Home
ಸುದ್ದಿಜಾಲ

UC ಬ್ರೌಸರ್‌ಗೆ ಐದು ಪರ್ಯಾಯ ಬ್ರೌಸರ್‌ಗಳ ಮಾಹಿತಿ ಇಲ್ಲಿದೆ!

ಚೀನಾ ಮೂಲದ 59 ಆಪ್‌ಗಳನ್ನ ಬ್ಯಾನ್‌ ಮಾಡುವ ಮೂಲಕ ಚೀನಾಗೆ ಪೆಟ್ಟು ನೀಡಿದೆ. ಸದ್ಯ ಕೇಂದ್ರ ಸರ್ಕಾರ ಬ್ಯಾನ್‌ ಮಾಡಿರುವ ಚೀನಾ ಆಪ್‌ಗಳು ಭಾರತದಲ್ಲಿಯೇ ಹೆಚ್ಚು ಜನಪ್ರಿಯತೆ ಪಡೆದಿದ್ದು, ಅಧಿಕ ಬಳಕೆದಾರರನ್ನು ಗಳಿಸಿದ್ದವು. ಅವುಗಳಲ್ಲಿ ಯುಸಿ ಬ್ರೌಸರ್‌ ಸರ್ಚ್‌ ಇಂಜಿನ್ ಸಹ ಸಾಕಷ್ಟು ಗಮನ ಸೆಳೆದಿತ್ತು ಆದ್ರೆ ಇದೀಗ ಈ ಆಪ್‌ಗೂ ಗೇಟ್‌ಪಾಸ್‌ ನೀಡಲಾಗಿದೆ. ಆದರೆ ಯುಸಿ ಬ್ರೌಸರ್‌ಗೆ ಪರ್ಯಾಯ ಆಪ್ಸ್‌ಗಳು ಲಭ್ಯ ಇವೆ.

ಯುಸಿ ಬ್ರೌಸರ್

ಹೌದು, ಟಿಕ್‌ಟಾಕ್, ಯುಸಿ ಬ್ರೌಸರ್‌ ಹಾಗೂ ಶೇರ್‌ ಇಟ್‌ ಸೇರಿದಂತೆ ಒಟ್ಟು 59 ಚೀನಾ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ನಿಷೇಧಿಸಿದೆ. ಸರ್ಚ್ ಇಂಜಿನ್ ಆಗಿರುವ ಯುಸಿ ಬ್ರೌಸರ್‌ಗೆ ಬದಲಾಗಿ ಚೀನಾ ಮೂಲ ಅಲ್ಲದ ಹಲವು ಅತ್ಯುತ್ತಮ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯ ಇವೆ. ಬಳಕೆದಾರರು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಯುಸಿ ಬ್ರೌಸರ್‌ಗೆ ಪರ್ಯಾಯ ಆಗಿರುವ ಐದು ಪ್ರಮುಖ ಆಪ್ಸ್‌ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.

ಗೂಗಲ್ ಕ್ರೋಮ್‌

ಗೂಗಲ್ ಕ್ರೋಮ್‌

ಸರ್ಚ್ ದೈತ್ಯ ಎನಿಸಿಕೊಂಡಿರುವ ಗೂಗಲ್‌ ಅತ್ಯುತ್ತಮ ಸರ್ಚ್ ಇಂಜಿನ್ ಆಗಿದೆ. ಗೂಗಲ್ ಕ್ರೋಮ್‌ನಲ್ಲಿ ಸಾಕಷ್ಟು ಅನುಕೂಲಕರ ಫೀಚರ್ಸ್‌ಗಳು ಇದ್ದು, ಬಳಕೆದಾರ ಸರ್ಚ್ ಮಾಹಿತಿ ಸುರಕ್ಷತೆಗೂ ಗಮನ ನೀಡಲಾಗಿದೆ. ಈ ಬ್ರೌಸರ್‌ನಲ್ಲಿ ಥರ್ಡ್‌ಪಾರ್ಟಿ ಕುಕ್ಕಿಸ್‌ಗಳನ್ನು ಬ್ಲಾಕ್‌ ಮಾಡುವ ಆಯ್ಕೆ ಸಹ ಇದ್ದು, ಬಳಕೆದಾರರು ಸೆಟ್ಟಿಂಗ್‌ನಲ್ಲಿ ಮೆನುವಿನಲ್ಲಿ ಸಕ್ರಿಯ ಮಾಡಿಕೊಳ್ಳಬಹುದಾಗಿದೆ.

ಸಫಾರಿ ವೆಬ್‌ಬ್ರೌಸರ್‌

ಸಫಾರಿ ವೆಬ್‌ಬ್ರೌಸರ್‌

ಸಫಾರಿ ವೆಬ್‌ಬ್ರೌಸರ್‌ ಆಪಲ್‌ ಸಂಸ್ಥೆಯು ಅಭಿವೃದ್ದಿ ಪಡೆಸಿದ್ದು, ಬಳಕೆದಾರರಿಂದ ಉತ್ತಮ ಸರ್ಚ್‌ ಇಂಜಿನ ಎನಿಸಿಕೊಂಡಿದೆ. ಗೂಗಲ್ ಬ್ರೌಸರ್‌ಗಿಂತ ಉತ್ತಮ ಸುರಕ್ಷತೆಯ ಆಯ್ಕೆಗಳನ್ನು ಒಳಗೊಂಡಿದೆ. ಆಯಂಟಿ ಫಿಂಗರ್‌ಪ್ರಿಂಟ್ ಪ್ರೊಟೆಕ್ಷನ್‌ ಆಯ್ಕೆ ಇದ್ದು, ಜಾಹಿರಾತು ಕಂಪನಿಗಳು ನಿಮ್ಮ ಸರ್ಚ್‌ ಮಾಹಿತಿಯನ್ನು ಟ್ರಾಕ್‌ ಮಾಡುವುದನ್ನು ತಡೆಯಲಿದೆ. ನಿಮ್ಮ ಇ-ಮೇಲ್‌ ಹೈಡ್‌ ಮಾಡುವ ಆಯ್ಕೆ ಸಹ ಇದೆ.

ಬ್ರೇವ್‌

ಬ್ರೇವ್‌

ಬ್ರೇವ್‌ ಸಾಫ್ಟ್‌ವೇರ್‌ Inc ನವರು ಈ ಬ್ರೌಸರ್‌ ಅನ್ನು ಅಭಿವೃದ್ದಿಪಡೆಸಿದ್ದು, ಇದೊಂದು ಓಪೆನಸೋರ್ಸ್‌ ಬ್ರೌಸರ್‌ ಆಗಿದೆ. ಜಾಹಿರಾತು ಬ್ಲಾಕ್‌ ಮಾಡುವ ಮತ್ತು ಟ್ರಾಕ್‌ ಮಾಡುವುದನ್ನು ತಡೆಯುವ ಆಯ್ಕೆ ಇದೆ. ಎಷ್ಟು ಜಾಹಿರಾತುದಾರರು ಮತ್ತು ಟ್ರಾಕರ್ಸ್‌ಗಳು ಬ್ಕಾಕ್‌ ಆಗಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಪ್ರೈವೆಸಿ ಸೆಟ್ಟಿಂಗ್‌ನಲ್ಲಿ ಆಯ್ಕೆಗಳಿವೆ.

ಸ್ಯಾಮ್‌ಸಂಗ್ ಇಂಟರ್ನೆಟ್ ಬ್ರೌಸರ್

ಸ್ಯಾಮ್‌ಸಂಗ್ ಇಂಟರ್ನೆಟ್ ಬ್ರೌಸರ್

ಸ್ಯಾಮ್‌ಸಂಗ್ ಇಂಟರ್ನೆಟ್ ಬ್ರೌಸರ್ ಸಹ ಉತ್ತಮ ವೆಬ್ ಬ್ರೌಸರ್ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆಗೆ ಏರಿದೆ. ಸ್ಯಾಮ್‌ಸಂಗ್ ಇಂಟರ್ನೆಟ್ ಬ್ರೌಸರ್ ನಿಜವಾಗಿಯೂ ಯುಸಿ ಬ್ರೌಸರ್ ಪರ್ಯಾಯವಾಗಿದೆ. ಏಕೆಂದರೆ ಅದು ಹಲವಾರು ವೈಶಿಷ್ಟ್ಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಡಾರ್ಕ್ ಮೋಡ್, ಸ್ಥಳೀಯ ಜಾಹೀರಾತು-ಬ್ಲಾಕರ್, ಡೌನ್‌ಲೋಡ್ ಮ್ಯಾನೇಜರ್, ಫಾಂಟ್ ಗ್ರಾಹಕೀಕರಣ, ರಹಸ್ಯ ಮೋಡ್, ಆಟೋಫಿಲ್ ಕ್ರಿಯಾತ್ಮಕತೆ ಫೀಚರ್ಸ್‌ಗಳನ್ನು ಪಡೆದಿದೆ.

ಫೈರ್‌ಫೊಕ್ಸ್‌ ಬ್ರೌಸರ್‌

ಫೈರ್‌ಫೊಕ್ಸ್‌ ಬ್ರೌಸರ್‌

ಮೊಜಿಲ್ಲಾ ಕಾರ್ಪೊರೇಶನ ಸಂಸ್ಥೆಯು ಫೈರ್‌ಫೊಕ್ಸ್‌ ಬ್ರೌಸರ್ ಅನ್ನು ಅಭಿವೃದ್ದಿ ಮಾಡಿದೆ. ಟ್ರಾಕ್‌ ಮಾಡುವ ಮೂಲಗಳನ್ನು ಬ್ಲಾಕ್‌ ಮಾಡುವ ಆಯ್ಕೆಯು ಈ ಬ್ರೌಸರ್‌ನಲ್ಲಿ ಬಳಕೆದಾರಿಗೆ ಲಭ್ಯ. ಫೈರ್‌ಫೊಕ್ಸ್‌ನಲ್ಲಿ ಬಳಕೆದಾರರ ಆನ್‌ಲೈನ್‌ ಸರ್ಚ್‌ ಸುರಕ್ಷಿತವಾಗಿರಲಿದ್ದು, ಜಾಹಿರಾತು ಕಂಪನಿಗಳಿಗೆ ಮಾಹಿತಿ ಸೋರಿಕೆಯಾಗದು. ಕಂಟೆಟ್‌ ಬ್ಲಾಕ್‌ ಆಯ್ಕೆಯು ಸಹ ಇದೆ

Best Mobiles in India

English summary
UC Browser, owned by Alibaba Group, is one of the most popular web browsers in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+