ಬ್ಯೂಟಿಪ್ಲಸ್‌ಗೆ ಬದಲಿಯಾಗಿ ಲಭ್ಯವಿರುವ 5 ಆಪ್‌ಗಳು!

|

ಭಾರತ ಸರ್ಕಾರ ಚೀನಾದ 59 ಆಪ್‌ಗಳನ್ನ ಬ್ಯಾನ್‌ ಮಾಡಿದ್ದೆ ತಡೆ. ಇಷ್ಟು ದಿನ ಕೆಲವು ಆಪ್‌ಗಳನ್ನ ಬಳಸುತ್ತಿದ್ದ ಜನ, ಇದೀಗ ಅದರ ಬದಲಿ ಆಪ್‌ಗಲ ಕಡೆಗೆ ಗಮನ ಹರಿಸುತ್ತಿದ್ದಾರೆ. ಸದ್ಯ ದೇಶದಲ್ಲಿ ಚೀನಾದ ಬಹುಪಾಲ ಆಪ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿವೆ. ಇವುಗಳಲ್ಲಿ ಬ್ಯೂಟಿ ಆಧಾರಿತ ಆಪ್‌ಗಳು ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿತ್ತು. ಸದ್ಯ ಇದೀಗ ನಿಮ್ಮ ಪೋಟೋಗಳ ಅಂದವನ್ನ ಹೆಚ್ಚಿಸುತ್ತಿದ್ದ ಬ್ಯೂಟಿ ಪ್ಲಸ್‌ ಆಪ್‌ ಕೂಡ ಇದೀಗ ಬ್ಯಾನ್‌ ಆಗಿದೆ. ಹಾಗದ್ರೆ ಅದಕ್ಕೆ ಬದಲಿ ಆಪ್‌ಗಳು ಇದೆಯಾ ಅನ್ನೊದಾದ್ರೆ ಹೌದು ಬ್ಯೂಟಿ ಪ್ಲಸ್‌ಗೆ ಪರ್ಯಾಯವಾದ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿವೆ.

ಭಾರತ

ಹೌದು, ಭಾರತದಲ್ಲಿ ಚೀನಾದ ಜನಪ್ರಿಯ ಅಪ್ಲಿಕೇಶನ್‌ಗಳಾದ ಟಿಕೆಟ್‌ಟಾಕ್, ವಿ-ಚಾಟ್, ಶೇರ್ಇಟ್ ಸೇರಿದಂತೆ, ಬ್ಯೂಟಿ ಪ್ಲಸ್ ಆಪ್‌ ಕೂಡ ಬ್ಯಾನ್‌ ಆಗಿದ್ದೆ. ಭಾರತದಲ್ಲಿ ಬ್ಯೂಟಿಪ್ಲಸ್‌ ಆಪ್‌ ಸಾಕಷ್ಟು ಜನಪ್ರಿಯತೆಯನ್ನ ಪಡೆದುಕೊಂಡಿದ್ದು, ಫೋಟೋವನ್ನು ಎಡಿಟ್‌ ಮಾಡುವುದರ ಜೊತೆಗೆ, ಸೆಲ್ಫಿ, ಎಆರ್ ಸ್ಟಿಕ್ಕರ್, ಮ್ಯಾಕಪ್ ಟೂಲ್‌ನಂತಹ ಅನೇಕ ಬ್ಯೂಟಿ ಪ್ಲಸ್‌ ಅವಕಾಶಗಳನ್ನ ನೀಡಲಾಗಿತ್ತು. ಇದೀಗ ಇದನ್ನ ಬ್ಯಾನ್‌ ಮಾಡಲಾಗಿದೆ. ಸದ್ಯ ಈ ಅಪ್ಲಿಕೇಶನ್‌ಗೆ ಹಲವು ಪರ್ಯಾಯ ಅಪ್ಲಿಕೇಶನ್‌ಗಳಿದ್ದು, ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Youcom perfect

Youcom perfect

ಯುಕಾಮ್ ಪರ್ಫೆಕ್ಟ್ ಅಪ್ಲಿಕೇಶನ್‌ ಬ್ಯೂಟಿಪ್ಲಸ್‌ ಆಪ್‌ಗೆ ಬದಲಿ ಆಪ್‌ ಆಗಿ ಬಳಸಬಹುದಾಗಿದೆ. ಯೂಕಾಮ್ ಪರ್ಫೆಕ್ ಆಪ್‌ ನಿಮ್ಮ ಪೋಟೋಗಳನ್ನ ಸುಮದರವಾಗಿ ಎಡಿಟ್‌ ಮಾಡಲು ಅತ್ಯುತ್ತಮವಾದ ಅಪ್ಲಿಕೇಶನ್‌ ಆಗಿದೆ. ಇನ್ನು ಈ ಆಪ್ಲಿಕೇಶನ್‌ನಲ್ಲಿ ಮೇಕಪ್ ಪರಿಕರಗಳು, ಟ್ರೆಂಡಿ ಸ್ಟಿಕ್ಕರ್‌ಗಳು ಮತ್ತು ಫೋಟೋ ಎಡಿಟಿಂಗ್ ಟೂಲ್‌ಗಳ ಆಯ್ಕೆಗಳನ್ನು ಹೊಂದಿದೆ. ಎಆರ್ ಸ್ಟಿಕ್ಕರ್‌ಗಳನ್ನು ಸೌಂದರ್ಯದಲ್ಲಿ ಬಳಸುವ ವಿಧಾನ, ಅದೇ ರೀತಿಯಲ್ಲಿ ಇದು ಅನೇಕ ಟೆಂಪ್ಲೆಟ್ ಮತ್ತು ಫ್ರೇಮ್‌ಗಳನ್ನು ಹೊಂದಿದ್ದು, ನಿಮ್ಮ ಪೋಟೋಗಳ ಅಂದವನ್ನ ಹೆಚ್ಚಿಸಲಿದೆ.

Snapchat

Snapchat

ಸ್ನ್ಯಾಪ್‌ಚಾಟ್ ಇದೊಂದು ಮಲ್ಟಿಮೀಡಿಯಾ ಅಪ್ಲಿಕೇಶನ್‌ ಆಗಿದೆ. ಈ ಅಪ್ಲಿಕೇಶನ್‌ ಅನ್ನು ಸಹ ಬ್ಯೂಟಿ ಪ್ಲಸ್‌ ಆಪ್‌ಗೆ ಬದಲಿಯಾಗಿ ಬಳಸಬಹುದಾಗಿದೆ. ಸದ್ಯ ಇದರಲ್ಲಿ ಫೋಟೋಗಳಿಗಾಗಿ ಅನೇಕ ಫಿಲ್ಟರ್‌ಗಳು ಮತ್ತು ಲೆನ್ಸ್ ಆಯ್ಕೆಗಳನ್ನು ಹೊಂದಿದೆ, ಬ್ಯೂಟಿ ಪ್ಲಸ್‌ನಲ್ಲಿ ಒಳಗೊಂಡಿರುವ ಕೆಲವು ರೀತಿಯ ಆಯ್ಕೆಗಳನ್ನು ಸಹ ಈ ಆಪ್‌ನಲ್ಲಿ ನೀಡಲಾಗಿದೆ. ಅಲ್ಲದೆ ಈ ಅಪ್ಲಿಕೇಶನ್‌ಲ್ಲಿ ಸಾಕಷ್ಟು ಫಿಲ್ಟರ್‌ಗಳನ್ನು ನಿಡಲಾಗಿದ್ದು, ಹೊಸ ಮಾದರಿಯ ಲೆನ್ಸ್‌ಗಳನ್ನ ಇದರಲ್ಲಿ ನಿಡಲಾಗುತ್ತದೆ.

candy camera

candy camera

ಸದ್ಯ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಜನಪ್ರಿಯ ಸೆಲ್ಫಿ ಕ್ಯಾಮೆರಾ ಅಪ್ಲಿಕೇಶನ್‌ಗಳಲ್ಲಿ ಕ್ಯಾಂಡಿ ಕ್ಯಾಮೆರಾ ಕೂಡ ಒಂದಾಗಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಪೋಟೋಗಳನ್ನ ಎಡಿಟ್‌ ಮಾಡುವ ಫಿಲ್ಟರ್‌ಗಳನ್ನು ನಿಡಲಾಗಿದೆ. ಇದಕ್ಕಾಗಿ ನೀವು ಎಡದಿಂದ ಬಲಕ್ಕೆ ಈ ಕ್ಯಾಮೆರಾದಲ್ಲಿ ಸ್ವೈಪ್ ಮಾಡಬೇಕು, ಇದರೊಂದಿಗೆ ನೀವು ರಿಯಲ್‌ ಟೈಂ ಫಿಲ್ಟರ್‌ಗಳನ್ನು ಸಹ ಬಳಸಬಹುದಾಗಿದೆ. ಇದು ಮಾತ್ರವಲ್ಲದೆ, ಸ್ಲಿಮ್ಮಿಂಗ್ ಜೊತೆಗೆ, ಕ್ಯಾಂಡಿ ಕ್ಯಾಮೆರಾ ಅಪ್ಲಿಕೇಶನ್‌ನಲ್ಲಿ ವೈಟ್‌ ಲೆನ್ಸ್‌ ಜೊತೆಗೆ ಮ್ಯಾಜಿಕ್ ಬ್ರಷ್‌ನಂತಹ ಅನೇಕ ಫೀಚರ್ಸ್‌ಗಳನ್ನು ಬ್ಯೂಟಿಪ್ಲಸ್‌ನಂತೆ ಇದರಲ್ಲಿಯೂ ಸಹ ನಿಡಲಾಗಿದೆ.

snow

snow

ಸ್ನೋ ಅಪ್ಲಿಕೇಶನ್‌ ಕೂಡ ಬ್ಯೂಟಿ ಪ್ಲಸ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಇನ್ನು ಈ ಅಪ್ಲಿಕೇಶನ್‌ ನಲ್ಲಿಯೂ ಎಆರ್ ಮ್ಯಾಕಪ್ ಎಫೆಕ್ಟ್‌ ಅನ್ನು ನಿಡಲಾಗಿದೆ. ಜೊತೆಗೆ ಬ್ಯೂಟಿ ಟೂಲ್ಸ್‌ ನಲ್ಲಿ ಸಾವಿರಾರು ಸ್ಟಿಕ್ಕರ್‌ಗಳನ್ನ ನಿಡಲಾಗಿದೆ. ಜೊತೆಗೆ ಎಡಿಟ್‌ ಮಾಡಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಹಿಮದಂತೆ ಕಾಣುವ ಸಾಕಷ್ಟು ಎಡಿಟಿಂಗ್‌ ಟೂಲ್‌ಗಳನ್ನ ಇದರಲ್ಲಿ ನೀಡಲಾಗಿದೆ.

facetune2

facetune2

ಫೇಸ್‌ಟೂನ್ 2 ಕೂಡ ಅಪ್ಲಿಕೇಶನ್‌ ಕೂಡ ಬ್ಯೂಟಿಪ್ಲಸ್‌ನಲ್ಲಿ ಲಬ್ಯವಿರು ಸಾಕಷ್ಟು ಫೀಚರ್ಸ್‌ಳನ್ನ ಹೊಂದಿದೆ. ಇನ್ನು ಇದರಲ್ಲಿ ಮ್ಯಾಕಪ್ ಎಡಿಟರ್ ಅಪ್ಲಿಕೇಶನ್‌ಗಳನ್ನ ನೀಡಲಾಗಿದೆ. ಇದರಲ್ಲಿ, ನೀವು ಸೆಲ್ಫಿಗೆ ಹೊಸ ಫೇಸ್‌ಟೂನ್‌ ಅನ್ನು ನೀಡಬಹುದಾಗಿದೆ. ಇದರಲ್ಲಿ ನಿಮ್ಮ ಪೋಟೋಗಳಿಗೆ ಕೂದಲಿಗೆ ಕಲರ್‌ ಹಾಕುವುದು, ಹಲ್ಲುಗಳನ್ನು ಹೆಚ್ಚು ಹೊಳೆಯುವಂತೆ ಮಾಡಬಹುದು ಮತ್ತು ನೀವು ಚೆಕರ್‌ನ ವಿವಿಧ ಭಾಗಗಳನ್ನು ಪ್ರತ್ಯೇಕವಾಗಿ ಎಡಿಟಿಂಗ್‌ ಮಾಡಬಹುದಾಗಿದೆ.

Best Mobiles in India

Read more about:
English summary
Here are 5 top beauty apps available for the Android and iOS users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X