ಬಜೆಟ್‌ ಬೆಲೆಯಲ್ಲಿ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಲ್ಯಾಪ್‌ಟಾಪ್‌ಗಳು!

|

ಪ್ರಸ್ತುತ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತೇ ಬಂದಿವೆ. ಏಸರ್, ಎಚ್‌ಪಿ, ಲೆನೊವೊ ಮುಂತಾದ ಬ್ರಾಂಡ್‌ಗಳು ಗ್ರಾಹಕರ ನೆಚ್ಚಿನ ಲ್ಯಾಪ್‌ಟಾಪ್‌ ಬ್ರ್ಯಾಂಡ್‌ಗಳಾಗಿ ಗುರುತಿಸಿಕೊಂಡಿದೆ. ಇನ್ನು ಟೆಕ್‌ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈ ಎಂಡ್‌ ಬೆಲೆಯ ಲ್ಯಾಪ್‌ಟಾಪ್‌ಗಳು ಕೂಡ ಲಭ್ಯವಿವೆ.

ಲ್ಯಾಪ್‌ಟಾಪ್‌ಗಳ

ಹೌದು, ಟೆಕ್ನಾಲಜಿ ಮುಂದುವರೆದಂತೆ ಲ್ಯಾಪ್‌ಟಾಪ್‌ಗಳ ಬಳಕೆ ಹೆಚ್ಚಾಗಿದೆ. ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳು ಬಳಕೆದಾರರನ್ನು ಆಕರ್ಷಿಸುತ್ತಲೇ ಬಂದಿವೆ. ಗೇಮಿಂಗ್‌ ಮಾದರಿಯಿಂದ ಹಿಡಿದು ಹಲವು ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳು ಯುವಜನತೆಯ ಫೇವರಿಟ್‌ ಎನಿಸಿಕೊಂಡಿವೆ. ಇನ್ನು ನಿಮ್ಮ ಲ್ಯಾಪ್‌ಟಾಪ್ ಬಳಕೆ ವೆಬ್ ಬ್ರೌಸಿಂಗ್‌ಗೆ ಸೀಮಿತವಾಗಿದ್ದರೆ ಮತ್ತು ಎಂಎಸ್-ಆಫೀಸ್ ಸೂಟ್‌ನಲ್ಲಿ ಕೆಲಸ ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದರೆ ನೀವು ಬಜೆಟ್‌ ಬೆಲೆಯಲ್ಲಿ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲೆನೊವೊ ಐಡಿಯಾಪ್ಯಾಡ್ ಎಸ್ 145

ಲೆನೊವೊ ಐಡಿಯಾಪ್ಯಾಡ್ ಎಸ್ 145

ಲೆನೊವೊ ಐಡಿಯಾಪ್ಯಾಡ್ ಎಸ್ 145 ಲ್ಯಾಪ್‌ಟಾಪ್‌ 15.6-ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ ಐ 5-1035 ಜಿ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ಮೊದಲೇ ಇನ್‌ಸ್ಟಾಲ್‌ ಮಾಡಲಾಗಿದೆ. ಹಾಗೆಯೇ ಈ ಲ್ಯಾಪ್‌ಟಾಪ್‌ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಜೊತೆಗೆ ಇದು ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಸಹ ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಅನ್ನು ನೀವು 32,090 ರೂ.ಗಳಿಗೆ ಖರೀದಿಸಬಹುದಾಗಿದೆ.

ಆಸುಸ್‌ R542UQ-DM252T

ಆಸುಸ್‌ R542UQ-DM252T

ಆಸುಸ್ R542UQ-DM252T ಲ್ಯಾಪ್‌ಟಾಪ್‌ 15.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 8 ನೇ ತಲೆಮಾರಿನ ಇಂಟೆಲ್ ಕೋರ್ ಐ 3 ಪ್ರೊಸೆಸರ್ ಹೊಂದಿದೆ. ಇದು ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಮೊದಲೇ ಲೋಡ್ ಆಗಿದೆ. ಈ ಲ್ಯಾಪ್‌ಟಾಪ್‌ 8GB RAM, 1TB ಹಾರ್ಡ್ ಡ್ರೈವ್ ಮತ್ತು ಎನ್ವಿಡಿಯಾ ಜೀಫೋರ್ಸ್ 940 ಎಮ್ಎಕ್ಸ್ ಮೀಸಲಾದ ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ. ಇದನ್ನು 45,990ರೂ.ಗಳಿಗೆ ನೀವು ಖರೀದಿಸಬಹುದಾಗಿದೆ.

ಹೆಚ್‌ಪಿ ನೋಟ್‌ಬುಕ್‌- 15Q-BU040TU (2018)

ಹೆಚ್‌ಪಿ ನೋಟ್‌ಬುಕ್‌- 15Q-BU040TU (2018)

HP ನೋಟ್ಬುಕ್ - 15q-bu040tu ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್‌ ಕೋರ್ i3-7100U ಏಳನೇ ತಲೆಮಾರಿನ ಪ್ರೊಸೆಸರ್‌ ಅನ್ನು ಹೊಂದಿದೆ. ಬರುತ್ತದೆ. ಇದು ಎಚ್‌ಪಿ ಲ್ಯಾಪ್‌ಟಾಪ್ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ಮೊದಲೇ ಲೋಡ್ ಮಾಡಿದೆ. ಈ ಲ್ಯಾಪ್‌ಟಾಪ್‌ ನಂಬರ್‌ ಕೀಪ್ಯಾಡ್‌ನೊಂದಿಗೆ ಪೂರ್ಣ ಗಾತ್ರದ ಟೆಕ್ಸ್ಚರ್ಡ್ ಐಲ್ಯಾಂಡ್ ಶೈಲಿಯ ಕೀಬೋರ್ಡ್ ಹೊಂದಿದೆ. ಇದು 4GB RAM, 1TB ಹಾರ್ಡ್ ಡ್ರೈವ್ ಮತ್ತು ಇಂಟೆಲ್ ಹೆಚ್‌ಡಿ 620 ಗ್ರಾಫಿಕ್ಸ್ ಅನ್ನು ಒಳಗೊಂಡಿದೆ ಇದರ ಬೆಲೆ 24,990ರೂ.ಆಗಿದೆ.

ಏಸರ್‌ ಆಸ್ಪೈರ್‌ E5-576

ಏಸರ್‌ ಆಸ್ಪೈರ್‌ E5-576

ಇನ್ನು ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಲ್ಯಾಪ್‌ಟಾಪ್‌ಗಳಲ್ಲಿ ಏಸರ್‌ ಸಂಸ್ಥೆಯ ಏಸರ್ ಆಸ್ಪೈರ್ ಇ 5-576 ಕೂಡ ಒಂದಾಗಿದೆ. ಇದು 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ ಐ 3-6006 ಯು ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಹಾಗೆಯೇ 4GB RAM, 1TB ಹಾರ್ಡ್ ಡ್ರೈವ್ ಮತ್ತು ಇಂಟೆಲ್ ಹೆಚ್‌ಡಿ 520 ಗ್ರಾಫಿಕ್ಸ್ ಅನ್ನು ಒಳಗಂಡಿದೆ. ಈ ಲ್ಯಾಪ್‌ಟಾಪ್‌ ಡಾಸ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. ಇದರ ಬೆಲೆ 31,996ರೂ.ಆಗಿದೆ.

ಹೆಚ್‌ಪಿ 15 15-BS615TU

ಹೆಚ್‌ಪಿ 15 15-BS615TU

HP 15 15-bs615TU ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2GHz ಇಂಟೆಲ್ ಕೋರ್ i3-6006U 6 ನೇ ಜನ್ ಪ್ರೊಸೆಸರ್ ಹೊಂದಿದೆ. ಹಾಗೆಯೇ 4GB RAM, 2TB 5400rpm ಸೀರಿಯಲ್ ಎಟಿಎ ಹಾರ್ಡ್ ಡ್ರೈವ್ ಮತ್ತು ಇಂಟೆಲ್ ಹೆಚ್‌ಡಿ 520 ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಡಾಸ್ ಆಪರೇಟಿಂಗ್ ಸಿಸ್ಟಮ್ ಮತ್ತು ಹೆಚ್‌ಡಿ ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಹೆಚ್ಚಿನ ಬ್ಯಾಟರಿ ಅವಧಿಗೆ ಏಕಕೇಂದ್ರಕ 4 ಸೆಲ್ ಸಿಲಿಂಡರಾಕಾರದ ಬ್ಯಾಟರಿಯೊಂದಿಗೆ ಬರುತ್ತದೆ. ಇದರ ಬೆಲೆ 30,290ರೂ.ಆಗಿದೆ.

Best Mobiles in India

English summary
If your laptop usage is limited to web browsing and working on the MS-Office suite, here are the 5 budget laptops for you

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X