ದೀಪಾವಳಿಯಲ್ಲಿ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ವಾಚ್‌ಗಳು!
ಇಂದಿನ ದಿನಗಳಲ್ಲಿ ಸಮಯ ತೋರುವ ವಾಚ್‌ಗಳ ವಿನ್ಯಾಸವೇ ಬದಲಾಗಿ ಹೋಗಿದೆ. ಸ್ಮಾರ್ಟ್‌ವಾಚ್‌ಗಳು ಕೇವಲ ಸಮಯ ತೋರುವುದಕ್ಕೆ ಸೀಮಿತವಾಗಿಲ್ಲ. ಫಿಟ್ನೆಸ್‌ಬ್ಯಾಂಡ್‌ಗಳಾಗಿ ಬದಲಾಗಿ ಹೋಗಿವೆ. ಇದೇ ಕಾರಣಕ್ಕೆ ಸ್ಮಾರ್ಟ್‌ವಾಚ್‌ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಈಗಾಗಲೇ ಅನೇಕ ಬ್ರಾಂಡ್‌ಗಳು ಹಲವು ಆಯ್ಕೆಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಸದ್ಯ ಇದು ದೀಪಾವಳಿ ಹಬ್ಬದ ಸಮಯವಾಗಿರೊದ್ರಿಂದ ಇದೇ ಸಮಯದಲ್ಲಿ ಹಲವು ಸ್ಮಾರ್ಟ್‌ವಾಚ್‌ಗಳು ಬಿಗ್ ಡಿಸ್ಕೌಂಟ್ ಪಡೆದುಕೊಂಡಿವೆ.

ಹೌದು, ದೀಪಾವಳಿ ಸಮಯದಲ್ಲಿ ಹಲವು ಸ್ಮಾರ್ಟ್‌ವಾಚ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಹಬ್ಬದ ಸಮಯವಾಗಿರೊದ್ರಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಕೂಡ ಅನೇಕ ರಿಯಾಯಿತಿಗಳನ್ನು ನೀಡುತ್ತಿವೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಸೈಟ್‌ಗಳಲ್ಲಿ ಅಪಲ್, ಸ್ಯಾಮ್‌ಸಂಗ್, Mobvoi ಮತ್ತು ಫಿಟ್‌ಬಿಟ್ ಸ್ಮಾರ್ಟ್‌ವಾಚ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಹಾಗಾದ್ರೆ ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4
ದೀಪಾವಳಿ ಹಬ್ಬದ ಸಮಯದಲ್ಲಿ ರಿಯಾಯಿತಿ ದರದಲ್ಲಿ ನೀವು ಖರೀದಿಸಬಹುದಾದ ಸ್ಮಾರ್ಟ್‌ವಾಚ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4 ಕೂಡ ಸೇರಿದೆ. ಪ್ರಸ್ತುತ ಈ ಸ್ಮಾರ್ಟ್‌ವಾಚ್ 24,997ರೂ ಬೆಲೆಗೆ ಲಭ್ಯವಿದೆ. ಇದರ ಮೂಲಬೆಲೆ 26,999ರೂ ಆಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಹೃದಯ ಬಡಿತದ ಮೇಲ್ವಿಚಾರಣೆ, SpO2 ಟ್ರ್ಯಾಕಿಂಗ್ ಮತ್ತು ಸ್ಲಿಪಿಂಗ್ ಟ್ರಾಕಿಂಗ್ ಅನ್ನು ಮಾಡಲಿದೆ. ಇದಲ್ಲದೆ ECG ಫೀಚರ್ಸ್ ಅನ್ನು ಕೂಡ ಒಳಗೊಂಡಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್ ಸ್ಯಾಮ್‌ಸಂಗ್ ಪೇ ಮತ್ತು ಗೂಗಲ್ ಪೇ ಸೇವೆಗಳೊಂದಿಗೆ ಸಹ ಕಾರ್ಯನಿರ್ವಹಿಸುತ್ತದೆ.

ಅಪಲ್ ವಾಚ್ SE
ಆಪಲ್ ವಾಚ್ SE ದೀಪಾವಳಿ ಸಮಯದಲ್ಲಿ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ವಾಚ್ ಆಗಿದೆ. ಪ್ರಸ್ತುತ ಅಪಲ್ ವಾಚ್ SE 44mm ರೂಪಾಂತರ(GPS) ಆಯ್ಕೆಗೆ ಡಿಸ್ಕೌಂಟ್ ನೀಡಲಾಗ್ತಿದೆ. 36,900ರೂ. ಮೂಲಬೆಲೆ ಹೊಂದಿರುವ ಈ ಸ್ಮಾರ್ಟ್‌ವಾಚ್ ಅಮೆಜಾನ್‌ನಲ್ಲಿ 27,900ರೂ.ಗೆ ಖರೀದಿಸಬಹುದು. ಜೊತೆಗೆ 40mm ಗಾತ್ರವನ್ನು ಹೊಂದಿರುವ ಸ್ಪೇಸ್ ಗ್ರೇ ರೂಪಾಂತರವನ್ನು ಅಮೆಜಾನ್‌ನಲ್ಲಿ 25,900ರೂ.ಗಳಿಗೆ ಪಟ್ಟಿ ಮಾಡಲಾಗಿದೆ.

ಒಪ್ಪೋ ವಾಚ್
ಒಪ್ಪೋ ಕಂಪೆನಿ ಸ್ಮಾರ್ಟ್‌ವಾಚ್ ನಲ್ಲಿ ಯಾವುದೇ ಡಿಸ್ಕೌಂಟ್ ನೀಡಲಾಗಿಲ್ಲ. ಆದರೆ ನೀವು ಉತ್ತಮ WearOS ಸ್ಮಾರ್ಟ್‌ವಾಚ್‌ಗಾಗಿ ಹುಡುಕುತ್ತಿದ್ದರೆ ಒಪ್ಪೋ ವಾಚ್ ಕೂಡ ಉತ್ತಮ ಆಯ್ಕೆಯಾಗಿದೆ. ಇದು ಆಪಲ್‌ನ ವಾಚ್‌ಮಾದರಿಯ ವಿನ್ಯಾಸವನ್ನು ಹೊಂದಿದೆ. ಇದು ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ ವೇರ್ 3100 SoC, ಪ್ರೊಸೆಸರ್ ಬಲವನ್ನು ಹೊಂದಿದೆ. ಸದ್ಯ ಒಪ್ಪೊ ಸ್ಮಾರ್ಟ್‌ವಾಚ್ 41 ಎಂಎಂ ರೂಪಾಂತರದ ಆಯ್ಕೆಗೆ 14,990ರೂ. ಬೆಲೆಯನ್ನು ಹೊಂದಿದೆ.

ಫಿಟ್‌ಬಿಟ್ ವರ್ಸಾ 3
ಫಿಟ್‌ಬಿಟ್ ವರ್ಸಾ 3 ಅತ್ಯುತ್ತಮ ಸ್ಮಾರ್ಟ್‌ವಾಚ್ ಆಯ್ಕೆಗಳಲ್ಲಿ ಒಂದಾಗಿದೆ. ಇದು ಅಮೆಜಾನ್‌ನಲ್ಲಿ 17,849 ರೂ.ಗಳಿಗೆ ಲಭ್ಯವಿದೆ. ಇದು GPS, ಡಿಜಿಟಲ್ ಅಸಿಸ್ಟೆಂಟ್, ಇಂಟರ್‌ಬಿಲ್ಟ್ ಸ್ಪೀಕರ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್ 1.58-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ವಾಚ್ ಹಲವು ಆಯ್ಕೆಯ ಫಿಟ್ನೆಸ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ನಿದ್ರೆಯ ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕರ್, SpO2 ಮಾನಿಟರಿಂಗ್ ಅನ್ನು ಸಹ ಮಾಡಲಿದೆ.

ಟಿಕ್‌ವಾಚ್ E3
ಟಿಕ್‌ವಾಚ್ E3 ಅಮೆಜಾನ್‌ನಲ್ಲಿ 4,000 ರೂ.ಗಳ ರಿಯಾಯಿತಿಯನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4100 ಪ್ರೊಸೆಸರ್ ಅನ್ನು ಹೊಂದಿದೆ. ಇದು ಮುಂಬರುವ ಪ್ರಮುಖ Wear OS 3 ಅಪ್ಡೇಟ್ ಅನ್ನು ಸಹಪಡೆದುಕೊಂಡಿದೆ. ಈ ಹಿಂದೆ ರೂ.19,999ಕ್ಕೆ ಲಭ್ಯವಿದ್ದ ಟಿಕ್ ವಾಚ್ ಇ3 ರೂ.15,999ಕ್ಕೆ ಮಾರಾಟವಾಗುತ್ತಿದೆ.


Click it and Unblock the Notifications








