ಬೆಂಗಳೂರಿನಲ್ಲಿ ಮೊದಲ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ಚಾಲನೆ!!..ಚಾರ್ಜಿಂಗ್ ದರ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿಯೇ ಮೊದಲ ಬಾರಿ ವಿದ್ಯುತ್‌ ಚಾಲಿತ ವಾಹನ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಚಾಲನೆ ನೀಡಿದ್ದಾರೆ.

|

ಬೆಂಗಳೂರಿನಲ್ಲಿಯೇ ಮೊದಲ ಬಾರಿ ವಿದ್ಯುತ್‌ ಚಾಲಿತ ವಾಹನ ಫಾಸ್ಟ್‌ ಚಾರ್ಜಿಂಗ್ ಕೇಂದ್ರಕ್ಕೆ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಚಾಲನೆ ನೀಡಿದ್ದಾರೆ. ನಗರದ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ನಿರ್ಮಾಣವಾಗಿರುವ ಫಾಸ್ಟ್‌ ಚಾರ್ಜಿಂಗ್ ಕೇಂದ್ರದ ಜತೆಗೆ 5 ವಿದ್ಯುತ್‌ ಚಾಲಿತ ಕಾರುಗಳಿಗೂ ಚಾಲನೆ ನೀಡಿದ್ದಾರೆ.!!

ನಗರದಲ್ಲಿ ಈಗಾಗಲೇ ಸಾವಿರಾರು ವಿದ್ಯುತ್ ಚಾಲಿತ ವಾಹನಗಳಿದ್ದು ಅವುಗಳ ಅನುಕೂಲಕ್ಕಾಗಿ ಇನ್ನು 11 ಕಡೆ ಈ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ, ಹಾಗಾದರೆ, ಫಾಸ್ಟ್‌ ಚಾರ್ಜಿಂಗ್ ಕೇಂದ್ರ ಎಲ್ಲೆಲ್ಲಿರಲಿವೆ? ಚಾರ್ಜಿಂಗ್‌ಗಾಗಿ ವಿಧಿಸುತ್ತಿರುವ ದರ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

2 ಗಂಟೆಗಳಲ್ಲಿ ಫುಲ್ ಚಾರ್ಜ್!!

2 ಗಂಟೆಗಳಲ್ಲಿ ಫುಲ್ ಚಾರ್ಜ್!!

ಬೆಂಗಳೂರಿನಲ್ಲಿಯೇ ಮೊದಲ ಬಾರಿ ವಿದ್ಯುತ್‌ ಚಾಲಿತ ವಾಹನ ಫಾಸ್ಟ್‌ ಚಾರ್ಜಿಂಗ್ ಕೇಂದ್ರದಲ್ಲಿ 2 ಗಂಟೆಗಳಲ್ಲಿ ಕಾರಿನ ಬ್ಯಾಟರಿ ಫುಲ್ ಚಾರ್ಜ್ ಆಗುತ್ತದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. ಹಾಗಾಗಿ, ಅತ್ಯಂತ ಕಡಿಮೆ ಸಮಯದಲ್ಲಿ ಗ್ರಾಹಕರಿಗೆ ವಿದ್ಯುತ್ ಇಂದನ ದೊರೆಯಲು ಸಹಾಯಕವಾಗಿದೆ

ಎಲ್ಲೆಲ್ಲಿ ಫಾಸ್ಟ್‌ ಚಾರ್ಜಿಂಗ್ ಕೇಂದ್ರಗಳು!?

ಎಲ್ಲೆಲ್ಲಿ ಫಾಸ್ಟ್‌ ಚಾರ್ಜಿಂಗ್ ಕೇಂದ್ರಗಳು!?

ನಗರದ ಬೆಸ್ಕಾಂ ಕೇಂದ್ರ ಕಚೇರಿ, ಹೆಬ್ಬಾಳ, ದಾಸರಹಳ್ಳಿ, ಜಯನಗರ, ಕತ್ರಿಗುಪ್ಪೆ, ಬಿಟಿಎಂ ಲೇಔಟ್‌, ಪಾಂಡುರಂಗನಗರ, ಲಿಂಗರಾಜಪುರ, ಇಮ್ಮಡಿಹಳ್ಳಿ, ಇಂದಿರಾನಗರ, ಪಿಲ್ಲಣ್ಣ ಗಾರ್ಡನ್‌ ರಸ್ತೆ, ಎಚ್‌ಆರ್‌ಬಿಆರ್ ಲೇಔಟ್‌ಗಳಲ್ಲಿ ವಿದ್ಯುತ್‌ ಚಾಲಿತ ಕೇಂದ್ರಗಳು ತೆರೆಯುತ್ತಿವೆ.!!

ಇನ್ನು ಹೆಚ್ಚಲಿವೆ ವಿದ್ಯುತ್ ಕೇಂದ್ರಗಳು!!

ಇನ್ನು ಹೆಚ್ಚಲಿವೆ ವಿದ್ಯುತ್ ಕೇಂದ್ರಗಳು!!

ವಿದ್ಯುತ್‌ ಚಾಲಿತ ವಾಹನಗಳು ಕಡಿಮೆ ವೆಚ್ಚ ಹೊಂದಿದ್ದು, ಪರಿಸರ ಸ್ನೇಹಿಯಾಗಿವೆ. ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕಾಗಿ ಈ ಕೇಂದ್ರಗಳನ್ನು ತೆರೆಯಲಾಗಿದ್ದು, ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಕೇಂದ್ರಗಳನ್ನು ತೆರೆಯಲು ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ಬಿಬಿಎಂಪಿಗೆ ಬೆಸ್ಕಾಂ ಕಚೇರಿಯಿಂದ ಪತ್ರ ಬರೆಯಲಾಗಿದೆ.!!

 3೦ ಲಕ್ಷದಲ್ಲಿ ಫಾಸ್ಟ್‌ ಚಾರ್ಜಿಂಗ್ ಕೇಂದ್ರ !!

3೦ ಲಕ್ಷದಲ್ಲಿ ಫಾಸ್ಟ್‌ ಚಾರ್ಜಿಂಗ್ ಕೇಂದ್ರ !!

ಒಂದು ಚಾರ್ಜಿಂಗ್ ಕೇಂದ್ರ ನಿರ್ಮಿಸಲು 5 ಲಕ್ಷ ವೆಚ್ಚ ತಗುಲುತ್ತಿದೆ. ಇದರ ಜತೆಗೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸಲು 25 ಲಕ್ಷ ರೂಪಾಯಿಗಳು ಬೇಕು ಎಂದು ಬೆಸ್ಕಾಂ ತಿಳಿಸಿದೆ. ಈ ಫಾಸ್ಟ್‌ ಚಾರ್ಜಿಂಗ್ ಕೇಂದ್ರಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಲಾಗಿದೆ.!!

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!
ಚಾರ್ಜಿಂಗ್ ದರ ಎಷ್ಟು?

ಚಾರ್ಜಿಂಗ್ ದರ ಎಷ್ಟು?

ಎಸಿ(ಆಲ್ಟರ್ನೆಟಿವ್‌ ಕರೆಂಟ್‌) ಚಾರ್ಜಿಂಗ್ ದರ ಬೆಳಿಗ್ಗೆ 6 ರಿಂದ ರಾತ್ರಿ 10ರ ವರೆಗೆ 4.85 ರೂಪಾಯಿಗಳಾದರೆ, ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ 3.85 ರೂಪಾಯಿಗಳ ಬೆಲೆಯನ್ನು ಹೊಂದಿದೆ. ಇನ್ನು ಡಿಸಿ(ಡೈರೆಕ್ಟ್‌ ಕರೆಂಟ್‌) ಚಾರ್ಜಿಂಗ್ ದರ ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ 5, ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ 3.85 ರೂಪಾಯಿಗಳಾಗಿವೆ.!!

Best Mobiles in India

English summary
If switching over to an electric vehicle (EV) has been on your mind. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X