ಭಾರತದಲ್ಲಿ ಲಭ್ಯವಿರುವ ಐದು ಅತ್ಯುತ್ತಮ 55 ಇಂಚಿನ 4K ಸ್ಮಾರ್ಟ್‌ಟಿವಿಗಳು!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ಬದಲಾಗಿದೆ. ಭಾರಿ ಗಾತ್ರದ ಸ್ಮಾರ್ಟ್‌ಟಿವಿಗಳು ಗ್ರಾಹಕರನ್ನು ಆಕರ್ಷಿಸಿವೆ. ಹಲವು ಕಂಪೆನಿಗಳು ಹೆಚ್ಚಿನ ಗಾತ್ರದ ಸ್ಕ್ರೀನ್‌ ಜೊತೆಗೆ,ಅಸಾಧಾರಣ ಚಿತ್ರ ಗುಣಮಟ್ಟ ಮತ್ತು ಫೀಚರ್ಸ್‌ಗಳ ಸೆಟ್‌ಗಳನ್ನು ನೀಡುತ್ತದೆ. ಸ್ಯಾಮ್‌ಸಂಗ್, ಸೋನಿ ಮತ್ತು ಶಿಯೋಮಿ ಮಾತ್ರವಲ್ಲ, ಸ್ಮಾರ್ಟ್‌ಫೋನ್ ತಯಾರಕರಾದ ರಿಯಲ್‌ಮಿ, ನೋಕಿಯಾ, ಮತ್ತು ಮೊಟೊರೊಲಾ ಕೂಡ ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಲಾಂಚ್‌ ಮಾಡುತ್ತಿವೆ.

ಸ್ಮಾರ್ಟ್‌ಟಿವಿ

ಹೌದು, ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಹಲವು ಗಾತ್ರದ ಸ್ಮಾರ್ಟ್‌ಟಿವಿಗಳು ಲಭ್ಯವಿವೆ. ಇತ್ತೀಚಿನ ದಿನಗಳಲ್ಲಿ 55 ಇಂಚಿನ 4K ಸ್ಮಾರ್ಟ್‌ಟಿವಿಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಏಕೆಂದರೆ 75 ಇಂಚಿನ ಟಿವಿಗಳು ಪರಿಣಾಮಕಾರಿ ಫೀಚರ್ಸ್‌ ಹೊಂದಿವೆ. ಆದರೆ ಬೆಲೆ ಕಾರಣಕ್ಕೆ ಇವುಗಳ ಕಡೆಗೆ ಹೆಚ್ಚಿನ ಜನರು ಗಮನ ಹರಿಸುವುದಿಲ್ಲ. ಆದರೆ 55 ಇಂಚಿನ ಸ್ಮಾರ್ಟ್‌ಟಿವಿಗಳು ಬೆಲೆ ಹಾಗೂ ವಿನ್ಯಾಸದಲ್ಲಿ ಗಮನ ಸೆಳೆಯುತ್ತಿವೆ. ಸದ್ಯ ನೀವು 55 ಇಂಚಿನ 4K ಸ್ಮಾರ್ಟ್‌ಟಿವಿ ಖರೀದಿಸುವುದಾದರೆ ಯಾವೆಲ್ಲಾ ಸ್ಮಾರ್ಟ್‌ಟಿವಿಗಳು ಟಾಪ್‌ ಲಿಸ್ಟ್‌ನಲ್ಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

1. LG 55 BXPTA

1. LG 55 BXPTA

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ 55 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸುವುದಾದರೆ ಎಲ್‌ಜಿ ಸಂಸ್ಥೆಯ LG 55 BXPTA ಸ್ಮಾರ್ಟ್‌ಟಿವಿ ಉತ್ತಮ ಆಯ್ಕೆಯಾಗಿದೆ. ಎಲ್‌ಜಿ ಸಂಸ್ಥೆಯ ಬಿಎಕ್ಸ್ ಸರಣಿಯ ಈ ಸ್ಮಾರ್ಟ್ ಟಿವಿ 55 ಇಂಚಿನ ಒಎಲ್ಇಡಿ 4 ಕೆ ರೆಸಲ್ಯೂಶನ್ ಪ್ಯಾನಲ್‌ ಅನ್ನು ಹೊಂದಿದೆ. ಈ ಟಿವಿಯು ಡಾಲ್ಬಿ ಅಟ್ಮೋಸ್‌ನೊಂದಿಗೆ 40W ಔಟ್‌ಪುಟ್ ಸ್ಪೀಕರ್ ಅನ್ನು ಸಹ ಹೊಂದಿದೆ. ಇದಲ್ಲದೆ, ಕನೆಕ್ಟಿವಿಟಿ ಆಯ್ಕೆಗಳಲ್ಲಿ ನಾಲ್ಕು ಎಚ್‌ಡಿಎಂಐ 2.1 ಪೋರ್ಟ್‌ಗಳನ್ನು ಇಎಆರ್‌ಸಿ ಬೆಂಬಲವನ್ನು ಹೊಂದಿದೆ. ಗೂಗಲ್ ಅಸಿಸ್ಟೆಂಟ್, ಅಲೆಕ್ಸಾ ಮತ್ತು ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್ ಹಾಟ್‌ಕೀಗಳಿಗೆ ಬೆಂಬಲದೊಂದಿಗೆ ಸ್ಮಾರ್ಟ್ ರಿಮೋಟ್ ಅನ್ನು ಒಳಗೊಂಡಿದೆ. ನೆಟ್ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ +, ಯೂಟ್ಯೂಬ್ ಮತ್ತು ಆಪಲ್ ಟಿವಿಯಂತಹ ಎಲ್ಲಾ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಿಗೆ ಬೆಂಬಲದೊಂದಿಗೆ ಟಿವಿ ಎಲ್‌ಜಿಯ ಸ್ವಂತ ವೆಬ್ಓಎಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಬೆಲೆ 1,19,999 ರೂ ಆಗಿದೆ.

2. ಸ್ಯಾಮ್‌ಸಂಗ್ ದಿ ಫ್ರೇಮ್

2. ಸ್ಯಾಮ್‌ಸಂಗ್ ದಿ ಫ್ರೇಮ್

ಸ್ಯಾಮ್‌ಸಂಗ್‌ ಸಂಸ್ಥೆಯ ಸ್ಯಾಮ್‌ಸಂಗ್ ದಿ ಫ್ರೇಮ್ ಸ್ಮಾರ್ಟ್‌ಟಿವಿ ಅತ್ಯುತ್ತಮ ಆಯ್ಕೆಯಾಗಿದೆ. ಇದು ಮೊದಲ ಡಿಸೈನರ್ ಟಿವಿ ಎಂಬ ಜನಪ್ರಿಯತೆಯನ್ನು ಸಹ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 120Hz ರಿಫ್ರೆಶ್‌ ರೇಟ್‌ ಅನ್ನು ಹೊಂದಿದ್ದು, 40WOS ಸ್ಪೀಕರ್‌ ಅನ್ನು ಒಳಗೊಂಡಿದೆ. ಇದನ್ನು ನೀವು ಟಿವಿಯಾಗಿ ಬಳಸದಿದ್ದಾಗ ಸ್ಯಾಮ್‌ಸಂಗ್‌ನ ಫ್ರೇಮ್ ಅಕ್ಷರಶಃ ಫೋಟೋ ಫ್ರೇಮ್‌ ಆಗಿ ಬದಲಾಗುತ್ತದೆ. ಟಿವಿಯು ಸ್ಯಾಮ್‌ಸಂಗ್‌ನ ಕ್ಯೂಎಲ್‌ಇಡಿ ತಂತ್ರಜ್ಞಾನವನ್ನು ಹೊಂದಿದೆ, ಇದು ಸುಂದರವಾದ ಬಣ್ಣಗಳು, ಅತ್ಯುತ್ತಮವಾದ ವ್ಯತಿರಿಕ್ತತೆಗಳು ಮತ್ತು ವಿವರಗಳನ್ನು 100% ಬಣ್ಣದ ಹರವು ಹೊಂದಿದೆ. ಇದಲ್ಲದೆ, ಈ ಟಿವಿಯು ಆಟೋ ಹಾಟ್‌ಸ್ಪಾಟ್ ತಂತ್ರಜ್ಞಾನ, ಯುಎಸ್‌ಬಿ 3.0, ಮತ್ತು ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ ಮತ್ತು ಬಿಕ್ಸ್‌ಬಿಯಂತಹ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 81,999 ರೂ.ಬೆಲೆಯನ್ನು ಹೊಂದಿದೆ.

3. ಸೋನಿ ಬ್ರಾವಿಯಾ X7400H

3. ಸೋನಿ ಬ್ರಾವಿಯಾ X7400H

55 ಇಂಚಿನ ಸ್ಮಾರ್ಟ್‌ಟಿವಿಗಳಲ್ಲಿ ಸೋನಿ ಬ್ರಾವಿಯಾ X7400H ಸ್ಮಾರ್ಟ್‌ಟಿವಿ ಕೂಡ ಉತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಟಿವಿ ಎಲ್ಇಡಿ ಸ್ಕ್ರೀನ್‌ ಅನ್ನು ಹೊಂದಿದೆ. ಇದು 50Hz ರಿಪ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 20WOS ಸ್ಪೀಕರ್ ಅನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ ಗೂಗಲ್‌ನ ಆಂಡ್ರಾಯ್ಡ್ ಟಿವಿ ಓಎಸ್‌ನಲ್ಲಿ 5,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು, ಕ್ರೋಮ್‌ಕಾಸ್ಟ್ ಮತ್ತು ಗೂಗಲ್ ಅಸಿಸ್ಟೆಂಟ್‌ಗಳ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್ ಬಟನ್ ಹೊಂದಿರುವ ರಿಮೋಟ್, ಬ್ಲೂಟೂತ್ 4.2, ವೈ-ಫೈ ಮತ್ತು ಡಾಲ್ಬಿ ಆಡಿಯೊ ಬೆಂಬಲವನ್ನು ಒಳಗೊಂಡಿವೆ. ಇದರ ಬೆಲೆ 75,999ರೂ. ಆಗಿದೆ.

4. ಟಿಸಿಎಲ್ C715

4. ಟಿಸಿಎಲ್ C715

ಟಿಸಿಎಲ್ C715 ಸ್ಮಾರ್ಟ್‌ಟಿವಿ 55 ಇಂಚಿನ 4K ಸ್ಮಾರ್ಟ್‌ಟಿವಿಗಳಲ್ಲಿ ಅತ್ಯುತ್ತಮ ಸ್ಮಾರ್ಟ್‌ಟಿವಿ ಆಗಿದೆ. ಇನ್ನು ಈ ಸ್ಮಾರ್ಟ್‌ಟಿವಿ QLED ಸ್ಕ್ರೀನ್‌ ಅನ್ನು ಹೊಂದಿದ್ದು, ಇದು 60Hz ರಿಫ್ರೆಶ್‌ ರೇಟ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ 20WOS ಸ್ಪೀಕರ್‌ ಅನ್ನು ಹೊಂದಿದೆ. ಟಿಸಿಎಲ್ ಸಿ715 ಆಂಡ್ರಾಯ್ಡ್ ಟಿವಿ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಟಿವಿಗೆ ಸಂಬಂಧಿಸಿದ ಎಲ್ಲಾ ಗೂಗಲ್ ಅಪ್ಲಿಕೇಶನ್‌ಗಳು ಮತ್ತು ಸೇವೆಗಳಿಗೆ ಈ ಸ್ಮಾರ್ಟ್‌ಟಿವಿ ಬೆಂಬಲವನ್ನು ನೀಡುತ್ತದೆ. ಹೆಚ್ಚುವರಿಯಾಗಿ, 4ಕೆ ಪರದೆಯು ಡಾಲ್ಬಿ ವಿಷನ್ ಮತ್ತು ಎಚ್ಡಿಆರ್ 10 + ವಿಷಯವನ್ನು ಸಹ ಬೆಂಬಲಿಸುತ್ತದೆ. ಟಿಸಿಎಲ್ ಟಿವಿ ಡಿಟಿಎಸ್ ಮತ್ತು ಡಾಲ್ಬಿ ಅಟ್ಮೋಸ್‌ನೊಂದಿಗೆ 30W ಸ್ಪೀಕರ್‌ಗಳಲ್ಲಿ ಪ್ಯಾಕ್ ಮಾಡುತ್ತದೆ. ಟಿವಿ ಎಡ್ಜ್-ಟು-ಎಡ್ಜ್ ಪ್ಯಾನೆಲ್‌ನೊಂದಿಗೆ ಲೋಹೀಯ ಫ್ರೇಮ್‌ ಅನ್ನು ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ 59,990 ರೂ.ಬೆಲೆಯನ್ನು ಹೊಂದಿದೆ.

5. ಶಿಯೋಮಿ ಮಿ ಕ್ಯೂಎಲ್ಇಡಿ ಟಿವಿ

5. ಶಿಯೋಮಿ ಮಿ ಕ್ಯೂಎಲ್ಇಡಿ ಟಿವಿ

ಇನ್ನು 55 ಸ್ಮಾರ್ಟ್‌ಟಿವಿಗಳಲ್ಲಿ ಶಿಯೋಮಿ ಕಂಪೆನಿಯ ಮಿ ಕ್ಯೂಎಲ್ಇಡಿ ಟಿವಿ ಕೂಡ ಒಂದಾಗಿದೆ. ಇದು OLED ಸ್ಕ್ರೀನ್‌ ಅನ್ನು ಹೊಂದಿದ್ದು, 60Hz ರಿಫ್ರೆಶ್‌ ರೇಟ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ 30WOS ಸ್ಪೀಕರ್‌ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ಟಿವಿ ಇಂಡಿಯಾದ ಮೊದಲ ಪ್ರೀಮಿಯಂ ಟಿವಿಯಾಗಿದೆ. ಇದು ಬಣ್ಣ ಸ್ಪಂದನ, ಕಾಂಟ್ರಾಸ್ಟ್ ಮತ್ತು ಕ್ರಿಯಾತ್ಮಕ ಶ್ರೇಣಿಯನ್ನು ನೀಡುತ್ತದೆ. ಅಲ್ಲದೆ ಆನ್‌ಬೋರ್ಡ್‌ನಲ್ಲಿ ಅಂತರ್ನಿರ್ಮಿತ ಸ್ಪೀಕರ್‌ಗಳಿವೆ, ಇದು ಯೋಗ್ಯವಾದ ಧ್ವನಿ ಗುಣಮಟ್ಟವನ್ನು ಹೊಂದಿರುವ ಸೌಂಡ್‌ಬಾರ್‌ನ ಅಗತ್ಯವನ್ನು ನಿವಾರಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬೆಲೆ 57,999 ರೂ.ಆಗಿದೆ.

Most Read Articles
Best Mobiles in India

English summary
best 55-inch 4K TVs should be your first port of call, offering exceptional picture quality and feature sets at today's flagship size from all the major TV brands out there.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X