ಪವರ್‌ ಬ್ಯಾಂಕ್‌ ಖರೀದಿಸುವ ಯೋಚನೆ ಇರುವವರು ಈ ಸ್ಟೋರಿಯನ್ನೊಮ್ಮೆ ಓದಿರಿ!

|

ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಜನಪ್ರಿಯತೆ ಪಡೆದುಕೊಂಡಿವೆ. ಫಾಸ್ಟ್‌ ಚಾರ್ಜಿಂಗ್‌ ಬೆಂಬಲಿಸುವ ಬೃಹತ್‌ ಬ್ಯಾಟರಿ ಒಳಗೊಂಡ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಇದೆ. ಆದರೂ ಕೂಡ ದಿನನಿತ್ಯ ಸ್ಮಾರ್ಟ್‌ಫೋನ್‌ ಬಳಸುವ ಗ್ರಾಹಕರಿಗೆ ಈ ಬ್ಯಾಟರಿ ಸಾಮರ್ಥ್ಯ ಕೂಡ ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಆಗಾಗ ಚಾರ್ಜಿಂಗ್‌ ಮಾಡುತ್ತಿರುತ್ತಾರೆ. ಇನ್ನು ಪ್ರಯಾಣದ ಸಂಧರ್ಭದಲ್ಲಿ ಚಾರ್ಜಿಂಗ್‌ ಖಾಲಿಯಾದರೆ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವುದಕ್ಕಾಗಿ ಪವರ್‌ ಬ್ಯಾಂಕ್‌ ಕೂಡ ಇರಬೇಕೆಂದು ಬಯಸುತ್ತಾರೆ.

ಪವರ್‌

ಹೌದು, ಸ್ಮಾರ್ಟ್‌ಫೋನ್‌ಗಳ ಜೊತೆಗೆ ಪವರ್‌ ಬ್ಯಾಂಕ್‌ ಕೂಡ ಇರಬೇಕೆಂದು ಹೆಚ್ಚಿನ ಜನರು ಬಯಸುತ್ತಾರೆ. ಬೃಹತ್‌ ಬ್ಯಾಟರಿ ಸಾಮರ್ಥ್ಯ ಹೊಂದಿದ್ದರೂ ಸಹ ನಿರಂತರವಾಗಿ ಸ್ಮಾರ್ಟ್‌ಫೋನ್‌ ಬಳಸುವಾಗ ಹೆಚ್ಚಿನ ಬ್ಯಾಟರಿ ಶಕ್ತಿ ಖಾಲಿಯಾಗಲಿದೆ. ಆದರಿಂದ ಸ್ಮಾರ್ಟ್‌ಫೋನ್‌ ಬ್ಯಾಟರಿ ಖಾಲಿಯಾದಾಗ ಅದರ ವಿದ್ಯುತ್‌ ದಾಹ ನೀಗಿಸಲು ಉತ್ತಮ ಪವರ್‌ ಬ್ಯಾಂಕ್‌ಗಳ ಅಗತ್ಯವಿದೆ. ಮಾರುಕಟ್ಟೆಯಲ್ಲೂ ಕೂಡ ಹಲವು ಕಂಪೆನಿಗಳು ಪವರ್‌ ಬ್ಯಾಂಕ್‌ಗಳನ್ನು ಪರಿಚಯಿಸಿವೆ. ನೀವು ಅಗ್ಗದ ಬೆಲೆಯ ಪವರ್‌ ಬ್ಯಾಂಕ್‌ ಖರೀದಿಸಲು ಬಯಸುವುದಾದರೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಮಿ 10000mAh ಪವರ್‌ ಬ್ಯಾಂಕ್‌ 2I

ಮಿ 10000mAh ಪವರ್‌ ಬ್ಯಾಂಕ್‌ 2I

ಶಿಯೋಮಿ ಸಂಸ್ಥೆ ಹಲವು ಪವರ್‌ ಬ್ಯಾಂಕ್‌ಗಳನ್ನು ಪರಿಚಯಿಸಿದೆ. ಅದರಲ್ಲಿ ಅಗ್ಗದ ಬೆಲೆ ಮಿ 10000mAh ಪವರ್ ಬ್ಯಾಂಕ್ 2I ಉತ್ತಮವಾಗಿದೆ. ಇದು 899 ರೂ.ಗೆ ಲಭ್ಯವಾಗಲಿದೆ. ಇನ್ನು ಈ ಪವರ್ ಬ್ಯಾಂಕ್ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ 5V / 2A, 9V / 2A ಮತ್ತು 12V / 1.5A ಚಾರ್ಜಿಂಗ್ ಔಟ್‌ಪುಟ್ ಅನ್ನು ಬೆಂಬಲಿಸುತ್ತದೆ. ಇದು ಸ್ಮಾರ್ಟ್ ಚಾರ್ಜಿಂಗ್‌ನೊಂದಿಗೆ ಡ್ಯುಯಲ್ ಯುಎಸ್‌ಬಿ ಔಟ್‌ಪುಟ್ ನೀಡುತ್ತದೆ ಮತ್ತು ಕ್ಲೈಮ್ ಚಾರ್ಜಿಂಗ್ ಸಮಯವನ್ನು 4.5 ಗಂಟೆಗಳಿರುತ್ತದೆ. ಇದು ಕಪ್ಪು, ಕೆಂಪು ಮತ್ತು ನೀಲಿ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ರಿಯಲ್‌ಮಿ 10000mAh ಪವರ್‌ ಬ್ಯಾಂಕ್‌

ರಿಯಲ್‌ಮಿ 10000mAh ಪವರ್‌ ಬ್ಯಾಂಕ್‌

ರಿಯಲ್‌ಮಿ ಪವರ್ ಬ್ಯಾಂಕ್ ಎರಡು ರೀತಿಯಲ್ಲಿ 18W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ. ಇದು ಡ್ಯುಯಲ್ ಔಟ್‌ಪುಟ್ ಟೈಪ್-ಸಿ ಮತ್ತು ಟೈಪ್-ಎ ಪೋರ್ಟ್‌ಗಳನ್ನು ಹೊಂದಿದೆ. ಈ ಪವರ್ ಬ್ಯಾಂಕಿನ ಯುಎಸ್‌ಬಿ ಪವರ್ ಡೆಲಿವರಿ (ಪಿಡಿ) ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದರಿಂದ ಲ್ಯಾಪ್‌ಟಾಪ್‌ಗಳನ್ನು ಸಹ ಚಾರ್ಜ್ ಮಾಡಬಹುದಾಗಿದೆ. ಇದು 1,299 ರೂ ಬೆಲೆಯನ್ನು ಹೊಂದಿದ್ದು, ಗ್ರೇ, ಹಳದಿ ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಐಬಾಲ್ 10000mAh ಪವರ್ ಬ್ಯಾಂಕ್

ಐಬಾಲ್ 10000mAh ಪವರ್ ಬ್ಯಾಂಕ್

ಐಬಾಲ್‌ನ 10000mAh ಪವರ್ ಬ್ಯಾಂಕ್ ನಿಮಗೆ ಕೇವಲ 699 ರೂ.ಗೆ ದೊರರೆಯಲಿದೆ. ಇದು 2.4A ಉತ್ಪಾದನೆಯನ್ನು ಬೆಂಬಲಿಸುತ್ತದೆ. ಇನ್ನು ಪವರ್‌ ಬ್ಯಾಂಕ್‌ ಔಟ್‌ಪುಟ್‌ಗಾಗಿ ಎರಡು ಟೈಪ್-ಎ ಪೋರ್ಟ್‌ಗಳನ್ನು ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಮತ್ತು ಇನ್ಪುಟ್ ಚಾರ್ಜಿಂಗ್‌ಗಾಗಿ ಟೈಪ್-ಸಿ ಪೋರ್ಟ್ ಅನ್ನು ನೀಡುತ್ತದೆ. ಈ ಪವರ್ ಬ್ಯಾಂಕ್ 6-7 ಗಂಟೆಗಳ ಕ್ಲೈಮ್ ಚಾರ್ಜಿಂಗ್ ಸಮಯವನ್ನು ಹೊಂದಿದೆ. ಇದು ಕಪ್ಪು, ನೀಲಿ, ಷಾಂಪೇನ್ ಗೋಲ್ಡ್ ಮತ್ತು ರೋಸ್ ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಆಂಬ್ರೇನ್ 10000mAh ಪವರ್ ಬ್ಯಾಂಕ್

ಆಂಬ್ರೇನ್ 10000mAh ಪವರ್ ಬ್ಯಾಂಕ್

ಆಂಬ್ರೇನ್‌ ಸಂಸ್ಥೆಯ ಈ ಪವರ್ ಬ್ಯಾಂಕ್ 10000 mAh ಲಿಥಿಯಂ ಪಾಲಿಮರ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 5-7 ಗಂಟೆಗಳ ಕಾಲ ಚಾರ್ಜಿಂಗ್‌ ಕ್ಲೇಮ್‌ ಮಾಡಲಿದೆ. ಔಟ್‌ಪುಟ್‌ಗಾಗಿ ಡ್ಯುಯಲ್ ಯುಎಸ್‌ಬಿ ಟೈಪ್-ಎ ಪೋರ್ಟ್‌ಗಳನ್ನು ಮತ್ತು ಇನ್‌ಪುಟ್‌ಗಾಗಿ ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ನೀಡುತ್ತದೆ. ಇನ್ನು ಈ ಪವರ್‌ ಬ್ಯಾಂಕ್‌ 649 ರೂ.ಬೆಲೆಯನ್ನು ಹೊಂದಿದ್ದು, ಬ್ಲ್ಯಾಕ್‌, ವೈಟ್‌ ಮತ್ತು ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಪೋರ್ಟ್ರಾನಿಕ್ಸ್ 10000mAh ಬ್ಯಾಟರಿ ಪವರ್ ಬ್ಯಾಂಕ್

ಪೋರ್ಟ್ರಾನಿಕ್ಸ್ 10000mAh ಬ್ಯಾಟರಿ ಪವರ್ ಬ್ಯಾಂಕ್

ಪೋರ್ಟ್ರಾನಿಕ್ಸ್‌ನ ಈ ಪವರ್ ಬ್ಯಾಂಕ್ 10000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು ಡ್ಯುಯಲ್ ಯುಎಸ್‌ಬಿ ಪೋರ್ಟ್ ಅನ್ನು ಗರಿಷ್ಠ 2.1A ಪ್ರವಾಹದೊಂದಿಗೆ ನೀಡುತ್ತದೆ. ಇನ್ನು ಈ ಪವರ್ ಬ್ಯಾಂಕ್ ಮೈಕ್ರೋ-ಯುಎಸ್‌ಬಿ ಮತ್ತು ಟೈಪ್-ಸಿ ಪೋರ್ಟ್‌ಗಳಂತಹ ಡ್ಯುಯಲ್ ಇನ್ಪುಟ್ ಆಯ್ಕೆಗಳನ್ನು ಸಹ ಹೊಂದಿದೆ. ಇದರ ಬೆಲೆ 699ರೂ.ಆಗಿದೆ.

Most Read Articles
Best Mobiles in India

English summary
hat’s when a power bank comes into the rescue. With several brands offering power banks, you can easily find options starting at Rs 399, ranging up to Rs 2,000.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X