ಭಾರತದಲ್ಲಿ ಲಭ್ಯವಿರುವ ಐದು ಅತ್ಯುತ್ತಮ ಫಿಟ್ನೆಸ್ ಬ್ಯಾಂಡ್‌ಗಳು!
ಟೆಕ್ನಾಲಜಿ ಮುಂದುವರೆದಂತೆ ಫಿಟ್ನೆಸ್ ಆಧಾರಿತ ಸ್ಮಾರ್ಟ್‌ಬ್ಯಾಂಡ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟು ಸಾಕಷ್ಟು ವರ್ಷಗಳಾಗಿವೆ. ಈಗಾಗ್ಲೆ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳ ನವೀನ ಮಾದರಿಯ ಫಿಟ್ನೆಸ್ ಬ್ಯಾಂಡ್‌ಗಳು ಲಭ್ಯವಿವೆ. ಆದರೆ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್ ಕಂಪೆನಿಗಳ ಫಿಟ್ನೆಸ್ ಬ್ಯಾಂಡ್‌ಗಳನ್ನ ಖರೀದಿಸುತ್ತಾರೆ. ಅದರಲ್ಲೂ ಇತ್ತೀಚಿನ ಕೆಲ ಫಿಟ್ನೆಸ್ ಬ್ಯಾಂಡ್‌ಗಳು ದೇಹದ ECG ಯನ್ನು ಸಹ ಮಾಡುತ್ತವೆ ಅಷ್ಟರ ಮಟ್ಟಿಗೆ ಫಿಟ್ನೆಸ್ ಬ್ಯಾಂಡ್‌ಗಳು ಲಬ್ಯವಿದ್ದು ಭಾರಿ ಬೇಡಿಕೆ ಇದೆ.

ಹೌದು, ಟೆಕ್‌ವಲಯದಲ್ಲಿ ಫಿಟ್ನೆಸ್ ಆಧಾರಿತ ಫಿಟ್ನೆಸ್ ಬ್ಯಾಂಡ್‌ಗಳು ಇಂದು ಭಾರಿ ಬೇಡಿಕೆಯನ್ನ ಪಡೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸ ಮಾದರಿಯ ಫಿಟ್ನೆಸ್ ಬ್ಯಾಂಡ್‌ಗಳು ಲಾಂಚ್ ಆಗಿದ್ದು, ಹೊಸ ಮಾದರಿಯ ಫಿಚರ್ಸ್‌ಗಳಿಂದ ಗ್ರಾಹಕರನ್ನ ಆಕರ್ಷಿಸುತ್ತಿವೆ. ಆದರೆ ಗ್ರಾಹಕರಿಗೆ ಮಾತ್ರ ಯಾವ ಫಿಟ್ನೆಸ್ ಬ್ಯಾಂಡ್ ಉತ್ತಮ ಅನ್ನೋ ಗೊಂದಲ ಇದ್ದೇ ಇದೆ. ಆದರೆ ನಿಮ್ಮ ಗೊಂದಲಕ್ಕೆ ಪರಿಹಾರವಾಗಿ ನಸದ್ಯ ಲಭ್ಯವಿರುವ ಅತ್ಯುತ್ತಮ ಫಿಟ್ನೆಸ್ ಬ್ಯಾಂಡ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಶಿಯೋಮಿ ಮಿ ಬ್ಯಾಂಡ್ 3
ಶಿಯೋಮಿ ಕಂಪೆನಿಯ ಶಿಯೋಮಿ ಮಿ ಬ್ಯಾಂಡ್ 3 ಉನ್ನತ-ಮಟ್ಟದ ಫಿಟ್ನೆಸ್ ಬ್ಯಾಂಡ್‌ಗಳಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನ ಹೊಂದಿರುವ ಫಿಟ್ನೆಸ್ ಬ್ಯಾಂಡ್ ಆಗಿದೆ. ಈ ಫಿಟ್ನೆಸ್ ಬ್ಯಾಂಡ್ 3 0.78 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದ್ದು, 110 mAH ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಈ ಬ್ಯಾಂಡ್ ಅನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಜೊತೆ ಕನೆಕ್ಟಿವಿಟಿ ಮಾಡಬಹುದಾಗಿದೆ. ಇನ್ನು ಈ ಬ್ಯಾಂಡ್ ಸ್ಟೆಪ್ ಕೌಂಟರ್, ಸ್ಲೀಪ್ ಮಾನಿಟರ್, ಐಡಲ್ ಅಲರ್ಟ್ ಮತ್ತು ಕ್ಯಾಲೋರಿ ಕೌಂಟರ್ ಜೊತೆಗೆ ಹಾರ್ಟ್ ರೇಟ್ ಮಾನಿಟರ್ ಅನ್ನು ಸಹ ಮಾಡಲಿದೆ. ಇದಲ್ಲದೆ, ಮಿ ಬ್ಯಾಂಡ್ 3 ಟೈಂ, ಹವಾಮಾನ ಮುನ್ಸೂಚನೆ, ನೋಟಿಫಿಕೆಷನ್ ಆಲರ್ಟ್ ಮಾಡುತ್ತದೆ. ಈ ಬ್ಯಾಂಡ್ ವಾಟರ್ ಮತ್ತು ದೂಳು ನಿರೋಧಕ ವ್ಯವಸ್ಥೆಯನ್ನ ಹೊಂದಿದೆ. ಇದರ ಬೆಲೆ 1999ರೂ.ಆಗಿದೆ.

ಲೆನೊವೊ HX06 06 ಆಕ್ಟಿವ್ ಸ್ನಾರ್ಟ್‌ಬ್ಯಾಂಡ್
ಲೆನೊವೊ ಕಂಪೆನಿಯ ಈ ಸ್ಮಾರ್ಟ್‌ಬ್ಯಾಂಡ್ ಅತ್ಯುತ್ತಮ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಈ ಫಿಟ್ನೆಸ್ ಬ್ಯಾಂಡ್ 128 x 32 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರುವ 0.87-ಇಂಚಿನ ಒಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇದು ಐಪಿ 67 ವಾಟರ್ ಪ್ರೂಪ್ ವ್ಯವಸ್ಥೆಯನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಜೊತೆ ಕನೆಕ್ಟಿವಿಟಿ ಮಾಡಬಹುದಾಗಿದೆ. ಈ ಸ್ಮಾರ್ಟ್‌ಬ್ಯಾಂಡ್ ಪ್ರಮುಖ ಫಿಚರ್ಸ್ ಎಂದರೆ ಈ ಫಿಟ್‌ನೆಸ್ ಬ್ಯಾಂಡ್‌ನಲ್ಲಿ ಆಂಟಿ-ಸ್ಲೀಪ್ ಮೋಡ್ ಮತ್ತು ಸ್ಲೀಪ್ ಮಾನಿಟರ್ ಅಳವಡಿಸಲಾಗಿದೆ. ಆಂಟಿ-ಸ್ಲೀಪ್ ಮೋಡ್ ಬಳಕೆದಾರರು ತಡರಾತ್ರಿಯ ಡ್ರೈವ್‌ಗಳಲ್ಲಿ ಬ್ಯಾಂಡ್ ಕಂಪಿಸುವಂತೆ ಮಾಡುತ್ತದೆ. ಇದರ ಬೆಲೆ 1,299ರೂ ಆಗಿದೆ.

ಇಂಟೆಕ್ಸ್ ಫಿಟ್‌ರಿಸ್ಟ್ ಪಲ್ಜ್
ಇದು ದೇಶಿ ಕಂಪೆನಿಯಾದ ಇಂಟೆಕ್ಸನ್ ಮೊದಲ ವೇರಿಯೆಬಲ್ ಫಿಟ್ನೆಸ್ ಬ್ಯಾಂಡ್ ಆಗಿದೆ. ಸದ್ಯ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಫಿಟ್‌ನೆಸ್ ಬ್ಯಾಂಡ್‌ಗಳಲ್ಲಿ ಇದು ಒಂದಾಗಿದೆ. ಈ ಫಿಟ್ನೆಸ್ ಬ್ಯಾಂಡ್ ಹೃದಯ ಬಡಿತ ಮಾನಿಟರಿಂಗ್, ಸ್ಲೀಪ್ ಮಾನಿಟರ್, ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್ OLED ಡಿಸ್‌ಪ್ಲೇ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಬ್ಯಾಂಡ್ ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್ ಜೊತೆಗೆ ಕನೆಕ್ಟಿವಿಟಿಯನ್ನ ಬೆಂಬಲಿಸಲಿದೆ. ಇದರ ಬ್ಯಾಟರಿ ಅವಧಿಯು 5 ರಿಂದ 7 ದಿನಗಳು ಇರಲಿದ್ದು, ಈ ಫಿಟ್ನೆಸ್ ಬ್ಯಾಂಡ್ ಅನ್ನು ಚಾರ್ಜ್ ಮಾಡಲು 2 ಗಂಟೆ ತೆಗೆದುಕೊಳ್ಳುತ್ತದೆ. ಇದರ ಬೆಲೆ 1799 ರೂ ಆಗಿದೆ.

ನಾಯಿಸ್ ಕಲರ್ ಫಿಟ್ 2
ನಾಯ್ಸ್ ಕಲರ್ ಫಿಟ್ 2 ಹೊಸ ಮಾದರಿಯ ಸ್ಮಾರ್ಟ್ ಬ್ಯಾಂಡ್ ಆಗಿದ್ದು ಇದು ನಿಮ್ಮ ಎಲ್ಲಾ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ. ಇನ್ನು ಈ ಸ್ಮಾರ್ಟ್ ಬ್ಯಾಂಡ್ ದೊಡ್ಡ ಆಯತಾಕಾರದ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 0.96 ಕಲರ್ ಎಲ್‌ಸಿಡಿಯನ್ನು ಹೊಂದಿದೆ. ಇದರ ಡಿಸ್‌ಪ್ಲೇಯನ್ನು ಡಬಲ್-ಟ್ಯಾಪ್ ಮಾಡುವ ಮೂಲಕ ಶಬ್ದದ ಹಾದಿಯನ್ನ ಟ್ರ್ಯಾಕ್ ಮಾಡಿ ನಿಯಂತ್ರಿಸಬಹುದು, ಹೃದಯ ಬಡಿತ, ನಿದ್ರೆ, ಕ್ಯಾಲೊರಿ, ಗಳನ್ನು ಟ್ರ್ಯಾಕ್ ಮಾಡಲಿದೆ. ಇನ್ನು ಮಿಡ್‌ನೈಟ್ ಬ್ಲ್ಯಾಕ್, ಡಸ್ಟ್ ಪಿಂಕ್ ಮತ್ತು ಟ್ವಿಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಾಗಲಿದೆ.
ಇದರ ಬೆಲೆ 1699ರೂ.ಆಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫಿಟ್-E
ಸ್ಯಾಮ್‌ಸಂಗ್ ಗ್ಯಾಲಕ್ಸಿ ಫಿಟ್ E ಸ್ಮಾರ್ಟ್‌ಬ್ಯಾಂಡ್ ಜನಪ್ರಿಯ ಫಿಟ್‌ನೆಸ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಆಕ್ಟಿವಿಟಿ ಹಾಗೂ ಸ್ಲೀಪ್ ಟ್ರ್ಯಾಕಿಂಗ್‌ನಂತಹ ಗುಣಮಟ್ಟದ ಫೀಚರ್ಸ್‌ಗಳನ್ನ ಹೊಂದಿದ್ದು. ಇದು ವಾಕಿಂಗ್, ರನ್ನಿಂಗ್ ಮತ್ತು ವರ್ಕೌಟ್ ಆಧರಿಸಿದ 3 ಆಕ್ಟಿವಿಟಿಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಮೊಬೈಲ್ ಸ್ಯಾಮ್‌ಸಂಗ್ ಆರೋಗ್ಯ ಅಪ್ಲಿಕೇಶನ್ ಅನ್ನು ಹೊಂದಿದೆ. ಇದು PMOLED ಡಿಸ್ಪ್ಲೇಯೊಂದಿಗೆ ಕಪ್ಪು, ಬಿಳಿ ಮತ್ತು ಹಳದಿ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು. ಇದರ ಬೆಲೆ 2490.ರೂ ಆಗಿದೆ.


Click it and Unblock the Notifications





