5G ಸ್ಮಾರ್ಟ್‌ಫೋನ್ ಖರೀದಿಸಬೇಕೆ? ಇಲ್ಲಿವೆ ನಿಮ್ಮ ಬಜೆಟ್‌ಗೊಪ್ಪುವ ಬೆಸ್ಟ್ ಆಯ್ಕೆಗಳು!
ಸ್ಮಾರ್ಟ್‌ಫೋನ್ ಖರೀದಿಸುವಾಗ ಎಲ್ಲರ ಮೊದಲ ಅದ್ಯತೆ ಅದರ ಬೆಲೆ ಆಗಿರುತ್ತದೆ. ತಮ್ಮ ಬಳಿಯಿರುವ ಬಜೆಟ್‌ಗೆ ಸೂಕ್ತ ಎನಿಸುವ ಸ್ಮಾರ್ಟ್‌ಫೋನ್ ಆಯ್ಕೆ ಮಾಡುತ್ತಾರೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಕೂಡ ವಿವಿದ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ 30,000ರೂ.ಒಳಗಿನ 5G ಫೋನ್‌ಗಳು ಸಾಕಷ್ಟು ಗಮನಸೆಳೆದಿವೆ.
ಹೌದು, ಭಾರತದಲ್ಲಿ 5G ಶುರುವಾದ ನಂತರ 5G ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಹಾಗಂತ 5G ಫೋನ್‌ಗಳ ಬೆಲೆ ದುಬಾರಿ ಎಂದರ್ಥವಲ್ಲ, ನಿಮ್ಮ ಬೆಲೆಗೆ ಸೂಕ್ತವಾಗುವ ಸ್ಮಾರ್ಟ್‌ಫೋನ್‌ಗಳು ಕೂಡ ಲಭ್ಯವಾಗಲಿವೆ. ಹಾಗಾದರೆ 30,000ರೂ. ಒಳಗೆ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಕ್ಯೂ ನಿಯೋ 7
ಐಕ್ಯೂ ನಿಯೋ 7 ಸ್ಮಾರ್ಟ್‌ಫೋನ್ 30,000ರೂ. ಒಳಗೆ ಖರೀದಿಸಬಹುದಾದ ಉತ್ತಮ ಆಯ್ಕೆ ಎನಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.78 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಪ್ರಸ್ತುತ ಈ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ 29,999 ರೂ. ಬೆಲೆಯನ್ನು ಪಡೆದಿದೆ.
ಪೊಕೊ X5 ಪ್ರೊ
ಪೊಕೊ X5 ಪ್ರೊ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಪೊಕೊ X5 ಪ್ರೊ 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ISOCELL HM2 ಸೆನ್ಸಾರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ ಫ್ಲಿಪ್‌ಕಾರ್ಟ್ ಮೂಲಕ 22,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ನಥಿಂಗ್ ಫೋನ್ (1)
ನಥಿಂಗ್ ಫೋನ್ (1) ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ HD+ OLED ಡಿಸ್‌ಪ್ಲೇ ಹೊಂದಿದ್ದು, ಇದು 60Hz ನಿಂದ 120 Hz ಅಡಾಪ್ಟಿವ್ ರಿಫ್ರೆಶ್ ರೇಟ್ ನೀಡಲಿದೆ. ಜೊತೆಗೆ HDR10+ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಆಯ್ಕೆ ಇರುವುದು ಮತ್ತಷ್ಟು ಆಕರ್ಷಕವಾಗಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 778G+ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಪ್ರಸ್ತುತ ಭಾರತದಲ್ಲಿ ನಥಿಂಗ್ ಫೋನ್ (1) ಬೆಲೆ 29,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಗೂಗಲ್ ಪಿಕ್ಸೆಲ್ 6a
ಗೂಗಲ್ ಪಿಕ್ಸೆಲ್ 6a ಫೋನ್ 6.1 ಇಂಚಿನ ಫುಲ್ ಹೆಚ್‌ಡಿ ರೆಸಲ್ಯೂಶನ್‌ನೊಂದಿಗೆ OLED ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್, 6GB RAM ಹಾಗೂ 128GB ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯ ಪಡೆದುಕೊಂಡಿದೆ. ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ. ಜೊತೆಗೆ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್‌ಫೋನ್ 4,306 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.


Click it and Unblock the Notifications








