Home
ಸುದ್ದಿಜಾಲ

ಅಮೆಜಾನ್ ಪ್ರೈಮ್ ಡೇ ಸೇಲ್: 32 ಇಂಚಿನ ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್ ಟಿವಿಗಳು!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಗ್ರಾಹಕರಿಗಾಗಿ ಭಾರತದಲ್ಲಿ ಅಮೆಜಾನ್ ಪ್ರೈಮ್ ಡೇ 2020 ಸೇಲ್‌ ಅನ್ನು ಎರಡು ದಿನಗಳ ಮಟ್ಟಿಗೆ ಆಯೋಜನೆ ಮಾಡಿತ್ತು. ಸದ್ಯ ಇಂದು ಎರಡನೆಯ ಕೊನೆಯ ದಿನವಾಗಿದೆ. ಇನ್ನು ಈ ಸೇಲ್‌ನಲ್ಲಿ ಅಮೆಜಾನ್ ಇಂಡಿಯಾ ಎಲ್ಲಾ ವಿಭಾಗಗಳಲ್ಲಿ ಪ್ರಾಡಕ್ಟ್‌ಗಳ ಮೇಲೆ ಪ್ರಮುಖ ಡಿಸ್ಕೌಂಟ್‌ ಮತ್ತು ಡಿಲ್ಸ್‌ ಅನ್ನು ನೀಡುತ್ತಿದೆ. ಸದ್ಯ ಈ ಸೇಲ್‌ ಭಾರತದಲ್ಲಿ ಅಮೆಜಾನ್ ಪ್ರೈಮ್ ಸದಸ್ಯರಿಗೆ ಮಾತ್ರ ತೆರೆದಿದೆ. ಈಗಾಗಲೇ ಹಲವು ಸ್ಮಾರ್ಟ್‌ಪ್ರಾಡಕ್ಟ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿದೆ. ಇದೀಗ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಟಿವಿಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌ ಪ್ರೈಮ್‌ ಡೇ 2020 ಸೇಲ್

ಹೌದು, ಅಮೆಜಾನ್‌ ಪ್ರೈಮ್‌ ಡೇ 2020 ಸೇಲ್‌ನ ಕೊನೆಯ ದಿನವಾದ ಇಂದು ಭಾರಿ ರಿಯಾಯಿತಿ ದರಲ್ಲಿ ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಖರೀದಿಸಬಹುದಾಗಿದೆ. ಈಗಾಗಲೇ ಸ್ಮಾರ್ಟ್‌ಫೋನ್‌, ಡಿಲ್ಸ್‌, ಆಪರ್ಸ್‌, 20,000 ಕ್ಕಿಂತ ಕಡಿಮೆ ಫೋನ್‌ಗಳಿಗೆ ಲಭ್ಯವಾಗುವ ಇತರೆ ಪ್ರಾಡಕ್ಟ್‌ಗಳ ಬಗ್ಗೆ ಈಗಾಗಲೇ ಹೈಲೈಟ್ ಮಾಡಿದ್ದೇವೆ. ಇದೀಗ ಪ್ರೈಮ್ ಡೇ ಸೇಲ್‌ನಲ್ಲಿ ನೀವು 15,000ರೂ ಕ್ಕಿಂತ ಕಡಿಮೆ ದರದಲ್ಲಿ ಲಭ್ಯವಾಗುವ 32 ಇಂಚಿನ ಸ್ಮಾರ್ಟ್ ಟಿವಿಗಳನ್ನು ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಶಿಂಕೊ ಟಿವಿ

ಶಿಂಕೊ ಟಿವಿ

ಶಿಂಕೊದ 32 ಇಂಚಿನ ಎಚ್‌ಡಿ ಎಲ್ಇಡಿ ಟಿವಿ 1366 x 768 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಹೊಂದಿದ್ದು, HRDP ಟೆಕ್ನಾಲಜಿಯನ್ನ ಹೊಂದಿದ್ದು, ಉತ್ತಮ ವೀಕ್ಷಣೆಯ ಅನುಭವವನ್ನು ಹೊಂದಿದೆ. ಇದು 20 ವ್ಯಾಟ್ಸ್ output, ಸರೌಂಡ್ ಸೌಂಡ್ ಸಪೋರ್ಟ್ ನೀಡುತ್ತದೆ ಮತ್ತು ಐದು ಸೌಂಡ್ ಮೋಡ್‌ಗಳನ್ನು ಹೊಂದಿದೆ. ಶಿಂಕೊ ಸ್ಮಾರ್ಟ್ ಟಿವಿ ಕ್ವಾಡ್-ಕೋರ್ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 8.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಹಾಟ್‌ಸ್ಟಾರ್, zee5, ಸೋನಿ ಲಿವ್ ಮತ್ತು ಹೆಚ್ಚಿನ ಅಪ್ಲಿಕೇಶನ್‌ಗ ಪ್ರಿ ಲೋಡ್ ಅನ್ನು ಹೊಂದಿದೆ.

ಟಿಸಿಎಲ್ ಟಿವಿ

ಟಿಸಿಎಲ್ ಟಿವಿ

ಟಿಸಿಎಲ್‌ನ 32-ಇಂಚಿನ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ ಟಿವಿ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ, ಇದು ಗೂಗಲ್ ಪ್ಲೇ ಸ್ಟೋರ್‌ಗೆ ಎಂಟ್ರಿ ನೀಡುವ ಅವಕಾಶವನ್ನ ನೀಡಿದೆ. ಅಲ್ಲದೆ ಇದು 60Hz ರಿಫ್ರೆಶ್ ರೇಟ್‌ನೊಂದಿಗೆ 720p ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಟಿಸಿಎಲ್ ಸ್ಮಾರ್ಟ್ ಟಿವಿಯ ಕನೆಕ್ಟಿವಿಟಿ ಆಯ್ಕೆಗಳಲ್ಲಿ 2HDMI ಪೋರ್ಟ್‌ಗಳು ಮತ್ತು 2 ಯುಎಸ್‌ಬಿ ಪೋರ್ಟ್‌ಗಳಿವೆ. ಸ್ಮಾರ್ಟ್ ಟಿವಿ HDR10 ಮತ್ತು ಮೈಕ್ರೋ ಡಿಮ್ಮಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಇಂಟರ್‌ಬಿಲ್ಟ್‌ Chromecast ಅನ್ನು ಸಹ ಹೊಂದಿದೆ. ಟಿಸಿಎಲ್ ಸ್ಮಾರ್ಟ್ ಟಿವಿಯ ಬೆಲೆ, 15,499.ರೂ ಆಗಿದೆ.

ಹಿಸ್ಸೆನ್ಸ್ ಟಿವಿ

ಹಿಸ್ಸೆನ್ಸ್ ಟಿವಿ

ಹಿಸ್ಸೆನ್ಸ್ 32-ಇಂಚಿನ ಟಿವಿ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳಿಗೆ ಎಂಟ್ರಿ ನಿಡುವ ಅವಕಾಶ ನೀಡಿದ್ದು, ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ ಟಿವಿ ಗೂಗಲ್ ಅಸಿಸ್ಟೆಂಟ್ ಮತ್ತು ಇಂಟರ್‌ಬಿಲ್ಟ್‌ ಕ್ರೋಮ್ಕಾಸ್ಟನಂತಹ ಇತರ ಗೂಗಲ್ ಫೀಚರ್ಸ್‌ಗಳೊಂದಿಗೆ ಬರುತ್ತದೆ. ಇದರ ಬಂಡಲ್ಡ್‌ ರಿಮೋಟ್ ಯೂಟ್ಯೂಬ್, ನೆಟ್‌ಫ್ಲಿಕ್ಸ್ ಮತ್ತು ಗೂಗಲ್ ಪ್ಲೇಗಾಗಿ ಮೀಸಲಾದ ಕೀಗಳನ್ನು ಹೊಂದಿದೆ. ಇನ್ನು ಹಿಸ್ಸೆನ್ಸ್ ಟಿವಿ ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಮತ್ತು ಪ್ರೈಮ್ ವಿಡಿಯೊಗೆ ಶಾರ್ಟ್‌ಕಟ್ ಕೀಗಳನ್ನು ಹೊಂದಿರುವ 4K ಟಿವಿ ಮಾದರಿಗಳನ್ನು ಸಹ ಹೊಂದಿದೆ. ಈ ಸ್ಮಾರ್ಟ್ ಟಿವಿಯ ಬೆಲೆ ರೂ .11,990.ಆಗಿದೆ.

ಒನಿಡಾ ಟಿವಿ

ಒನಿಡಾ ಟಿವಿ

ಒನಿಡಾ ಎಚ್‌ಡಿ 32-ಇಂಚಿನ ಸ್ಮಾರ್ಟ್‌ಟಿವಿ ಫೈರ್ ಟಿವಿಯ ಎಡಿಷನ್‌ ಆಗಿದೆ. ಇದು ಫೈರ್ ಟಿವಿ ಓಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ, ಒನಿಡಾ ಸ್ಮಾರ್ಟ್ ಟಿವಿಯು ಯೂಟ್ಯೂಬ್, ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, zee5, ಮತ್ತು ಸೋನಿಲಿವ್‌ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಗೆ ಎಂಟ್ರಿಯನ್ನು ನೀಡುವ ಅವಕಾಶವನ್ನ ಹೊಂದಿದೆ. ಇದು ರಿಮೋಟ್ ಕಂಟ್ರೋಲ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಅಲ್ಲದೆ ಇದು ಅಮೆಜಾನ್ ಫೈರ್ ಟಿವಿ ಸ್ಟಿಕ್ ಅನ್ನು ಸಹ ನೀಡಲಿದೆ. ಜೊತೆಗೆ ಅಲೆಕ್ಸಾ ವಾಯ್ಸ್‌ ಕಂಟ್ರೋಲ್‌ ಅನ್ನು ಸಹ ಬೆಂಬಲಿಸುತ್ತದೆ. ಸದ್ಯ ಒನಿಡಾ ಎಚ್‌ಡಿ ಫೈರ್ ಟಿವಿಯನ್ನು 12,000ರೂಗಳಿಗೆ ಖರೀದಿಸಬಹುದಾಗಿದೆ.

ಕೊಡಾಕ್ ಟಿವಿ

ಕೊಡಾಕ್ ಟಿವಿ

ನೀವು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಪಡೆಯಬಹುದಾದ ಮತ್ತೊಂದು ಸ್ಮಾರ್ಟ್ ಟಿವಿ ಎಂದರೆ ಅದು 32 ಇಂಚಿನ ಕೊಡಾಕ್‌ ಸ್ಮಾರ್ಟ್‌ಟಿವಿ. ಇದು ಆಂಡ್ರಾಯ್ಡ್ ಟಿವಿ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಇತರ ಆಂಡ್ರಾಯ್ಡ್ ಟಿವಿಗಳಂತೆ, ಇದೂ ಸಹ ಗೂಗಲ್ ಪ್ಲೇ ಸ್ಟೋರ್ ಮತ್ತು ಇಂಟರ್‌ಬಿಲ್ಟ್ ಕ್ರೋಮ್ಕಾಸ್ಟೆಗೆ ಪ್ರವೇಶವನ್ನು ನೀಡಲಿದೆ. ಅಲ್ಲದೆ ಇದರ ರಿಮೋಟ್ ಕಂಟ್ರೋಲ್ ಗೂಗಲ್ ಅಸಿಸ್ಟೆಂಟ್‌ಗಾಗಿ ಮೀಸಲಾದ ಬಟನ್ ಹೊಂದಿದೆ. ಅಮೆಜಾನ್ ಇಂಡಿಯಾದಲ್ಲಿ ನೀವು ಈ ಕೊಡಾಕ್ ಟಿವಿಯನ್ನು, 10,999 ರೂಗಳಿಗೆ ಪಡೆಯಬಹುದು.

Best Mobiles in India

English summary
Looking for made in India smart TVs? Here's a list of the top made in India 32-inch smart TVs you can purchase within ₹15,000 during the Amazone Prime Day sale.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+