಇದಲ್ಲದೆ ಪ್ರೊಜೆಕ್ಟರ್ ಆಂಡ್ರಾಯ್ಡ್ 11ನಲ್ಲಿ ರನ್ ಆಗುವುದರಿಂದ ಗೂಗಲ್ ಅಸಿಸ್ಟೆಂಟ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.0, ಡ್ಯುಯಲ್-ಬ್ಯಾಂಡ್ ವೈ-ಫೈ, ಏರ್‌ಪ್ಲೇ, ಗೂಗಲ್ ಕೇಸ್ ಅನ್ನು ಬೆಂಬಲಿಸಲಿದೆ. ಇದು ಒಟ್ಟಾರೆ ತೂಕ 6.6Kg ಅಷ್ಟಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಭಾರತದಲ್ಲಿ ಇದರ ಬೆಲೆ ಮತ್ತು ಲಭ್ಯತೆ
BenQ ನಿಂದ W4000i 4LED 4K ಹೋಮ್ ಸಿನಿಮಾ ಪ್ರೊಜೆಕ್ಟರ್ 4,00,000ರೂ. ಬೆಲೆಯನ್ನು ಹೊಂದಿದೆ. ಇಂದಿನಿಂದ ಯಾವುದೇ ಪ್ರಮುಖ ರಿಟೇಲ್ ಹೋಮ್ AV BenQ SI ಪಾಲುದಾರರಿಂದ ಖರೀದಿಸಬಹುದಾಗಿದೆ.


Click it and Unblock the Notifications








