Just In
- 28 min ago
ಸ್ಮಾರ್ಟ್ಫೋನ್ಗಳಲ್ಲಿನ ಸೆನ್ಸರ್ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?
- 1 hr ago
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- 1 hr ago
ಲೆನೊವೊದಿಂದ ಭಾರತದಲ್ಲಿ ಹೊಸ ಲ್ಯಾಪ್ಟಾಪ್ ಬಿಡುಗಡೆ! ಇದರ ಕಾರ್ಯದಕ್ಷತೆ ಹೇಗಿದೆ?
- 2 hrs ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
Don't Miss
- News
ಕೂರ್ಮಗಿರಿ ಎಲ್ಲೋಡು ಆದಿನಾರಾಯಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- Movies
"ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ": ಅಭಿಮಾನಿಗಳಲ್ಲಿ ದರ್ಶನ್ ವಿಶೇಷ ಮನವಿ
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಲಭ್ಯ ಇರುವ ಟಾಪ್ ಸ್ಮಾರ್ಟ್‌ಬ್ಯಾಂಡ್‌ಗಳು!
ಬದಲಾದ ಆರೋಗ್ಯ ಶೈಲಿ, ಒತ್ತಡದ ಜೀವನದಿಂದಾಗಿ ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ದೇಹವನ್ನ ಕಾಡೋಕೆ ಶುರುಮಾಡಿವೆ. ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವುದೇ ಒಂದು ಸಾವಾಲಾಗಿ ಬಿಟ್ಟಿದೆ. ಸದ್ಯ ದೇಹದ ಫಿಟ್ನೆಸ್ ಸುಧಾರಣೆಗಾಗಿ ಫಿಟ್ನೆಸ್‌ಬ್ಯಾಂಡ್‌ಗಳ ಮೊರೆ ಹೋಗ್ತಿದ್ದಾರೆ. ದೇಹದ ರಕ್ತ ಶುದ್ದದತೆಯ ಬಮಟ್ಟ, ರನ್ನಿಂಗ್, ಹೃದಯ ಬಡಿತದ ನಿಖರತೆ, ವ್ಯಾಯಾಮಗಳ ಮಾಹಿತಿ, ಸೂರ್ಯನ ಬೆಳಕಿನ ಪ್ರಖರತೆ ಎಲ್ಲವೂ ಕೂಡ ಫಿಟ್ನೆಸ್ ಬ್ಯಾಂಡ್‌ಗಳಿಂದ ತಿಳಿಯಬಹುದಾಗಿದೆ.

ಹೌದು, ಫಿಟ್ನೆಸ್ ಬ್ಯಾಂಡ್‌ಗಳು ದೇಹದ ಆರೋಗ್ಯದ ಮೆಲ್ವಿಚಾರಣೆ ಮಾಡಬಲ್ಲ ಸಾಧನಗಳಾಗಿವೆ. ಸದ್ಯ ಮಾರುಕಟ್ಟೆಯಲ್ಲಿ ನಾನಾ ರೀತಿಯ ಭಿನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಬ್ಯಾಂಡ್‌ಗಳು ಲಭ್ಯವಿದೆ. ಆರೋಗ್ಯದ ಮೇಲೆ ನಿಗಾ ಇಡುವ ಸ್ಮಾರ್ಟ್‌ಬ್ಯಾಂಡ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಆದ್ರೆ ಸಾಕಷ್ಟು ಬಗೆಯ ಸ್ಮಾರ್ಟ್‌ಬ್ಯಾಂಡ್‌ಗಳು ಇರೊದ್ರಿಂದ ಅವುಗಳಲ್ಲಿ ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೊ ಗೊಂದಲ ಬಳಕೆದಾರರಲ್ಲಿ ಇದ್ದೇ ಇದೆ. ಹಾಗಾದ್ರೆ ಸದ್ಯ ಉತ್ತಮ ಎನ್ನಿಸಬಹುದಾದ ಟಾಪ್ 6 ಸ್ಮಾರ್ಟ್‌ಬ್ಯಾಂಡ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಚಾರ್ಜ್ 3 ಫಿಟ್‌ನೆಸ್ ಬ್ಯಾಂಡ್
ಫಿಟ್‌ಬಿಟ್ ಚಾರ್ಜ್ 3ಫಿಟ್‌ನೆಸ್ ಬ್ಯಾಂಡ್ ವಿಶ್ವದ ಅತ್ಯಂತ ಜನಪ್ರಿಯ ಫಿಟ್‌ನೆಸ್ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಇದರ ಡಿಸ್‌ಪ್ಲೇ ಕಂಪ್ಲೀಟ್ ವಾಟರ್ ಪ್ರೂಪ್ ಆಗಿದ್ದು ಶೇಖಡಾ 40ರಷ್ಟು ದೊಡ್ಡ ಪರದೆಯಿದೆ ಮತ್ತು 4 ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಈ ಬ್ಯಾಂಡ್‌ಗಳಲ್ಲಿ SpO2 ಸೆನ್ಸಾರ್ ಇದ್ದು ಸ್ಲೀಪಿಂಗ್ ಪ್ರಾಬ್ಲಂ ಬಗ್ಗೆ ಮಾಹಿತಿ ನೀಡುತ್ತದೆ. ಇದರ ಬ್ಯಾಟರಿ ಸಾಮರ್ಥ್ಯ 7 ದಿನಗಳಾಗಿದ್ದು, ಅಂಡರ್ ವಾಟರ್‌ನಲ್ಲಿ 50 ಮೀಟರ್ ತನಕ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಆಪರೇಟಿಂಗ್ ಸಿಸ್ಟಂ ಅನ್ನ ಅಳವಡಿಸಲಾಗಿದ್ದು ಇದರ ತೂಕ - 29 ಗ್ರಾಂಗಳಷ್ಟಿದೆ. ಇದರ ಬೆಲೆ 13,999.ರೂ ಆಗಿದೆ.

ಸ್ಯಾಮ್ ಸಂಗ್ ಗೇರ್ ಫಿಟ್ 2 ಪ್ರೊ
ಗೇರ್ ಫಿಟ್ 2 ಪ್ರೊ ಸ್ಮಾರ್ಟ್ ಬ್ಯಾಂಡ್ ಕೂಡ ಒನ್ ಆಪ್‌ದಿ ಬೆಸ್ಟ್ ಸ್ಮಾರ್ಟ್‌ಬ್ಯಾಂಡ್ ಆಗಿದೆ. ಈ ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಮ್ಯೂಸಿಕ್ ಪ್ಲೇಯರ್ ಕೂಡ ಇದ್ದು ನೀವು ಸಂಗೀತವನ್ನು ಸಹ ಆಲಿಸಬಹುದಾಗಿದೆ. ಇನ್ನು ಫಿಟ್ 2 ಪ್ರೊ ವೈಫೈ ಅಥವಾ ಬ್ಲೂಟೂತ್ ಸಂಪರ್ಕವನ್ನು ಸಹ ಮಾಡಬಹುದಾಗಿದೆ. ಇನ್ನು ಈ ಫಿಟ್ನೆಸ್ ಬ್ಯಾಂಡ್‌ನ ಬ್ಯಾಟರಿ ಸಾಮರ್ಥ್ಯ ಸರಾಸರಿ ಬಳಕೆಯೊಂದಿಗೆ 2-3 ದಿನಗಳು ಮಾತ್ರ ಇರಲಿದ್ದು, ಅಂಡರ್‌ವಾಟರ್‌ನಲ್ಲಿ 50 ಮೀಟರ್ ತನಕ ಕಾರ್ಯನಿರ್ವಹಿಸಲಿದೆ. ಜೊತೆಗೆ ಆಂಡ್ರಾಯ್ಡ್ ಮತ್ತು ಐಒಎಸ್ ಆಪರೇಟಿಂಗ್ ಸಿಸ್ಟ್ಂ ಒಳಗೊಂಡಿದ್ದು ಉತ್ತಮ ಸ್ಮಾರ್ಟ್‌ಬ್ಯಾಂಡ್ ಇದಾಗಿದೆ. ಇನ್ನು ಆಫ್‌ಲೈನ್ ಸ್ಟ್ರೀಮಿಂಗ್, ಅಮೋಲೆಡ್ ಡಿಸ್‌ಪ್ಲೇ ಇದರ ಮತ್ತೊಂದು ವಿಶೇಷತೆಯಾಗಿದ್ದು ಇದರ ಬೆಲೆ 25,999.ರೂ ಆಗಿದೆ.

ಗಾರ್ಮಿನ್ ವಿವೋಸ್ಮಾರ್ಟ್ ಎಚ್ಆರ್ +
ಗಾರ್ಮಿನ್ ಫಿಟ್‌ನೆಸ್ ಬ್ಯಾಂಡ್‌ಗಳು ಕೂಡ ಉತ್ತಮ ಸ್ಮಾಟ್ ಬ್ಯಾಂಡ್ ಆಗಿದ್ದು 160 × 68 ಡಿಸ್‌ಪ್ಲೇ ಯನ್ನ ಹೊಂದಿದೆ. ಇನ್ನು ಈ ಂಆದರಿಯ ಸ್ಮಾರ್ಟ್‌ಬ್ಯಾಂಡ್‌ಗಳನ್ನ ಸಿಲಿಕೋನ್ ರಬ್ಬರ್ ಬ್ಯಾಂಡ್ ನಿಂದ ತಯಾರಿಸಲಾಗಿದ್ದು ತುಂಬಾ ಹಗುರವಾಗಿವೆ. ಅಲ್ಲದೆ ಈ ಸ್ಮಾಟ್‌ಬ್ಯಾಂಡ್‌ಗಳು ಜಿಪಿಎಸ್ ಸೆನ್ಸಾರ್ ಹೊಂದಿದ್ದು ಬಳಕೆದಾರರ ಚಲನೆ ಮತ್ತು ರಸ್ತೆ ನಕ್ಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಟ್ರ್ಯಾಕ್ ಮಾಡುತ್ತದೆ. ಇದರ ಬ್ಯಾಟರಿ ಸಾಮರ್ಥ್ಯ ಸರಾಸರಿ ಬಳಕೆಯೊಂದಿಗೆ 5-6 ದಿನಗಳಾಗಿದ್ದು 24 ಗಂಟೆಗಳ ಹಾರ್ಟ್ ಟ್ರ್ಯಾಕರ್ ಮತ್ತು ನಿಖರವಾದ ಜಿಪಿಎಸ್ ಸೆನ್ಸಾರ್ ಹೊಂದಿರುವುದು ಇದರ ಬಹುಮುಖ್ಯವಾದ ವಿಶೇಷತೆಯಾಗಿದೆ. ಇದರ ಬೆಲೆ 17,000.ರೂಗಳಾಗಿದೆ.

ಬ್ಲೇಜ್ ಸ್ಮಾರ್ಟ್ ಫಿಟ್‌ನೆಸ್ ವಾಚ್
ಬ್ಲೇಜ್ ಸ್ಮಾರ್ಟ್ ಫಿಟ್‌ನೆಸ್ ವಾಚ್ ಉತ್ತಮವಾದ ಸ್ಮಾರ್ಟ್‌ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಇದು 1.2 ಇಂಚು, 240 x 180-ಪಿಕ್ಸೆಲ್ ಕಲರ್ ಟಚ್‌ಸ್ಕ್ರೀನ್ ಹೊಂದಿದ್ದು , ದೇಹದ ರಕ್ತ ಶುದ್ದತೆಯ ಮಟ್ಟದ ಬಗ್ಗೆ ಮಾಹಿತಿಯನ್ನ ನೀಡುತ್ತೆ. ಅಲ್ಲದೆ ದಿನವಿಡೀ ನಿಮ್ಮ ಹೃದಯ ರಕ್ತನಾಳದ ಚಟುವಟಿಕೆಗಳನ್ನು ನಿರಂತರವಾಗಿ ಪತ್ತೆ ಮಾಡುತ್ತದೆ. ಇನ್ನು ಇದರ ಬ್ಯಾಟರಿ ಸಾಮರ್ಥ್ಯ ಸರಾಸರಿ ಬಳಕೆಯೊಂದಿಗೆ 4-5 ದಿನಗಳಾಗಿದ್ದು ಆಂಡ್ರಾಯ್ಡ್ ಮತ್ತು ಐಒಎಸ್ ನ ಸಂಯೋಜನೆಯನ್ನ ಒಳಗೊಂಡಿದೆ. ಇದರ ತೂಕ 44 ಗ್ರಾಂ ಗಳಷ್ಟಿದ್ದು ಕ್ಯಾಲೋರಿ ಕೌಂಟರ್, ಬ್ಲೂಟೂತ್ ಮತ್ತು ಶುದ್ಧ ನಾಡಿ ಇದರ ಮುಖ್ಯವಾದ ಫಿಚರ್ಸ್ ಆಗಿದೆ. ಇದರ ಬೆಲೆ 12,994.ರೂ ಆಗಿದೆ.

ಆಲ್ಟಾ ಎಚ್‌ಆರ್ ಫಿಟ್‌ನೆಸ್ ಟ್ರ್ಯಾಕರ್
ಆಲ್ಟಾ ಎಚ್‌ಆರ್ ಪ್ರತಿದಿನವೂ ಬಳಸಬಹುದಾದ ಅತ್ಯುತ್ತಮ ಟ್ರ್ಯಾಕರ್‌ಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ಗಳು 25% ಸ್ಲಿಮ್ ಆಗಿರುವ ನಯವಾದ 15 ಎಂಎಂ ಬಾಡಿ ವಿನ್ಯಾಸವನ್ನು ಹೊಂದಿರುತ್ತವೆ. ಜೊತೆಗೆ ಈ ಸ್ಮಾರ್ಟ್ ಬ್ಯಾಂಡ್ 24 ಗಂಟೆಗಳ ಕಾಲ ಕೂಡ ಹೃದಯ ಬಡಿತದ ಮೇಲ್ವಿಚಾರಣೆ ಮಾಡುತ್ತದೆ. ಇದರ ಬ್ಯಾಟರಿ ಸಾಮರ್ಥ್ಯ ಸರಾಸರಿ ಬಳಕೆಯೊಂದಿಗೆ 7-8 ದಿನಗಳು ಬರುತ್ತದೆ. ಇದು ಅಂಡರ್‌ವಾಟರ್‌ನಲ್ಲಿ 50 ಮೀಟರ್ ತನಕ ಕಾರ್ಯನಿರ್ವಹಿಸಲಿದ್ದು ಅಕ್ಸೆಲೆರೊಮೀಟರ್, ಕಂಪನ ಮೋಟಾರ್ ಮತ್ತು ಆಪ್ಟಿಕಲ್ ಹಾರ್ಟ್‌ಬೀಟ್ ಸೆನ್ಸಾರ್ ಇದರ ಪ್ರಮುಖ ಫಿಚರ್ಸ್‌ಗಳಲ್ಲಿ ಒಂದಾಗಿದೆ. ಇದರ ಬೆಲೆ 12,994ರೂ ಆಗಿದೆ.

ಜಾವ್‌ಬೋನ್ ಯುಪಿ 3
ಜಾವ್‌ಬೋನ್ ಯುಪಿ 3 ಸ್ಮಾರ್ಟ್ ಬ್ಯಾಂಡ್ ವಿಶಿಷ್ಟ ಮಾದರಿಯ ಅತ್ಯುತ್ತಮ ಫಿಟ್ನೆಸ್ ಬ್ಯಾಂಡ್‌ಗಳಲ್ಲಿ ಒಂದಾಗಿದೆ. ಇನ್ನು ರಕ್ತ ಶುದ್ದತೆಯ ಸೆನ್ಸಾರ್ ಜೊತೆಗೆ ರನ್ನಿಂಗ್, ಹಾರ್ಟ್‌ಬೀಟ್ ಕೌಂಟಿಂಗ್, ಟ್ರ್ಯಾಕ್ ಮಾಡುವುತ್ತದೆ. ಇದರ ಬ್ಯಾಟರಿ ಸಾಮರ್ಥ್ಯ ಸರಾಸರಿ ಬಳಕೆಯೊಂದಿಗೆ 3-4 ದಿನಗಳು ಆಗಿದ್ದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಸಿಸ್ಟಂ ಅನ್ನು ಸಹ ಹೊಂದಿದೆ. ಇದರಲ್ಲಿ ಬ್ಲೂಟೂತ್ 4.0, ಫಿಚರ್ಸ್ ಹೊಂದಿರೋದು ಬಹಳ ಪ್ರಮುಖವಾಗಿದ್ದು ಇದರ ಬೆಲೆ 14,999 ರೂ ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470