Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸೆಕ್ಯುರಿಟಿ ಕ್ಯಾಮೆರಾಗಳು!

ಇದು ಹೇಳಿಕೇಳಿ ಡಿಜಿಟಲ್‌ ಜಮಾನ ಇಲ್ಲಿ ಎಲ್ಲವೂ ಟೆಕ್ನಾಲಜಿ ಆಧಾರಿತವಾಗಿ ಕಾರ್ಯನಿರ್ವಹಿಸುವ ಡಿವೈಸ್‌ಗಳದ್ದೇ ಪಾರುಪತ್ಯ. ಸೆಕ್ಯುರಿಟಿ ಕ್ಯಾಮೆರಾ ಗಳಿಂದ ಹಿಡಿದು ಮನೆ ಬೆಳಗುವ ದೀಪದವರೆಗೂ ಎಲ್ಲವೂ ಸ್ಮಾರ್ಟ್‌ ಆಗಿ ಹೋಗಿವೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೇ ಸ್ಮಾರ್ಟ್‌ಹೋಮ್‌ಗಳಲ್ಲಿ ಪ್ರಮುಖವಾಗಿ ಸ್ಮಾರ್ಟ್‌ ಕ್ಯಾಮೆರಾಗಳನ್ನ ಅಳವಡಿಸಲಾಗಿರುತ್ತೆ. ಇವುಗಳು ಮನುಷ್ಯನ ಆಜ್ಞೆಗಳನ್ನ ಪಾಲಿಸುವುದಿರಂದ ಹಿಡಿದು ಮನೆ ಸುತ್ತ ಕಾವಲುಗಾರನಂತೆ ಗಸ್ತು ಹೊಡೆಯುವ ಕೆಲಸವನ್ನು ಮಾಡುತ್ತವೆ.

ಹೌದು

ಹೌದು, ತಂತ್ರಜ್ಞಾನ ಆಧಾರಿತ ಸೆಕ್ಯುರಿಟಿ ಕ್ಯಾಮೆರಾಗಳ ಬಳಕೆ ಈಗ ಅಧಿಕವಾಗಿದ್ದು, ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಲ್ಲಿ ಸೆಕ್ಯುರಿಟಿ ಕ್ಯಾಮೆರಾ ಅಳವಡಿಕೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಸೆಕ್ಯುರಿಟಿ ಕ್ಯಾಮೆರಾಗಳ ಅಳವಡಿಕೆ ಅತ್ಯಗತ್ಯವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸೆಕ್ಯುರಿಟಿ ಕ್ಯಾಮೆರಾಗಳು ಲಭ್ಯವಿವೆ. ಆದರೆ ಅವುಗಳಲ್ಲಿ ಅತ್ಯುತ್ತಮವಾದ ಸ್ಮಾರ್ಟ್‌ ಕ್ಯಾಮೆರಾಗಳು ಯಾವುವು? ಅವುಗಳ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಅರ್ಲೊ ಪ್ರೊ ವೈರ್‌ಲೆಸ್‌ ಕ್ಯಾಮೆರಾ

ಅರ್ಲೊ ಪ್ರೊ ವೈರ್‌ಲೆಸ್‌ ಕ್ಯಾಮೆರಾ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ವೈರ್‌ಲೆಸ್ ಸೆಕ್ಯುರಿಟಿ ಕ್ಯಾಮೆರಾಗಳ ಪಟ್ಟಿಯಲ್ಲಿ ಅರ್ಲೊ ಪ್ರೊ (Arlo Pro) ಅಗ್ರಸ್ಥಾನದಲ್ಲಿದೆ. ಇದು ಮನೆಯ ಒಳಾಂಗಣ ಅಥವಾ ಹೊರಾಂಗಣ ಎರಡು ಕಡೆಯೂ ಕೆಲಸ ಮಾಡುತ್ತದೆ. ಅಲ್ಲದೆ ಬಿಸಿಲಿನ ಸಮಯವಿರಲಿ ಅಥವಾ ಕತ್ತಲೆ ಇರಲಿ ಸ್ಪಷ್ಟ ಚಿತ್ರವನ್ನು ಸೆರೆ ಹಿಡಿಯುತ್ತದೆ. ಜೊತೆಗೆ ಇದು 2K hdr ವಿಡಿಯೋ ಸೆರೆ ಹಿಡಿಯುವ ಸಾಮರ್ಥ್ಯವನ್ನು ಹೊಂದಿದ್ದು, ಸ್ಪಾಟ್‌ಲೈಟ್‌ ಅನ್ನು ಸಂಯೋಜಿಸಲಾಗಿದೆ. ಇದಲ್ಲದೆ ಇದು ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಜೊತೆಗೆ ಸಂಪರ್ಕ ಸಾಧಿಸುತ್ತದೆ. ಅಲ್ಲದೆ ಸೈರನ್, ಸ್ಮಾರ್ಟ್ ಮೋಷನ್ ಡಿಟೆಕ್ಷನ್, ಕಲರ್ ನೈಟ್ ವಿಷನ್, ಮತ್ತು ಅಲ್ಟ್ರಾ-ವೈಡ್ ವ್ಯೂ ಫೀಚರ್ಸ್‌ಗಳನ್ನ ಹೊಂದಿದ್ದು, ಇದರ ಬೆಲೆ 44,900 ರೂ ಆಗಿದೆ.

ವೈಜ್ ಕ್ಯಾಮ್ ಪ್ಯಾನ್ ಕ್ಯಾಮೆರಾ

ವೈಜ್ ಕ್ಯಾಮ್ ಪ್ಯಾನ್ ಕ್ಯಾಮೆರಾ

ಈ ಕ್ಯಾಮೆರಾ ಕೇವಲ ಮೂರು ಸೆಕೆಂಡುಗಳಲ್ಲಿ ಇಡೀ ಕೊಠಡಿಯನ್ನು ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಗಾತ್ರದಲ್ಲಿ ಚಿಕ್ಕದಾಗಿದೆ. ಅಲ್ಲದೆ ನೀವು ಈ ಕ್ಯಾಮೆರಾವನ್ನು ಅಳವಡಿಸಿದ ಪ್ರದೇಶದಲ್ಲಿ ಕ್ಯಾಮೆರಾ ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡಬೇಕಾದರೆ, ನೀವು ಪ್ಯಾನ್ ಸ್ಕ್ಯಾನ್ ಫೀಚರ್ಸ್‌ ಸೆಟ್ಟಿಂಗ್‌ ಮೂಲಕ ಹೊಂದಿಸಬಹುದಾಗಿದೆ. ಇನ್ನು ಈ ಕ್ಯಾಮೆರಾ ಫೀಚರ್ಸ್‌ಗಳು ಉತ್ತಮವಾಗಿದ್ದು, ಟ್ರ್ಯಾಕಿಂಗ್‌ ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ಇದು ಅಲೆಕ್ಸಾ ವನ್ನು ಬೆಂಬಲಿಸಲಿದ್ದು, ವೆಬ್‌ ಆಧಾರಿತ ಡಿವೈಸ್‌ಗಳ ಜೊತೆ ಸಂಪರ್ಕವನ್ನು ಸಾಧಿಸಬಹುದಾಗಿದೆ. ಇನ್ನು ಇದರ ಬೆಲೆ 8,564 ರೂ ಆಗಿದೆ.

ಕ್ಯಾನರಿ ಆಲ್ ಇನ್ ಒನ್ ಕ್ಯಾಮೆರಾ

ಕ್ಯಾನರಿ ಆಲ್ ಇನ್ ಒನ್ ಕ್ಯಾಮೆರಾ

ಹೆಸರೇ ಹೇಳುವಂತೆ ಇದು ಆಲ್‌ ಇನ್‌ ಒನ್‌ ಕಾರ್ಯನಿರ್ವಹಿಸುವ ಇನ್‌ಡೋರ್‌ ಸೆಕ್ಯುರಿಟಿ ಕ್ಯಾಮೆರಾ ಆಗಿದೆ.ಈ ಕ್ಯಾಮೆರಾದಲ್ಲಿ ಸೈರನ್ ಮತ್ತು ನೈಸರ್ಗಿಕ ಸೆನ್ಸಾರ್‌ಗಳನ್ನ ನೀಡಲಾಗಿದ್ದು, ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಆಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಕ್ಯಾನರಿ ಕ್ಯಾಮೆರಾದಲ್ಲಿ ವೈ-ಫೈ ಬೆಂಬಲಕ್ಕೆ ತಕ್ಕಂತೆ ಸಾಕಷ್ಟು ಭದ್ರತಾ ಫೀಚರ್ಸ್‌ಗಳನ್ನ ನೀಡಲಾಗಿದೆ. ಅಲ್ಲದೆ ಇದರಲ್ಲಿ ಹವಾಮಾನ ಮಾನಿಟರ್, ಅಲೆಕ್ಸಾ ಕನೆಕ್ಟಿವಿಟಿ ಹಾಗೂ ತುರ್ತು ಸೇವೆಗಳಿಗೆ ನೇರ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನ ಇದರ ಬೆಲೆ 9,969ರೂ ಆಗಿದೆ.

ರಿಂಗ್ ಸ್ಪಾಟ್‌ಲೈಟ್ ಕ್ಯಾಮ್

ರಿಂಗ್ ಸ್ಪಾಟ್‌ಲೈಟ್ ಕ್ಯಾಮ್

ರಿಂಗ್‌ ಸ್ಪಾಟ್‌ಲೈಟ್‌ ಕ್ಯಾಮೆರಾ ಕೂಡ ಅತ್ಯುತ್ತಮ ಎನಿಸುವ ಫೀಚರ್ಸ್‌ಗಳನ್ನ ಹೊಂದಿದ್ದು, ಇನ್‌ಡೋರ್‌ನಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಕ್ಯಾಮೆರಾದ ವಿಶೇಷತೆಯೆಂದರೆ ಇದು ಯಾವುದೇ ರೀತಿಯ ಕೇಬಲ್‌ಗಳನ್ನ ಹೊಂದಿರುವುದಿಲ್ಲ. ಅಲ್ಲದೆ ಇದರಲ್ಲಿ ಸ್ಪಾಟ್‌ಲೈಟ್‌ ಅನ್ನು ಬಿಲ್ಟ್‌ ಮಾಡಲಾಗಿದ್ದು, ಮೋಷನ್‌ ಆಕ್ಟಿವಿಟಿ ಸೆನ್ಸಾರ್‌ಗಳನ್ನ ಆಳವಡಿಸಲಾಗಿದೆ. ಇಡೀ ಸ್ಮಾರ್ಟ್‌ಹೋಮ್‌ ಅನ್ನು ಸೆಕ್ಯೂರ್‌ ಮಾಡಬಲ್ಲ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಇದರ ಬೆಲೆ 36,539 ರೂ ಆಗಿದೆ.

ಯಿ ಡೋಮ್ ಕ್ಯಾಮೆರಾ 1080p

ಯಿ ಡೋಮ್ ಕ್ಯಾಮೆರಾ 1080p

ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾಗಳಲ್ಲಿ ಇದು ಕೂಡ ಉತ್ತಮವಾದ ಸೆಕ್ಯುರಿಟಿ ಕ್ಯಾಮೆರಾ ಆಗಿದೆ. ಈ ಕ್ಯಾಮೆರಾದಲ್ಲಿ ಉತ್ತಮ ಸೈರನ್‌ ಸೆನ್ಸಾರ್‌ ಆನ್ನು ನೀಡಲಾಗಿದೆ. ಅಲ್ಲದೆ ಇದು ಹವಾಮಾನ ವನ್ನು ಮಾನಿಟರ್‌ ಮಾಡಲಿದ್ದು, ಕತ್ತಲು ಬೆಳಕಿಗೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಅಲ್ಲದೆ ಈ ಸೆಕ್ಯುರಿಟಿ ಕ್ಯಾಮೆರಾದಲ್ಲಿ ಉತ್ತಮವಾದ ಮೆಕ್ಯಾನಿಕಲ್‌ ಪ್ಯಾನ್ ಮತ್ತು ಟಿಲ್ಟ್ ಅನ್ನು ನೀಡಲಾಗಿದೆ. ಜೊತೆಗೆ ಇದರಲ್ಲಿ 1080p ವೀಡಿಯೊ ಸಾಮರ್ಥ್ಯವಿದ್ದು, ಕ್ಲೌಡ್‌ ಹಾಗೂ ಮೊಷನ್‌ ಮತ್ತು ಸೌಂಡ್‌ ಡಿಟೆಕ್ಷನ್‌ ಅನ್ನು ಪತ್ತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಸದ್ಯ ಇದರ ಬೆಲೆ 2,300 ರೂ ಆಗಿದೆ.

Best Mobiles in India

English summary
Learn which wireless security cameras deliver the most features, have the best Wi-Fi connectivity, and offer perks like free cloud storage. Find out which ones we picked as the best wireless security cameras..to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+