108MP ಸೆನ್ಸಾರ್ ಕ್ಯಾಮೆರಾ ಹೊಂದಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕ್ಯಾಮೆರಾ ವಿನ್ಯಾಸ ಮತ್ತು ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಮಾದರಿಯ ಕ್ಯಾಮೆರಾ ವಿನ್ಯಾಸಗಳಿಗೆ ಸ್ಮಾರ್ಟ್‌ಫೋನ್ ಪ್ರಿಯರು ಮನಸೋತಿದ್ದಾರೆ. ಅದರಲ್ಲೂ ಸ್ಮಾರ್ಟ್‌ಫೋನ್ ಕ್ಯಾಮೆರಾ ರೆಸಲ್ಯೂಶನ್ ಸಾಮರ್ಥ್ಯದ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇದೆ. ಇನ್ನು ಈ ವರ್ಷ 108mp ಸೆನ್ಸಾರ್ ಕ್ಯಾಮೆರಾ ಫೋನ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಗಳಿಸುವ ನಿರೀಕ್ಷೆಯಿದೆ. ಇಷ್ಟು ದಿನ 48mp ಮತ್ತು 64mp ಕ್ಯಾಮೆರಾ ಫೀಚರ್ಸ್ ಅನ್ನು ಅನುಭಿವಿಸುತ್ತಿದ್ದ ಗ್ರಾಹಕರು ಇದೀಗ 108 ಎಂಪಿ ಕ್ಯಾಮೆರಾ ಫೋನ್‌ಗಳನ್ನು ಪಡೆದುಕೊಳ್ಳುವ ಸಮಯ ಬಂದಿದೆ.

ಹೌದು, ಸ್ಮಾರ್ಟ್‌ಫೋನ್ ಕ್ಯಾಮೆರಾ ವಿನ್ಯಾಸದಲ್ಲಿ ಇದೀಗ ಸಾಕಷ್ಟು ಬದಲಾವಣೆ ಆಗಿದೆ. ಇನ್ನು ಮುಂಬರುವ ಹಲವಾರು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು 108 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದುಕೊಂಡಿರಲಿವೆ. ಈಗಾಗಲೇ ದೇಶದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳು 108 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾಗಳನ್ನು ಹೊಂದಿವೆ. ಇಂತಹ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ 10i
ಮಿ 10i ಸ್ಮಾರ್ಟ್‌ಫೋನ್ ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಲಭ್ಯವಿರುವ 108 ಎಂಪಿ ಕ್ಯಾಮೆರಾ ಹೊಂದಿರುವ ಫೋನ್ ಆಗಿದೆ. ಇದು ಸ್ಯಾಮ್‌ಸಂಗ್‌ನ 108mp HM2 ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಬರುತ್ತದೆ. ಜೊತೆಗೆ ಇದು 12 ಎಂಪಿ ರೆಸಲ್ಯೂಶನ್‌ನೊಂದಿಗೆ ತೀಕ್ಷ್ಣವಾದ ಮತ್ತು ಎದ್ದುಕಾಣುವ ಚಿತ್ರಗಳನ್ನು ಪ್ರಕ್ರಿಯೆಗೊಳಿಸಲು 9 ರಿಂದ 1 ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 8MP ವೈಡ್-ಆಂಗಲ್ ಲೆನ್ಸ್, 2 MP ಮ್ಯಾಕ್ರೋ ಲೆನ್ಸ್ ಮತ್ತು ರಿಯರ್ ಕ್ವಾಡ್-ಕ್ಯಾಮೆರಾ ಸೆಟಪ್‌ಗಾಗಿ 2MP ಡೆಪ್ತ್ ಸೆನ್ಸಾರ್ ಅನ್ನು ಸಹ ಹೊಂದಿದೆ. ಭಾರತದಲ್ಲಿ ಮಿ 10i ಬೆಲೆ 20,999 ರೂಗಳಿಂದ ಪ್ರಾರಂಭವಾಗುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ
ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 21 ಅಲ್ಟ್ರಾ ಸ್ಮಾರ್ಟ್‌ಫೋನ್ ಕೂಡ 108ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. ಇತ್ತೀಚಿನ ಅಲ್ಟ್ರಾ-ಪ್ರೀಮಿಯಂ ಸ್ಮಾರ್ಟ್‌ಫೋನ್ ಮುಂದಿನ ಜನ್ ಐಸೊಸೆಲ್ ಎಚ್‌ಎಂ 3 ಸೆನ್ಸಾರ್ ಅನ್ನು 1 / 3.3-ಇಂಚಿನ ದೊಡ್ಡ ಗಾತ್ರದೊಂದಿಗೆ ಹೊಂದಿದೆ. ಇದು ಕೂಡ Mi 10i ನಲ್ಲಿನ ಸಂವೇದಕದಂತೆಯೇ 9-in-1 ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನವನ್ನು ಬಳಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ಅಲ್ಟ್ರಾ ಕ್ಯಾಮೆರಾಗಳಲ್ಲಿ 12 ಎಂಪಿ ವೈಡ್-ಆಂಗಲ್ ಸೆನ್ಸಾರ್ ಮತ್ತು 3x ಮತ್ತು 10x ಆಪ್ಟಿಕಲ್ ಜೂಮ್ ಹೊಂದಿರುವ 10 ಎಂಪಿ ಲೆನ್ಸ್‌ಗಳಿವೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ. ಸದ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ಅಲ್ಟ್ರಾ ಭಾರತದಲ್ಲಿ 1,05,999 ರೂ,ಗಳಿಂದ ಪ್ರಾರಂಭವಾಗುತ್ತಿದೆ.

ಮಿ 10T ಪ್ರೊ
ಮಿ 10T ಪ್ರೊ ಸ್ಮಾರ್ಟ್‌ಫೋನ್ ಕೂಡ 108 ಎಂಪಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನ ಬೆಲೆ 39,990 ರೂ.ಆಗಿದೆ.

108 ಮೆಗಾಪಿಕ್ಸೆಲ್ ರೆಸಲ್ಯೂಶನ್ ಕ್ಯಾಮೆರಾ ಯಾಕೆ ಉತ್ತಮವಾಗಿದೆ?
ಫೋಟೋಗಳನ್ನು ಸೆರೆ ಹಿಡಿಯಲು ಕ್ಯಾಮೆರಾಗಳಿಗೆ ಬೆಳಕು ಬೇಕಾಗುತ್ತದೆ ಮತ್ತು ದೈಹಿಕವಾಗಿ ದೊಡ್ಡ ಸೆನ್ಸಾರ್‌ಗಳು ಹೆಚ್ಚಿನ ಬೆಳಕನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಈ ಸೆನ್ಸಾರ್‌ಗಳು ಪರಸ್ಪರ ಸ್ವತಂತ್ರವಾಗಿ ಬೆಳಕನ್ನು ಸೆರೆಹಿಡಿಯುವ ಲಕ್ಷಾಂತರ ಪಿಕ್ಸೆಲ್‌ಗಳನ್ನು ಹೊಂದಿರುವುದರಿಂದ, 108 ಎಂಪಿ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾವು ಹೆಚ್ಚು ವಿವರವಾದ ಚಿತ್ರವನ್ನು ಪಡೆಯುತ್ತದೆ. ಇದನ್ನು 12 ಮೆಗಾಪಿಕ್ಸೆಲ್‌ಗೆ ಹೋಲಿಸಿದರೆ ಬ್ಲರ್ ಆಗಿ ಅಥವಾ ಗ್ರೈನಿ ಡಿಜಿಟಲ್‌ನಲ್ಲಿ ಜೂಮ್ ಮಾಡಬಹುದು ಅಥವಾ ದೊಡ್ಡ ಪ್ರಮಾಣದಲ್ಲಿ ಮುದ್ರಿಸಬಹುದು. 108 ಎಂಪಿ ಸೆನ್ಸಾರ್‌ಗಳನ್ನು ಸಣ್ಣ ಪಿಕ್ಸೆಲ್‌ಗಳನ್ನು ಕ್ರ್ಯಾಮ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಸ್ನೇಹಿಯನ್ನಾಗಿ ಮಾಡಲಾಗಿದ್ದು, ಅವು ಕ್ಯಾಮೆರಾ ಮಾಡ್ಯೂಲ್ ಒಳಗೆ ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತವೆ.


Click it and Unblock the Notifications